ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Kannada New Movie: ತೆರೆಗೆ ಬರಲಿದೆ 'ದೇವಿ ಮಹಾತ್ಮೆ': ಹೊಂಬಾಳೆ ಮ್ಯೂಸಿಕ್ ಬೆನ್ನಲ್ಲೇ ಕೆಆರ್‌ಜಿ ಸ್ಟುಡಿಯೋಸ್ ಸಾಥ್!

Kannada New Movie:ನಟ ರಂಗಾಯಣ ರಘು ಪ್ರಮುಖ ಪಾತ್ರದಲ್ಲಿ ಅಭಿನಯಿಸಿರುವ 'ದೇವಿ ಮಹಾತ್ಮೆ' ಚಿತ್ರವು ಡಿಸೆಂಬರ್ 4 ರಂದು ವಿಶ್ವದಾದ್ಯಂತ ಚಿತ್ರಮಂದಿರಗಳಲ್ಲಿ ತೆರೆಕಾಣಲಿದೆ. ಈ ಚಿತ್ರಕ್ಕೆ ಸ್ಯಾಂಡಲ್‌ವುಡ್‌ನ ಎರಡು ಪ್ರತಿಷ್ಠಿತ ಸಂಸ್ಥೆಗಳ ಬೆಂಬಲ ಸಿಕ್ಕಿರುವುದು ವಿಶೇಷವಾಗಿದೆ.ಮೊದಲಿಗೆ ಈ ಚಿತ್ರದ ಆಡಿಯೋ ಹಕ್ಕುಗಳನ್ನು ಪ್ರತಿಷ್ಠಿತ 'ಹೊಂಬಾಳೆ ಮ್ಯೂಸಿಕ್' ಸಂಸ್ಥೆ ಪಡೆದುಕೊಂಡಿತ್ತು.

ತೆರೆಗೆ ಬರಲಿದೆ 'ದೇವಿ ಮಹಾತ್ಮೆ': ಕೆಆರ್‌ಜಿ ಸ್ಟುಡಿಯೋಸ್ ಸಾಥ್!

ಕನ್ನಡ ಸಿನಿಮಾ -

Yashaswi Devadiga
Yashaswi Devadiga Nov 19, 2026 8:16 AM

ನಟ ರಂಗಾಯಣ ರಘು ಪ್ರಮುಖ ಪಾತ್ರದಲ್ಲಿ ಅಭಿನಯಿಸಿರುವ 'ದೇವಿ ಮಹಾತ್ಮೆ' ಚಿತ್ರವು ಡಿಸೆಂಬರ್ 4 ರಂದು ವಿಶ್ವದಾದ್ಯಂತ ಚಿತ್ರಮಂದಿರಗಳಲ್ಲಿ ತೆರೆಕಾಣಲಿದೆ. ಈ ಚಿತ್ರಕ್ಕೆ ಸ್ಯಾಂಡಲ್‌ವುಡ್‌ನ ಎರಡು ಪ್ರತಿಷ್ಠಿತ ಸಂಸ್ಥೆಗಳ ಬೆಂಬಲ ಸಿಕ್ಕಿರುವುದು ವಿಶೇಷವಾಗಿದೆ.ಮೊದಲಿಗೆ ಈ ಚಿತ್ರದ ಆಡಿಯೋ ಹಕ್ಕುಗಳನ್ನು ಪ್ರತಿಷ್ಠಿತ 'ಹೊಂಬಾಳೆ ಮ್ಯೂಸಿಕ್' ಸಂಸ್ಥೆ ಪಡೆದುಕೊಂಡಿತ್ತು.

