ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Drummer Deva: ಡ್ರಮ್ ಕಲಾವಿದನಿಗೆ ಸಂಕಷ್ಟ; ಸಹಾಯ ಮಾಡುವಂತೆ ಕುಟುಂಬಸ್ಥರ ಮನವಿ

Drummer Deva: ದೊಡ್ಡ ದೊಡ್ಡ ಸಂಗೀತ ನಿರ್ದೇಶಕರ ಸಿನಿಮಾಗಳಿಗೆ ಡ್ರಮ್ಸ್ ಬಾರಿಸಿದ್ದಾರೆ. ಅನೇಕ ಸಂಗೀತ ಕಾರ್ಯಕ್ರಮಗಳನ್ನು ನೀಡಿದ್ದಾರೆ. ಕನ್ನಡ ಸಂಗೀತ ಲೋಕದ ಪ್ರಸಿದ್ಧ ಡ್ರಮ್ಮರ್, ‘ಕನ್ನಡದ ಶಿವಮಣಿ’ ಎಂದು ಕರೆಯಲ್ಪಡುವ ಡ್ರಮ್ಮರ್​ ದೇವಾ ಅವರು ತೀವ್ರ ಸಂಕಷ್ಟದಲ್ಲಿದ್ದಾರೆ. ಗ್ಯಾಂಗ್ರಿನ್ ಕಾಯಿಲೆಗೆ ತುತ್ತಾಗಿ ಇತ್ತೀಚೆಗೆ ಅವರ ಒಂದು ಕಾಲನ್ನು ಶಸ್ತ್ರಚಿಕಿತ್ಸೆ ಮೂಲಕ ತೆಗೆಯಲಾಗಿದೆ. ಈಗ ಚಿಕಿತ್ಸೆಗಾಗಿ ಕುಟುಂಬ ಆರ್ಥಿಕ ಸಂಕಷ್ಟದಲ್ಲಿದೆ.

ಡ್ರಮ್ ಕಲಾವಿದನಿಗೆ ಸಂಕಷ್ಟ; ಸಹಾಯ ಮಾಡುವಂತೆ ಕುಟುಂಬಸ್ಥರ ಮನವಿ

ಡ್ರಮ್ಸ್ ದೇವ -

Yashaswi Devadiga
Yashaswi Devadiga Jun 21, 2026 8:07 PM

ಡ್ರಮ್‌ ದೇವ '5 ಈಡಿಯಟ್ಸ್', 'ಪ್ರೀತಿ ನೀ ಹೀಂಗ್ಯಾಕೆ' ಸೇರಿದಂತೆ ಕೆಲವು ಸಿನಿಮಾಗಳಿಗೆ ಸಂಗೀತ ನೀಡಿದ್ದಾರೆ. ದೊಡ್ಡ ದೊಡ್ಡ ಸಂಗೀತ ನಿರ್ದೇಶಕರ ಸಿನಿಮಾಗಳಿಗೆ ಡ್ರಮ್ಸ್ (Drums) ಬಾರಿಸಿದ್ದಾರೆ. ಅನೇಕ ಸಂಗೀತ ಕಾರ್ಯಕ್ರಮಗಳನ್ನು ನೀಡಿದ್ದಾರೆ. ಕನ್ನಡ ಸಂಗೀತ ಲೋಕದ ಪ್ರಸಿದ್ಧ ಡ್ರಮ್ಮರ್, ‘ಕನ್ನಡದ ಶಿವಮಣಿ’ ಎಂದು ಕರೆಯಲ್ಪಡುವ ಡ್ರಮ್ಮರ್​ ದೇವಾ (Drummer Deva) ಅವರು ತೀವ್ರ ಸಂಕಷ್ಟದಲ್ಲಿದ್ದಾರೆ. ಗ್ಯಾಂಗ್ರಿನ್ ಕಾಯಿಲೆಗೆ ತುತ್ತಾಗಿ ಇತ್ತೀಚೆಗೆ ಅವರ ಒಂದು ಕಾಲನ್ನು ಶಸ್ತ್ರಚಿಕಿತ್ಸೆ ಮೂಲಕ ತೆಗೆಯಲಾಗಿದೆ. ಈಗ ಚಿಕಿತ್ಸೆಗಾಗಿ ಕುಟುಂಬ ಆರ್ಥಿಕ ಸಂಕಷ್ಟದಲ್ಲಿದೆ.

