ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Gowri Putra Serial: ಸಹಾಯ ಮಾಡೋಕೆ ಹೋಗಿ ಇಲ್ದೇ ಇರೋದನ್ನ ಮೈಮೇಲೆ ಎಳ್ಕೊಂಡ್ನ ಕಾರ್ತಿಕ್?

Gowri Putra Serial: ಕಿರುತೆರೆ ವೀಕ್ಷಕರು ಬಹುದಿನಗಳಿಂದ ಕಾಯುತ್ತಿದ್ದ ಜೀ ಕನ್ನಡ ವಾಹಿನಿಯ ಬಹುನಿರೀಕ್ಷಿತ ಧಾರಾವಾಹಿ ‘ಗೌರಿ ಪುತ್ರ’ ಅದ್ಧೂರಿಯಾಗಿ ಪ್ರಸಾರವಾಗಿದೆ. ಮೊದಲ ಸಂಚಿಕೆಯಲ್ಲೇ ಧಾರಾವಾಹಿಯ ಪ್ರಮುಖ ಪಾತ್ರಗಳ ಪರಿಚಯ ಮಾಡಿಕೊಡಲಾಗಿದ್ದು, ನಾಯಕಿ ಗೌರಿ ಹಾಗೂ ಆಕೆಯ ಮಗ ಕಾರ್ತಿಕ್ ಪಾತ್ರಗಳು ವೀಕ್ಷಕರ ಗಮನ ಸೆಳೆದಿವೆ. ಅದರಲ್ಲೂ ಅನು ಪ್ರಭಾಕರ್ ಅವರ ಗೌರಿ ಪಾತ್ರ ಮತ್ತು ರಿತ್ವಿಕ್ ಅವರ ಕಾರ್ತಿಕ್ ಎಂಟ್ರಿ ವಿಶೇಷ ಆಕರ್ಷಣೆಯಾಗಿವೆ. ಸಹಾಯ ಮಾಡೋಕೆ ಹೋಗಿ ಇಲ್ದೇ ಇರೋದನ್ನ ಮೈಮೇಲೆ ಎಳೆದುಕೊಂಡಿದ್ದಾನೆ ಕಾರ್ತಿಕ್‌.

ಗೌರಿ ಪುತ್ರ ಧಾರಾವಾಹಿ

ಕಿರುತೆರೆ ವೀಕ್ಷಕರು ಬಹುದಿನಗಳಿಂದ ಕಾಯುತ್ತಿದ್ದ ಜೀ ಕನ್ನಡ ವಾಹಿನಿಯ ಬಹುನಿರೀಕ್ಷಿತ ಧಾರಾವಾಹಿ ‘ಗೌರಿ ಪುತ್ರ’ (Gowri Putra Serial) ಅದ್ಧೂರಿಯಾಗಿ ಪ್ರಸಾರವಾಗಿದೆ. ಮೊದಲ ಸಂಚಿಕೆಯಲ್ಲೇ ಧಾರಾವಾಹಿಯ ಪ್ರಮುಖ ಪಾತ್ರಗಳ ಪರಿಚಯ ಮಾಡಿಕೊಡಲಾಗಿದ್ದು, ನಾಯಕಿ ಗೌರಿ ಹಾಗೂ ಆಕೆಯ ಮಗ ಕಾರ್ತಿಕ್ (Karthik) ಪಾತ್ರಗಳು ವೀಕ್ಷಕರ ಗಮನ ಸೆಳೆದಿವೆ. ಅದರಲ್ಲೂ ಅನು ಪ್ರಭಾಕರ್ ಅವರ ಗೌರಿ ಪಾತ್ರ ಮತ್ತು ರಿತ್ವಿಕ್ ಅವರ ಕಾರ್ತಿಕ್ ಎಂಟ್ರಿ ವಿಶೇಷ ಆಕರ್ಷಣೆಯಾಗಿವೆ. ಸಹಾಯ ಮಾಡೋಕೆ ಹೋಗಿ ಇಲ್ದೇ ಇರೋದನ್ನ ಮೈಮೇಲೆ ಎಳೆದುಕೊಂಡಿದ್ದಾನೆ ಕಾರ್ತಿಕ್‌.

