ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಫ್ಯಾಷನ್‌ ಲೋಕ ಉದ್ಯೋಗ

Gold Suresh: ಬಿಗ್‌ಬಾಸ್‌ ಖ್ಯಾತಿಯ ಗೋಲ್ಡ್ ಸುರೇಶ್ ದಿಢೀರ್ ಆಸ್ಪತ್ರೆಗೆ ದಾಖಲು; ಕಾರಣವೇನು?

Gold Suresh: ಗೋಲ್ಡ್ ಸುರೇಶ್ ಆಸ್ಪತ್ರೆಗೆ ದಾಖಲಾದ ವಿಚಾರ ಗೊತ್ತಾದ ಕೂಡಲೇ ಸುರೇಶ್ ಅಭಿಮಾನಿಗಳು ಆತಂಕಗೊಂಡಿದ್ದಾರೆ. ಆದರೆ ಆತಂಕ ಪಡುವ ಅವಶ್ಯಕತೆ ಇಲ್ಲ ಆಪರೇಷನ್ ನಂತರ ಅವರನ್ನು ಬಹುಬೇಗ ಡಿಸ್ಟಾರ್ಜ್ ಮಾಡಲಾಗುವುದು ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ

ಬಿಗ್‌ಬಾಸ್‌ ಖ್ಯಾತಿಯ ಗೋಲ್ಡ್ ಸುರೇಶ್ ದಿಢೀರ್ ಆಸ್ಪತ್ರೆಗೆ ದಾಖಲು; ಕಾರಣವೇನು?

Profile Prabhakara R Feb 2, 2025 9:49 PM

ಬೆಂಗಳೂರು: ಬಿಗ್‌ಬಾಸ್‌ ಖ್ಯಾತಿಯ ಗೋಲ್ಡ್ ಸುರೇಶ್ ದಿಢೀರ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಆಸ್ಪತ್ರೆಯ ಬೆಡ್‌ ಮೇಲೆ ಅವರು ಮಲಗಿರುವ ಫೋಟೊ ವೈರಲ್‌ ಆಗುತ್ತಿರುವ ಹಿನ್ನೆಲೆಯಲ್ಲಿ ಅವರ ಅಭಿಮಾನಿಗಳು ಆತಂಕಗೊಂಡಿದ್ದಾರೆ. ಆದರೆ, ಬಿಗ್​ಬಾಸ್ ಮನೆಯಲ್ಲಿದ್ದಾಗ ಟಾಸ್ಕ್ ವೇಳೆ ಗೋಲ್ಡ್ ಸುರೇಶ್ (Gold Suresh) ಕಾಲಿಗೆ ಪೆಟ್ಟು ಬಿದ್ದಿತ್ತು. ಇನ್ನೂ ನೋವು ಕಡಿಮೆಯಾಗದ ಹಿನ್ನೆಲೆಯಲ್ಲಿ ಅವರು ಸರ್ಜರಿ ಮಾಡಿಸಿಕೊಳ್ಳಲು ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ತಿಳಿದುಬಂದಿದೆ.

ಬಿಗ್​ಬಾಸ್ ಮನೆಯಲ್ಲಿ ಟಾಸ್ಕ್ ನಿರ್ವಹಿಸುವ ವೇಳೆ ಡ್ರಮ್ ತುಂಬಾ ನೀರು ತುಂಬಿಸಿ, ಅದನ್ನು ಹೊರಚೆಲ್ಲದಂತೆ ನೋಡಿಕೊಳ್ಳುವಾಗ ಗೋಲ್ಡ್ ಸುರೇಶ್ ಕಾಲ ಮೇಲೆ ತುಂಬಿದ ಡ್ರಮ್ ಬಿದ್ದಿತ್ತು. ಇದರಿಂದ ಸುರೇಶ್ ನೋವಲ್ಲಿ ಒದ್ದಾಡಿ ಹೋಗಿದ್ದರು. ಆ ನಂತರ ಅಡೆತಡೆಗಳನ್ನು ದಾಟಿಕೊಂಡು ಬಿಗ್ ಬಾಸ್ ಮನೆಯ ಕ್ಯಾಪ್ಟನ್ ಆಗುವಲ್ಲಿ ಕೂಡ ಗೋಲ್ಡ್ ಸುರೇಶ್ ಯಶಸ್ವಿಯಾಗಿದ್ದರು. ಆದರೆ ಕಾಲಿನ ನೋವು ಉಲ್ಭಣಗೊಂಡ ಹಿನ್ನೆಲೆಯಲ್ಲಿ ಅವರು ನಗರದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದು, ನಾಳೆ ಆಪರೇಷನ್ ನಡೆಯಲಿದೆ.

