ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Rishab Shetty: ನಟ ರಿಷಬ್‌ ಶೆಟ್ಟಿ ಅವರ ನಿಜವಾದ ಹೆಸರು ಏನು ಗೊತ್ತಾ?

Kantara: Chapter-1: ಕಾಂತಾರಾ ಚಾಪ್ಟರ್ 1 ಸಿನಿಮಾ ಮೂಲಕ ಭಾರತೀಯ ಸಿನಿಮಾರಂಗವನ್ನು ವಿಶ್ವ ವಿಖ್ಯಾತ ಪ್ರಚಾರಗೊಳಿಸಿದ್ದ ಕೀರ್ತಿ ನಟ ರಿಷಭ್ ಶೆಟ್ಟಿ ಅವರಿಗೆ ಸಲ್ಲುತ್ತದೆ. ಇಷ್ಟೆಲ್ಲ ಸಾಧನೆ ಮಾಡಿದ್ದ ಇವರು ಒಂದು ಕಾಲದಲ್ಲಿ ಸಣ್ಣ ಪುಟ್ಟ ಅವಕಾಶಗಳಿಗಾಗಿಯೂ ಸಾಕಷ್ಟು ಕಷ್ಟ ಪಟ್ಟಿದ್ದರು. ಈ ಹಿಂದೆ ಸಿನಿಮಾ ಹೊರತಾಗಿ ಇತರ ಕೆಲಸ ಮಾಡಿಯೂ ಜೀವನ ದೂಡಿದ್ದರು. ಬಳಿಕ ಜ್ಯೋತಿಷಿ ಯೊಬ್ಬರ ಸಲಹೆಯಂತೆ ತಮ್ಮ ಹುಟ್ಟು ಹೆಸರನ್ನು ಬದಲಾಯಿಸಿದ್ದು ಅವರಿಗೆ ಸಾಧನೆಯ ಅದೃಷ್ಟ ಒಲಿದು ಬರುವಂತಾಯಿತು ಎನ್ನಲಾಗಿದೆ.

ನವದೆಹಲಿ: ಕಾಂತಾರ ಚಾಪ್ಟರ್ 1 (Kantara: Chapter-1) ಸಿನಿಮಾ ಮೂಲಕ ಭಾರತೀಯ ಸಿನಿಮಾ ರಂಗವನ್ನು ವಿಶ್ವ ವಿಖ್ಯಾತ ಪ್ರಚಾರಗೊಳಿಸಿದ್ದ ಕೀರ್ತಿ ನಟ ರಿಷಬ್‌ ಶೆಟ್ಟಿ (Rishab Shetty) ಅವರಿಗೆ ಸಲ್ಲುತ್ತದೆ. ಈ ಸಿನಿಮಾ ಪ್ಯಾನ್ ವರ್ಲ್ಡ್ ಮಟ್ಟಕ್ಕೆ ಹೊಸ ದಾಖಲೆ ಸೃಷ್ಟಿ ಮಾಡು ತ್ತಿದ್ದು ಬಾಕ್ಸ್ ಆಫೀಸ್ ನಲ್ಲಿ ಭರ್ಜರಿ ಕಲೆಕ್ಷನ್ ಕೂಡ ಮಾಡುತ್ತಿದೆ. ಇದರ ಜೊತೆಗೆ ಇವರಿಗೆ ಬೇರೆ ಬೇರೆ ಸಿನಿಮಾ ಆಫರ್ಸ್ ಕೂಡ ಸಿಗುತ್ತಿದೆ. ಇಷ್ಟೆಲ್ಲ ಸಾಧನೆ ಮಾಡಿದ್ದ ಇವರು ಒಂದು ಕಾಲದಲ್ಲಿ ಸಣ್ಣ ಪುಟ್ಟ ಅವಕಾಶಗಳಿಗಾಗಿಯೂ ಸಾಕಷ್ಟು ಕಷ್ಟ ಪಟ್ಟಿದ್ದರು. ಈ ಹಿಂದೆ ಸಿನಿಮಾ ಹೊರತಾಗಿ ಇತರ ಕೆಲಸ ಮಾಡಿಯೂ ಜೀವನ ದೂಡಿದ್ದರು. ಬಳಿಕ ಜ್ಯೋತಿಷಿಯೊಬ್ಬರ ಸಲಹೆಯಂತೆ ತಮ್ಮ ಹುಟ್ಟು ಹೆಸರನ್ನು ಬದಲಾಯಿಸಿದ್ದು, ಅವರಿಗೆ ಸಾಧನೆಯ ಅದೃಷ್ಟ ಒಲಿದು ಬರುವಂತಾಯಿತು ಎನ್ನಲಾಗಿದೆ. ಹೀಗಾಗಿ ಇತ್ತೀಚಿನ ಒಂದು ಸಂದರ್ಶನದಲ್ಲಿ ಪಾಲ್ಗೊಂಡ ಸಂದರ್ಭದಲ್ಲಿ ತಮ್ಮ ಹೆಸರನ್ನು ಬದಲಾಯಿಸಿಕೊಂಡ ಬಗ್ಗೆ ಅವರು ಕೆಲವು ಮಹತ್ವದ ವಿಚಾರಗಳನ್ನು ಹಂಚಿಕೊಂಡಿದ್ದಾರೆ.

