Chaitra Rao: ಕೂದಲಿಗೆ ಕತ್ತರಿ, ಶಾಕಿಂಗ್ ವಿಚಾರ ತೆರೆದಿಟ್ಟ 'ಗಿಣಿರಾಮ' ಆಯಿಸಾಹೇಬ್!
Chaitra Rao: ಗಿಣಿರಾಮ ಬಳಿಕ ‘ಕೆಂಡಸಂಪಿಗೆ’ ಧಾರಾವಾಹಿ ಮಾಡಿದರ. ‘ಅವನು ಮತ್ತೆ ಶ್ರಾವಣಿ’. ಇದರಲ್ಲಿ ಕೂಡ ನೆಗೆಟಿವ್ ಪಾತ್ರ ಮಾಡಿದ್ದರು. ಜೊತೆಗೆ ತೆಲುಗು ಮತ್ತು ತಮಿಳು ಭಾಷೆಯಲ್ಲಿಯೂ ಸೀರಿಯಲ್ ಮಾಡಿದ್ದಾರೆ. ಉತ್ತರ ಕರ್ನಾಟಕ ಶೈಲಿಯ ಭಾಷೆಯನ್ನ ಸುಲಲಿತವಾಗಿ ಮಾತನಾಡಿ ವೀಕ್ಷಕರ ಮನ ಗೆದ್ದಿದ್ದರು. ಆದರೆ ನಟಿ ಸೀರಿಯಲ್ ಬಳಿಕ ಹೆಚ್ಚಾಗಿ ಕಾಣಿಸಿಕೊಂಡಿಲ್ಲ. ಇದೀಗ ಉತ್ತರ ಸಿಕ್ಕಿದೆ. ಜೊತೆಗೆ ಶಾಕಿಂಗ್ ವಿಷ್ಯವನ್ನೂ ತಿಳಿಸಿದ್ದಾರೆ.
ಚೈತ್ರಾ ನಟಿ -
‘ಗಿಣಿರಾಮʼಧಾರಾವಾಹಿಯಲ್ಲಿ (Ginirama Serial) ರಾಜಕಾರಣಿ ಆಯಿಸಾಹೇಬ್ ಪಾತ್ರ ಮಾಡಿದ್ದರು ಹಾಸನ ಮೂಲದ ಚೈತ್ರಾ ರಾವ್. ಉತ್ತರ ಕರ್ನಾಟಕ ಶೈಲಿಯ ಭಾಷೆಯನ್ನ ಸುಲಲಿತವಾಗಿ ಮಾತನಾಡಿ ವೀಕ್ಷಕರ ಮನ ಗೆದ್ದಿದ್ದರು. ಆದರೆ ನಟಿ ಸೀರಿಯಲ್ (Kannada serial) ಬಳಿಕ ಹೆಚ್ಚಾಗಿ ಕಾಣಿಸಿಕೊಂಡಿಲ್ಲ. ಇದೀಗ ಉತ್ತರ ಸಿಕ್ಕಿದೆ. ಜೊತೆಗೆ ಶಾಕಿಂಗ್ ವಿಷ್ಯವನ್ನೂ ತಿಳಿಸಿದ್ದಾರೆ.
ಶಾರ್ಟ್ ಹೇರ್ ಕಟ್ನಲ್ಲಿ ನಟಿ
ಇದೀಗ ನಟಿ ಶಾರ್ಟ್ ಹೇರ್ ಕಟ್ನಲ್ಲಿ ಕಾಣಿಸಿಕೊಂಡಿದ್ದಾರೆ. ಸದ್ಯ ಯಾವುದೇ ಧಾರಾವಾಹಿಯಲ್ಲಿ ನಟಿಸುತ್ತಿಲ್ಲ. ಅನಾರೋಗ್ಯದ ಕಾರಣದಿಂದ ಮನೆಯಲ್ಲಿಯೇ ರೆಸ್ಟ್ ಮಾಡುತ್ತಿದ್ದಾರೆ. ಇಂಟೆಸ್ಟೈನ್ ಸರ್ಜರಿ ಒಳಗಾದರು. ಇದೇ ಕಾರಣಕ್ಕೆ ಧಾರಾವಾಹಿ ಮತ್ತು ನಟನೆಯಿಂದ ದೂರ ಉಳಿಯಬೇಕಾಯಿತು ಎಂದು ಹೇಳಿಕೊಂಡಿದ್ದಾರೆ.
ಚೈತ್ರಾ ರಾವ್ ಹೇಳಿದ್ದೇನು?
“ಬಾಹುಬಲಿ ಕಟ್ಟಪ್ಪನ ಏಕೆ ಹತ್ಯೆ ಮಾಡಿದ ಎಂಬುವುದು ಹೇಗೆ ಮಿಲಿಯನ್ ಡಾಲರ್ ಪ್ರಶ್ನೆಯಾಗಿತ್ತೋ. ಹಾಗೇ ನಾನು ಉದ್ದ ಇದ್ದ ನನ್ನ ಹೇರ್‌ನ ಏಕೆ ಕಟ್ ಮಾಡಿಸಿದೆ ಎಂಬುವುದು ಎಲ್ಲರ ಪ್ರಶ್ನೆಯಾಗಿತ್ತು. ಕೊನೆಗೂ ಇದಕ್ಕೆ ಉತ್ತರ ಕೊಡುವ ಟೈಮ್ ಬಂದಿದೆ. ಕರುಳಿನ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡೆ. ಹೀಗಾಗಿ ನಮಗೆ ಕೇರ್ ಟೇಕರ್ ಅವಶ್ಯಕತೆ ಇತ್ತು.
