Pat Cummins: 2026ರ ಟಿ20 ವಿಶ್ವಕಪ್ ಟೂರ್ನಿಗೂ ಮುನ್ನ ಆಸ್ಟ್ರೇಲಿಯಾ ತಂಡಕ್ಕೆ ದೊಡ್ಡ ಆಘಾತ!
ಮುಂದಿನ ವರ್ಷ ಭಾರತ ಹಾಗೂ ಶ್ರೀಲಂಕಾ ಜಂಟಿ ಆತಿಥ್ಯದಲ್ಲಿ ನಡೆಯುವ 2026ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಹಿರಿಯ ವೇಗದ ಬೌಲರ್ ಪ್ಯಾಟ್ ಕಮಿನ್ಸ್ ಆಡುವುದು ಅನುಮಾನ ಎಂದು ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಹೆಡ್ ಕೋಚ್ ಆಂಡ್ರೆ ಡೊನಾಲ್ಡ್ ಹೇಳಿದ್ದಾರೆ. ಪ್ರಸ್ತುತ ಪ್ಯಾಟ್ ಕಮಿನ್ಸ್ ಅವರು ಸದ್ಯ ಗಾಯಕ್ಕೆ ತುತ್ತಾಗಿದ್ದಾರೆ.
ಟಿ20 ವಿಶ್ವಕಪ್ ಟೂರ್ನಿಯಿಂದ ಪ್ಯಾಟ್ ಕಮಿನ್ಸ್ ಔಟ್? -
ನವದೆಹಲಿ: ಮುಂದಿನ ವರ್ಷ ಭಾರತ ಹಾಗೂ ಶ್ರೀಲಂಕಾ ಜಂಟಿ ಆತಿಥ್ಯದಲ್ಲಿ ನಡೆಯುವ 2026ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ (T20 World Cup 2026) ಹಿರಿಯ ವೇಗದ ಬೌಲರ್ ಪ್ಯಾಟ್ ಕಮಿನ್ಸ್ (Pat Cummins) ಆಡುವುದು ಅನುಮಾನ ಎಂದು ಆಸ್ಟ್ರೇಲಿಯಾ ತಂಡದ ಹೆಡ್ ಕೋಚ್ ಆಂಡ್ರೆ ಮೆಕ್‌ಡೊನಾಲ್ಡ್ (Andrew McDonald) ಹೇಳಿದ್ದಾರೆ. ಸದ್ಯ ಕಮಿನ್ಸ್ ಅವರು ಬ್ಯಾಕ್ ಸ್ಟ್ರೆಸ್ ಇಂಜುರಿಯಿಂದ ಚೇತರಿಸಿಕೊಳ್ಳುತ್ತಿದ್ದಾರೆ. ಇದರ ಕಾರಣ ಅವರು ಇಂಗ್ಲೆಂಡ್ ವಿರುದ್ಧದ ಆಷಸ್ ಟೆಸ್ಟ್ ಸರಣಿಯ ಆರಂಭಿಕ ಎರಡು ಪಂದ್ಯಗಳಿಗೆ ಅಲಭ್ಯರಾಗಿದ್ದರು. ನಂತರ ಅಡಿಲೇಡ್ ಟೆಸ್ಟ್‌ಗೆ ಮರಳಿದ ಬಳಿಕ ಆರು ವಿಕೆಟ್‌ಗಳನ್ನು ಕಬಳಿಸಿದರು. ಆ ಮೂಲಕ ಆಸ್ಟ್ರೇಲಿಯಾ ಮೂರು ಪಂದ್ಯಗಳ ಮುಕ್ತಾಯಕ್ಕೆ 3-0 ಅಂತರದಲ್ಲಿ ಮುನ್ನಡೆ ಪಡೆದಿದೆ.
2026ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯು ಫೆಬ್ರವರಿ 7 ರಿಂದ ಮಾರ್ಚ್ 8 ರಂದು ಭಾರತ ಹಾಗೂ ಶ್ರೀಲಂಕಾದಲ್ಲಿ ನಡೆಯಲಿದೆ. ಆದರೆ, ಗಾಯದಿಂದ ಚೇತರಿಸಿಕೊಳ್ಳುತ್ತಿರುವ ಪ್ಯಾಟ್ ಕಮಿನ್ಸ್ ಅವರು ಚುಟುಕು ವಿಶ್ವಕಪ್ ಟೂರ್ನಿಯ ವೇಳೆಗೆ ಲಭ್ಯರಾಗುವುದು ಅನುಮಾನ ಎಂದು ಹೇಳಳಾಗುತ್ತಿದೆ. ಇದರ ಸಂಬಂಧ ಆಸ್ಟ್ರೇಲಿಯಾ ಹೆಡ್ ಕೋಚ ಆಂಡ್ರೆ ಮೆಕ್‌ಡೊನಾಲ್ಡ್ ಮಹತ್ವದ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.
