ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಆರೋಗ್ಯಕರ ಭಾರತದತ್ತ ಅರಗೊಂಡದಿಂದ ಹೆಜ್ಜೆ: ಅಪೋಲೊ ಸಂಸ್ಥೆಯ ಟೋಟಲ್ ಹೆಲ್ತ್ ಗ್ರಾಮೀಣ ಆರೋಗ್ಯಸೇವೆಯು ಬದುಕಿನಲ್ಲಿ ಪರಿಣಾಮ ತಂದ ವಿಶಿಷ್ಟ ಮಾದರಿ

ಒಂದು ಗ್ರಾಮೀಣ ಆಸ್ಪತ್ರೆಯಿಂದ ಸಮಗ್ರ ಸಮುದಾಯ ಅಭಿವೃದ್ಧಿಯ ಮಾದರಿಯಾಗಿ ಬೆಳೆದಿರುವ ಅಪೋಲೊ ಫೌಂಡೇಶನ್‌ನ ಈ ಉಪಕ್ರಮಗಳು ಆರೋಗ್ಯ ಸೇವೆ, ಶಿಕ್ಷಣ, ಪೌಷ್ಟಿಕಾಂಶ, ಜೀವನೋ ಪಾಯ ಮತ್ತು ಇತರ ಅಗತ್ಯ ಸೇವೆಗಳ ಮೂಲಕ 483 ಮಿಲಿಯನ್‌ಗೂ ಹೆಚ್ಚು ಜನರ ಮೇಲೆ ಧನಾತ್ಮಕ ಪ್ರಭಾವ ಬೀರಿವೆ.

ಆರೋಗ್ಯಕರ ಭಾರತದತ್ತ ಅರಗೊಂಡದಿಂದ ಹೆಜ್ಜೆ

-

Profile
Ashok Nayak Oct 28, 2026 7:53 AM

ಅರಗೊಂಡ: ಆರೋಗ್ಯ ಸೇವೆಯು ಸಮುದಾಯದ ಬದಲಾವಣೆಗೆ ಹೇಗೆ ಶಕ್ತಿಯಾಗಬಲ್ಲದು ಎಂಬುದನ್ನು ಅಪೋಲೊ ಹಾಸ್ಪಿಟಲ್ಸ್ ಎಂಟರ್‌ಪ್ರೈಸ್ ಲಿಮಿಟೆಡ್ (ಎ.ಎಚ್.ಇ.ಎಲ್) ಮತ್ತು ಅಪೋಲೊ ಫೌಂಡೇಶನ್, ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ಅರಗೊಂಡದಲ್ಲಿ ಟೋಟಲ್ ಹೆಲ್ತ್ ಮಾದರಿಯ ಪ್ರಭಾವವನ್ನು ನಿರೂಪಿಸಿದೆ.

ಒಂದು ಗ್ರಾಮೀಣ ಆಸ್ಪತ್ರೆಯೊಂದಿಗೆ ಪ್ರಾರಂಭವಾದ ಈ ಯೋಜನೆ, ಇಂದು ಸಮುದಾಯದ ಸಮಗ್ರ ಅಭಿವೃದ್ಧಿಯ ಮಾದರಿಯಾಗಿ ಬೆಳೆದಿದೆ. ಇದು ಆರೋಗ್ಯ ಸೇವೆ, ರೋಗತಡೆಯ ಶಿಕ್ಷಣ, ಪೋಷಕಾಂಶಯುಕ್ತ ಆಹಾರ, ಸುರಕ್ಷಿತ ಕುಡಿಯುವ ನೀರು, ಕೌಶಲ್ಯ ಅಭಿವೃದ್ಧಿ ಮತ್ತು ಜೀವನೋಪಾಯದ ಅವಕಾಶಗಳನ್ನು ಒಂದೆಡೆ ತಂದು 483 ಮಿಲಿಯನ್‌ ಗೂ ಹೆಚ್ಚು ಜನರಿಗೆ ತಲುಪಿದೆ.

