ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Vaishnavi Chaitanya: ‘ನನ್ನ ವಯಸ್ಸು 32 ಅಲ್ಲ, 25..’; ಆಧಾರ್ ಕಾರ್ಡ್ ತೋರಿಸಿ ಸ್ಪಷ್ಟನೆ ನೀಡಿದ ತೆಲುಗು ನಟಿ!

Vaishnavi Chaitanya Age: ನಟಿ ವೈಷ್ಣವಿ ಚೈತನ್ಯ ಅವರು ತಮ್ಮ ವಯಸ್ಸಿನ ವಿವಾದಕ್ಕೆ ಅಧಿಕೃತ ತೆರೆ ಎಳೆದಿದ್ದಾರೆ. ವಿಕಿಪೀಡಿಯಾದಲ್ಲಿ ತಮ್ಮ ವಯಸ್ಸನ್ನು 32 ಎಂದು ಮಾಹಿತಿ ನೀಡಿದ್ದರಿಂದ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ಭುಗಿಲೆದ್ದಿತ್ತು. ಸಂದರ್ಶನವೊಂದರಲ್ಲಿ ತಮ್ಮ ಆಧಾರ್ ಕಾರ್ಡ್‌ ತೋರಿಸಿದ ಅವರು, ತಾವು 2001ರಲ್ಲಿ ಜನಿಸಿದ್ದು ಎಂದು ಹೇಳಿದ್ದಾರೆ.

ಆಧಾರ್ ಕಾರ್ಡ್ ತೋರಿಸಿ ಅಸಲಿ ವಯಸ್ಸು ತಿಳಿಸಿದ ʻಬೇಬಿʼ ನಟಿ ವೈಷ್ಣವಿ ಚೈತನ್ಯ

-

Avinash GR
Avinash GR Sep 23, 2026 5:31 PM

ತೆಲುಗು ಚಿತ್ರರಂಗದಲ್ಲಿ ಸದ್ಯ ಭರವಸೆಯ ನಟಿಯಾಗಿ ಸದ್ದು ಮಾಡುತ್ತಿರುವ ‘ಬೇಬಿ’ ಖ್ಯಾತಿಯ ವೈಷ್ಣವಿ ಚೈತನ್ಯ, ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ವಯಸ್ಸಿನ ಕುರಿತು ಹಬ್ಬಿದ್ದ ಗೊಂದಲಗಳಿಗೆ ತೆರೆ ಎಳೆದಿದ್ದಾರೆ. ಯೂಟ್ಯೂಬ್ ಕಿರುಚಿತ್ರಗಳ ಮೂಲಕ ವೃತ್ತಿಜೀವನ ಶುರುಮಾಡಿ, ಬಳಿಕ ಬೆಳ್ಳಿತೆರೆ ಪ್ರವೇಶಿಸಿದ ಅವರು, ‘ಬೇಬಿ’ ಸಿನಿಮಾದ ಅದ್ಭುತ ಯಶಸ್ಸಿನ ಮೂಲಕ ರಾತ್ರೋರಾತ್ರಿ ಸ್ಟಾರ್ ಪಟ್ಟಕ್ಕೇರಿದ್ದರು.

ಆದರೆ, ಅವರ ವೃತ್ತಿಪರ ಬೆಳವಣಿಗೆಯಷ್ಟೇ ಅವರ ವೈಯಕ್ತಿಕ ವಿಚಾರಗಳೂ ಕೂಡ ಆಗಾಗ ಸೋಷಿಯಲ್ ಮೀಡಿಯಾದಲ್ಲಿ ವ್ಯಾಪಕ ಚರ್ಚೆಗೆ ಗ್ರಾಸವಾಗುತ್ತಿದ್ದು, ಅದರಲ್ಲಿ ಅವರ ವಯಸ್ಸಿನ ವಿಷಯವೇ ಮುಂಚೂಣಿಯಲ್ಲಿತ್ತು.

ವಯಸ್ಸಿನ ಬಗ್ಗೆ ತಪ್ಪು ಮಾಹಿತಿ

ವಿಕಿಪೀಡಿಯಾ ಪೇಜ್‌ನಲ್ಲಿ ವೈಷ್ಣವಿ ಚೈತನ್ಯ ಅವರ ವಯಸ್ಸು 32 ವರ್ಷ ಎಂದು ತಪ್ಪಾಗಿ ನಮೂದಿಸಲಾಗಿತ್ತು. ಇದರಿಂದಾಗಿ ನೆಟ್ಟಿಗರು ಮತ್ತು ಸಿನಿಮಾ ಪ್ರೇಮಿಗಳ ನಡುವೆ ನಟಿಯ ನಿಜವಾದ ವಯಸ್ಸಿನ ಕುರಿತು ತೀವ್ರ ಚರ್ಚೆಗಳು, ಪರ-ವಿರೋಧದ ಕಮೆಂಟ್‌ಗಳು ಹರಿದಾಡತೊಡಗಿದ್ದವು. ಈ ವಿಷಯ ದಿನೇದಿನೆ ದೊಡ್ಡದಾಗುತ್ತಿದ್ದಂತೆ, ಸ್ವತಃ ನಟಿಯೇ ಈ ವದಂತಿಗಳಿಗೆ ಮುಖಾಮುಖಿಯಾಗಿ ಸ್ಪಷ್ಟ ಉತ್ತರ ನೀಡಲು ಮುಂದಾಗಿದ್ದಾರೆ.