ನಟ ರಿಷಬ್‌ ಶೆಟ್ಟಿ ಅವರು ಇತ್ತೀಚೆಗಷ್ಟೇ ಸಂದರ್ಶನವೊಂದರಲ್ಲಿ ಪಾಲ್ಗೊಂಡಿದ್ದು ಅನೇಕ ವಿಚಾರವನ್ನು ಅವರು ಬಹಿರಂಗ ಪಡಿಸಿದ್ದಾರೆ. ನನ್ನ ನಿಜವಾದ ಹೆಸರು ಪ್ರಶಾಂತ್ ಎಂದಾಗಿತ್ತು. ಆದರೆ ಕೆಲಸದಲ್ಲಿ ಉತ್ತಮ ಭವಿಷ್ಯಕ್ಕಾಗಿ ಅದನ್ನು ರಿಷಭ್ ಎಂದು ಬದಲಾಯಿಸಲು ಸ್ವತಃ ನನ್ನ ತಂದೆಯವರೆ ಸೂಚಿಸಿದರು. ನಾನು ಯಾವುದೇ ಜ್ಯೋತಿಷಿಯ ಮೊರೆಹೋಗಿಲ್ಲ. ಆದರೆ ತನ್ನ ತಂದೆಯ ಸಲಹೆ ಪಾಲಿಸಿದ್ದೇನೆ. ಪ್ರಶಾಂತ್ ಮತ್ತು ರಿಷಬ್‌ ಶೆಟ್ಟಿ ಎಂಬ ಎರಡೂ ಹೆಸರುಗಳನ್ನು ನನ್ನ ತಂದೆಯವರೇ ಇಟ್ಟಿದ್ದು ಎಂದು ಅವರು ಬಹಿರಂಗಪಡಿಸಿದರು.

ತಂದೆಯವರಿಗೆ ಮೊದಲಿನಿಂದಲೂ ಜ್ಯೋತಿಷ್ಯ ಶಾಸ್ತ್ರದ ಮೇಲೆ ನಂಬಿಕೆ ಜಾಸ್ತಿ. ನನಗೆ ಕಲಾವಿದ ನಾಗುವ ಆಸೆ ಇದ್ದ ಕಾರಣ ನಾನೆಷ್ಟೇ ಪ್ರಯತ್ನ ಪಟ್ಟರು ಏನಾದರೂ ಒಂದು ಸಮಸ್ಯೆ ಆಗುತ್ತಿತ್ತು. ಬಳಿಕ ನನ್ನ ತಂದೆ ರ (R) ಅಕ್ಷರದಿಂದ ಹೆಸರು ಬದಲಾಯಿಸಲು ತಿಳಿಸಿ ಅನಂತರ ರಿಷಬ್‌ ಶೆಟ್ಟಿ ಹೆಸರನ್ನು ಅವರೇ ಸೂಚಿಸಿದರು. ಹೀಗಾಗಿ ಪ್ರಶಾಂತ್ ಆಗಿದ್ದ ನಾನು ರಿಷಬ್‌ ಶೆಟ್ಟಿಯಾದೆನು. ಅವರ ಮಾತೋ ಅಥವಾ ಕಾಕತಾಳಿಯವೊ ಗೊತ್ತಿಲ್ಲ ಎಲ್ಲ ಬದಲಾಯಿತು. ಸಿನಿಮಾ ಇಂಡಸ್ಟ್ರಿಯಲ್ಲಿ ಸಾಧನೆಗೂ ದಾರಿಯಾಯಿತು ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ:Pathashala Movie: ನವೆಂಬರ್ 14ರಂದು ಮಕ್ಕಳ ದಿನಾಚರಣೆಯ ದಿನ ತೆರೆಗೆ ಬರಲಿದೆ ʼಪಾಠಶಾಲಾʼ

