Samantha Ruth Prabhu: ಚಿತ್ರರಂಗಕ್ಕೆ ಮರಳಿದ ನಟಿ ಸಮಂತಾ; ಸ್ಪೆಷಲ್ ಡೈರಕ್ಟರ್ ಜತೆ ಮುಂದಿನ ಸಿನಿಮಾ
Nandini Reddy: ಬಹುಭಾಷಾ ನಟಿ ಸಮಂತಾ ರುತ್ ಪ್ರಭು ಹಲವು ದಿನಗಳ ಬಳಿಕ ಮತ್ತೆ ಚಿತ್ರರಂಗದಲ್ಲಿ ಸಕ್ರಿಯರಾಗುತ್ತಿದ್ದಾರೆ. 2023ರಲ್ಲಿ ತೆರೆಕಂಡ ನಟ ವಿಜಯ್ ದೇವರಕೊಂಡ ಜತೆಗಿನ ʼಖುಷಿʼ ಚಿತ್ರದಲ್ಲಿ ನಟಿಸಿದ್ದಇವರು ಬಳಿಕ ಯಾವುದೇ ಸಿನಿಮಾದಲ್ಲಿ ಅಭಿನಯಿಸಿರಲಿಲ್ಲ. 2 ವರ್ಷಗಳ ಬಳಿಕ ಅವರು ಚಿತ್ರವೊಂದನ್ನು ಒಪ್ಪಿಕೊಂಡಿದ್ದು, ಅಭಿಮಾನಿಗಳಿಗೆ ಗುಡ್‌ನ್ಯೂಸ್ ನೀಡಿದ್ದಾರೆ.
Samantha -
ನವದೆಹಲಿ: ಬಹುಭಾಷಾ ನಟಿ ಸಮಂತಾ ರುತ್ ಪ್ರಭು (Samantha Ruth Prabhu) ತೆಲುಗು ಚಿತ್ರವೊಂದನ್ನು ಒಪ್ಪಿಕೊಳ್ಳುವ ಮೂಲಕ ಅಭಿಮಾನಿಗಳಿಗೆ ಗುಡ್‌ನ್ಯೂಸ್ ನೀಡಿದ್ದಾರೆ. 2023ರಲ್ಲಿ ರಿಲೀಸ್ ಆದ ನಟ ವಿಜಯ್ ದೇವರಕೊಂಡ (Vijay Deverakonda) ಜತೆಗಿನ 'ಖುಷಿ' ಚಿತ್ರವೇ ಕೊನೆ. ಬಳಿಕ ಸಮಂತಾ ಅಭಿನಯದ ಯಾವ ಚಿತ್ರವೂ ತೆರೆಕಂಡಿಲ್ಲ. ಇದೀಗ ಅವರು ತಮ್ಮ ಅಭಿಮಾನಿಗಳಿಗೆ ಗುಡ್‌ನ್ಯೂಸ್ ನೀಡಿದ್ದಾರೆ. ನಂದಿನಿ ರೆಡ್ಡಿ (B.V. Nandini Reddy) ನಿರ್ದೇಶನದ ʼಮಾ ಇಂಟಿ ಬಂಗಾರಂʼ ಸಿನಿಮಾದ ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ.
ಹೈದರಾಬಾದ್‌ನಲ್ಲಿ 'ಮಾ ಇಂಟಿ ಬಂಗಾರಂʼ ಚಿತ್ರದ ಶೂಟಿಂಗ್ ನಡೆಯುತ್ತಿದೆ. ಈ ಹಿಂದೆ ಸಮಂತಾ ನಟನೆಯ ʼಓಹ್ ಬೇಬಿʼ ಮತ್ತು ʼಜಬರ್ದಸ್ತ್ʼ ಸಿನಿಮಾಗಳಿಗೆ ಆ್ಯಕ್ಷನ್ ಕಟ್ ಹೇಳಿರುವ ನಂದಿನಿ ರೆಡ್ಡಿ ಅವರೇ ಈ ಸಿನಿಮಾವನ್ನೂ ನಿರ್ದೇಸಿಸುತ್ತಿರುವುದು ವಿಶೇಷ. ಈಗಾಗಲೇ ಅನೇಕ ಕಡೆ ಶೂಟಿಂಗ್ ನಡೆಸಲು ಯೋಜನೆ ಹಾಕಿಕೊಳ್ಳಲಾಗಿದೆ. ಈ ಬಗ್ಗೆ ಸ್ವತಃ ನಿರ್ದೇಶಕಿ ನಂದಿನಿ ಮಾಹಿತಿ ಹಂಚಿಕೊಂಡಿದ್ದಾರೆ.
ಸಮಂತಾ ಈ ಸಿನಿಮಾದ ಮುಹೂರ್ತದ ವಿಡಿಯೊವನ್ನು ಕೆಲವು ದಿನಗಳ ಹಿಂದೆ ಎಕ್ಸ್‌ನಲ್ಲಿ ಹಂಚಿಕೊಂಡಿದ್ದರು. ʼʼನಿಮ್ಮೆಲ್ಲರ ಪ್ರೀತಿ, ಆಶೀರ್ವಾದಗಳಿಂದ 'ಮಾ ಇಂಟಿ ಬಂಗಾರಂ' ಚಿತ್ರದ ಮುಹೂರ್ತದೊಂದಿಗೆ ನಮ್ಮ ಪ್ರಯಾಣವನ್ನು ಮತ್ತೆ ಪ್ರಾರಂಭಿಸಿದ್ದೇವೆ. ಈ ಚಿತ್ರಕ್ಕೆ ನಿಮ್ಮೆಲ್ಲರ ಪ್ರೀತಿ ಮತ್ತು ಬೆಂಬಲ ನಮಗೆ ಬೇಕು'ʼ ಎಂದು ಬರೆದಿದ್ದರು. ಸಮಂತಾ ಅವರ ಮುಂದಿನ ಸಿನಿಮಾ ಶೂಟಿಂಗ್ ಹಂತದಲ್ಲೇ ಸಂಚಲನ ಉಂಟು ಮಾಡುತ್ತಿದೆ.
