ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Oscars 2027: ಆಸ್ಕರ್ ಅಂಗಳದಲ್ಲಿ ಭಾರತದ ಮರಾಠಿ ಸಿನಿಮಾ! 104 ಚಿತ್ರಗಳ ನಡುವೆ ಪೈಪೋಟಿ

Oscars 2027: 99ನೇ ಅಕಾಡೆಮಿ ಪ್ರಶಸ್ತಿಗಳ (ಆಸ್ಕರ್ 2027) ಅಂತರರಾಷ್ಟ್ರೀಯ ಫೀಚರ್ ಫಿಲ್ಮ್ ವಿಭಾಗದಲ್ಲಿ ಸ್ಪರ್ಧಿಸಲು ಭಾರತದ ಅಧಿಕೃತ ಪ್ರವೇಶ ಚಿತ್ರವಾದ ಮರಾಠಿ ಥ್ರಿಲ್ಲರ್ ‘ಗೋಂಧಲ್'’ ಅರ್ಹತೆ ಪಡೆದುಕೊಂಡಿದೆ. ಅಕಾಡೆಮಿ ಆಫ್ ಮೋಷನ್ ಪಿಕ್ಚರ್ ಆರ್ಟ್ಸ್ ಅಂಡ್ ಸೈನ್ಸಸ್ ಮಂಗಳವಾರ ಈ ಕುರಿತು ಪ್ರಕಟಣೆ ಹೊರಡಿಸಿದೆ. ಅಂತರರಾಷ್ಟ್ರೀಯ ಫೀಚರ್ ಫಿಲ್ಮ್ ವಿಭಾಗದ ಒಟ್ಟು 104 ಚಿತ್ರಗಳ ಅರ್ಹತಾ ಪಟ್ಟಿಯಲ್ಲಿ ‘ಗೋಂಧಲ್’ ಸ್ಥಾನ ಪಡೆದಿದೆ.

ಆಸ್ಕರ್ ಅಂಗಳದಲ್ಲಿ ಭಾರತದ ಮರಾಠಿ ಸಿನಿಮಾ!  104 ಚಿತ್ರಗಳ ನಡುವೆ ಪೈಪೋಟಿ

ಆಸ್ಕರ್‌ 2027 -

Yashaswi Devadiga
Yashaswi Devadiga Nov 24, 2026 6:34 PM

99ನೇ ಅಕಾಡೆಮಿ ಪ್ರಶಸ್ತಿಗಳ (ಆಸ್ಕರ್ 2027) ಅಂತರರಾಷ್ಟ್ರೀಯ ಫೀಚರ್ ಫಿಲ್ಮ್ ವಿಭಾಗದಲ್ಲಿ ಸ್ಪರ್ಧಿಸಲು ಭಾರತದ ಅಧಿಕೃತ ಪ್ರವೇಶ ಚಿತ್ರವಾದ ಮರಾಠಿ ಥ್ರಿಲ್ಲರ್ ‘ಗೋಂಧಲ್'’ ಅರ್ಹತೆ ಪಡೆದುಕೊಂಡಿದೆ. ಅಕಾಡೆಮಿ ಆಫ್ ಮೋಷನ್ ಪಿಕ್ಚರ್ ಆರ್ಟ್ಸ್ ಅಂಡ್ ಸೈನ್ಸಸ್ ಮಂಗಳವಾರ ಈ ಕುರಿತು ಪ್ರಕಟಣೆ ಹೊರಡಿಸಿದೆ. ಅಂತರರಾಷ್ಟ್ರೀಯ ಫೀಚರ್ ಫಿಲ್ಮ್ ವಿಭಾಗದ ಒಟ್ಟು 104 ಚಿತ್ರಗಳ ಅರ್ಹತಾ ಪಟ್ಟಿಯಲ್ಲಿ ‘ಗೋಂಧಲ್’ ಸ್ಥಾನ ಪಡೆದಿದೆ. ಆದರೆ ಅರ್ಹತಾ ಪಟ್ಟಿಗೆ ಸೇರ್ಪಡೆಯಾಗಿರುವುದು ಆಸ್ಕರ್ ನಾಮನಿರ್ದೇಶನ ಖಚಿತವಾಗಿದೆ ಎಂದರ್ಥವಲ್ಲ. ಮುಂದಿನ ಹಂತದ ಆಯ್ಕೆ ಪ್ರಕ್ರಿಯೆಯಲ್ಲಿ ಚಿತ್ರ ಸ್ಪರ್ಧಿಸಬಹುದಾಗಿದೆ.