ಕಾಂತಾರ: ಚಾಪ್ಟರ್ 1 ಅನ್ನು ಹೊಂಬಾಳೆ ಫಿಲ್ಮ್ಸ್‌ನ (Hombale Films) ಬ್ಯಾನರ್ ಅಡಿಯಲ್ಲಿ ವಿಜಯ್ ಕಿರಗಂದೂರು ನಿರ್ಮಿಸಿದ್ದಾರೆ. ಈ ಚಿತ್ರಕ್ಕೆ ಅರವಿಂದ್ ಎಸ್. ಕಶ್ಯಪ್ ಅವರ ಛಾಯಾ ಗ್ರಹಣ ಮತ್ತು ಬಿ. ಅಜನೀಶ್ ಲೋಕನಾಥ್ ಅವರ ಸಂಗೀತವಿದ್ದು ಬಹಳ ಅದ್ಭುತವಾಗಿ ಮೂಡಿ ಬಂದಿದೆ. ರಿಷಭ್ ಶೆಟ್ಟಿ ಬರೆದು, ನಿರ್ದೇಶಿಸಿದ್ದು ಅದರಲ್ಲಿ ಮುಖ್ಯ ಪಾತ್ರಕ್ಕೆ ಅವರು ಜೀವ ತುಂಬಿದ್ದಾರೆ. ಗುಲ್ಶನ್ ದೇವಯ್ಯ, ರುಕ್ಮಿಣಿ ವಸಂತ್, ಜಯರಾಮ್, ಪಿಡಿ ಸತೀಶ್ ಚಂದ್ರ, ಪ್ರಕಾಶ್ ತುಮಿನಾಡ್ ಈ ಸಿನಿಮಾದಲ್ಲಿ ನಟಿಸಿದ್ದಾರೆ.

ಕಾಂತಾರ ಸಿನಿಮಾದ ಯಶಸ್ಸಿನ ಬಳಿಕ ನಟ ರಿಷಭ್ ಅವರು ಮುಂಬೈ ಸಿದ್ಧಿ ವಿನಾಯಕ ದೇಗುಲಕ್ಕೆ ಭೇಟಿ ನೀಡಿದ್ದರು. ಬಳಿಕ ಮೈಸೂರಿನ ಚಾಮುಂಡೇಶ್ವರಿ ಕ್ಷೇತ್ರಕ್ಕೂ ಸಹ ಭೇಟಿ ನೀಡಿದ್ದರು. ಆ ಸಂದರ್ಭದಲ್ಲಿ ಕಾಂತಾರಾ ಮುಂದಿನ ಭಾಗದ ಬಗ್ಗೆ ಅಭಿಮಾನಿಗಳು ಪ್ರಶ್ನಿಸಿದ್ದಕ್ಕೆ ಸದ್ಯಕ್ಕೆ ಆ ಯೋಚನೆ ಇಲ್ಲ ಎಂದು ತಿಳಿಸಿದ್ದರು.ಈ ಸಿನಿಮಾದ ಬಳಿಕ ಅವರು ಜೈ ಹನುಮಾನ್ ಹಾಗೂ ಛತ್ರಪತಿ ಶಿವಾಜಿ ಮಹಾರಾಜ್ ಸಿನಿಮಾ ಕೂಡ ಮಾಡಲಿದ್ದಾರೆ.