ಸದ್ಯ ಕಾರ್ತಿಕ್‌ ಸ್ನೇಹಿತನಿಗೆ ಸಹಾಯ ಮಾಡೋಕೆ ಹೋಗಿ ಸಿಕ್ಕಿಹಾಕಿಕೊಂಡಿದ್ದಾನೆ. ಮದುವೆ ಮಂಟಪಕ್ಕೆ ನುಗ್ಗಿ ಹೆಣ್ಣನ್ನು ಕಿಡ್ನಾಪ್‌ ಮಾಡಿ ತಂದಿದ್ದಾನೆ. ಆದರೆ ಆ ಹುಡುಗಿ ಬೇರೆಯವಳಾಗಿರುತ್ತಾಳೆ. ಅತ್ತ ತಾಯಿ ಮಗನನ್ನುಅಣ್ಣನ ಮಗಳಿಗೆ ಮದುವೆ ಮಾಡೋ ಕನಸನ್ನು ಹೊತ್ತಿದ್ದರೆ, ಇತ್ತ ಕಾರ್ತಿಕ್‌ ಇಲ್ದೇ ಇರೋದನ್ನ ಮೈಮೇಲೆ ಎಳೆದಕೊಂಡಿರುವಂತಿದೆ.

ಧಾರಾವಾಹಿಯ ಮೊದಲ ಸಂಚಿಕೆಯಲ್ಲಿ ಗೌರಿ ಯಾರು? ಆಕೆಯ ವ್ಯಕ್ತಿತ್ವ ಹೇಗಿದೆ ಎಂಬುದನ್ನು ನಿರ್ದೇಶಕರು ಸುಂದರವಾಗಿ ಪರಿಚಯಿಸಿದ್ದಾರೆ. ಕೂಡು ಕುಟುಂಬದ ಸೊಸೆಯಾಗಿರುವ ಗೌರಿ, ಬೆಳಗ್ಗೆ ಮನೆಯವರೆಲ್ಲರಿಗೂ ಯೋಗ ಹೇಳಿಕೊಡುವ ಶಿಕ್ಷಕಿಯಾಗಿ ಕಾಣಿಸಿಕೊಳ್ಳುತ್ತಾಳೆ. ಬಳಿಕ ಅಡುಗೆ ಮನೆಗೆ ತೆರಳಿ ಕುಟುಂಬದ ಪ್ರತಿಯೊಬ್ಬರಿಗೂ ಇಷ್ಟವಾಗುವ ಅಡುಗೆ ತಯಾರಿಸುವ ಜವಾಬ್ದಾರಿಯನ್ನೂ ನಿಭಾಯಿಸುತ್ತಾಳೆ.

ಇದನ್ನೂ ಓದಿ: Kannada New Movie: ತೆರೆಗೆ ಬರಲಿದೆ 'ದೇವಿ ಮಹಾತ್ಮೆ': ಹೊಂಬಾಳೆ ಮ್ಯೂಸಿಕ್ ಬೆನ್ನಲ್ಲೇ ಕೆಆರ್‌ಜಿ ಸ್ಟುಡಿಯೋಸ್ ಸಾಥ್!

ಇಷ್ಟಕ್ಕೇ ಗೌರಿಯ ಕೆಲಸ ಮುಗಿಯುವುದಿಲ್ಲ. ಮನೆಯ ಜವಾಬ್ದಾರಿಗಳ ಜೊತೆಗೆ ಉದ್ಯಮಿಯಾಗಿಯೂ ಆಕೆ ಗುರುತಿಸಿಕೊಂಡಿದ್ದಾಳೆ. ತನ್ನ ಎದುರಾಳಿಯ ಮುಂದೆ ನಿಂತು ಸವಾಲು ಹಾಕುವ ಧೈರ್ಯ ಗೌರಿಗಿದೆ. ತಮ್ಮ ಜಾಗವನ್ನು ಒತ್ತುವರಿ ಮಾಡಿಕೊಂಡವರ ವಿರುದ್ಧ ಮೊದಲ ಸಂಚಿಕೆಯಲ್ಲೇ ಸಮರ ಸಾರಿದ್ದಾಳೆ. ಗೌರಿ ಎಂದರೆ ಕೇವಲ ಮೃದು ಸ್ವಭಾವದ ಮಹಿಳೆಯಲ್ಲ, ಅನ್ಯಾಯದ ವಿರುದ್ಧ ಸಿಡಿದೇಳುವ ಬೆಂಕಿ ಎಂಬುದನ್ನು ಮೊದಲ ದಿನವೇ ತೋರಿಸಲಾಗಿದೆ.