ಇದನ್ನೂ ಓದಿ: Amruthadhaare Serial: ಸ್ಫೋಟವಾಯ್ತು ಮಹಾಸತ್ಯ; ಗೌತಮ್ - ಭೂಮಿಕಾಗೆ ಮಗಳು ಸಿಕ್ಕೇ ಬಿಟ್ಲು!
ಆದರೆ, ದುರದೃಷ್ಟವಶಾತ್ ನಮಗೆ ಕೇರ್ ಟೇಕರ್ ಸಿಗಲಿಲ್ಲ. ಸ್ನಾನ ಮಾಡೋಕು ಕಷ್ಟ ಆಗುತ್ತಿತ್ತು. ಹೇರ್‌ನ ಮೆಂಟೈನ್ ಮಾಡೋಕೆ ಬಹಳ ಬಹಳ ಕಷ್ಟ ಆಗುತ್ತಿತ್ತು. ಮುಖ್ಯವಾಗಿ ಒಣಗುತ್ತಿರಲಿಲ್ಲ. ನನಗೆ ತಲೆಯ ಹಿಂಬಾಗ ಕೈ ಎಟಕುತ್ತಿರಲಿಲ್ಲ. ಸಿಕ್ಕಾಪಟ್ಟೆ ಸಮಸ್ಯೆಯಾಗುತ್ತಿತ್ತು. ಹಾಗಾಗಿ, ಪೂರ್ತಿ ಬಾಯ್‌ಕಟ್ ಮಾಡಿಸಿದೆ. ನನ್ನ ಕಂಫರ್ಟ್‌ಗೋಸ್ಕರ ಈ ನಿರ್ಧಾರ ಮಾಡಿದ್ದು.
ನನಗೆ ಈ ಹೇರ್ ಸ್ಟೈಲ್ ತುಂಬಾ ಇಷ್ಟ ಆಗೋಕೆ ಶುರುವಾಯ್ತು. ಬಹಳಷ್ಟು ಜನ ಈ ಲುಕ್‌ನ ಇಷ್ಟ ಪಟ್ಟರು. ಪ್ರಶಂಸೆ ವ್ಯಕ್ತಪಡೆಸಿದರು. ಅದಕ್ಕೆ ಇನ್ನೊಂದು ಐದಾರು ತಿಂಗಳು ಇದೇ ಹೇರ್ ಸ್ಟೈಲ್ ಮೆಂಟೈನ್ ಮಾಡೋಣ ಅನ್ಕೊಂಡಿದ್ದೀನಿ. ಇನ್ನು ಒಂದು ವರ್ಷ ನಾನು ಶೂಟಿಂಗ್ ಮಾಡೋಕೆ ಆಗಲ್ಲ. ನನ್ನ ದೇಹ ಇದಕ್ಕೆ ಅವಕಾಶ ಕೊಡಲ್ಲ. ರೆಸ್ಟ್ ಬೇಕಿದೆ. ಎಂದು ನಟಿ ಚೈತ್ರಾ ರಾವ್ ಹೇಳಿದ್ದಾರೆ.
ಗಿಣಿರಾಮ ಬಳಿಕ ‘ಕೆಂಡಸಂಪಿಗೆ’ ಧಾರಾವಾಹಿ ಮಾಡಿದರ. ‘ಅವನು ಮತ್ತೆ ಶ್ರಾವಣಿ’. ಇದರಲ್ಲಿ ಕೂಡ ನೆಗೆಟಿವ್ ಪಾತ್ರ ಮಾಡಿದ್ದರು. ಜೊತೆಗೆ ತೆಲುಗು ಮತ್ತು ತಮಿಳು ಭಾಷೆಯಲ್ಲಿಯೂ ಸೀರಿಯಲ್ ಮಾಡಿದ್ದಾರೆ.
ಇದನ್ನೂ ಓದಿ: Karikaada Kannada movie: ನಟರಾಜ್ ಅಭಿನಯದ ‘ಕರಿಕಾಡ’ ಸಿನಿಮಾ ಈ ಒಟಿಟಿಯಲ್ಲಿ ಪ್ರಸಾರ!
'ನಾಗಕನ್ನಿಕೆ' ಧಾರಾವಾಹಿಯಲ್ಲಿ ಚಿಕ್ಕ ಪಾತ್ರದಲ್ಲಿ ನಟಿಸಿದ್ದಾರೆ. 'ಸರಯೂ', 'ವಿದ್ಯಾ ವಿನಾಯಕ', 'ಗುಂಡಮ್ಮ ಕಥಾ' ಮುಂತಾದ ಧಾರಾವಾಹಿಗಳಲ್ಲಿ ನಟಿಸಿದ್ದಾರೆ. 'ಆದ್ಯಾ', 'ಕರಾಳ', 'ಅಧ್ಯಕ್ಷ ಇನ್ ಅಮೆರಿಕ' ಸಿನಿಮಾದಲ್ಲಿ ನಟಿಸಿದ್ದಾರೆ.