ಈ ಬಗ್ಗೆ ಗಣೇಶ್‌ ಕಾಸರಗೋಡು ಕೂಡ ಪೋಸ್ಟ್‌ ಶೇರ್‌ ಮಾಡಿದ್ದಾರೆ. 'ಕನ್ನಡದ ಶಿವಮಣಿ' ಎಂದೇ ಖ್ಯಾತರಾಗಿರುವ ಡ್ರಮ್ಮರ್ ದೇವಾ ಅನಾರೋಗ್ಯ ಪೀಡಿತರಾಗಿ ಆಸ್ಪತ್ರೆ ಪಾಲಾಗಿದ್ದಾರೆ.

ಇದನ್ನೂ ಓದಿ: Gilli Nata Movie: ಗಿಲ್ಲಿ ಹೊಸ ಸಿನಿಮಾಗೆ ಟೈಟಲ್ ಫಿಕ್ಸ್‌; ಫ್ಯಾನ್ಸ್‌ಗೆ ಗುಡ್‌ ನ್ಯೂಸ್‌ ಕೊಟ್ಟ ನಟ

ಬಲಗಾಲನ್ನು ಕತ್ತರಿಸಲಾಗಿದೆ. ಸೊಂಟಕ್ಕೆ ಪೆಟ್ಟಾಗಿದೆ. ಮತ್ತೊಂದು ಕಾಲು ಕೂಡಾ ಅಪಾಯದಲ್ಲಿದೆ. ಅಷ್ಟೊಂದು ಅಸಹಾಯಕರಾಗಿ ಹಾಸಿಗೆ ಪಾಲಾಗಿದ್ದರೂ ನಮ್ಮ ಜತೆ ಮುಕ್ತವಾಗಿ ಮಾತಾಡಿದ್ದಾರೆ ಡ್ರಮ್ಮರ್ ದೇವಾ ಎಂದು ಬರೆದುಕೊಂಡಿದ್ದಾರೆ.

ಹಂಸಲೇಖ ಮತ್ತು ಸಾಧು ಕೋಕಿಲ ಅವರ ಆರ್ಕೆಸ್ಟ್ರಾ ಸೇರಿದಂತೆ ಹಲವು ಸ್ಟೇಜ್ ಶೋಗಳಲ್ಲಿ ದೇವ ಡ್ರಮ್ ನುಡಿಸಿ ಪ್ರೇಕ್ಷಕರನ್ನು ರಂಜಿಸಿದ್ದಾರೆ. ಚಿಕಿತ್ಸೆ ಮತ್ತು ಮುಂದಿನ ಜೀವನಕ್ಕಾಗಿ ದೇವಾ ಕುಟುಂಬಕ್ಕೆ ಆರ್ಥಿಕ ನೆರವು ಅಗತ್ಯವಿದೆ. ಕಲಾಭಿಮಾನಿಗಳು, ಸಂಗೀತ ಪ್ರಿಯರು ಹಾಗೂ ಸಾರ್ವಜನಿಕರು ಕೈಲಾದಷ್ಟು ಸಹಾಯ ಮಾಡುವಂತೆ ಕುಟುಂಬ ಮನವಿ ಮಾಡಿದ್ದಾರೆ.

ಇದನ್ನೂ ಓದಿ: Toxic movie: ‘ಟಾಕ್ಸಿಕ್’ ಬಾಕ್ಸ್ ಆಫೀಸ್​​ನಲ್ಲಿ ಎದುರಾಗುತ್ತಿರುವ ಸಿನಿಮಾಗಳು ಇವು

ಇವರ ಜನಪ್ರಿಯ ಹಾಡುಗಳಲ್ಲಿ 'ಬಾನಿಂದ ಜಾರಿ', 'ವಿಧಿ ಆಟವ ಆಡಿದ', 'ಪ್ರೀತಿ ನೀ ಹೀಗೇಕೆ' ಮುಂತಾದವು ಸೇರಿವೆ ಭಾರತೀಯ ಸಂಗೀತ ಲೋಕದ ಖ್ಯಾತನಾಮರಾದ ಇಳಯರಾಜಾ ಅವರ ಜೊತೆಗೂ ಕೆಲಸ ಮಾಡಿದ್ದಾರೆ.