Rashmika Mandanna: "ಕೊಡವ ಸಮುದಾಯದಿಂದ ಸಿನಿಮಾಕ್ಕೆ ಬಂದಿದ್ದು ನಾನೇ ಮೊದಲು"; ಕನ್ನಡ ನಟಿಯರಿಗೆ ಬೇಕಂತಲೇ ಅವಮಾನ ಮಾಡಿದ್ರಾ ರಶ್ಮಿಕಾ?
ಸಿನಿ ರಂಗಕ್ಕೆ ಕಾಲಿಟ್ಟಾಗಿನಿಂದಲೂ ಹಿಟ್ ಚಿತ್ರ ನೀಡುತ್ತಿರುವ ರಶ್ಮಿಕಾ ಮಂದಣ್ಣ ಸದಾ ಒಂದಲ್ಲಾ ಒಂದು ವಿವಾದವನ್ನು ಮೈಮೇಲೆ ಎಳೆದುಕೊಳ್ಳುತ್ತಲೇ ಇರುತ್ತಾರೆ. ಕನ್ನಡಿಗರು ಹಾಗೂ ಕನ್ನಡದ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡುವಲ್ಲಿ ರಶ್ಮಿಕಾ ಮುಂದಿರುತ್ತಾರೆ. ಇದೀಗ ನಟಿ ಮತ್ತೊಂದು ಕಾಂಟ್ರವರ್ಸಿ ಹುಟ್ಟು ಹಾಕಿದ್ದು, ಖಾಸಗಿ ಕಾರ್ಯಕ್ರಮದ ಸಂದರ್ಶನದ ವೇಳೆ ಕೊಡಗಿನ ನಟಿಯರಿಗೆ ಅವಮಾನ ಮಾಡಿದ್ದಾರೆ.


ಬೆಂಗಳೂರು: ಸಿನಿ ರಂಗಕ್ಕೆ ಕಾಲಿಟ್ಟಾಗಿನಿಂದಲೂ ಹಿಟ್ ಚಿತ್ರ ನೀಡುತ್ತಿರುವ ರಶ್ಮಿಕಾ ಮಂದಣ್ಣ ( Rashmika Mandanna ) ಸದಾ ಒಂದಲ್ಲಾ ಒಂದು ವಿವಾದವನ್ನು ಮೈಮೇಲೆ ಎಳೆದುಕೊಳ್ಳುತ್ತಲೇ ಇರುತ್ತಾರೆ. ಕನ್ನಡಿಗರು ಹಾಗೂ ಕನ್ನಡದ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡುವಲ್ಲಿ ರಶ್ಮಿಕಾ ಮುಂದಿರುತ್ತಾರೆ. ಇದೀಗ ನಟಿ ಮತ್ತೊಂದು ಕಾಂಟ್ರವರ್ಸಿ ಹುಟ್ಟು ಹಾಕಿದ್ದು, ಖಾಸಗಿ ಕಾರ್ಯಕ್ರಮದ ಸಂದರ್ಶನದ ವೇಳೆ ಕೊಡಗಿನ ನಟಿಯರಿಗೆ ಅವಮಾನ ಮಾಡಿದ್ದಾರೆ. ಕೂರ್ಗ್ ಕಮ್ಯುನಿಟಿಯಿಂದ ಯಾರೂ ಸಿನಿಮಾಕ್ಕೆ ಬಂದಿರಲಿಲ್ಲ. ನಾನೇ ಮೊದಲು ಎಂದು ನಟಿ ಹೇಳಿದ್ದಾರೆ. ಈ ಹೇಳಿಕೆ ಕನ್ನಡಿಗರನ್ನು ಕೆರಳಿಸಿದೆ.
ವಿ ದಿ ವುಮೆನ್ ಎಂಬ ಬರ್ಖ ದತ್ ನಡೆಸಿದ ಸಂದರ್ಶನದಲ್ಲಿ ಪಾಲ್ಗೊಂಡಿದ್ದ ರಶ್ಮಿಕಾ ಮಂದಣ್ಣ ಹೇಳಿಕೆಯೊಂದು ಈಗ ಚರ್ಚೆ ಹುಟ್ಟುಹಾಕಿದೆ. ರಶ್ಮಿಕಾ ಮಂದಣ್ಣ, ಕೂರ್ಗ್ ಕಮ್ಯುನಿಟಿಯಿಂದ ಯಾರೂ ಸಿನಿಮಾಕ್ಕೆ ಬಂದಿರಲಿಲ್ಲ. ನಾನೇ ಮೊದಲು ಅಂತ ಹೇಳಿಕೆ ನೀಡಿದ್ದಾರೆ. ಇದು ಕನ್ನಡಿಗರನ್ನು ಕೆರಳಿಸಿದೆ. ರಶ್ಮಿಕಾ ಮಂದಣ್ಣ ಸಿನಿಮಾಕ್ಕೆ ಎಂಟ್ರಿ ಆಗೋ ಮುನ್ನ ಕೂರ್ಗ್ ಕಮ್ಯೂನಿಟಿಯ ಅನೇಕರು ಸಿನಿಮಾ ರಂಗದಲ್ಲಿ ಸಾಧನೆ ಮಾಡಿದ್ದಾರೆ. ನಟಿಯರಾದ ಪ್ರೇಮ, ಹರ್ಷಿಕಾ ಪೂಣಚ್ಚ, ನಿಧಿ ಸುಬ್ಬಯ್ಯ, ಡೈಸಿ ಬೋಪಣ್ಣ, ಗುಲ್ಶನ್ ದೇವಯ್ಯ ಸೇರಿದಂತೆ ಹಲವು ಕೊಡಗಿನ ಬೆಡಗಿಯರು ಸಿನಿ ರಂಗದಲ್ಲಿ ಮಿಂಚಿದ್ದಾರೆ.
