Aamir Khan: ಸಿಲಿಕಾನ್ ಸಿಟಿ ಬ್ಯೂಟಿ ಜೊತೆ ನೋ ಮ್ಯಾರೇಜ್... ಓನ್ಲಿ ಡೇಟಿಂಗ್!? ಆಮೀರ್ ಖಾನ್ ಹೇಳಿದ್ದೇನು ಗೊತ್ತಾ?
ಬಾಲಿವುಡ್ ನಟ ಆಮೀರ್ ಖಾನ್ ಯಾರಿಗೆ ಗೊತ್ತಿಲ್ಲ ಹೇಳಿ. ಅವರು ಕೇವಲ ಸಿನಿಮಾಗಳಿಗಷ್ಟೇ ಅಲ್ಲದೇ, ತಮ್ಮ ವೈಯಕ್ತಿಕ ಜೀವನದಿಂದಾಗಿಯೂ ಹಲವು ಬಾರಿ ಸುದ್ದಿಯಾಗಿದ್ದಾರೆ. ಈಗಾಗಲೇ ಎರಡು ಬಾರಿ ಮದುವೆಯಾಗಿ ಪತ್ನಿಯರಿಗೆ ವಿಚ್ಛೇದನ ನೀಡಿರುವ ಆಮೀರ್, ಮತ್ತೆ ಮೂರನೇ ಬಾರಿಗೆ ಪ್ರೀತಿಯಲ್ಲಿ ಬಿದ್ದಿದ್ದಾರೆ. ಅದು ಕೂಡಾ ಬೆಂಗಳೂರಿನ ಓರ್ವ ಮಹಿಳೆ ಜೊತೆ ಅಂದ್ರೆ ನಂಬ್ತೀರಾ..?

ನಟ ಆಮೀರ್ ಖಾನ್

ಬೆಂಗಳೂರು: ಬಾಲಿವುಡ್(Bollywood) ನಟ ಆಮೀರ್ ಖಾನ್(Aamir Khan) ಯಾರಿಗೆ ಗೊತ್ತಿಲ್ಲ ಹೇಳಿ. ಅವರು ಕೇವಲ ಸಿನಿಮಾ(Movie)ಗಳಿಗಷ್ಟೇ ಅಲ್ಲದೇ, ತಮ್ಮ ವೈಯಕ್ತಿಕ ಜೀವನದಿಂದಾಗಿಯೂ ಹಲವು ಬಾರಿ ಸುದ್ದಿಯಾಗಿದ್ದಾರೆ. ಈಗಾಗಲೇ ಎರಡು ಬಾರಿ ಮದುವೆಯಾಗಿ ಪತ್ನಿಯರಿಗೆ ವಿಚ್ಛೇದನ(divorce) ನೀಡಿರುವ ಆಮೀರ್, ಮತ್ತೆ ಮೂರನೇ ಬಾರಿಗೆ ಪ್ರೀತಿಯಲ್ಲಿ(Dating) ಬಿದ್ದಿದ್ದಾರೆ. ಅದು ಕೂಡಾ ಬೆಂಗಳೂರಿನ(Bangalore) ಓರ್ವ ಮಹಿಳೆ ಜತೆ. ಬೆಂಗಳೂರಿನಲ್ಲಿ ವಾಸಿಸುತ್ತಿರುವ ಒಂದು ಮಗುವಿನ ತಾಯಿ ಗೌರಿ ಸ್ಪ್ರಾಟ್ ಅವರೊಂದಿಗೆ ಆಮೀರ್‌ಗೆ ಲವ್ವಾಗಿದೆ ಎಂಬ ಕುರಿತು ಗಾಳಿ ಸುದ್ದಿ ಹರಿದಾಡುತ್ತಿತ್ತು. ಈ ಗಾಳಿಸುದ್ದಿಯನ್ನು ತಮ್ಮ 60ನೇ ಹುಟ್ಟುಹಬ್ಬದಂದು ಆಮೀರ್ ಖಾನ್ ಅವರೇ ದೃಢಪಡಿಸಿದ್ದಾರೆ.
