Dadasaheb Phalke Award: ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಹಗರಣ ಬಯಲು- ಸಂಸ್ಥಾಪಕ ಅನಿಲ್ ಮಿಶ್ರಾ ಮತ್ತು ಪುತ್ರನ ವಿರುದ್ಧ FIR
ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಯಲ್ಲಿ ಅಕ್ರಮ ಎಸಗಿದ ಆರೋಪ ಮೇಲೆ ದಾದಾಸಾಹೇಬ್ ಫಾಲ್ಕೆ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದ ಸಂಸ್ಥಾಪಕ ಮತ್ತು ವ್ಯವಸ್ಥಾಪಕ ನಿರ್ದೇಶಕ ಅನಿಲ್ ಮಿಶ್ರಾ ಮತ್ತು ಅವರ ಪುತ್ರ ಅಭಿಷೇಕ್ ಮಿಶ್ರಾ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ.
![Dadasaheb Phalke Award](https://cdn-vishwavani-prod.hindverse.com/media/images/Dadasaheb_Phalke_Award.max-1280x720.jpg)
![Profile](https://vishwavani.news/static/img/user.5c7ca8245eec.png)
ಮುಂಬೈ: ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಯಲ್ಲಿ(Dadasaheb Phalke Award) ಅಕ್ರಮ ಎಸಗಿದ ಆರೋಪ ಮೇಲೆ ದಾದಾಸಾಹೇಬ್ ಫಾಲ್ಕೆ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದ (DPIFF) ಸಂಸ್ಥಾಪಕ ಮತ್ತು ವ್ಯವಸ್ಥಾಪಕ ನಿರ್ದೇಶಕ ಅನಿಲ್ ಮಿಶ್ರಾ ಮತ್ತು ಅವರ ಪುತ್ರ ಅಭಿಷೇಕ್ ಮಿಶ್ರಾ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ. ಮುಂಬೈನ ಬಾಂದ್ರಾ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿಸಿದೆ. ಅಷ್ಟೇ ಅಲ್ಲದೆ ಮಿಶ್ರಾ ಅವರ ಪತ್ನಿ ಪಾರ್ವತಿ ಮಿಶ್ರಾ ಮತ್ತು ಮಗಳು ಶ್ವೇತಾ ಮಿಶ್ರಾ ಕೂಡ ಹಗರಣದ ಭಾಗವಾಗಿದ್ದಾರೆ ಎಂದು ಆರೋಪಿಸಲಾಗಿದೆ. ವರದಿಯ ಪ್ರಕಾರ, ಮುಂಬೈನ ಬಾಂದ್ರಾ ಪೊಲೀಸರು ಫೆಬ್ರವರಿ 5 ರಂದು ಅನಿಲ್ ಮಿಶ್ರಾ ಮತ್ತು ಅವರ ಮಗ ಅಭಿಷೇಕ್ ವಿರುದ್ಧ ಭಾರತೀಯ ದಂಡ ಸಂಹಿತೆಯ (BNS-2023) ಸೆಕ್ಷನ್ 318 (4) ಮತ್ತು 319 (2) ಅಡಿಯಲ್ಲಿ ಎಫ್‌ಐಆರ್ ದಾಖಲಿಸಿದ್ದಾರೆ. ಬಿಜೆಪಿಯ ಚಿತ್ರಪತ್ ಅಘಾಡಿ ಘಟಕದ ರಾಜ್ಯ ಅಧ್ಯಕ್ಷ ಸಮೀರ್ ದೀಕ್ಷಿತ್ ಎಂಬುವವರು ಇವರ ವಿರುದ್ಧ ದೂರು ದಾಖಲಿಸಿದ್ದರು.
ಉತ್ತರ ಪ್ರದೇಶದ ಗೋರಖ್‌ಪುರದವರಾದ ಮಿಶ್ರಾ, ಈ ಹಿಂದೆ ಚಲನಚಿತ್ರ ನಿರ್ಮಾಪಕ ಅನಿಲ್ ಶರ್ಮಾ ಅವರ ಸ್ಪಾಟ್ ಬಾಯ್ ಆಗಿದ್ದರು. ನಂತರ ದಾದಾಸಾಹೇಬ್ ಫಾಲ್ಕೆ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ ಪ್ರಶಸ್ತಿ ಎಂಬ ತಮ್ಮದೇ ಆದ ಸಂಸ್ಥೆಯನ್ನು ಸ್ಥಾಪಿಸಿ ಚಲನಚಿತ್ರ ನಟರಿಗೆ ಪ್ರಶಸ್ತಿಗಳನ್ನು ಮಾರಾಟ ಮಾಡಲು ಪ್ರಾರಂಭಿಸಿದರು ಎಂದು ದೂರಿನಲ್ಲಿ ಆರೋಪಿಸಲಾಗಿದೆ. ತನಿಖೆಯಲ್ಲಿ ದಾದಾ ಸಾಹೇಬ್ ಫಾಲ್ಕೆ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ ಪ್ರಶಸ್ತಿ (DPIFF) ಅಧಿಕೃತವಾಗಿ ನೋಂದಾಯಿಸಲ್ಪಟ್ಟಿಲ್ಲ ಎಂದು ತಿಳಿದು ಬಂದಿದೆ.
ಈ ಸುದ್ದಿಯನ್ನೂ ಓದಿ: Naveen Shankar: ಕಾಡುವ ಕಥೆಯೊಂದಿಗೆ ಬಂದ ನವೀನ್ ಶಂಕರ್; 'ನೋಡಿದವರು ಏನಂತಾರೆ' ಸಿನಿಮಾದ ಟ್ರೈಲರ್ ಔಟ್
ಮಿಶ್ರಾ ಫೆಬ್ರವರಿ 20 ರಂದು ಬಾಂದ್ರಾದ ಐದು ಪಂಚತಾರಾ ಹೋಟೆಲ್ ತಾಜ್ ಲ್ಯಾಂಡ್ಸ್ ಎಂಡ್‌ನಲ್ಲಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮವನ್ನು ಆಯೋಜಿಸಿದ್ದರು. ಕಾರ್ಯಕ್ರಮದ ಆಯೋಜನೆಗಾಗಿ ಇಂಟರ್‌ನ್ಯಾಷನಲ್ ಟೂರಿಸಂ ಫೆಸ್ಟಿವಲ್ ಪ್ರೈವೇಟ್ ಲಿಮಿಟೆಡ್ ಎಂಬ ಮುಚ್ಚಲಾದ ಕಂಪನಿಯಿಂದ ಹೆಸರಿನಲ್ಲಿ ಅನುಮತಿ ಪಡೆಯಲಾಗಿತ್ತು. ಇದೀಗ ಆ ಕಾರ್ಯಕ್ರಮವೂ ರದ್ಧಾಗುವ ಸಾಧ್ಯತೆ ಇದೆ.