ಇನ್ನು ಗೋಲ್ಡ್ ಸುರೇಶ್ ಆಸ್ಪತ್ರೆಗೆ ದಾಖಲಾದ ವಿಚಾರ ಗೊತ್ತಾದ ಕೂಡಲೇ ಸುರೇಶ್ ಅಭಿಮಾನಿಗಳು ಆತಂಕಗೊಂಡಿದ್ದಾರೆ. ಆದರೆ ಆತಂಕ ಪಡುವ ಅವಶ್ಯಕತೆ ಇಲ್ಲ ಆಪರೇಷನ್ ನಂತರ ಅವರನ್ನು ಬಹುಬೇಗ ಡಿಸ್ಟಾರ್ಜ್ ಮಾಡಲಾಗುವುದು ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ ಎಂದು ವರದಿಯಾಗಿದೆ. ‌

ಈ ಸುದ್ದಿಯನ್ನೂ ಓದಿ | I Am God ಎಂದ ಮುಖ್ಯಮಂತ್ರಿ ಸಿದ್ದರಾಮಯ್ಯ: ಯುವ ಪ್ರತಿಭೆ ರವಿ ಗೌಡ ಹೊಸ ಸಿನಿಮಾಕ್ಕೆ ಸಾಥ್

ಜನಪ್ರಿಯ ಗಾಯಕಿ ಕೆ.ಎಸ್.ಚಿತ್ರ ಅವರ ಕಂಠಸಿರಿಯಲ್ಲಿ '1990 s' ಚಿತ್ರದ ಇಂಪಾದ ಗೀತೆ

1990s kannada movie

ಬೆಂಗಳೂರು: ಮನಸ್ಸು ಮಲ್ಲಿಗೆ ಕಂಬೈನ್ಸ್ ಲಾಂಛನದಲ್ಲಿ ನಿರ್ಮಾಣವಾಗಿರುವ, ನಂದಕುಮಾರ್ C M ನಿರ್ದೇಶಿಸಿರುವ ಹಾಗೂ ಅರುಣ್ - ರಾಣಿ ವರದ್ ನಾಯಕ, ನಾಯಕಿಯಾಗಿ ನಟಿಸಿರುವ ʼ1990sʼ ಚಿತ್ರಕ್ಕಾಗಿ ಮೋಹಿನಿ ಹಾಗೂ ಮಂಜು ಅವರು ಬರೆದಿರುವ "ಮಳೆ ಹನಿಯೆ" ಎಂಬ ಹಾಡು ಇತ್ತೀಚೆಗೆ ಬಿಡುಗಡೆಯಾಯಿತು. ಹಿರಿಯ ಕಲಾ ನಿರ್ದೇಶಕ ಕನಕರಾಜ್ ಈ ಹಾಡನ್ನು ಅನಾವರಣ ಮಾಡಿದರು.

ಭಾರತದ ಜನಪ್ರಿಯ ಗಾಯಕಿ ಕೆ.ಎಸ್ ಚಿತ್ರ ಅವರ ಗಾಯನದಲ್ಲಿ ಮೂಡಿಬಂದಿರುವ ಈ ಸುಮಧುರ ಗೀತೆಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಮಹಾರಾಜ ಅವರು ಈ ಮನಮೋಹಕ ಹಾಡಿಗೆ ಸಂಗೀತ ನೀಡಿದ್ದಾರೆ. ಹಾಡು ಬಿಡುಗಡೆ ನಂತರ ಚಿತ್ರತಂಡದ ಸದಸ್ಯರು ಮಾತನಾಡಿದರು.