ಇತ್ತೀಚೆಗಷ್ಟೇ ಹೊಂಬಾಳೆ ಮ್ಯೂಸಿಕ್ ಯೂಟ್ಯೂಬ್ ಚಾನೆಲ್‌ನಲ್ಲಿ ಬಿಡುಗಡೆಯಾದ 'ಎದೆ ಸುಡುತಿದೆ ಗಾಯ...' ಹಾಡು ಸಿನಿಪ್ರಿಯರ ಮನಗೆಲ್ಲುವಲ್ಲಿ ಯಶಸ್ವಿಯಾಗಿದೆ. ಇದೀಗ ಮತ್ತೊಂದು ಪ್ರತಿಷ್ಠಿತ ಸಂಸ್ಥೆಯಾದ 'ಕೆಆರ್‌ಜಿ ಸ್ಟುಡಿಯೋಸ್' ಈ ಚಿತ್ರದ ವಿತರಣೆಯ ಜವಾಬ್ದಾರಿಯನ್ನು ಹೊತ್ತುಕೊಂಡಿದೆ.

ಇದನ್ನೂ ಓದಿ; Bigg Boss Kannada 13: ಬಿಗ್ ಬಾಸ್ ಮನೆಯಲ್ಲಿ ಚಿಗುರುತ್ತಿದೆಯಾ ಹೊಸ ಲವ್ ಸ್ಟೋರಿ? ಯಶಸ್‌ ಕವನ ಕೇಳಿ ಸೌಂದರ್ಯ ಫಿದಾ!

​ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿರುವ ಕೆಆರ್‌ಜಿ ಸ್ಟುಡಿಯೋಸ್‌ನ ಕಾರ್ತಿಕ್ ಗೌಡ ಅವರು, "ನಮ್ಮ ಪ್ರೀತಿಯ ಸಹೋದರ ನಾಗರಾಜ ಸೋಮಯಾಜಿ ನಿರ್ದೇಶನದ 'ದೇವಿ ಮಹಾತ್ಮೆ' ಚಿತ್ರವನ್ನು ಕೆಆರ್‌ಜಿ ಸ್ಟುಡಿಯೋಸ್ ವತಿಯಿಂದ ಜಾಗತಿಕವಾಗಿ ಬಿಡುಗಡೆ ಮಾಡಲಾಗುತ್ತಿದೆ. ಡಿಸೆಂಬರ್ 4 ರಿಂದ ಸಿನಿಮಾ ಚಿತ್ರಮಂದಿರಗಳಲ್ಲಿ ಪ್ರದರ್ಶನಗೊಳ್ಳಲಿದೆ" ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

​ನಾಗರಾಜ ಸೋಮಯಾಜಿ ನಿರ್ದೇಶನದ ಈ ಚಿತ್ರಕ್ಕೆ 'ಯುವಿಜಿ ಸ್ಟುಡಿಯೋ' ಬ್ಯಾನರ್‌ನಡಿಯಲ್ಲಿ ವಿದ್ಯಾ ಗಾಂಧಿರಾಜನ್ ಬಂಡವಾಳ ಹೂಡಿದ್ದು, ಗಾಂಧಿರಾಜನ್ ನಿರ್ಮಾಣದಲ್ಲಿ ಸಾಥ್ ನೀಡಿದ್ದಾರೆ.

ಇದನ್ನೂ ಓದಿ: Bigg Boss Kannada 13: ಆಸಿಯಾಗೆ ತಿರುಗಿಸಿ ಹೊಡೆಯಲು ಮುಂದಾದ ಶೆಟ್ಟಿ ಡಾನ್

ಹೊಂಬಾಳೆ ಮ್ಯೂಸಿಕ್ ಹಾಗೂ ಕೆಆರ್‌ಜಿ ಸ್ಟುಡಿಯೋಸ್‌ನಂತಹ ದೊಡ್ಡ ಸಂಸ್ಥೆಗಳ ಬೆಂಬಲದೊಂದಿಗೆ, ವಿಭಿನ್ನ ಕಥಾಹಂದರ ಹೊಂದಿರುವ 'ದೇವಿ ಮಹಾತ್ಮೆ' ಡಿಸೆಂಬರ್ 4 ರಂದು ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದೆ.