'ಸಿಟಿ ಲೈಟ್ಸ್' ಚಿತ್ರದ 'ಕಂದಮ್ಮ ಕಂದಮ್ಮ' ಸಾಂಗ್ ರಿಲೀಸ್: ಅಪ್ಪ ʻದುನಿಯಾʼ ವಿಜಯ್ ಕುಮಾರ್ ಬಗ್ಗೆ ಮಗಳು ಮೋನಿಷಾ ಹೇಳಿದ್ದೇನು?
‘ದುನಿಯಾ’ ವಿಜಯ್ ಕುಮಾರ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ, ವಿನಯ್ ರಾಜ್‌ಕುಮಾರ್ ಹಾಗೂ ಮಗಳು ಮೋನಿಷಾ ನಟನೆಯ 'ಸಿಟಿ ಲೈಟ್ಸ್' ಚಿತ್ರದ 'ಕಂದಮ್ಮ ಕಂದಮ್ಮ' ಹಾಡು ಬಿಡುಗಡೆಯಾಗಿದೆ. ಚರಣ್ ರಾಜ್ ಸಂಗೀತದ, ಸಂಜಿತ್ ಹೆಗಡೆ ಹಾಡಿರುವ ಈ ಗೀತೆಯನ್ನು ನಾಗಾರ್ಜುನ ಶರ್ಮಾ ಬರೆದಿದ್ದಾರೆ.
-
ʻದುನಿಯಾʼ ವಿಜಯ್ ಕುಮಾರ್ ನಿರ್ದೇಶನದಲ್ಲಿ, ವಿನಯ್ ರಾಜ್‌ಕುಮಾರ್ ಹಾಗೂ ಮೋನಿಷಾ ವಿಜಯಕುಮಾರ್ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿರುವ 'ಸಿಟಿ ಲೈಟ್ಸ್' (City Lights) ಸಿನಿಮಾದ 'ಕಂದಮ್ಮ ಕಂದಮ್ಮ' ಎಂಬ ಎರಡನೇ ಹಾಡು ಇತ್ತೀಚೆಗೆ ಬಿಡುಗಡೆಯಾಗಿದೆ. ಈ ಸಾಂಗ್ ರಿಲೀಸ್ ಕಾರ್ಯಕ್ರಮದಲ್ಲಿ ಚಿತ್ರತಂಡವು ತಮ್ಮ ಅನುಭವಗಳನ್ನು ಹಂಚಿಕೊಂಡಿದೆ. ಸಂಜಿತ್ ಹೆಗಡೆ ಧ್ವನಿಯಲ್ಲಿ ಮೂಡಿಬಂದಿರುವ ಈ ಹಾಡಿಗೆ ಚರಣ್ ರಾಜ್ ಸಂಗೀತ ಸಂಯೋಜಿಸಿದ್ದು, ನಾಗಾರ್ಜುನ ಶರ್ಮ ಸಾಹಿತ್ಯ ಬರೆದಿದ್ದಾರೆ.
ನಿರ್ದೇಶಕ ದುನಿಯಾ ವಿಜಯ್ ಮಾತು
"ಶೂಟಿಂಗ್ ಮುಗಿದ ಮೇಲೆ ನಿರ್ದೇಶಕರಿಗೆ ಸುಸ್ತಾಗಿ ತಲೆ ಓಡುವುದಿಲ್ಲ. ಅಂತಹ ಸಮಯದಲ್ಲಿ ಮ್ಯೂಸಿಕ್ ಡೈರೆಕ್ಟರ್ ಮತ್ತು ಲಿರಿಕ್ಸ್ ರೈಟರ್ ನಮಗೆ ಮತ್ತೆ ಜೀವ ನೀಡುತ್ತಾರೆ. 'ಸಲಗ' ಚಿತ್ರದಿಂದಲೂ ಚರಣ್ ರಾಜ್ ಮತ್ತು ನಾಗಾರ್ಜುನ ಶರ್ಮ ಅವರ ಜತೆಗಿನ ಪಯಣ ಅದ್ಭುತವಾಗಿದೆ. ಎಲ್ಲರೂ ತಮ್ಮ ಪ್ರೀತಿಪಾತ್ರರನ್ನು 'ಕಂದಮ್ಮ, ಬಂಗಾರಿ' ಎಂದು ಕರೆಯುವುದು ಸರ್ವೇ ಸಾಮಾನ್ಯ, ಅದನ್ನೇ ಬೇಸ್ ಆಗಿಟ್ಟುಕೊಂಡು ಈ ಸಾಂಗ್ ಪ್ಲಾನ್ ಮಾಡಿದೆವು" ಎನ್ನುತ್ತಾರೆ ವಿಜಯ್.
Duniya Vijay: ದುನಿಯಾ ವಿಜಯ್ ಹೊಸ ತೆಲುಗು ಸಿನಿಮಾದಿಂದ ಹೊರ ಬಿತ್ತು ಬಿಗ್ ಅಪ್ಡೇಟ್!