IND vs SA: 16 ಎಸೆತಗಳಲ್ಲಿ ಅರ್ಧಶತಕ ಬಾರಿಸಿ ಗರ್ಲ್‌ಫ್ರೆಂಡ್‌ಗೆ ಪ್ಲೈಯಿಂಗ್ ಕಿಸ್ ಕೊಟ್ಟ ಹಾರ್ದಿಕ್ ಪಾಂಡ್ಯ!
"ನಾವು ಇದೀಗ 2026ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಗೆ ಎದುರು ನೋಡುತ್ತಿದ್ದೇವೆ, ಆದರ, ಅವರು ಲಭ್ಯರಾಗಲಿದಾರೆಯೇ? ಅಥವಾ ಇಲ್ಲವೇ? ಎಂಬ ಬಗ್ಗೆ ಈಗಲೇ ಏನನ್ನೂ ಹೇಳಲು ಸಾಧ್ಯವಿಲ್ಲ. ಈ ಸಮಯದಲ್ಲಿ ಕಮಿನ್ಸ್ ಅವರ ಲಭ್ಯತೆ ಬೂದು ಬಣ್ಣದಾಗಿದೆ, ಅವರ ಮರಳುವಿಕೆ ಬಗ್ಗೆ ನಾವು ಆಶಾದಾಯಗಳಾಗಿದ್ದೇವೆ," ಎಂದು ಆಂಡ್ರೆ ಮೆಕ್‌ಡೊನಾಲ್ಡ್ ತಿಳಿಸಿದ್ದಾರೆ.
ಜುಲೈನಲ್ಲಿ ಆಸ್ಟ್ರೇಲಿಯಾದ ವೆಸ್ಟ್ ಇಂಡೀಸ್ ಪ್ರವಾಸದ ಸಮಯದಲ್ಲಿ ಉಂಟಾದ ಸೊಂಟದ ಒತ್ತಡದ ಪ್ರತಿಕ್ರಿಯೆಯಿಂದ ಪ್ಯಾಟ್ ಕಮಿನ್ಸ್ ಚೇತರಿಸಿಕೊಳ್ಳುತ್ತಿದ್ದಾರೆ. ಅವರು ಆಷಸ್ ಟೆಸ್ಟ್ ಸರಣಿಯ ಮೂರನೇ ಪಂದ್ಯದಲ್ಲಿ ಆಡಿದ್ದರು. ಯಾವುದೇ ಸಮಸ್ಯೆ ಇಲ್ಲಿದೆ ಕಮಿನ್ಸ್ ಮೂರನೇ ಪಂದ್ಯವನ್ನು ಆಡಿದ್ದರು ಹಾಗೂ ಪಂದ್ಯದ ಬಳಿಕವೂ ಅವರಿಗೆ ಯಾವುದೇ ಸಮಸ್ಯೆ ಇಲ್ಲ.
IND vs SA: 37 ರನ್ ಗಳಿಸಿ ವಿಕೆಟ್ ಒಪ್ಪಿಸಿದರೂ ಎರಡು ದಾಖಲೆ ಬರೆದ ಸಂಜು ಸ್ಯಾಮ್ಸನ್!
"ಅವರು (ಪ್ಯಾಟ್ ಕಮಿನ್ಸ್) ಚೆನ್ನಾಗಿದ್ದಾರೆ. ಸರಣಿಯ ಉಳಿದ ಭಾಗಗಳಲ್ಲಿ ಅವರು ಯಾವುದೇ ಪಾತ್ರವನ್ನು ವಹಿಸುವುದಿಲ್ಲ ಮತ್ತು ಅವರ ಮರಳುವಿಕೆಯ ಬಗ್ಗೆ ನಾವು ಬಹಳ ಸಮಯದಿಂದ ಚರ್ಚೆ ನಡೆಸಿದ್ದೇವೆ," ಎಂದು ಹೇಳಿದ ಮೆಕ್‌ಡೊನಾಲ್ಡ್, "ನಾವು ಸ್ವಲ್ಪ ಅಪಾಯವನ್ನು ಎದುರಿಸುತ್ತಿದ್ದೆವು ಮತ್ತು ಆ ಪುನರ್ನಿರ್ಮಾಣವನ್ನು ಅರ್ಥಮಾಡಿಕೊಳ್ಳುವ ಜನರಿಗೆ ಅದರಲ್ಲಿ ಒಳಗೊಂಡಿರುವ ಅಪಾಯ ತಿಳಿದಿರುತ್ತದೆ," ಎಂದು ಮೆಕ್‌ಡೊನಾಲ್ಡ್ ವಿವರಿಸಿದ್ದಾರೆ.