ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Dhurandhar The Revenge OTT: 'ಧುರಂಧರ್ 2' ಒಟಿಟಿಗೆ? ಸ್ಟ್ರೀಮಿಂಗ್‌ ಎಲ್ಲಿ? ಯಾವಾಗ?

Dhurandhar The Revenge OTT: ಧುರಂಧರ್ ದಿ ರಿವೆಂಜ್ ಬಿಡುಗಡೆ ಆಗಿ ತಿಂಗಳುಗಳು ಕಳೆದಿವೆ. ಚಿತ್ರದ ಅದ್ಭುತ ಪ್ರದರ್ಶನ ಮುಂದುವರಿದಿದ್ದು, ಭಾರತೀಯ ಚಲನಚಿತ್ರೋದ್ಯಮವನ್ನು ಬೆರಗುಗೊಳಿಸಿದೆ. ಆದಿತ್ಯ ಧರ್ ಅವರ ಅಭಿಮಾನಿಗಳು ರಣವೀರ್ ಸಿಂಗ್ ಅಭಿನಯದ ಈ ಚಿತ್ರ ಒಟಿಟಿಯಲ್ಲಿ ಬಿಡುಗಡೆಯಾಗುವುದನ್ನು ಕಾತುರದಿಂದ ಕಾಯುತ್ತಿದ್ದಾರೆ. ಧುರಂಧರ್ 2 ನೆಟ್‌ಫ್ಲಿಕ್ಸ್‌ನಲ್ಲಿ ಅಲ್ಲ, ಜಿಯೋಹಾಟ್‌ಸ್ಟಾರ್‌ನಲ್ಲಿ ಸ್ಟ್ರೀಮಿಂಗ್ ಆಗಲಿದೆ ಎಂದು ಈಗಾಗಲೇ ವೈರಲ್‌ ಆಗುತ್ತಿದೆ.

Dhurandhar: 'ಧುರಂಧರ್ 2' ಒಟಿಟಿಗೆ? ಸ್ಟ್ರೀಮಿಂಗ್‌ ಎಲ್ಲಿ? ಯಾವಾಗ?

ಧುರಂಧರ್ 2 ಸಿನಿಮಾ -

Yashaswi Devadiga
Yashaswi Devadiga Apr 17, 2026 8:26 AM

ಧುರಂಧರ್ ದಿ ರಿವೆಂಜ್ (Dhurandhar The Revenge OTT ) ಬಿಡುಗಡೆ ಆಗಿ ತಿಂಗಳುಗಳು ಕಳೆದಿವೆ. ಚಿತ್ರದ ಅದ್ಭುತ ಪ್ರದರ್ಶನ ಮುಂದುವರಿದಿದ್ದು, ಭಾರತೀಯ ಚಲನಚಿತ್ರೋದ್ಯಮವನ್ನು ಬೆರಗುಗೊಳಿಸಿದೆ. ಆದಿತ್ಯ ಧರ್ ಅವರ ಅಭಿಮಾನಿಗಳು ರಣವೀರ್ ಸಿಂಗ್ (Ranveer Singh) ಅಭಿನಯದ ಈ ಚಿತ್ರ ಒಟಿಟಿಯಲ್ಲಿ ಬಿಡುಗಡೆಯಾಗುವುದನ್ನು ಕಾತುರದಿಂದ ಕಾಯುತ್ತಿದ್ದಾರೆ. ಧುರಂಧರ್ 2 ನೆಟ್‌ಫ್ಲಿಕ್ಸ್‌ನಲ್ಲಿ ಅಲ್ಲ, ಜಿಯೋಹಾಟ್‌ಸ್ಟಾರ್‌ನಲ್ಲಿ (Jio Hotstar Streaming) ಸ್ಟ್ರೀಮಿಂಗ್ ಆಗಲಿದೆ ಎಂದು ಈಗಾಗಲೇ ವೈರಲ್‌ ಆಗುತ್ತಿದೆ.

ಒಟಿಟಿ ರಿಲೀಸ್‌ ಯಾವಾಗ?

ಧುರಂಧರ್ 2 ಮೇ 14 ರಂದು ಜಿಯೋಹಾಟ್‌ಸ್ಟಾರ್‌ನಲ್ಲಿ ಬಿಡುಗಡೆಯಾಗಲಿದೆ ಎಂದು ವರದಿಯಾಗಿದೆ. ಈ ಪೋಸ್ಟ್ ವೈರಲ್‌ ಕೂಡ ಆಗುತ್ತಿದೆ.