ನಿರ್ದೇಶಕ ಸಿ.ಎಂ.ನಂದಕುಮಾರ್ ಮಾತನಾಡಿ,ʼ1990 sʼ ಚಿತ್ರ ಮೊದಲೆ ಹೇಳಿದಂತೆ 90 ರ ಕಾಲಘಟ್ಟದ ಪ್ರೇಮ ಕಥಾನಕ.‌ ಈ ಚಿತ್ರದಲ್ಲಿ ಮಹಾರಾಜ ಅವರು ಸಂಗೀತ ನೀಡಿರುವ ಎಲ್ಲಾ ಹಾಡುಗಳು ಅದ್ಭುತವಾಗಿದೆ. ಇಂದು ಬಿಡುಗಡೆಯಾಗಿರುವ ʼಮಳೆ ಹನಿಯೆʼ ಹಾಡನ್ನು ಚಿತ್ರ ಅವರ ಧ್ವನಿಯಲ್ಲಿ ಕೇಳುವುದೆ ಸೊಗಸು. ಹಾಡು ಬಿಡುಗಡೆಯಾಗಿರುವುದರಿಂದ ಸಂಗೀತ ನಿರ್ದೇಶಕರೆ ಹೆಚ್ಚು ಮಾತನಾಡಲಿ ಎಂದರು.

1990s kannada movie (2)

ಅರುಣ್ ಕುಮಾರ್ ಮಾತನಾಡಿ, ಮನಸ್ಸು ಮಲ್ಲಿಗೆ ಕ್ರಿಯೇಷನ್ಸ್ ಸಂಸ್ಥೆಯ ಮೂಲಕ ನಿರ್ಮಾಣ ಮಾಡಿರುವ ನವಿರಾದ ಪ್ರೇಮಕಥೆ ʼ1990sʼ ಚಿತ್ರದಿಂದ ಮಲ್ಲಿಗೆಯಂತಹ ಹಾಡೊಂದು ಬಿಡುಗಡೆಯಾಗಿದೆ. ನಮ್ಮ ಚಿತ್ರವನ್ನು ನೋಡಿ. ಪ್ರೋತ್ಸಾಹ ನೀಡಿ. ನಾನು ಈ ಚಿತ್ರದ ನಿರ್ಮಾಪಕರಲ್ಲೊಬ್ಬ ಹಾಗೂ ನಾಯಕಿಯ ತಂದೆಯ ಪಾತ್ರಧಾರಿಯೂ ಹೌದು ಎಂದರು.

1990s kannada movie (1)

ಸಂಗೀತ ನಿರ್ದೇಶಕ ಮಹಾರಾಜ ಮಾತನಾಡಿ, ಇಂದು ಲಹರಿ ಮ್ಯೂಸಿಕ್ ಮೂಲಕ ಬಿಡುಗಡೆಯಾಗಿರುವ ʼಮಳೆ ಹನಿಯೇʼ ಹಾಡು,‌ ಗಾಯಕಿ ಚಿತ್ರ ಅವರು ಕೇವಲ ಮೂರು ಗಂಟೆಗಳ ಕಾಲದಲ್ಲಿ ಹಾಡಿ ಮುಗಿಸಿರುವ ಹಾಡು ಎಂದು ಹಾಡಿನ ಬಗ್ಗೆ ಮಾಹಿತಿ ನೀಡಿದರು.

ಈ ಸುದ್ದಿಯನ್ನೂ ಓದಿ | Raju James Bond Movie: ಮತ್ತೊಮ್ಮೆ ರಾಜು ಅವತಾರದಲ್ಲಿ ಗುರುನಂದನ್‌; 'ರಾಜು ಜೇಮ್ಸ್ ಬಾಂಡ್' ಚಿತ್ರದ ಟ್ರೈಲರ್‌ ಔಟ್‌

ಇದೇ ವೇಳೆ ನಾಯಕ ಅರುಣ್, ನಾಯಕಿ ರಾಣಿ ವರದ್, ಛಾಯಾಗ್ರಾಹಕ ಹಾಲೇಶ್, ಸಾಹಸ ನಿರ್ದೇಶಕ ಅಶೋಕ್, ನೃತ್ಯ ನಿರ್ದೇಶಕ ಸಾದಿಕ್ ಸರ್ದಾರ್, ಸಂಕಲನಕಾರ ಕೃಷ್ಣ ಹಾಗೂ ವಿತರಕ ರಮೇಶ್ 1990" s ಬಗ್ಗೆ ಮಾತನಾಡಿದರು.