ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಚೈತ್ರಾ ಆಚಾರ್‌ ಹೊಸ ಸಿನಿಮಾಕ್ಕೆ LSD ಟೈಟಲ್;‌ ಅಮ್ಮನ ಪಾತ್ರದ ಮೂಲಕ ಚಿತ್ರರಂಗಕ್ಕೆ ಮರಳಿದ ಗಾಯಕಿ ಎಂಡಿ ಪಲ್ಲವಿ

Chaitra J Achar New Movie: ಚೈತ್ರಾ ಆಚಾರ್‌ ನಟನೆಯ ಹೊಸ ಸಿನಿಮಾಕ್ಕೆ 'LSD' (Laila's Sweet Dream) ಎಂದು ಹೆಸರಿಡಲಾಗಿದೆ. ಈ ಚಿತ್ರದ ಮೂಲಕ ಗಾಯಕಿ ಎಂ.ಡಿ. ಪಲ್ಲವಿ ಅವರು ನಟನೆಗೆ ಮರಳಿದ್ದಾರೆ. ಶಕ್ತಿ ಪ್ರಸಾದ್ ನಿರ್ದೇಶನದ ಈ ಚಿತ್ರವು ತಾಯಿ ಮತ್ತು ಮಗಳ ಬಾಂಧವ್ಯದ ಕಥೆಯನ್ನು ಹೊಂದಿದ್ದು, ಹಿರಿಯ ನಟ ಅವಿನಾಶ್ ಉದ್ಯಮಿಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

LSD Movie: ನಟಿ ಚೈತ್ರಾ ಆಚಾರ್‌ಗೆ ತಾಯಿಯಾದ ಗಾಯಕಿ ಎಂಡಿ ಪಲ್ಲವಿ!

-

Avinash GR
Avinash GR Dec 29, 2025 7:43 PM

ಸ್ಯಾಂಡಲ್‌ವುಡ್‌ನ ಭರವಸೆಯ ನಟಿ ಚೈತ್ರಾ ಜೆ ಆಚಾರ್‌ ಅವರು ಹೊಸದೊಂದು ಸಿನಿಮಾಗೆ ನಾಯಕಿಯಾಗಿದ್ದಾರೆ. ಆ ಚಿತ್ರಕ್ಕೆ ʻಎಲ್‌ಎಸ್‌ಡಿʼ ಎಂದು ಹೆಸರಿಡಲಾಗಿದೆ. ವಿಶೇಷವೆಂದರೆ, ಈ ಸಿನಿಮಾದ ಮೂಲಕ ಸ್ಯಾಂಡಲ್‌ವುಡ್‌ಗೆ ನಟಿಯಾಗಿ ಮರಳಿದ್ದಾರೆ ಗಾಯಕಿ ಎಂ ಡಿ ಪಲ್ಲವಿ. ʻಎಲ್‌ಎಸ್‌ಡಿʼ ಚಿತ್ರದಲ್ಲಿ ಚೈತ್ರಾ ಆಚಾರ್‌ಗೆ ತಾಯಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ ಪಲ್ಲವಿ. ಅಂದಹಾಗೆ, ಎಲ್‌ಎಸ್‌ಡಿ ಎಂದರೆ ಏನು? ʻಲೈಲಾಸ್ ಸ್ವೀಟ್ ಡ್ರೀಮ್ʼ. ಈ ಚಿತ್ರವನ್ನು ಶಕ್ತಿ ಪ್ರಸಾದ್‌ ಎಂಬುವವರು ನಿರ್ದೇಶನ ಮಾಡುತ್ತಿದ್ದಾರೆ.