ಹಲವು ಮಾಧ್ಯಮ ವರದಿಗಳ ಪ್ರಕಾರ, ಆಮೀರ್ ಮತ್ತು ಗೌರಿಯ ಸಂಬಂಧ ಒಂದು ವರ್ಷ ಹಿಂದೆಯೇ ಪ್ರಾರಂಭವಾಗಿತ್ತಂತೆ. ಆದರೆ, ಇಬ್ಬರಿಗೂ ಪರಿಚಯವಾಗಿ 25 ವರ್ಷಗಳಿಗೂ ಹೆಚ್ಚು ಸಮಯವಾಗಿದೆ ಎನ್ನುತ್ತವೆ ವರದಿಗಳು. ಇಷ್ಟಾದರೂ ಆಮೀರ್ ಖಾನ್ ಮೂರನೇ ಮದುವೆಯಾಗುತ್ತಾರಾ ಇಲ್ಲವಾ ಎಂಬುದಕ್ಕೆ ಅವರು ಕೊಟ್ಟ ಉತ್ತರ ಏನು ಗೊತ್ತಾ?
ಸುಮಾರು ಆರೇಳು ತಿಂಗಳ ಹಿಂದೆ ಆಮೀರ್ ಖಾನ್ ಅವರು ರಿಯಾ ಚಕ್ರವರ್ತಿಯ ಪಾಡ್‌ಕ್ಯಾಸ್ಟ್‌ನಲ್ಲಿ ಕಾಣಿಸಿಕೊಂಡಾಗ ಅವರ ಬಳಿ ಮದುವೆಯ ಬಗ್ಗೆ ಸಲಹೆ ಕೇಳಲಾಗಿತ್ತು. ಅಗ ಅವರು, ಈಗಾಗಲೇ ನನ್ನ ಎರಡು ಮದುವೆಗಳು ವಿಫಲವಾಗಿವೆ, ನನ್ನಂತವನಿಂದ ಮದುವೆ ಕುರಿತ ಸಲಹೆ ಕೇಳಬೇಡಿ ಎಂದು ಉತ್ತರ ನೀಡಲು ನಿರಾಕರಿಸಿದ್ದರು. ಆದರೆ, ಅವರ ವೈಯಕ್ತಿಕ ಅಭಿಪ್ರಾಯಗಳ ಕುರಿತು ಮಾತನಾಡಿ, "ನನಗೆ ಒಂಟಿಯಾಗಿ ಬದುಕುವುದು ಇಷ್ಟವಿಲ್ಲ, ನನಗೆ ಸಂಗಾತಿ ಬೇಕು. ನಾನು ನನ್ನ ಮಾಜಿ ಪತ್ನಿಯರಾದ ರೀನಾ ಮತ್ತು ಕಿರಣ್ ಇಬ್ಬರಿಗೂ ತುಂಬಾ ಹತ್ತಿರವಾಗಿದ್ದೇನೆ, ನಾವು ಒಂದೇ ಕುಟುಂಬದವರಂತೆ ಇದ್ದೇವೆ. ಜೀವನ ಅನಿರೀಕ್ಷಿತ, ಆದ್ದರಿಂದ ನಾವು ಅದನ್ನು ನಂಬುವುದು ಹೇಗೆ? ಆದ್ದರಿಂದ ಮದುವೆಗಳು ಯಾವ ರೀತಿ ಕೆಲಸ ಮಾಡುತ್ತವೆ ಎನ್ನುವುದು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗುತ್ತಲೇ ಇರುತ್ತದೆ" ಎಂದಿದ್ದರು.
Amir Khan: ಬೆಂಗಳೂರಿನ ಮೂಲದ ಗೌರಿ ಸ್ಪ್ರಾಟ್ ಜೊತೆ ಆಮಿರ್ ಖಾನ್ ರಿಲೇಷನಶಿಪ್; ಯಾರೀಕೆ? ಹಿನ್ನೆಲೆಯೇನು?