ಫ್ರಾನ್ಸ್‌ನ ‘ಮಿನೋಟಾರ್’, ಸ್ಪೇನ್‌ನ ‘ಲಾ ಬೋಲಾ ನೆಗ್ರಾ’, ಬ್ರೆಜಿಲ್‌ನ ‘ಗುಗುಸ್ ವರ್ಲ್ಡ್’, ನಾರ್ವೆಯ ‘ಗ್ರೋತ್ ಆಫ್ ದಿ ಸಾಯಿಲ್’, ಜರ್ಮನಿಯ ‘ಎವೆರಿಟೈಮ್’, ಇಟಲಿಯ ‘ದಿ ಸ್ಪೈರಲ್’, ಜಪಾನ್‌ನ ‘ಆಲ್ ಆಫ್ ಎ ಸಡನ್’, ದಕ್ಷಿಣ ಕೊರಿಯಾದ ‘ಪಾಸಿಬಲ್ ಲವ್’, ಮೆಕ್ಸಿಕೊದ ‘ಆನ್ ದಿ ರೋಡ್’, ಡೆನ್ಮಾರ್ಕ್‌ನ ‘ವುಮನ್ ಅನ್‌ನೋನ್’, ಇರಾನ್‌ನ ‘ಲ್ಯಾಂಡ್ ಆಫ್ ಏಂಜಲ್ಸ್’ ಮತ್ತು ಕೆನಡಾದ ‘ನೀನಾ ರೋಜಾ’ ಸೇರಿದಂತೆ ಹಲವು ದೇಶಗಳ ಚಿತ್ರಗಳು ಈ ಪಟ್ಟಿಯಲ್ಲಿವೆ.

ಇದನ್ನೂ ಓದಿ: Bigg Boss Kannada 13: ಜೋಕರ್‌ ಕಾರ್ಡ್‌ ಗೆದ್ದು ಮನೆಮಂದಿಗೆ ಶಾಕ್‌ ಕೊಟ್ಟ ಧನುಷ್‌! ವೀಕ್ಷಕರಿಂದ ʻಟಾಸ್ಕ್‌ ಮಾಸ್ಟರ್‌ʼ ಪಟ್ಟ

ಆಸ್ಕರ್ ಅರ್ಹತೆಗೆ ಏನೆಲ್ಲ ಮಾನದಂಡ?

ಅಂತರರಾಷ್ಟ್ರೀಯ ಫೀಚರ್ ಫಿಲ್ಮ್ ವಿಭಾಗಕ್ಕೆ ಅರ್ಹತೆ ಪಡೆಯಲು ಚಿತ್ರವು 40 ನಿಮಿಷಗಳಿಗಿಂತ ಹೆಚ್ಚಿನ ಅವಧಿಯನ್ನು ಹೊಂದಿರಬೇಕು. ಅಮೆರಿಕದ ಹೊರಗೆ ನಿರ್ಮಾಣವಾಗಿರಬೇಕು ಹಾಗೂ ಚಿತ್ರದ ಸಂಭಾಷಣೆಯ ಶೇಕಡಾ 50ಕ್ಕಿಂತ ಹೆಚ್ಚು ಭಾಗ ಇಂಗ್ಲಿಷ್ ಹೊರತಾದ ಭಾಷೆಯಲ್ಲಿರಬೇಕು.

ಆಯ್ದ ವಿಭಾಗಗಳ ಪ್ರಾಥಮಿಕ ಮತದಾನ ಪ್ರಕ್ರಿಯೆ ಡಿಸೆಂಬರ್ 7ರಿಂದ 11ರವರೆಗೆ ನಡೆಯಲಿದೆ. ಶಾರ್ಟ್‌ಲಿಸ್ಟ್ ಮಾಡಲಾದ ಚಿತ್ರಗಳ ಪಟ್ಟಿಯನ್ನು ಡಿಸೆಂಬರ್ 15ರಂದು ಪ್ರಕಟಿಸಲಾಗುತ್ತದೆ. 99ನೇ ಆಸ್ಕರ್ ಪ್ರಶಸ್ತಿಗಳ ನಾಮನಿರ್ದೇಶನಗಳನ್ನು 2027ರ ಜನವರಿ 21ರಂದು ಘೋಷಿಸಲಾಗುತ್ತದೆ.

ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭವು 2027ರ ಮಾರ್ಚ್ 14ರಂದು ಭಾನುವಾರ ಹಾಲಿವುಡ್‌ನ ಓವೇಷನ್ ಹಾಲಿವುಡ್‌ನ ಡಾಲ್ಬಿ ಥಿಯೇಟರ್‌ನಲ್ಲಿ ನಡೆಯಲಿದೆ. ಈ ಕಾರ್ಯಕ್ರಮ ಎಬಿಸಿ ವಾಹಿನಿಯಲ್ಲಿ ನೇರ ಪ್ರಸಾರವಾಗಲಿದ್ದು, ಹುಲು ಮೂಲಕವೂ ವೀಕ್ಷಿಸಬಹುದು. ವಿಶ್ವದ 200ಕ್ಕೂ ಹೆಚ್ಚು ಪ್ರದೇಶಗಳಲ್ಲಿ ಪ್ರಸಾರವಾಗಲಿದೆ.

