Aamir Khan: 60ನೇ ವರ್ಷಕ್ಕೆ ಕಾಲಿಡುತ್ತಿರುವ ಆಮೀರ್ ಖಾನ್ ಕುಟುಂಬಸ್ಥರನ್ನು ಭೇಟಿಯಾಗಿ ಗೌರಿ ಸ್ಪ್ರಾಟ್ ಹೇಳಿದ್ದೇನು?
Aamir Khan: ಬೆಂಗಳೂರಿನಲ್ಲಿ ವಾಸಿಸುತ್ತಿರುವ ಗೌರಿ ಅವರು, ಆಮೀರ್ ಖಾನ್ ಅವರ ಬ್ಯಾನರ್‌ನಲ್ಲಿ ಕೆಲಸ ಮಾಡುತ್ತಿದ್ದಾರೆ. ನಿನ್ನೆ ಆಮೀರ್ ಕುಟುಂಬವನ್ನು ಭೇಟಿಯಾದ ಗೌರಿ ಅತ್ಯಂತ ಸಂತೋಷ ವ್ಯಕ್ತಪಡಿಸಿದ್ದು, “ಆಮೀರ್ ಕುಟುಂಬಸ್ಥರು ನನ್ನನ್ನು ಮನೆ ಮಗಳಂತೆ ತುಂಬಾ ಪ್ರೀತಿಯಿಂದ ನೋಡಿಕೊಂಡರು” ಎಂದು ಹೇಳಿದ್ದಾರೆ.

ಆಮೀರ್ ಖಾನ್ - ಗೌರಿ ಸ್ಪ್ರಾಟ್

ಬೆಂಗಳೂರು: ಶುಕ್ರವಾರ ಬಾಲಿವುಡ್‌ನ ಖ್ಯಾತ ನಟ ಆಮೀರ್ ಖಾನ್ ಅವರು 60ನೇ ಹುಟ್ಟುಹಬ್ಬವನ್ನು ಆಚರಿಸುತ್ತಿದ್ದಾರೆ. ಈಗಾಗಲೇ ಹಲವು ಬ್ಲಾಕ್‌ಬಸ್ಟರ್ ಸಿನಿಮಾಗಳನ್ನು ನೀಡಡಿರುವ ಅವರು ಚಲನಚಿತ್ರರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಪಿವಿಆರ್ ಐನಾಕ್ಸ್ "ದಿ ಅಮೀರ್ ಖಾನ್: ಸಿನಿಮಾ ಕಾ ಜಾದುಗರ್" ಅನ್ನು ಪ್ರಸ್ತುತಪಡಿಸುತ್ತಿದೆ. ಇದು ಅವರ ಕೆಲ ಐಕಾನಿಕ್ ಸಿನಿಮಾಗಳನ್ನು ಪ್ರದರ್ಶಿಸಲಿರುವ ವಿಶೇಷ ಚಲನಚಿತ್ರೋತ್ಸವವಾಗಿದೆ. ಮಾರ್ಚ್ 14 ರಿಂದ 27ರವರೆಗೆ ಈ ಸಿನಿಮಾ ಹಬ್ಬ ಜರುಗಲಿದೆ. ಈ ಮಧ್ಯೆ ಇವರ ವೈಯಕ್ತಿಕ ಜೀವನದ ಬಗ್ಗೆ ಸಖತ್ ಚರ್ಚೆಯಾಗುತ್ತಿದ್ದು, 2021ರಲ್ಲಿ ಅವರ ಎರಡನೇ ಪತ್ನಿ ಕಿರಣ್ ರಾವ್ ಅವರಿಗೆ ವಿಚ್ಛೇದನ ನೀಡಿದ ಆಮೀರ್ ಖಾನ್, ಈಗ ಬೆಂಗಳೂರಿನ ಗೌರಿ ಸ್ಪ್ರಾಟ್ ಅವರೊಂದಿಗೆ ಡೇಟಿಂಗ್ ಮಾಡುತ್ತಿದ್ದಾರೆ.
ತಮ್ಮ 60ನೇ ಹುಟ್ಟುಹಬ್ಬದ ಸಂದರ್ಧದಲ್ಲಿ ಗೌರಿ ಸ್ಪ್ರಾಟ್ ಅವರನ್ನು ಕುಟುಂಬಸ್ಥರಿಗೆ ಪರಿಚಯಿಸಿದ ಆಮೀರ್ ಖಾನ್, ಡೇಟಿಂಗ್ ವಿಚಾರವನ್ನು ಮಾಧ್ಯಮಗಳ ಮುಖಾಂತರ ಜಗಜ್ಜಾಹೀರು ಮಾಡಿದ್ದಾರೆ. ಗೌರಿ ಕಳೆದ 18 ತಿಂಗಳಿನಿಂದ ಆಮೀರ್ ಅವರ ಜತೆ ಸುತ್ತಾಡುತ್ತಿದ್ದಾರೆ ಮತ್ತು ಇಬ್ಬರೂ ಒಟ್ಟಿಗೆ ವಾಸಿಸುತ್ತಿದ್ದಾರೆ ಎಂದು ಹಲವು ವರದಿಗಳು ಹೇಳಿವೆ.
