Ilaiyaraaja: ಕೃತಿಚೌರ್ಯ ಆರೋಪ; 'ಗುಡ್ ಬ್ಯಾಡ್ ಅಗ್ಲಿ' ಚಿತ್ರತಂಡಕ್ಕೆ 5 ಕೋಟಿ ರೂ. ಡಿಮ್ಯಾಂಡ್ ಇಟ್ಟ ಸಂಗೀತ ನಿರ್ದೇಶಕ ಇಳಯರಾಜ
ಗುಡ್ ಬ್ಯಾಡ್ ಅಗ್ಲಿ’ ನಿರ್ಮಾಪಕರಿಗೆ ಸಂಗೀತ ದಿಗ್ಗಜ ಇಳಯರಾಜ ಲೀಗಲ್ ನೊಟೀಸ್ ಕಳುಹಿಸಿದ್ದಾರೆ. ಚಿತ್ರದಲ್ಲಿ ಒತ್ತಾ ರುಪಾಯುಮ್ ಥಾರೆನ್ ,ಇಲಮೈ ಇಧೊ ಇಧೋ.. ವಿಕ್ರಮ್’ ಚಿತ್ರದ ‘ಎನ್ ಜೋಡಿ ಮಂಜ ಕುರುವಿ ಹಾಡುಗಳನ್ನು ಅನುಮತಿ ಪಡೆಯದೆ ಹಾಡುಗಳನ್ನು ಮಾರ್ಪಡಿಸಿ ಬಳಸಲಾಗಿದೆ. ಈ ಎಲ್ಲಾ ಹಾಡುಗಳು ಸಂಗೀತ ಸಂಯೋಜಕ ಇಳಯರಾಜಾ ಅವರದಾಗಿದ್ದು ಚಿತ್ರತಂಡ ಈ ಬಗ್ಗೆ ಅನುಮತಿ ಪಡೆದಿಲ್ಲ ಎಂದು ದೂರಿದ್ದಾರೆ.

Ilaiyaraaja Sues Good Bad Ugly

ಚೆನ್ನೈ: ಕಾಲಿವುಡ್ ನ ಬಹುನಿರೀಕ್ಷಿತ ಚಿತ್ರ ʼಗುಡ್ ಬ್ಯಾಡ್ ಅಗ್ಲಿʼ (Good Bad Ugly) ತೆರೆಕಂಡಿದ್ದು, 100 ಕೋಟಿ ರೂ. ಕ್ಲಬ್ ಸೇರಿದೆ. ಅಧಿಕ್ ರವಿಚಂದ್ರನ್ ನಿರ್ದೇಶನದ, ಅಜಿತ್ ಕುಮಾರ್ ಮತ್ತು ತ್ರಿಶಾ ಕೃಷ್ಣನ್ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಈ ಸಿನಿಮಾವು ಏ. 10ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದ್ದು, ಇದೀಗ ಚಿತ್ರವು ಬಾಕ್ಸ್ ಅಫೀಸ್‌ನಲ್ಲಿ ಭರ್ಜರಿ ಗಳಿಕೆ ಕಾಣುತ್ತಿದ್ದಂತೆ ಚಿತ್ರ ತಂಡಕ್ಕೆ ಸಂಕಷ್ಟವೊಂದು ಎದುರಾಗಿದೆ. ಸಿನಿಮಾ ಸಕ್ಸಸ್ ಆಗುತ್ತಿದ್ದಂತೆ ʼಗುಡ್ ಬ್ಯಾಡ್ ಅಗ್ಲಿʼ ಕಾನೂನು ಉರುಳಿಗೆ ಸಿಲುಕಿಕೊಂಡಿದೆ. ಕಾಪಿ ರೈಟ್ಸ್ ಆರೋಪದಡಿ ಖ್ಯಾತ ಹಿರಿಯ ಸಂಗೀತ ನಿರ್ದೇಶಕ ಇಳಯರಾಜ (Ilaiyaraaja) ʼಗುಡ್ ಬ್ಯಾಡ್ ಅಗ್ಲಿʼ ಚಿತ್ರತಂಡಕ್ಕೆ ನೊಟೀಸ್ ಕಳುಹಿಸಿದ್ದಾರೆ.
‘ಗುಡ್ ಬ್ಯಾಡ್ ಅಗ್ಲಿ’ ನಿರ್ಮಾಪಕರಿಗೆ ಸಂಗೀತ ದಿಗ್ಗಜ ಇಳಯರಾಜ ಲೀಗಲ್ ನೊಟೀಸ್ ಕಳುಹಿಸಿದ್ದಾರೆ. ಚಿತ್ರದಲ್ಲಿ ʼಒತ್ತಾ ರುಪಾಯುಮ್ ಥಾರೆನ್ʼ, ʼಇಲಮೈ ಇಧೊ ಇಧೋ ವಿಕ್ರಮ್’, ‘ಎನ್ ಜೋಡಿ ಮಂಜ ಕುರುವಿʼ ಹಾಡುಗಳನ್ನು ಅನುಮತಿ ಪಡೆಯದೆ ಮಾರ್ಪಡಿಸಿ ಬಳಸಲಾಗಿದೆ. ಈ ಎಲ್ಲ ಹಾಡುಗಳು ಸಂಗೀತ ಸಂಯೋಜಕ ಇಳಯರಾಜ ಅವರದಾಗಿದ್ದು, ಚಿತ್ರತಂಡ ಈ ಬಗ್ಗೆ ಅನುಮತಿ ಪಡೆದಿಲ್ಲ ಎಂದು ದೂರಿದ್ದಾರೆ.