ಇದರ ನಂತರ ರಿಯಾ ಕೇಳಿದ ಮೂರನೇ ಮದುವೆ ಕುರಿತ ಪ್ರಶ್ನೆಗೆ ಆಮೀರ್ ಯಾವುದೇ ಮುಚ್ಚುಮರೆಯಿಲ್ಲದೆ ಉತ್ತರ ನೀಡಿದ್ದರು. “ನನಗೆ ಮೂರನೇ ಮದುವೆಯಾಗುವ ಯಾವುದೇ ಯೋಜನೆ ಇಲ್ಲ” ಎಂದು ಅವರು ಸ್ಪಷ್ಟವಾಗಿ ಹೇಳಿದ್ದರು. "ನನಗೆ ಈಗ 59 ವರ್ಷ, ನಾನು ಮತ್ತೆ ಮದುವೆಯಾಗುತ್ತೇನೆ ಎಂದು ನಂಬುವುದು ಕಷ್ಟ. ನನ್ನ ಜೀವನದಲ್ಲಿ ಈಗಾಗಲೇ ತುಂಬಾ ಸಂಬಂಧಗಳಿವೆ. ನಾನು ನನ್ನ ಕುಟುಂಬ, ನನ್ನ ಮಕ್ಕಳು ಮತ್ತು ಇತರರೊಂದಿಗೆ ಉತ್ತಮ ಸಂಪರ್ಕ ಹೊಂದಿದ್ದೇನೆ. ನನಗೆ ಹತ್ತಿರವಿರುವ ಜನರೊಂದಿಗೆ ಇರುವುದು ನನಗೆ ತುಂಬಾ ಸಂತೋಷ ನೀಡುತ್ತದೆ. ನಾನು ಉತ್ತಮ ವ್ಯಕ್ತಿಯಾಗಲು ಕೆಲಸ ಮಾಡುತ್ತಿದ್ದೇನೆ" ಎಂದು ಹೇಳಿದರು.
ಆದರೆ, ತಮ್ಮ 60ನೇ ಹುಟ್ಟುಹಬ್ಬದಂದು ಮಾಧ್ಯಮಗಳ ಮುಂದೆ ಗೌರಿಯನ್ನು ಪರಿಚಯಿಸಿದ ಆಮೀರ್, “ಮುಜೆ ಶಾದಿ ಶೋಭಾ ದೇತಿ ಹೈ ಕಿ ನಹಿ (ನನಗೆ ಮದುವೆ ಶೋಭೆ ನೀಡುತ್ತದಾ ಇಲ್ಲವಾ?” ಎಂದು ಮಾಧ್ಯಮದವರನ್ನೇ ಪ್ರಶ್ನೆ ಮಾಡಿದ್ದರು.
ಅಂದ ಹಾಗೆ, ಆಮಿರ್ ಖಾನ್ ಮೊದಲು 1986ರಲ್ಲಿ ರೀನಾ ದತ್ತಾ ಅವರನ್ನು ವಿವಾಹವಾದರು, ಅವರಿಗೆ ಇರಾ ಖಾನ್ ಮತ್ತು ಜುನೈದ್ ಖಾನ್ ಎಂಬ ಇಬ್ಬರು ಮಕ್ಕಳಿದ್ದಾರೆ. ಈ ದಂಪತಿ 2002ರಲ್ಲಿ ವಿಚ್ಛೇದನ ಪಡೆದರು. 2005ರಲ್ಲಿ, ಆಮಿರ್ ಚಲನಚಿತ್ರ ನಿರ್ಮಾಪಕಿ ಕಿರಣ್ ರಾವ್ ಅವರನ್ನು ವಿವಾಹವಾಗಿ, 2021ರಲ್ಲಿ ಇಬ್ಬರೂ ವಿಚ್ಛೇದನ ಘೋಷಿಸಿದರು. ಅವರಿಗೆ ಬಾಡಿಗೆ ತಾಯ್ತನದ ಮೂಲಕ ಜನಿಸಿದ ಆಜಾದ್ ಎಂಬ ಮಗನಿದ್ದಾನೆ.