2013 ರಲ್ಲಿ ಅರಗೊಂಡದಲ್ಲಿ ಎ.ಎಚ್.ಇ.ಎಲ್.ನ ಸಿಎಸ್ಆರ್ ಉಪಕ್ರಮ ಅಪೋಲೊ ಫೌಂಡೇಶನ್ ಪ್ರಾರಂಭಿಸಿದ ಟೋಟಲ್ ಹೆಲ್ತ್ ವೈದ್ಯಕೀಯ ಚಿಕಿತ್ಸೆಯನ್ನೂ ಮೀರಿದ ಜೀವನಪರ್ಯಂತ ಆರೋಗ್ಯ ಮತ್ತು ಯೋಗಕ್ಷೇಮದ ಅಪೋಲೊ ದೂರದೃಷ್ಟಿಯನ್ನು ವಿಸ್ತರಿಸುತ್ತದೆ. ಈ ಕಾರ್ಯಕ್ರಮವು ಪ್ರಾರಂಭವಾದ 13 ವರ್ಷಗಳಲ್ಲಿ 23 ಕ್ಕೂ ಹೆಚ್ಚು ಪ್ರದೇಶಗಳಿಗೆ ವಿಸ್ತರಿಸಿದ್ದು, 2 ಲಕ್ಷಕ್ಕೂ ಹೆಚ್ಚು ಯೋಗ ತರಬೇತಿ ಅವಧಿಗಳನ್ನು ನಡೆಸಿದೆ ಮತ್ತು ತನ್ನ ಪೌಷ್ಟಿಕ ಆಹಾರ ಯೋಜನೆಯ ಮೂಲಕ 10.89 ಲಕ್ಷಕ್ಕೂ ಹೆಚ್ಚು ಭೋಜನಗಳನ್ನು ಒದಗಿಸಿದೆ. ಜೊತೆಗೆ, ಜವಳಿ ಮತ್ತು ಸೆಣಬಿನ ಉತ್ಪಾದನಾ ಘಟಕಗಳ ಮೂಲಕ 300 ಕ್ಕೂ ಹೆಚ್ಚು ಗ್ರಾಮೀಣ ಮಹಿಳೆಯರಿಗೆ ಉದ್ಯೋಗಾವಕಾಶವನ್ನು ಕಲ್ಪಿಸಿಕೊಟ್ಟಿದೆ.

ಇದನ್ನೂ ಓದಿ: Health Tips: ಹಬ್ಬದ ಖಾದ್ಯಗಳ ನೋಡಿ ಸೋಲದಿರಲಿ ಮನಸ್ಸು; ಜೋಪಾನವಾಗಿರಲಿ ಆರೋಗ್ಯ

ಅವರ ಈ ಪಯಣದ ಕುರಿತು ಮಾತನಾಡುತ್ತಾ, ಅಪೋಲೊ ಹಾಸ್ಪಿಟಲ್ಸ್ ಗ್ರೂಪ್‌ ನ ಸಂಸ್ಥಾಪಕ ಅಧ್ಯಕ್ಷ ಡಾ. ಪ್ರತಾಪ್ ಸಿ. ರೆಡ್ಡಿ ಅವರು, "ಅರಗೊಂಡ ಎಂಬುದು ನನ್ನ ಪಯಣ ಪ್ರಾರಂಭವಾದ ಸ್ಥಳ. ಗುಣಮಟ್ಟದ ಮತ್ತು ಕೈಗೆಟುಕುವ ಆರೋಗ್ಯ ಸೇವೆಯು ಭಾರತದ ಪ್ರತಿಯೊಬ್ಬ ಪ್ರಜೆಗೂ, ಅವರು ಎಲ್ಲೇ ವಾಸಿಸುತ್ತಿದ್ದರೂ ತಲುಪಬೇಕು ಎಂಬ ನನ್ನ ನಂಬಿಕೆಯನ್ನು ಇದು ಸದಾ ಬಲಪಡಿಸಿದೆ. ನಾವು ಈ ಗ್ರಾಮಕ್ಕೆ ಆಧುನಿಕ ವೈದ್ಯಕೀಯ ಸೇವೆಯನ್ನು ತರುವ ಮೂಲಕ ನಮ್ಮ ಪ್ರಯಾಣವನ್ನು ಪ್ರಾರಂಭಿಸಿದೆವು. ಆದರೆ ಆರೋಗ್ಯ ಸೇವೆಯ ನೈಜ ಉದ್ದೇಶವು ಕೇವಲ ರೋಗಗಳಿಗೆ ಚಿಕಿತ್ಸೆ ನೀಡುವುದರಲ್ಲಿ ಮಾತ್ರವಲ್ಲ – ಜನರು ಅತ್ಯುತ್ತಮವಾಗಿ ಜೀವಿಸಲು ಸೂಕ್ತ ವಾತಾವರಣವನ್ನು ನಿರ್ಮಿಸಿಕೊಡುವುದರಲ್ಲಿದೆ.

