ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Anchor Anushree: "ಅವಳು ಡೇಟ್‌ ಮಾಡೋ ಟೈಂನಲ್ಲೇ ಗೊತ್ತಿತ್ತು"; ಅನುಶ್ರೀ ಲವ್‌ ಸ್ಟೋರಿ ಬಿಚ್ಚಿಟ್ಟ ಚೈತ್ರಾ ಆಚಾರ್‌

ಕನ್ನಡದ ಫೇಮಸ್‌ ಆ್ಯಂಕರ್ ಅನುಶ್ರೀ ಅವರು ಇಂದು ಉದ್ಯಮಿ ರೋಷನ್‌ ಅವರ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಇಂದು ಇಂದು ಬೆಳಗ್ಗೆ 10.56ಕ್ಕೆ ರೋಷನ್ ಅನುಶ್ರೀಗೆ ಮಾಂಗಲ್ಯ ಧಾರಣೆ ಮಾಡಿದರು. ಅನುಶ್ರೀ ಅವರ ಮದುವೆಗೆ ಚಿತ್ರ ರಂಗದ ಗಣ್ಯರು ಆಗಮಿಸಿ ಶುಭ ಕೋರಿದರು.

ಅನುಶ್ರೀ ಲವ್‌ ಸ್ಟೋರಿ ಏನು ಗೊತ್ತಾ? ಚೈತ್ರಾ ಆಚಾರ್‌ ಹೇಳಿದ್ದೇನು?

Vishakha Bhat Vishakha Bhat Aug 28, 2025 12:52 PM

ಬೆಂಗಳೂರು: ಕನ್ನಡದ ಫೇಮಸ್‌ ಆ್ಯಂಕರ್ ಅನುಶ್ರೀ (Anchor Anushree) ಅವರು ಇಂದು ಉದ್ಯಮಿ ರೋಷನ್‌ ಅವರ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಇಂದು ಇಂದು ಬೆಳಗ್ಗೆ 10.56ಕ್ಕೆ ರೋಷನ್ ಅನುಶ್ರೀಗೆ ಮಾಂಗಲ್ಯ ಧಾರಣೆ ಮಾಡಿದರು. ಅನುಶ್ರೀ ಮದುವೆ ಬೆಂಗಳೂರಿನ ಹೊರವಲಯದ ಸಂಭ್ರಮ ಬೈ ಸ್ವಾನ್‌ಲೈನ್ಸ್ ಸ್ಟುಡಿಯೋಸ್ ತಿಟ್ಟಹಳ್ಳಿ, ಕಗ್ಗಲಿಪುರದಲ್ಲಿ ನಡೆಯುತ್ತಿದೆ. ವಿವಾಹ ಕಾರ್ಯಕ್ರಮಕ್ಕೆ ಅತ್ಯಾಪ್ತರನ್ನು ಮಾತ್ರ ಆಹ್ವಾನಿಸಲಾಗಿದೆ. ಕಿರುತೆರೆ ಕಲಾವಿದರು ಮತ್ತು ಚಿತ್ರೋದ್ಯಮದ ಗಣ್ಯರಿಗೆ ಅನುಶ್ರಿ ಆಹ್ವಾನ ನೀಡಿದ್ದಾರೆ. ಅನೇಕ ಸೆಲೆಬ್ರಿಟಿಗಳು ಮದುವೆಗೆ ಆಗಮಿಸಿದ್ದಾರೆ.

ಅನುಶ್ರೀ ಮದುವೆಗೆ ಆಗಮಿಸಿದ ಚೈತ್ರಾ ಆಚಾರ್‌ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು. ಅನುಶ್ರೀ ಹಾಗೂ ರೋಷನ್‌ ಅವರ ಪರಿಚಯದ ಕುರಿತು ಆಚಾರ್‌ ಮಾತನಾಡಿದರು. ಅನುಶ್ರೀ ನನಗೆ ಉತ್ತಮ ಸ್ನೇಹಿತೆ. ಆಕೆಯ ಮದುವೆಗೆ ಬಂದಿರುವುದು ತುಂಬಾ ಖುಷಿಯಾಗುತ್ತಿದೆ. ಯಾವಾಗ್ಲೂ ಒಳ್ಳೆದು ಆಗಲಿ ಎಂದು ನಾನು ಹಾರೈಸುತ್ತೇನೆ ಎಂದು ಹೇಳಿದರು. ಅಷ್ಟೇ ಅಲ್ಲದೆ ಅನುಶ್ರೀ ಹಾಗೂ ರೋಷನ್‌ ಅವರ ಪ್ರೀತಿ ವಿಚಾರ ಬಹಳ ಮೊದಲೇ ನನಗೆ ಗೊತ್ತಿತ್ತು. ಒಬ್ಬ ಹುಡುಗ ಇದ್ದಾನೆ ಅವನನ್ನು ನಾನು ಡೇಟ್‌ ಮಾಡ್ತಾ ಇದೀನಿ ಎಂದು ಅನುಶ್ರೀ ನನ್ನ‌ ಬಳಿ ಹೇಳಿಕೊಂಡಿದ್ದರು ಎಂದು ಚೈತ್ರಾ ಆಚಾರ್‌ ಹೇಳಿದ್ದಾರೆ. ನಿಮ್ಮ ಮದುವೆ ಯಾವಾಗ ಮೇಡಂ ಎಂದು ಹೇಳಿದ್ದಕ್ಕೆ ಆಚಾರ್‌ ಅನುಶ್ರೀ ಅವರ ಸಾಧನೆ ನೋಡಿ ಅಷ್ಟು ಸಾಧನೆ ಮಾಡಿ ನಾನೂ ಮದುವೆಯಾಗುತ್ತೇನೆ ಎಂದರು.