ಕೊಡಗಿನಲ್ಲಿಯೇ ಹುಟ್ಟಿ ಬೆಳೆದಿದ್ದರೂ, ತನ್ನದೇ ಸಮುದಾಯದ ಕುರಿತು ನಟಿಗೆ ಜ್ಞಾನ ಇಲ್ಲ ಎಂದು ನೆಟ್ಟಿಗರು ಟ್ರೋಲ್ ಮಾಡುತ್ತಿದ್ದಾರೆ. ಕೊಡವ ಸಮುದಾಯದಿಂದ ಪ್ಯಾನ್ ಇಂಡಿಯಾ ಸಿನಿಮಾ ಮಾಡಿದ ನಟಿ ತಾನು ಎಂದು ಹೇಳಿಕೊಳ್ಳಬಹುದಿತ್ತು. ಆದರೆ ಕೊಡವ ನಟಿಯರಿಗೆ ರಶ್ಮಿಕಾ ಅವಮಾನ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತವಾಗುತ್ತಿದೆ. ಪ್ರೇಮ, ಹರ್ಷಿಕಾ ಪೂಣಚ್ಚ, ನಿಧಿ ಸುಬ್ಬಯ್ಯ ಹಾಗೂ ಹಲವು ನಟಿಯರು ಪರ ಭಾಷೆಯಲ್ಲಿಯೂ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಕೊಡವ ಕಮ್ಯೂನಿಟಿ ಜನರಿಂದ ನನ್ನನ್ನ ಜಡ್ಜ್ ಮಾಡಲಾಗಿದೆ ಎಂದು ನಟಿ ಸಂದರ್ಶನದಲ್ಲಿ ಒತ್ತಿ ಹೇಳಿದ್ದು, ಅದೇ ಸಮುದಾಯದ ಜನರು ಇದೀಗ ನಟಿಯ ವಿರುದ್ಧ ತಿರುಗಿ ಬಿದ್ದಾರೆ.
ಈ ಸುದ್ದಿಯನ್ನೂ ಓದಿ: Rashmika-Vijay Deverakonda: ಮತ್ತೆ ರಶ್ಮಿಕಾ-ವಿಜಯ್ ದೇವರಕೊಂಡ ಭರ್ಜರಿ ವೆಕೇಶನ್? ವೈರಲ್ ಆಗಿರೋ ವಿಡಿಯೊದಲ್ಲೇನಿದೆ?
ಇನ್ನು ಸಂದರ್ಶದಲ್ಲಿ ಅನೇಕ ಖಾಸಗಿ ವಿಷಯಗಳನ್ನೂ ರಶ್ಮಿಕಾ ಹಂಚಿಕೊಂಡಿದ್ದಾರೆ. ಸ್ಮೋಕಿಂಗ್ ಬಗ್ಗೆಯೂ ಹೇಳಿದ್ದಾರೆ. ಸಿನಿಮಾವನ್ನು ಸಿನಿಮಾ ಆಗಿ ನೋಡ್ತೆನೆ. ನಾನು ಸ್ಮೋಕಿಂಗ್ ಇಷ್ಟಪಡೋದಿಲ್ಲ. ಸಿನಿಮಾದಲ್ಲಿ ಕೂಡ ಸ್ಮೋಕಿಂಗ್ ಮಾಡು ಅಂದ್ರೆ ನಾನೂ ಮಾಡೋದಿಲ್ಲ ಎಂದು ರಶ್ಮಿಕಾ ಮಂದಣ್ಣ ಹೇಳಿದ್ದಾರೆ.
ಸದ್ಯ ಬಾಲಿವುಡ್ ಸಿನಿಮಾಗಳಲ್ಲಿ ಬ್ಯಸಿಯಾಗಿರುವ ನಟಿ, ಮತ್ತೊಂದು ಚಿತ್ರಕ್ಕೆ ಬಣ್ಣ ಹಚ್ಚಲಿದ್ದಾರೆ. ಕಾಕ್ಟೇಲ್ 2 ಅಗಸ್ಟ್‌ನಲ್ಲಿ ಸೆಟ್ಟೇರಲಿದೆ. ಈಗಾಗಲೇ ಇವರ ಸಿಕಂದರ್ ಚಿತ್ರ ತಕ್ಕ ಮಟ್ಟಿಗೆ ಯಶಸ್ಸನ್ನು ಕಂಡಿದೆ.