ವೈದ್ಯಕೀಯ ಚಿಕಿತ್ಸೆಯು ಜೀವಗಳನ್ನು ಉಳಿಸಬಹುದು, ಆದರೆ ಒಂದು ತಲೆಮಾರಿನ ಆರೋಗ್ಯ ವನ್ನೇ ಬದಲಾಯಿಸಬೇಕಾದರೆ, ನಾವು ಜೀವನ ನಡೆಸುವ ಪರಿಸ್ಥಿತಿಗಳನ್ನು ಸಹ ಬದಲಾಯಿಸ ಬೇಕು. ಅರಗೊಂಡವು ತನ್ನ ವ್ಯಾಪ್ತಿಗಿಂತಲೂ ದೊಡ್ಡದಾದ ಒಂದು ಚಿಂತನೆಗೆ ಸಾಕ್ಷಿಯಾಗಿ ನಿಲ್ಲುತ್ತದೆ ಎಂದು ನಾನು ನಂಬುತ್ತೇನೆ: ಅದು ಸಮೃದ್ಧ ಹಾಗೂ ಆರೋಗ್ಯಕರ ಭಾರತವು ಕೇವಲ ದೊಡ್ಡ ನಗರಗಳಲ್ಲಿ ಮಾತ್ರವಲ್ಲ, ಅದರ ಅತ್ಯಂತ ಸಣ್ಣ ಹಳ್ಳಿಗಳಲ್ಲೂ ನಿರ್ಮಾಣಗೊಳ್ಳುತ್ತದೆ ಎಂದು ತೋರಿಸಿದೆ" ಎಂದು ಹೇಳಿದರು.

ಈ ಕುರಿತು ಅಪೋಲೊ ಹಾಸ್ಪಿಟಲ್ಸ್ ಎಂಟರ್‌ಪ್ರೈಸ್ ಲಿಮಿಟೆಡ್‌ನ ಎಕ್ಸಿಕ್ಯೂಟಿವ್ ವೈಸ್ ಚೇರ್ ಪರ್ಸನ್ ಶ್ರೀಮತಿ ಪ್ರೀತಾ ರೆಡ್ಡಿ ಅವರು, "ಕಳೆದ ಎರಡು ದಶಕಗಳಲ್ಲಿ, ಅಪೋಲೊ ಹಾಸ್ಪಿಟಲ್ಸ್ ಅರಗೊಂಡವು ಆರೋಗ್ಯ ಸೇವೆಯ ಪ್ರಭಾವವು ಕೇವಲ ವೈದ್ಯಕೀಯ ಚಿಕಿತ್ಸೆಗೆ ಮಾತ್ರ ಸೀಮಿತವಾಗಿರದೆ ಅದನ್ನೂ ಮೀರಿದ್ದಾಗಿದೆ ಎಂಬುದನ್ನು ನಿರೂಪಿಸಿದೆ.