ಅಮ್ಮನಿಗಾಗಿ ಅಬ್ಬರಿಸಿದ ಗೌರಿ ಪುತ್ರ ಕಾರ್ತಿಕ್!

ಇನ್ನು ಧಾರಾವಾಹಿಯ ಮತ್ತೊಂದು ಪ್ರಮುಖ ಆಕರ್ಷಣೆ ಗೌರಿಯ ಮಗ ಕಾರ್ತಿಕ್. ರಿತ್ವಿಕ್ ಅವರು ಕಾರ್ತಿಕ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಅವರ ಎಂಟ್ರಿಯನ್ನು ಮಾಸ್ ಶೈಲಿಯಲ್ಲಿ ತೋರಿಸಲಾಗಿದೆ. ತಾಯಿಯನ್ನು ಅವಮಾನಿಸಿದ ಕಿಡಿಗೇಡಿಗಳಿಗೆ ತಕ್ಕ ಪಾಠ ಕಲಿಸುವ ಕಾರ್ತಿಕ್, ಅಮ್ಮನ ತಂಟೆಗೆ ಬಂದರೆ ಸುಮ್ಮನಿರುವುದಿಲ್ಲ ಎಂಬ ಎಚ್ಚರಿಕೆಯನ್ನು ನೀಡುತ್ತಾನೆ.

ಈ ಮೂಲಕ ಕಾರ್ತಿಕ್‌ಗೆ ತನ್ನ ತಾಯಿಯ ಮೇಲೆ ಎಷ್ಟು ಪ್ರೀತಿ ಮತ್ತು ಗೌರವವಿದೆ ಎಂಬುದನ್ನು ಮೊದಲ ಸಂಚಿಕೆಯಲ್ಲೇ ತೋರಿಸಲಾಗಿದೆ. ತಾಯಿಯ ಮುಖದಲ್ಲಿ ಸದಾ ನಗು ಕಾಣಬೇಕು ಎಂಬುದೇ ಕಾರ್ತಿಕ್‌ನ ಆಸೆ.

ಅಮ್ಮನ ಆಸೆ ಈಡೇರಿಸಿದ ಮಗ!

ಗೌರಿ ಮತ್ತು ಕಾರ್ತಿಕ್ ನಡುವಿನ ಬಾಂಧವ್ಯದ ದೃಶ್ಯಗಳು ಮೊದಲ ಸಂಚಿಕೆಯಲ್ಲಿ ವಿಶೇಷವಾಗಿ ಮೂಡಿಬಂದಿವೆ. ದೇವರ ಮೆರವಣಿಗೆಯ ಮುಂದೆ ಎಲ್ಲರಂತೆ ಕುಣಿದು ಕುಪ್ಪಳಿಸಬೇಕು ಎಂಬುದು ಗೌರಿಯ ಆಸೆ. ಅದನ್ನು ಅರಿತ ಕಾರ್ತಿಕ್ ತನ್ನ ತಾಯಿಯ ಆಸೆಯನ್ನು ಈಡೇರಿಸುತ್ತಾನೆ. ಅಮ್ಮನ ಖುಷಿಯಲ್ಲೇ ತನ್ನ ಸಂತೋಷವನ್ನು ಕಾಣುವ ಮಗನ ಪ್ರೀತಿ ವೀಕ್ಷಕರ ಮನಮುಟ್ಟುವಂತಿದೆ.

ಮೊದಲ ಸಂಚಿಕೆಯಲ್ಲಿ ಗೌರಿ ಮತ್ತು ರಾಘವೇಂದ್ರ ಜೋಡಿಯ 28ನೇ ವಿವಾಹ ವಾರ್ಷಿಕೋತ್ಸವದ ಸಂಭ್ರಮವನ್ನೂ ತೋರಿಸಲಾಗಿದೆ. ಈ ವಿಶೇಷ ದಿನವನ್ನು ಮತ್ತಷ್ಟು ಸ್ಮರಣೀಯವಾಗಿಸಲು ಕುಟುಂಬದವರೆಲ್ಲರೂ ಅವರ ಮದುವೆಯನ್ನು ಮತ್ತೊಮ್ಮೆ ಮರುಸೃಷ್ಟಿಸುತ್ತಾರೆ.