‘ಗೋಂಧಲ್’ ಚಿತ್ರದ ಕಥಾಹಂದರವೇನು?

ಮಹಾರಾಷ್ಟ್ರದ ಗ್ರಾಮೀಣ ಪರಿಸರದಲ್ಲಿ ನಡೆಯುವ ‘ಗೋಂಧಲ್’ ಚಿತ್ರವು ಸಾಂಪ್ರದಾಯಿಕ ಮಧ್ಯರಾತ್ರಿಯ ಗೋಂಧಲ್ಆ ಚರಣೆಯ ಹಿನ್ನೆಲೆಯಲ್ಲಿದೆ. ಸಂಗೀತ, ನೃತ್ಯ, ಪುರಾಣ ಮತ್ತು ಧಾರ್ಮಿಕ ಅಂಶಗಳನ್ನು ಒಳಗೊಂಡಿರುವ ಈ ಆಚರಣೆಯ ಸುತ್ತ ಚಿತ್ರದ ಕಥೆ ಸಾಗುತ್ತದೆ.

ಚಿತ್ರದಲ್ಲಿ ಸುಮನ್ ಎಂಬ ಯುವತಿ ಗೊಂಡಳಿ ಕಲಾವಿದ ಸೈಬಾ ಎಂಬಾತನನ್ನು ಪ್ರೀತಿಸುತ್ತಾಳೆ. ತನ್ನ ವೈವಾಹಿಕ ಜೀವನದಿಂದ ಹೊರಬರಲು ಸುಮನ್ ಪ್ರಯತ್ನಿಸುತ್ತಾಳೆ. ಈ ಸಂದರ್ಭದಲ್ಲಿ ಆಕೆಯ ಯೋಜನೆಯೊಳಗೆ ಆನಂದ್‌ನ ಗೀಳಿನ ಸ್ವಭಾವದ ಸಂಬಂಧಿ ಸರ್ಜೇರಾವ್ ಪ್ರವೇಶಿಸುತ್ತಾನೆ.

ಆರಂಭದಲ್ಲಿ ತನ್ನ ಪರಿಸ್ಥಿತಿಯಿಂದ ಹೊರಬರಲು ನಡೆಸುವ ಪ್ರಯತ್ನವಾಗಿ ಕಾಣುವ ಈ ಕಥೆ, ನಂತರ ಕೊಲೆ, ವಂಚನೆ, ಪ್ರೀತಿ, ಆಸೆ ಮತ್ತು ಬದುಕುಳಿಯುವ ಹೋರಾಟದ ಸುತ್ತ ತೀವ್ರ ತಿರುವುಗಳನ್ನು ಪಡೆದುಕೊಳ್ಳುತ್ತದೆ.

ಚಿತ್ರದಲ್ಲಿ ಸುಮನ್ ಪಾತ್ರದಲ್ಲಿ ಇಶಿತಾ ದೇಶಮುಖ್ ನಟಿಸಿದ್ದಾರೆ. ಕಿಶೋರ್ ಕದಂ, ಯೋಗೇಶ್ ಸೋಹೋನಿ, ನಿಶಾದ್ ಭೋಯಿರ್ ಮತ್ತು ಅನುಜ್ ಪ್ರಭು ಸೇರಿದಂತೆ ಹಲವು ಕಲಾವಿದರು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.

ಇದನ್ನೂ ಓದಿ: Gowri Putra Serial: ಇಕ್ಕಟ್ಟಿನಲ್ಲಿ ಸಿಲುಕಿದ ಕಾರ್ತಿಕ್‌ಗೆ ಎದುರಾಯ್ತು ಹೊಸ ಸಂಕಷ್ಟ

ಭಾರತದ ಪ್ರಾದೇಶಿಕ ಭಾಷಾ ಚಿತ್ರವೊಂದು ವಿಶ್ವದ ಪ್ರತಿಷ್ಠಿತ ಚಲನಚಿತ್ರ ಪ್ರಶಸ್ತಿಯಾದ ಆಸ್ಕರ್‌ನ ಅಂತರರಾಷ್ಟ್ರೀಯ ಫೀಚರ್ ಫಿಲ್ಮ್ ವಿಭಾಗದ ಅರ್ಹತಾ ಪಟ್ಟಿಗೆ ಸೇರ್ಪಡೆಯಾಗಿರುವುದು ಭಾರತೀಯ ಚಿತ್ರರಂಗದ ಗಮನ ಸೆಳೆದಿದೆ.