ತನ್ನ ನೂತನ ಮತ್ತು ಪ್ರಗತಿಪರ ಮಾದರಿಯ ಮೂಲಕ, ಈ ಆಸ್ಪತ್ರೆಯು ಜನರ ಆರೋಗ್ಯ ಮಟ್ಟವನ್ನು ಸುಧಾರಿಸುವುದು ಮಾತ್ರವಲ್ಲದೆ, ಮಹಿಳೆಯರಿಗೆ ಜೀವನೋಪಾಯದ ಮಾರ್ಗಗಳನ್ನು ಕಂಡುಕೊಳ್ಳಲು ನೆರವಾಗಿದೆ, ಕುಟುಂಬಗಳನ್ನು ಸಬಲಗೊಳಿಸಿದೆ ಮತ್ತು ಸಮುದಾಯಗಳು ತಮ್ಮದೇ ಆದ ಯೋಗಕ್ಷೇಮದ ಹೊಣೆಗಾರಿಕೆಯನ್ನು ವಹಿಸಿಕೊಳ್ಳುವಂತೆ ಮಾಡಿದೆ" ಎಂದರು.

ವೈದ್ಯಕೀಯ ಸೇವೆಯ ಆಚೆಗೂ ಆರೋಗ್ಯಪೂರ್ಣ ಸಮುದಾಯಗಳ ನಿರ್ಮಾಣ

ಅಪೋಲೊ ಫೌಂಡೇಶನ್ ಟೋಟಲ್ ಹೆಲ್ತ್, ಬಿಲಿಯನ್ ಹಾರ್ಟ್ಸ್ ಬೀಟಿಂಗ್ ಫೌಂಡೇಶನ್, ಅಪೋಲೊ ಟೆಲಿಮೆಡಿಸಿನ್ ನೆಟ್‌ವರ್ಕಿಂಗ್ ಫೌಂಡೇಶನ್, ಸಚಿ ಮತ್ತು ಅರಗೊಂಡ ವಿಕಾಸ್ ಟ್ರಸ್ಟ್ ಸೇರಿದಂತೆ ತನ್ನ ವಿವಿಧ ಅಂಗಸಂಸ್ಥೆಗಳು ಮತ್ತು ಪಾಲುದಾರರ ಮೂಲಕ ಸಮುದಾಯ-ಕೇಂದ್ರಿತ ಹಲವಾರು ಯೋಜನೆಗಳನ್ನು ತಲುಪಿಸಲು ಶ್ರಮಿಸುತ್ತಿದೆ. ಇವುಗಳಲ್ಲಿ ಪ್ರಾಥಮಿಕ ಆರೋಗ್ಯ ಸೇವೆ, ರೋಗನಿರ್ಣಯ, ಟೆಲಿಮೆಡಿಸಿನ್, ಮೊಬೈಲ್ ವೈದ್ಯಕೀಯ ಸೇವೆಗಳು, ಕ್ಯಾನ್ಸರ್ ತಪಾಸಣೆ ಮತ್ತು ಚಿಕಿತ್ಸೆಯ ಸೌಲಭ್ಯಗಳು, ಹಾಗೂ ಮಕ್ಕಳಿಗೆ ಉಚಿತ ಹೃದಯ ಶಸ್ತ್ರಚಿಕಿತ್ಸೆಗಳು ಮತ್ತು ಜೀವನ ಪರ್ಯಂತ ತಪಾಸಣಾ ಬೆಂಬಲಗಳು ಸೇರಿವೆ.