"ಈ ಸಿನಿಮಾದಲ್ಲಿ ಒಂದು ಸುಂದರ ಲವ್ ಸ್ಟೋರಿ ಇದೆ. ನಟ ವಿನಯ್ ರಾಜ್‌ಕುಮಾರ್ ತುಂಬಾ ಒಳ್ಳೆಯ ಮನಸ್ಸಿನ ವ್ಯಕ್ತಿ. ನಟನೆಯಲ್ಲಿ ಅವರು ರಾಕ್ಷಸ ಇದ್ದಂತೆ, ಅವರಿಗೆ ಏನು ಬೇಕಾದರೂ ಗ್ರಹಿಸಿ ಅಭಿನಯಿಸುವ ತಾಕತ್ತಿದೆ" ಎಂದು ವಿನಯ್ ರಾಜ್‌ಕುಮಾರ್‌ರನ್ನು ಹೊಗಳಿದರು ವಿಜಯ್.
ನಟ ವಿನಯ್ ರಾಜ್‌ಕುಮಾರ್ ಹೇಳಿದ್ದೇನು?
"ಕಂದಮ್ಮ ಕಂದಮ್ಮ ನನಗೆ ತುಂಬಾ ಇಷ್ಟವಾದ ಹಾಡು. ಚರಣ್ ರಾಜ್, ನಾಗಾರ್ಜುನ ಶರ್ಮ ಹಾಗೂ ವಿಜಿ ಸರ್ ಮೂವರ ಕಾಂಬಿನೇಷನ್ ಅಂದರೆ ಖಂಡಿತ ಒಳ್ಳೆಯ ಸಾಂಗ್ ಬಂದೇ ಬರುತ್ತದೆ ಎಂಬ ಭರವಸೆ ಇತ್ತು. ಸಂಜಿತ್ ಹೆಗಡೆ ಅವರ ಕಂಠಸಿರಿಯಲ್ಲಿ ಈ ಹಾಡು ಕೇಳಿ ತುಂಬಾ ಖುಷಿಯಾಯಿತು. ಶೂಟಿಂಗ್ ಸಮಯದಲ್ಲಿ ನಾಲ್ಕು ದಿನ ಸತತವಾಗಿ ಈ ಹಾಡು ಕೇಳುತ್ತಿದ್ದೆವು. ವಿಜಿ ಸರ್ ಜತೆ ಕೆಲಸ ಮಾಡುವುದು ಬಹಳ ಕಂಫರ್ಟಬಲ್ ಅನಿಸುತ್ತದೆ" ಎನ್ನುತ್ತಾರೆ ವಿನಯ್ ರಾಜ್‌ಕುಮಾರ್.
Duniya vijay: ದುನಿಯಾ ವಿಜಯ್ - ರಚಿತರಾಮ್ ನಟನೆಯ ʻಲ್ಯಾಂಡ್ ಲಾರ್ಡ್ʼ ಟೀಸರ್ ಔಟ್; ರಿಲೀಸ್ ಡೇಟ್ ಅನೌನ್ಸ್
ಅಪ್ಪನ ಬಗ್ಗೆ ಮಗಳು ಮೋನಿಷಾ ಹೇಳಿದ್ದೇನು?
"ನನ್ನ ಇಡೀ 'ಸಿಟಿ ಲೈಟ್ಸ್' ಆಲ್ಬಮ್‌ನಲ್ಲೇ 'ಕಂದಮ್ಮ ಕಂದಮ್ಮ' ಅತ್ಯಂತ ಫೇವರೆಟ್ ಸಾಂಗ್. ಇದರಲ್ಲಿ 'ಬೇಡ ಕಂದ ನಿನಗೆ ಅಲಂಕಾರ, ನೀನೇ ತಾನೆ ಬಂಗಾರ' ಎಂಬ ಲೈನ್ಸ್ ಅಪ್ಪನೇ (ವಿಜಯ್) ಬರೆಸಿದ್ದು. ನಾನು ಚಿತ್ರರಂಗಕ್ಕೆ ಹೊಸಬಳಾಗಿದ್ದರೂ ವಿನಯ್ ಅವರು ನಟನೆಯಲ್ಲಿ ಸೂಕ್ತ ಸ್ಪೇಸ್ ಕೊಟ್ಟರು. ಮನೆಯಲ್ಲಿ ಅಪ್ಪ ಮತ್ತು ನಾನು ತುಂಬಾ ಕ್ಲೋಸ್. ಅವರು ನನ್ನನ್ನು ಯಾವಾಗಲೂ 'ಕಂದಮ್ಮ' ಅಂತಲೇ ಕರೆಯುತ್ತಾರೆ. ಆದರೆ ಶೂಟಿಂಗ್ ಸೆಟ್‌ಗೆ ಹೋದರೆ 'ಮೋನಿಷಾ ಬಾ, ಮೋನಿಷಾ ಹೀಗೆ ಮಾಡು' ಎಂದು ಅತ್ಯಂತ ಪ್ರೊಫೆಷನಲ್ ಹಾಗೂ ಸ್ಟ್ರಿಕ್ಟ್ ಆಗಿ ಕೆಲಸ ಮಾಡಿಸುತ್ತಿದ್ದರು. ಅಪ್ಪನ ಈ ಹೊಸ ಮುಖ ನೋಡಿ ತುಂಬಾ ಖುಷಿಯಾಯಿತು" ಎಂದು ಹೇಳುತ್ತಾರೆ ಮೋನಿಷಾ.