ಇದನ್ನೂ ಓದಿ: Deepika Padukone: 8 ಗಂಟೆ ಕೆಲಸದ ಶಿಫ್ಟ್ ವಿಚಾರ; ದೀಪಿಕಾಗೆ ಸಾಥ್‌ ಕೊಟ್ಟ ಕಂಗನಾ ರಣಾವತ್

ಬಾಲಿವುಡ್ ನಿಯಮಗಳ ಪ್ರಕಾರ ಹಾಗೂ ಸಿನಿಮಾ ತಂಡದೊಂದಿಗಿನ ಒಡಂಬಡಿಕೆಯ ಪ್ರಕಾರ ಬಿಡುಗಡೆಯಾದ 8 ವಾರಗಳ ಬಳಿಕ ಓಟಿಟಿಯಲ್ಲಿ ಸ್ಟ್ರೀಮಿಂಗ್ ಆಗಬೇಕು. ಸದ್ಯ ಮಾಧ್ಯಮಗಳಲ್ಲಿ ವರದಿಯಾಗಿರುವಂತೆ ಜಿಯೋ ಹಾಟ್‌ಸ್ಟಾರ್‌ನಲ್ಲಿ 'ಧುರಂಧರ್ 2' ಬಿಡುಗಡೆಯಾಗಲಿದೆ. ಆದರೆ ಈ ಬಗ್ಗೆ ಅಧಿಕೃತ ಮಾಹಿತಿ ಇನ್ನಷ್ಟೇ ಹಂಚಿಕೊಳ್ಳಬೇಕಿದೆ.

ಧುರಂಧರ್ 2' ದೇಶ ಹಾಗೂ ವಿದೇಶದ ಒಟ್ಟು ಬಾಕ್ಸಾಫೀಸ್ ಕಲೆಕ್ಷನ್ ಸುಮಾರು ₹1734 ಕೋಟಿ ಎಂದು ಹಲವು ಮೂಲಗಳು ಈಗಾಗಲೇ ವರದಿ ಮಾಡಿವೆ. ಇನ್ನೇನು ಆಮಿರ್ ಖಾನ್ ನಟನೆಯ 'ದಂಗಲ್' ಹಾಗೂ ರಾಜಮೌಳಿ ನಿರ್ದೇಶಿಸಿದ 'ಬಾಹುಬಲಿ 2'ಯ ಬಾಕ್ಸಾಫೀಸ್ ದಾಖಲೆಯನ್ನು ಹಿಂದಿಕ್ಕೆ ಹಾಕಬಹುದೆಂಬ ನಿರೀಕ್ಷೆಯಿತ್ತು.

ರಣ್‌ವೀರ್ ಸಿಂಗ್, ಸಾರಾ ಅರ್ಜುನ್ ಜೊತೆ ಸಂಜಯ್ ದತ್, ಅಕ್ಷಯ್ ಖನ್ನಾ, ಆರ್.ಮಾಧವನ್, ಅರ್ಜುನ್ ರಾಂಪಾಲ್ ಹಾಗೂ ರಾಕೇಶ್ ಬೇಡಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಆದಿತ್ಯ ಧಾರ್ ನಿರ್ದೇಶಿಸಿ, ನಿರ್ಮಿಸಿರುವ ಈ ಸಿನಿಮಾ ಬಾಕ್ಸಾಫೀಸ್‌ನಲ್ಲಿ ದಾಖಲೆಗಳನ್ನು ಬರೆದಿದೆ. ಆದಿತ್ಯ ಧಾರ್ ಜೊತೆ ಲೋಕೇಶ್ ಧಾರ್, ಜ್ಯೋತಿ ದೇಶಪಾಂಡೆ ಕೂಡ ಸಿನಿಮಾಗೆ ಹಣ ಹೂಡಿಕೆ ಮಾಡಿದ್ದಾರೆ.

ಇದನ್ನೂ ಓದಿ: Daisy Shah: ಅಸಭ್ಯವಾಗಿ ನನ್ನನ್ನು ಮುಟ್ಟಿದರು; ಕಹಿ ಅನುಭವ ಬಿಚ್ಚಿಟ್ಟ ನಟಿ ಡೈಸಿ ಶಾ

'ಧುರಂಧರ್' ಮೊದಲ ಭಾಗ ಬಾಲಿವುಡ್‌ನಲ್ಲಿ ದಾಖಲೆ ಕಲೆಕ್ಷನ್ ಮಾಡಿತ್ತು. ಅದೇ ಬೆನ್ನಲ್ಲೇ ಪಾರ್ಟ್ 2 ರಿಲೀಸ್ ಆಗಿತ್ತು. ಇದೂ ಕೂಡ ಬಾಕ್ಸಾಫೀಸ್‌ನಲ್ಲಿ ದಾಖಲೆ ಕಲೆಕ್ಷನ್ ಮಾಡಿದೆ.