ಜೀವನೋಪಾಯದ ಮಾರ್ಗಗಳನ್ನು ಸೃಷ್ಟಿಸುವುದು 'ಟೋಟಲ್ ಹೆಲ್ತ್' ಯೋಜನೆಯ ಮತ್ತೊಂದು ಪ್ರಮುಖ ಸ್ತಂಭವಾಗಿದೆ. ಅರಗೊಂಡ, ಅಮ್ರಾಬಾದ್ ಮತ್ತು ಚೆವೆಲ್ಲಾದಲ್ಲಿರುವ ಉಡುಪು ಮತ್ತು ಸೆಣಬಿನ ಉತ್ಪಾದನಾ ಘಟಕಗಳ ಮೂಲಕ ಈ ಕಾರ್ಯಕ್ರಮವು ಮಹಿಳೆಯರ ಆರ್ಥಿಕ ಸ್ವಾವಲಂಬನೆಯನ್ನು ಉತ್ತೇಜಿಸುತ್ತದೆ. ಕಳೆದ ಒಂದು ವರ್ಷದಲ್ಲೇ, ಈ ಘಟಕಗಳ ಮೂಲಕ ಕಾರ್ಯನಿರ್ವಹಿಸುತ್ತಿರುವ ಸುಮಾರು 300 ಮಹಿಳೆಯರು ಹತ್ತಿರಹತ್ತಿರ 2.9 ಲಕ್ಷ ಸೆಣಬಿನ ಚೀಲಗಳನ್ನು ಮತ್ತು 1.25 ಲಕ್ಷಕ್ಕೂ ಹೆಚ್ಚು ಉಡುಪುಗಳನ್ನು ತಯಾರಿಸಿದ್ದಾರೆ.

ಅಪೋಲೊ ಹಾಸ್ಪಿಟಲ್ಸ್ ಎಂಟರ್‌ಪ್ರೈಸ್ ಲಿಮಿಟೆಡ್‌ನ ಸಿಎಸ್‌ಆರ್ ವೈಸ್ ಚೇರ್ ಪರ್ಸನ್ ಹಾಗೂ ಪ್ರಾಜೆಕ್ಟ್ಸ್ ಡೈರೆಕ್ಟರ್ ಶ್ರೀಮತಿ ಉಪಾಸನಾ ಕಾಮಿನೇನಿ ಕೊನಿದೇಲ ಅವರು, "ದೀರ್ಘಕಾಲೀನ ಆರೋಗ್ಯಕರ ಬದಲಾವಣೆಗಳು ಆಸ್ಪತ್ರೆಯ ನಾಲ್ಕು ಗೋಡೆಗಳನ್ನು ಮೀರಿಯೂ ನಿರ್ಮಾಣ ಗೊಳ್ಳುತ್ತವೆ ಎಂಬುದನ್ನು ಅರಗೊಂಡ ತೋರಿಸಿಕೊಟ್ಟಿದೆ. ನಾವಿಲ್ಲಿ ಕಾಣುತ್ತಿರುವ ಈ ಬದಲಾವಣೆ ಯು, ಸಮಗ್ರ ಹಾಗೂ ಸಮುದಾಯದ ನೇತೃತ್ವದ ಆರೋಗ್ಯ ಮಾದರಿಗಳು ಹೇಗೆ ಸುಸ್ಥಿರ ಬದಲಾವಣೆಯನ್ನು ತರಬಲ್ಲವು ಮತ್ತು ಇತರ ರಾಜ್ಯಗಳು ಹಾಗೂ ಹಿಂದುಳಿದ ಪ್ರದೇಶಗಳಲ್ಲಿ ಮರುಸೃಷ್ಟಿಸಲು ಒಂದು ಅತ್ಯುತ್ತಮ ಮಾದರಿಯಾಗಿ ಹೇಗೆ ಸೇವೆಯನ್ನು ಒದಗಿಸಬಲ್ಲವು ಎಂಬುದನ್ನು ನಿರೂಪಿಸುತ್ತದೆ" ಎಂದರು.