ನಾನು 2001ರಲ್ಲಿ ಹುಟ್ಟಿರುವುದು

ಇತ್ತೀಚೆಗೆ ಸಂದರ್ಶನವೊಂದರಲ್ಲಿ ಈ ಕುರಿತು ಮುಕ್ತವಾಗಿ ಮಾತನಾಡಿದ ವೈಷ್ಣವಿ ಚೈತನ್ಯ, "ವಿಕಿಪೀಡಿಯಾದಲ್ಲಿ ನನ್ನ ಬಗ್ಗೆ ಇರುವ ಮಾಹಿತಿ ಸಂಪೂರ್ಣ ಸುಳ್ಳು. ಅಲ್ಲಿ ನನ್ನ ವಯಸ್ಸನ್ನು 32 ವರ್ಷ ಎಂದು ತಪ್ಪಾಗಿ ಬರೆಯಲಾಗಿದೆ. ಆದರೆ ನನ್ನ ನೈಜ ವಯಸ್ಸು ಕೇವಲ 25 ವರ್ಷವಷ್ಟೇ" ಎಂದು ಬಹಿರಂಗಪಡಿಸಿದ್ದಾರೆ. ಕೇವಲ ಮೌಖಿಕವಾಗಿ ಹೇಳುವುದಷ್ಟೇ ಅಲ್ಲದೆ, ತಮ್ಮ ಮಾತಿಗೆ ಖಚಿತ ಸಾಕ್ಷಿಯಾಗಿ ನೇರವಾಗಿ ತಮ್ಮ ‘ಆಧಾರ್ ಕಾರ್ಡ್’ ಪ್ರದರ್ಶಿಸುವ ಮೂಲಕ ಎಲ್ಲಾ ಊಹಾಪೋಹಗಳಿಗೆ ಅಧಿಕೃತವಾಗಿ ಪೂರ್ಣವಿರಾಮವಿಟ್ಟಿದ್ದಾರೆ. "ನಾನು 2001ರಲ್ಲಿ ಹುಟ್ಟಿರುವುದು" ಎಂದು ವೈಷ್ಣವಿ ತಿಳಿಸಿದ್ದಾರೆ.

ನಟಿ ವೈಷ್ಣವಿ ಚೈತನ್ಯ ನೀಡಿದ ಸ್ಪಷ್ಟನೆಯ ವಿಡಿಯೋ ತುಣುಕುಗಳು ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿವೆ. ಇದಕ್ಕೆ ಪ್ರತಿಕ್ರಿಯಿಸುತ್ತಿರುವ ಅವರ ಅಭಿಮಾನಿಗಳು, ವಿಕಿಪೀಡಿಯಾದಲ್ಲಿರುವ ತಪ್ಪಾದ ಹುಟ್ಟಿದ ದಿನಾಂಕ ಹಾಗೂ ವಯಸ್ಸನ್ನು ಕೂಡಲೇ ಸರಿಪಡಿಸುವಂತೆ ಆಗ್ರಹಿಸುತ್ತಿದ್ದಾರೆ.

ಇನ್ನು ಸಿನಿಮಾ ರಂಗದ ವಿಚಾರಕ್ಕೆ ಬಂದರೆ, ‘ಬೇಬಿ’ ಹಾಗೂ ಇತ್ತೀಚಿನ ‘ಎಪಿಕ್’ ಸಿನಿಮಾಗಳ ಮೂಲಕ ಗಮನಸೆಳೆದಿರುವ ವೈಷ್ಣವಿ, ಸದ್ಯ ಟಾಲಿವುಡ್‌ನ ಹಲವು ಪ್ರಾಜೆಕ್ಟ್‌ಗಳಲ್ಲಿ ಬ್ಯುಸಿಯಾಗಿದ್ದು, ಸಾಲು ಸಾಲು ಚಿತ್ರಗಳ ಮೂಲಕ ಪ್ರೇಕ್ಷಕರನ್ನು ರಂಜಿಸಲು ಸಜ್ಜಾಗುತ್ತಿದ್ದಾರೆ.