ತಂದೆ-ತಾಯಿಯ ಮದುವೆಯ ಸಂಭ್ರಮದಲ್ಲಿ ಮಗ ಕಾರ್ತಿಕ್ ಡೊಳ್ಳು ಬಾರಿಸುತ್ತಾ ಇಬ್ಬರನ್ನೂ ಮಂಟಪಕ್ಕೆ ಕರೆದುಕೊಂಡು ಬರುತ್ತಾನೆ. ಶಾಸ್ತ್ರೋಕ್ತವಾಗಿ ಮದುವೆಯ ವಿಧಿವಿಧಾನಗಳು ನಡೆಯುತ್ತವೆ. ಈ ಸಂದರ್ಭದಲ್ಲಿ ಮಡಿಲು ಶಾಸ್ತ್ರಕ್ಕಾಗಿ ಗೌರಿಯ ತವರಿನವರನ್ನು ಆಹ್ವಾನಿಸುವಂತೆ ಶಾಸ್ತ್ರಿಗಳು ಹೇಳುತ್ತಾರೆ.

ಆದರೆ, ಈ ಮಾತು ಗೌರಿಯನ್ನು ಭಾವುಕಳನ್ನಾಗಿಸುತ್ತದೆ. ತನಗೆ ತವರು ಇಲ್ಲ ಎಂಬ ನೋವಿನಿಂದ ಆಕೆ ಮಂಟಪದಿಂದಲೇ ಹೊರನಡೆಯುತ್ತಾಳೆ. ತಾಯಿಯ ಈ ವರ್ತನೆಯಿಂದ ಅಚ್ಚರಿಗೊಂಡ ಕಾರ್ತಿಕ್, ತಂದೆ ರಾಘವೇಂದ್ರ ಬಳಿ ಅಮ್ಮನ ತವರಿನ ಬಗ್ಗೆ ಪ್ರಶ್ನಿಸುತ್ತಾನೆ. ಹೀಗೆ ಮೊದಲ ಸಂಚಿಕೆಯ ಕೊನೆಯಲ್ಲಿ ಗೌರಿಯ ಬದುಕಿನ ಹಿಂದಿನ ನೋವಿನ ಬಗ್ಗೆ ಕುತೂಹಲ ಮೂಡಿಸಲಾಗಿದೆ.

ಇದನ್ನೂ ಓದಿ: Bigg Boss Kannada 13: ಹೊಡೆದು ಸಾಯಿಸ್ತೀನಿ; ಸೌಂದರ್ಯಾ ವಿರುದ್ಧ ರೊಚ್ಚಿಗೆದ್ದ ಗಾನವಿ!

ಒಟ್ಟಿನಲ್ಲಿ, ತಾಯಿಯೇ ಪ್ರಪಂಚವಾಗಿರುವ ಮಗ ಮತ್ತು ಕುಟುಂಬದ ಜವಾಬ್ದಾರಿಯ ಜೊತೆಗೆ ತನ್ನದೇ ಆದ ಅಸ್ತಿತ್ವ ಹೊಂದಿರುವ ಗೌರಿಯ ಕಥೆ ಮುಂದಿನ ದಿನಗಳಲ್ಲಿ ಯಾವ ತಿರುವು ಪಡೆದುಕೊಳ್ಳಲಿದೆ ಎಂಬ ಕುತೂಹಲ ಮೂಡಿದೆ. ಗೌರಿಯ ತವರಿನ ಹಿಂದಿನ ಕಥೆ ಏನು? ಕಾರ್ತಿಕ್‌ಗೆ ತನ್ನ ತಾಯಿಯ ಬಗ್ಗೆ ತಿಳಿಯದಿರುವ ಸತ್ಯವೇನು? ಎಂಬ ಪ್ರಶ್ನೆಗಳಿಗೆ ಮುಂದಿನ ಸಂಚಿಕೆಗಳಲ್ಲಿ ಉತ್ತರ ಸಿಗಬೇಕಿದೆ.

Yashaswi Devadiga

View all posts by this author