ಮನೆಬಾಗಿಲಿಗೆ ತಲುಪಿದ ಆರ್ಥೋಪೆಡಿಕ್ ಸೇವೆ: ಅರಗೊಂಡದಲ್ಲಿ 1,000 ಮೊಣಕಾಲು ಕೀಲು ಬದಲಿ ಶಸ್ತ್ರಚಿಕಿತ್ಸೆಗಳು

ವಿಶ್ವದರ್ಜೆಯ ವೈದ್ಯಕೀಯ ಸೇವೆಯು ಕೇವಲ ದೊಡ್ಡ ನಗರಗಳಿಗಷ್ಟೇ ಸೀಮಿತವಾಗಿರಬಾರದು ಎಂಬ ತಮ್ಮ ದೃಢ ನಂಬಿಕೆಯಿಂದ ಪ್ರೇರಿತರಾಗಿ, ಅಪೋಲೊ ಹಾಸ್ಪಿಟಲ್ಸ್ ಗ್ರೂಪ್‌ನ ಸಂಸ್ಥಾಪಕ ಅಧ್ಯಕ್ಷರಾದ ಡಾ. ಪ್ರತಾಪ್ ಸಿ. ರೆಡ್ಡಿ ಅವರು 2000 ನೇ ಇಸವಿಯಲ್ಲಿ ತಮ್ಮ ಜನ್ಮಸ್ಥಳವಾದ ಅರಗೊಂಡದಲ್ಲಿ 50 ಹಾಸಿಗೆಗಳ ದ್ವಿತೀಯ ಹಂತದ ಆಸ್ಪತ್ರೆಯನ್ನು ಸ್ಥಾಪಿಸಿದರು.

ಇಪ್ಪತ್ತಾರೂ ವರ್ಷಗಳ ನಂತರ, ಅಪೋಲೊ ಹಾಸ್ಪಿಟಲ್ಸ್ ಅರಗೊಂಡವು 1.67 ಲಕ್ಷಕ್ಕೂ ಹೆಚ್ಚು ರೋಗಿಗಳಿಗೆ ಸೇವೆ ಸಲ್ಲಿಸಿದೆ ಮತ್ತು 1,000 ಸಂಪೂರ್ಣ ಮೊಣಕಾಲು ಕೀಲು ಬದಲಿ ಶಸ್ತ್ರಚಿಕಿತ್ಸೆಗಳು ಸೇರಿದಂತೆ ಒಟ್ಟು 12,000 ಕ್ಕೂ ಹೆಚ್ಚು ಶಸ್ತ್ರಚಿಕಿತ್ಸೆಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ. ಈ ಸಾಧನೆಯು ಸುಧಾರಿತ ವೈದ್ಯಕೀಯ ಸೇವೆಯನ್ನು ಗ್ರಾಮೀಣ ಸಮುದಾಯಗಳಿಗೆ ಹೇಗೆ ತಲುಪಿಸ ಬಹುದು ಮತ್ತು ವಿಶೇಷ ಚಿಕಿತ್ಸೆಗಾಗಿ ರೋಗಿಗಳು ದೂರದ ನಗರಗಳಿಗೆ ಪ್ರಯಾಣಿಸಬೇಕಾದ ಅಗತ್ಯ ವನ್ನು ಹೇಗೆ ಕಡಿಮೆ ಮಾಡಬಹುದು ಎಂಬುದನ್ನು ಎತ್ತಿಹಿಡಿಯುತ್ತದೆ.

ಈ ಆಸ್ಪತ್ರೆಯ ಸಂಪೂರ್ಣ ಮೊಣಕಾಲು ಕೀಲು ಬದಲಿ ಶಸ್ತ್ರಚಿಕಿತ್ಸಾ ಕಾರ್ಯಕ್ರಮವು ಹಂತ ಹಂತವಾಗಿ ಬೆಳೆದಿದ್ದು, 2019 ರಲ್ಲಿ 100 ಶಸ್ತ್ರಚಿಕಿತ್ಸೆಗಳಿಂದ 2022 ರಲ್ಲಿ 500 ಕ್ಕೆ ಏರಿ, ಈಗ 1,000 ರ ಮೈಲಿಗಲ್ಲನ್ನು ತಲುಪಿದೆ. ಡಾ.ಮದನ್ ಮೋಹನ್ ರೆಡ್ಡಿ, ಡಾ.ವಿಜಯ್ ಕಿಶೋರ್ ಕೊಂಡರೆಡ್ಡಿ ಹಾಗೂ ಡಾ. ಕುನಾಲ್ ಪಟೇಲ್ ಮತ್ತು ಒಟ್ಟಾರೆ ವೈದ್ಯಕೀಯ ತಂಡದ ನೇತೃತ್ವದಲ್ಲಿ ಒಂದೇ ದಿನದಲ್ಲಿ 19 ಮೊಣಕಾಲು ಕೀಲು ಬದಲಿ ಶಸ್ತ್ರಚಿಕಿತ್ಸೆಗಳನ್ನು ಪೂರ್ಣಗೊಳಿಸುವ ಮೂಲಕ ಆಸ್ಪತ್ರೆಯು ತನ್ನ ಉನ್ನತ ವೈದ್ಯಕೀಯ ಸಾಮರ್ಥ್ಯವನ್ನು ಮತ್ತೊಮ್ಮೆ ಸಾಬೀತುಪಡಿಸಿದೆ.