ಸುರಾಮ್ ಮೂವೀಸ್ ಲಾಂಛನದಲ್ಲಿ ಜಯರಾಮ್ ದೇವಸಮುದ್ರ ನಿರ್ಮಿಸುತ್ತಿರುವ ಈ ಸಿನಿಮಾದ ಟೈಟಲ್ ಟೀಸರ್ ಇತ್ತೀಚೆಗೆ ಬಿಡುಗಡೆಯಾಗಿದೆ. ಇದು ಸುರಾಮ್ ಮೂವೀಸ್ ನಿರ್ಮಾಣದ ನಾಲ್ಕನೇ ಚಿತ್ರ. ʻನಿದ್ರಾದೇವಿ ನೆಕ್ಸ್ಟ್ ಡೋರ್ʼ, ನಂತರ ಶ್ರೀಮುರಳಿ ಅಭಿನಯದ ʻಉಗ್ರಾಯಧಮ್ʼ ಹಾಗೂ ʻನೀ ನಂಗೆ ಅಲ್ವಾʼ ಚಿತ್ರಗಳ ನಂತರ ಈಗ ಎಲ್‌ಎಸ್‌ಡಿ ಸಿನಿಮಾವನ್ನು ಸುರಾಮ್ ಮೂವೀಸ್ ಘೋಷಿಸಿದೆ. "ಹೊಸಪ್ರತಿಭೆಗಳಿಗೆ ಅವಕಾಶ ನೀಡಬೇಕೆಂಬುದು ನಮ್ಮ ಸಂಸ್ಥೆಯ ಮುಖ್ಯ ಉದ್ದೇಶ. ಹಾಗಾಗಿ ಯುವ ಪ್ರತಿಭೆ ಶಕ್ತಿ ಪ್ರಸಾದ್ ಅವರು ಈ ಚಿತ್ರದ ಕಥೆ ಹೇಳಿದಾಗ ಬಹಳ ಇಷ್ಟವಾಗಿ, ನಿರ್ಮಾಣಕ್ಕೆ ಮುಂದಾದೆ" ಎನ್ನುತ್ತಾರೆ ನಿರ್ಮಾಪಕ ಜಯರಾಮ್ ದೇವಸಮುದ್ರ.

Anchor Anushree: "ಅವಳು ಡೇಟ್‌ ಮಾಡೋ ಟೈಂನಲ್ಲೇ ಗೊತ್ತಿತ್ತು"; ಅನುಶ್ರೀ ಲವ್‌ ಸ್ಟೋರಿ ಬಿಚ್ಚಿಟ್ಟ ಚೈತ್ರಾ ಆಚಾರ್‌

ಚೈತ್ರಾ ಆಚಾರ್‌ ಹೇಳಿದ್ದೇನು?

"ನಿರ್ದೇಶಕ ಶಕ್ತಿಪ್ರಸಾದ್ ನನಗೆ ಒಂದೂವರೆ ವರ್ಷಗಳ ಹಿಂದೆಯೇ ಈ ಕಥೆ ಹೇಳಿದ್ದರು. ಈ ಮೊದಲು ಬೇರೆ ಭಾಷೆಗಳ ನಿರ್ಮಾಪಕರ ಬಳಿ ಈ ಕಥೆಯನ್ನು ಅವರು ಹೇಳಿದ್ದಾರೆ. ಅವರೆಲ್ಲರೂ ಕಥೆ ಮೆಚ್ಚಿಕೊಂಡು ನಿರ್ಮಾಣಕ್ಕೆ ಮುಂದಾಗಿದ್ದರು. ಆದರೆ ಕನ್ನಡದಲ್ಲೇ ಈ ಚಿತ್ರ ಮಾಡಬೇಕೆಂಬ ಉದ್ದೇಶದಿಂದ ಶಕ್ತಿಪ್ರಸಾದ್‌ ಬೇರೆ ಭಾಷೆಗಳಲ್ಲಿ ಬಂದ ಆಫರ್‌ ಅನ್ನು ಒಪ್ಪಿಕೊಳ್ಳಲಿಲ್ಲ. ನಂತರ ನಿರ್ಮಾಪಕ ಜಯರಾಮ್ ದೇವಸಮುದ್ರ ಅವರು ಕನ್ನಡದಲ್ಲಿ ನಿರ್ಮಾಣಕ್ಕೆ ಮುಂದಾದರು. ನಾನು ಈ ಚಿತ್ರದಲ್ಲಿ ಈವರೆಗೂ ಮಾಡಿರದ ಪಾತ್ರದಲ್ಲಿ ಅಭಿನಯಿಸುತ್ತಿದ್ದೇನೆ" ಎನ್ನುತ್ತಾರೆ ನಟಿ ಚೈತ್ರಾ ಜೆ ಆಚಾರ್.