ಪ್ರಸ್ತುತ ಬೆಂಗಳೂರಿನಲ್ಲಿ ವಾಸಿಸುತ್ತಿರುವ ಗೌರಿ ಅವರು, ಆಮೀರ್ ಖಾನ್ ಅವರ ಬ್ಯಾನರ್‌ನಲ್ಲಿ ಕೆಲಸ ಮಾಡುತ್ತಿದ್ದಾರೆ. ನಿನ್ನೆ ಆಮೀರ್ ಕುಟುಂಬವನ್ನು ಭೇಟಿಯಾದ ಗೌರಿ ಅತ್ಯಂತ ಸಂತೋಷ ವ್ಯಕ್ತಪಡಿಸಿದ್ದು, “ಆಮೀರ್ ಕುಟುಂಬಸ್ಥರು ನನ್ನನ್ನು ಮನೆ ಮಗಳಂತೆ ತುಂಬಾ ಪ್ರೀತಿಯಿಂದ ನೋಡಿಕೊಂಡರು” ಎಂದು ಹೇಳಿದ್ದಾರೆ.
ಬಾಲಿವುಡ್ ಸ್ಟಾರ್‌ವೊಬ್ಬರ ಕುಟುಂಬಕ್ಕೆ ಪರಿಚಯಿಸಿದಾಗ ಹೇಗೆ ಅನಿಸಿತು ಎಂದು ಕೇಳಿದಾಗ, “ಅವರು ಮುಕ್ತ ತೋಳುಗಳಿಂದ ನನ್ನನ್ನು ಸ್ವಾಗತಿಸಿದರು. ಅವರ ಪ್ರೀತಿಯನ್ನು ನೋಡಿ ತುಂಬಾ ಸಂತೋಷವಾಯಿತು” ಎಂದು ಗೌರಿ ಹೇಳಿದ್ದಾರೆ.
ಈ ಸುದ್ದಿಯನ್ನೂ ಓದಿ: Aamir Khan: ಸಿಲಿಕಾನ್ ಸಿಟಿ ಬ್ಯೂಟಿ ಜೊತೆ ನೋ ಮ್ಯಾರೇಜ್... ಓನ್ಲಿ ಡೇಟಿಂಗ್!? ಆಮೀರ್ ಖಾನ್ ಹೇಳಿದ್ದೇನು ಗೊತ್ತಾ?
ಆಮೀರ್ ಭೇಟಿಗೂ ಮುನ್ನ ಗೌರಿ ʼಲಗಾನ್ʼ ಮತ್ತು ʼದಂಗಲ್ʼ ನೋಡಿದ್ದರಂತೆ. ಆದರೆ, ಗೌರಿ ಹೆಚ್ಚು ಸಿನಿಮಾಗಳನ್ನು ನೋಡದ ಕಾರಣ, ತಾನೊಬ್ಬ ʼಸ್ಟಾರ್ʼ ಎಂಬ ವಿಚಾರದಿಂದ ಆಕೆ ವಿಚಲಿತಳಾಗಿರಲಿಲ್ಲ ಎಂದು ಆಮೀರ್ ಹೇಳಿದ್ದಾರೆ. “ಗೌರಿಗೆ ಆರು ವರ್ಷದ ಒಬ್ಬ ಮಗನಿದ್ದು, ನನ್ನ ಸೋದರ ಸಂಬಂಧಿಯಿಂದಾಗಿ ಅವಲ ಪರಿಚಯವಾಯಿತು. ತಾವಿಬ್ಬರೂ 25 ವರ್ಷಗಳಿಂದ ಪರಸ್ಪರ ಪರಿಚಿತರಾಗಿದ್ದು, ಮೊದಲ ಭೇಟಿ ನಂತರ ಮತ್ತೆ ಸಂಪರ್ಕ ಸಾಧಿಸಿ, ನಂಬರ್‌ಗಳನ್ನು ವಿನಿಮಯ ಮಾಡಿಕೊಂಡೆವು ಮತ್ತು ಅದು ವರ್ಕೌಟ್ ಆಯಿತು” ಎಂದು ಆಮೀರ್ ಖಾನ್ ಹೇಳಿದ್ದಾರೆ.
ಆಮೀರ್ ಖಾನ್ ಅವರು ಗೌರಿಯನ್ನು ಶಾರುಖ್ ಮತ್ತು ಸಲ್ಮಾನ್ ಖಾನ್ ಅವರ ಮನೆಗೂ ಕರೆದುಕೊಂಡು ಹೋಗಿದ್ದರೆಂಬ ವಿಚಾರವನ್ನು ಈ ಸಂದರ್ಭದಲ್ಲಿ ಬಹಿರಂಗಪಡಿಸಿದರು. ಇನ್ನು ಆಮೀರ್ ಬಗ್ಗೆ ಮಾತನಾಡಿದ ಗೌರಿ, “ಅವರೊಬ್ಬರು ಪ್ರಣಯಪ್ರಿಯ ವ್ಯಕ್ತಿ. ಯಾವಾಗಲೂ ನನಗಾಗಿ ಏನಾದರೂ ಹೊಸತಾಗಿ, ವಿಶೇಷವಾದದ್ದನ್ನು ಮಾಡಬೇಕೆಂಬ ಹಂಬಲ ಹೊಂದಿದ್ದಾರೆ” ಎಂದರು. ಸಿನಿಮಾದ ವಿಚಾರಕ್ಕೆ ಬಂದರೆ, ಆಮಿರ್ ಅವರ 'ಸೀತಾರೆ ಜಮೀನ್ ಪರ್' ಚಿತ್ರ ಸದ್ಯದಲ್ಲೇ ಬಿಡುಗಡೆಯಾಗಲಿದೆ. ಇದು ಅವರ ʼತಾರೇ ಜಮೀನ್ ಪರ್ʼ ಚಿತ್ರದ ಉತ್ತಭಾಗ ಎಂದು ಆಮೀರ್ ಹೇಳಿದ್ದು, ಇದು ಅವರ ನಿರ್ದೇಶನದ ಮೊದಲ ಚಿತ್ರವಾಗಿದೆ.