ಕ್ಯಾಲಿಫೋರ್ನಿಯಾ ಯುನಿವರ್ಸಿಟಿ ಆಫ್ ಸೈನ್ಸ್ ಅಂಡ್ ಮೆಡಿಸಿನ್‌ ನ ಕಾರ್ಡಿಯಾಲಜಿ ವಿಭಾಗದ ಕ್ಲಿನಿಕಲ್ ಅಸೋಸಿಯೇಟ್ ಪ್ರೊಫೆಸರ್ ಆದ ಡಾ. ಜಯಪಾಲ್ (ಅನಿಲ್) ರೆಡ್ಡಿ ಅವರು, "ಹೀಲ್ ಇನ್ ಇಂಡಿಯಾ' ದೃಷ್ಟಿಕೋನಕ್ಕೆ ಅಪೋಲೊ ಹಾಸ್ಪಿಟಲ್ಸ್ ಅರಗೊಂಡ ಅತ್ಯುತ್ತಮ ಉದಾಹರಣೆಯಾಗಿದೆ.

ವಿಶ್ವದರ್ಜೆಯ ವೈದ್ಯಕೀಯ ಸೇವೆಯು ಭೌಗೋಳಿಕ ಗಡಿಗಳಿಗೆ ಸೀಮಿತವಾಗಿರಬೇಕಾಗಿಲ್ಲ ಎಂಬು ದನ್ನು ಇದು ಸಾಬೀತುಪಡಿಸಿದೆ. ಅಮೆರಿಕದಲ್ಲಿ ವೈದ್ಯ ವೃತ್ತಿ ಮಾಡುತ್ತಿರುವ ಹಾಗೂ ಅರಗೊಂಡದ ನಿವಾಸಿಯಾಗಿ, ನನ್ನ ಸ್ವಂತ ಗ್ರಾಮದಲ್ಲೇ ಅತ್ಯಾಧುನಿಕ ಶಸ್ತ್ರಚಿಕಿತ್ಸೆ, ತುರ್ತು ನಿಗಾ, ಆಪತ್ಕಾಲೀನ ಸೇವೆಗಳು ಮತ್ತು ರೋಗನಿರ್ಣಯ ಸೌಲಭ್ಯಗಳು ಲಭ್ಯವಿರುವುದನ್ನು ಕಂಡು ನನಗೆ ಹೆಮ್ಮೆಯೆನಿಸುತ್ತದೆ. ಡಾ. ಪ್ರತಾಪ್ ಸಿ. ರೆಡ್ಡಿ ಅವರ ದೂರದೃಷ್ಟಿಯು ಕೇವಲ ಒಂದು ಆಸ್ಪತ್ರೆ ಯನ್ನು ಮಾತ್ರವಲ್ಲದೆ, ಮುಂದಿನ ತಲೆಮಾರುಗಳಿಗಾಗಿ ಶಾಶ್ವತವಾದ ಆರೋಗ್ಯ ಸೇವೆಯ ಪರಂಪರೆಯನ್ನು ನಿರ್ಮಿಸಿದೆ." ಎಂದರು