ಇನ್ನು ಮದುವೆಗೆ ನಿರ್ದೇಶಕ ಸಂತೋಷ್‌ ಆನಂದ್‌ ರಾಮ್‌ ಅವರು ಆಗಮಿಸಿ ಶುಭ ಕೋರಿದರು. ಅನುಶ್ರೀ ಅವರ ವ್ಯಕ್ತಿತ್ವ ಚೆನ್ನಾಗಿದೆ. ಎಲ್ಲರನ್ನೂ ನಗಿಸುತ್ತಲೇ ಮನರಂಜನೆ ನೀಡುತ್ತಾರೆ. ಅಷ್ಟೇ ಅಲ್ಲದೇ ಅವರೊಬ್ಬ ಪುನೀತ್‌ ರಾಜ್‌ಕುಮಾರ್‌ ಅವರ ಅಭಿಮಾನಿ. ಅವರ ಪ್ರತಿಯೊಂದು ಶೋನಲ್ಲಿಯೂ ಅಥಿತಿಗಳಿಗೆ ಪುನೀತ್‌ ಸರ್‌ ಇರುವ ಬೆಳ್ಳಿ ನಾಣ್ಯಗಳನ್ನು ಉಡುಗೊರೆಯಾಗಿ ನೀಡುತ್ತಾರೆ. ಕನ್ನಡದಲ್ಲಿ ಹೆಸರು ಮಾಡಬೇಕಾದರೆ ಅವರು ಸಾಕಷ್ಟು ಪರಿಶ್ರಮ ಪಟ್ಟಿದ್ದಾರೆ. ಅವರಿಗೆ ಒಳ್ಳೆಯದಾಗಲಿ ಎಂದು ಅವರು ಹಾರೈಸಿದರು.

ಈ ಸುದ್ದಿಯನ್ನೂ ಓದಿ: Anchor Anushree: ಆ್ಯಂಕರ್ ಅನುಶ್ರೀ-‌ ರೋಷನ್ ಮದುವೆ ಇನ್ವಿಟೇಶನ್‌ ರಿವೀಲ್‌, ʼಏಕಾಂಗಿ ನಂತರ ಈಗ ಅರ್ಧಾಂಗಿʼ ಎಂದ ಅನುಶ್ರೀ

ಅನುಶ್ರೀ ಅವರ ಆಪ್ತ ಬಳಗವಾದ, ರಾಜ್​ ಬಿ ಶೆಟ್ಟಿ, ನೆನಪಿರಲಿ ಪ್ರೇಮ್, ಕಾವ್ಯ ಶಾ, ಸೋನಲ್ ಮೊಂಥೆರೋ, ನಟ ನಾಗಭೂಷಣ್, ಚೈತ್ರಾ ಜೆ ಆಚಾರ್, ನಟ ಶರಣ್​ ಸೇರಿದಂತೆ ಸಾಕಷ್ಟು ಸ್ಟಾರ್ ಸೆಲೆಬ್ರಿಟಿಗಳು ಬಂದು ನವಜೋಡಿಗೆ ಶುಭ ಹಾರೈಸಿದ್ದಾರೆ. ಈವರೆಗೆ ಅನುಶ್ರೀ ಅವರು ತಮ್ಮ ಮದುವೆ ಎಂದು ಎಲ್ಲಿಯೂ ಹೇಳಿಕೊಂಡಿಲ್ಲ. ಅನುಶ್ರೀ ಹಾಗೂ ರೋಷನ್ ಅವರದ್ದು ಲವ್ ಮ್ಯಾರೇಜ್. ಪುನೀತ್‌ ರಾಜ್‌ಕುಮಾರ್‌ ಅವರ ಗಂಧದ ಗುಡಿ ರಿಲೀಸ್‌ ಟೈಂನಲ್ಲಿ ಇವರಿಬ್ಬರು ಭೇಟಿಯಾಗಿದ್ದರು.