"ಕೆಲವು ವರ್ಷಗಳ ನಂತರ ಮತ್ತೆ ಸಿನಿಮಾದಲ್ಲಿ ನಾನು ನಟಿಸುತ್ತಿದ್ದೇನೆ. ಚೈತ್ರಾ ಆಚಾರ್ ಅವರ ಮೂಲಕ ನನಗೆ ಈ ಚಿತ್ರದ ಬಗ್ಗೆ ತಿಳಿಯಿತು. ಶಕ್ತಿ ಪ್ರಸಾದ್ ಅವರು ಒಳ್ಳೆಯ ಕಥೆ ಮಾಡಿಕೊಂಡಿದ್ದಾರೆ. ನಾನು ಚೈತ್ರಾಗೆ ಅಮ್ಮನ ಪಾತ್ರದಲ್ಲಿ ಅಭಿನಯಿಸುತ್ತಿದ್ದೇನೆ" ಎಂದರು ಎಂ ಡಿ ಪಲ್ಲವಿ.

3 BHK Movie: ʼ3 ಬಿಎಚ್‌ಕೆʼ ಮೂಲಕ ಕಾಲಿವುಡ್‌ಗೆ ಕಾಲಿಟ್ಟ ಚೈತ್ರಾ ಆಚಾರ್‌; ಚಿತ್ರಕ್ಕೆ ಡಾಲಿ ಧನಂಜಯ್‌ ಸಾಥ್‌

ತಾಯಿ - ಮಗಳ ಬಾಂಧವ್ಯದ ಕಥೆ

"ನಾನು ಅನೇಕ ಕಿರುಚಿತ್ರಗಳನ್ನು ನಿರ್ಮಾಣ ಮಾಡಿದ್ದೇನೆ. ಬೆಳ್ಳಿತೆರೆಯಲ್ಲಿ ಇದು ನನ್ನ ಮೊದಲ ಸಿನಿಮಾ. ಅವಕಾಶ ನೀಡಿದ ನಿರ್ಮಾಪಕರಿಗೆ ಧನ್ಯವಾದ. ಎಲ್‌ಎಸ್‌ಡಿ ಎಂದರೆ ʻಲೈಲಾಸ್ ಸ್ವೀಟ್ ಡ್ರೀಮ್ʼ ಅಂತ. ಇದೊಂದು ವಿಭಿನ್ನ ಕಥಾಹಂದರ ಹೊಂದಿರುವ ಚಿತ್ರ. ತಾಯಿ - ಮಗಳ ಬಾಂಧವ್ಯದ ಚಿತ್ರವೂ ಹೌದು. ಚೈತ್ರಾ ಆಚಾರ್ ಪ್ರಮುಖಪಾತ್ರದಲ್ಲಿ ಅಭಿನಯಿಸುತ್ತಿದ್ದು, ಅವರ ತಾಯಿ ಪಾತ್ರದಲ್ಲಿ ಪಲ್ಲವಿ ನಟಿಸುತ್ತಿದ್ದಾರೆ. ಉದ್ಯಮಿ ಪಾತ್ರದಲ್ಲಿ ಹಿರಿಯ ನಟ ಅವಿನಾಶ್ ಕಾಣಿಸಿಕೊಳ್ಳುತ್ತಿದ್ದಾರೆ" ಎಂದು ಮಾಹಿತಿ ನೀಡುತ್ತಾರೆ ನಿರ್ದೇಶಕ ಶಕ್ತಿಪ್ರಸಾದ್ ತಿಳಿಸಿದರು.

ಮಿಥುನ್ ಮುಕುಂದನ್ ಸಂಗೀತ ನಿರ್ದೇಶನ, ರಿತೇಶ್ ಛಾಯಾಗ್ರಹಣ ಹಾಗೂ ಬಲರಾಮ್ ಅವರ ಸಂಕಲನವಿರುವ ಈ ಚಿತ್ರಕ್ಕೆ ಈಗಾಗಲೇ ಒಂದು ಹಂತದ ಚಿತ್ರೀಕರಣ ಮುಕ್ತಾಯವಾಗಿದ್ದು, ಜನವರಿ 15ರಿಂದ ಎರಡನೇ ಹಂತದ ಚಿತ್ರೀಕರಣ ಆರಂಭವಾಗಲಿದೆ.