ʼಗುಡ್ ಬ್ಯಾಡ್ ಅಗ್ಲಿʼ ಚಿತ್ರದ ಟ್ರೈಲರ್:
ತನ್ನ ಹಾಡುಗಳನ್ನು ಯಾವುದೇ ಅನುಮತಿ ಇಲ್ಲದೇ ಬಳಕೆ ಮಾಡಿಕೊಂಡಿರುವುದಕ್ಕೆ ಇಳಯರಾಜ ಅವರು 'ಗುಡ್ ಬ್ಯಾಡ್ ಅಗ್ಲಿ' ಸಿನಿಮಾ ತಂಡಕ್ಕೆ ಲೀಗಲ್ ನೊಟೀಸ್ ಕೊಟ್ಟಿದ್ದು, 5 ಕೋಟಿ ರೂ. ಡಿಮ್ಯಾಂಡ್ ಮಾಡಿದ್ದಾರೆ. ಇದು ಅನಧಿಕೃತ ಬಳಕೆಯಾಗಿದ್ದು ಹಕ್ಕುಸ್ವಾಮ್ಯ ಮತ್ತು ನೈತಿಕ ಹಕ್ಕುಗಳ ಸ್ಪಷ್ಟ ಉಲ್ಲಂಘನೆಯಾಗಿದೆ. ಚಿತ್ರದಲ್ಲಿ ಈ ಹಾಡುಗಳನ್ನು ಶೀಘ್ರವೇ ತೆಗೆದು ಹಾಕಬೇಕು. ಇಲ್ಲದಿದ್ದಲ್ಲಿ ನಿರ್ಮಾಪಕರಿಂದ ಬರಹದ ಕ್ಷಮೆ ಪತ್ರವನ್ನು ಹಾಗೂ ಬಾಕ್ಸ್ ಆಫೀಸ್ ಗಳಿಕೆಯಲ್ಲಿ 5 ಕೋಟಿ ರೂಪಾಯಿ ಪರಿಹಾರವನ್ನು ನೀಡಬೇಕೆಂದು ನೊಟೀಸ್‌ನಲ್ಲಿ ತಿಳಿಸಲಾಗಿದೆ.
ಇದನ್ನು ಓದಿ: Firefly Movie: ಮಗಳ ಸಿನಿಮಾದಲ್ಲಿ ಪಿಜ್ಜಾ ಡೆಲಿವರಿ ಬಾಯ್ ಆದ ಶಿವಣ್ಣ
ಇದುವರೆಗೂ ʼಗುಡ್ ಬ್ಯಾಡ್ ಅಗ್ಲಿ' ಚಿತ್ರತಂಡ ಈ ನೊಟೀಸ್‌ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ʼಗುಡ್ ಬ್ಯಾಡ್ ಅಗ್ಲಿʼ ಸಿನಿಮಾವು ಅಜಿತ್ ಕುಮಾರ್ ಗ್ಯಾಂಗ್‌ಸ್ಟರ್ ಆಗಿ ಹೊಸ ಜೀವನ ಆರಂಭಿಸಲು ಯತ್ನಿಸುವ ಕಥೆಯಾಗಿದೆ. ಈ ಚಿತ್ರ ವನ್ನು ಮೈತ್ರಿ ಮೂವಿ ಮೇಕರ್ಸ್ ನಿರ್ಮಿಸಿದೆ. 'ಗುಡ್ ಬ್ಯಾಡ್ ಅಗ್ಲಿ' ಚಿತ್ರಕ್ಕೆ ಜಿ.ವಿ. ಪ್ರಕಾಶ್ ಕುಮಾರ್ ಸಂಗೀತ ನೀಡಿದ್ದಾರೆ. ಅಭಿನಂದನ್ ರಾಮಾನುಜಂ ಛಾಯಾಗ್ರಹಣ, ವಿಜಯ್ ವೇಲುಕುಟ್ಟಿ ಸಂಕಲನ ಮತ್ತು ಸಂಗೀತ ನೀಡಿದ್ದಾರೆ. ಚಿತ್ರದಲ್ಲಿ ಪ್ರಸನ್ನ, ಅರ್ಜುನ್ ದಾಸ್, ಪ್ರಿಯಾ ಪ್ರಕಾಶ್ ವಾರಿಯರ್ ಕೂಡ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.