ಈ ಬಗ್ಗೆ ಇತ್ತೀಚಿನ ಸಂದರ್ಶನ ಒಂದರಲ್ಲಿ ಮಾತನಾಡಿದ್ದ ನಿರ್ದೇಶಕಿ ನಂದಿನಿ, ʼʼಸಮಂತಾ ಅವರೊಂದಿಗೆ 3ನೇ ಬಾರಿಗೆ ಸಿನಿಮಾ ಮಾಡುವ ಬಗ್ಗೆ ನಾನು ಉತ್ಸುಕಳಾಗಿದ್ದೇನೆ. ಈ ಕಥೆ, ಅವರ ಸ್ಟಾರ್ ಪವರ್‌ಗೆ ಸಂಪೂರ್ಣ ನ್ಯಾಯ ಒದಗಿಸುತ್ತದೆ ಎಂದು ನನಗೆ ನಂಬಿಕೆ ಇದೆ. ಸ್ಯಾಮ್ ಅವರೊಂದಿಗೆ ಈ ಹೊಸ ಸಿನಿಮಾ ನಿಮ್ಮೆಲ್ಲರ ಸಹಕಾರದಿಂದ ಚೆನ್ನಾಗಿ ಬರಲಿ'' ಎಂದು ಹೇಳಿದ್ದರು.
ಸಮಂತಾ, ರಾಜ್ ನಿಡಿಮೋರು ಮತ್ತು ಹಿಮಾಂಕ್ ದುವ್ವುರು ಜಂಟಿಯಾಗಿ ನಿರ್ಮಿಸಿರುವ 'ಮಾ ಇಂಟಿ ಬಂಗಾರಂ' ಆ್ಯಕ್ಷನ್-ಡ್ರಾಮ ಜಾನರ್‌ನ ಸಿನಿಮಾ ಆಗಿರಲಿದೆ. ʼಕಾಂತಾರʼ ಸಿನಿಮಾ ಖ್ಯಾತಿಯ ಗುಲ್ಶನ್ ದೇವಯ್ಯ ಈ ಚಿತ್ರದ ಮೂಲಕ ಟಾಲಿವುಡ್‌ಗೆ ಪದಾರ್ಪಣೆ ಮಾಡಲಿದ್ದಾರೆ. ದಿಗಂತ್, ಗೌತಮಿ ಮತ್ತು ಮಂಜುಷಾ ಸೇರಿದಂತೆ ಬಹುದೊಡ್ಡ ತಾರಾಗಣ ಈ ಸಿನಿಮಾದಲ್ಲಿ ಇರಲಿದೆ. ಈ ಸಿನಿಮಾಕ್ಕೆ ಓಂ ಪ್ರಕಾಶ್ ಛಾಯಾಗ್ರಾಹಕರಾಗಿದ್ದು, ಸಂತೋಷ್ ನಾರಾಯಣನ್ ಸಂಗೀತ ಸಂಯೋಜಿಸಲಿದ್ದಾರೆ.
ಇದನ್ನು ಓದಿ:OTT Entry Movie: ಕಾಂತಾರ ಸಿನಿಮಾದ ಜೊತೆಗೆ ಸಾಲು ಸಾಲು ಹಿಟ್ ಸಿನಿಮಾ ಒಟಿಟಿಗೆ ಎಂಟ್ರಿ: ಯಾವುದೆಲ್ಲ ಗೊತ್ತಾ?
ಆರೋಗ್ಯ ಕಾರಣದಿಂದ ನಟನೆಯಿಂದ ಕೆಲವು ತಿಂಗಳು ಬ್ರೇಕ್ ಪಡೆದುಕೊಂಡಿದ್ದ ಸಮಂತಾ 2024ರ ನವೆಂಬರ್‌ನಲ್ಲಿ ಸ್ಟ್ರೀಮಿಂಗ್ ಆರಂಭಿಸಿದ್ದ ರಾಜ್ & ಡಿಕೆ ನಿರ್ದೇಶನದ ʼಸಿಟಾಡೆಲ್: ಹನಿ ಬನ್ನಿʼ ಎಂಬ ಸ್ಪೈ-ಆ್ಯಕ್ಷನ್ ವೆಬ್ ಸೀರೀಸ್‌ನಲ್ಲಿ ಕಾಣಿಸಿಕೊಂಡಿದ್ದರು. ಸಮಂತಾ ಕೊನೆಯ ಬಾರಿಗೆ ಈ ವರ್ಷದ ಆರಂಭದಲ್ಲಿ ತೆಲುಗು ಹಾರರ್-ಕಾಮಿಡಿ ಚಿತ್ರ ʼಶುಭಂʼ ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.