Grammy Award: ಗ್ರಾಮಿ ಅವಾರ್ಡ್ ಬೆತ್ತಲಾಗಿ ಎಂಟ್ರಿ ಕೊಟ್ಟ ಮಾಡೆಲ್ ಬಿಯಾಂಕಾ ಸೆನ್ಸೋರಿ; ಏನಿದು ಕತೆ? ವಿಡಿಯೊ ವೈರಲ್
ಅಮೆರಿಕಾದ ಲಾಸ್ ಏಂಜಲೀಸ್‍ನಲ್ಲಿ ನಡೆದ ಗ್ರ್ಯಾಮಿ ಪ್ರಶಸ್ತಿ 2025 ರ ರೆಡ್ ಕಾರ್ಪೆಟ್‍ನಲ್ಲಿ ರಾಪರ್ ಕಾನ್ಯೆ ವೆಸ್ಟ್ ಪತ್ನಿ ಮಾಡೆಲ್ ಬಿಯಾಂಕಾ ಸೆನ್ಸೋರಿ ಪಾರದರ್ಶಕ ಉಡುಪಿನಲ್ಲಿ ಕಾಣಿಸಿಕೊಂಡಿದ್ದಾರೆ. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿದೆ. ಆಕೆಯನ್ನು ತಕ್ಷಣ ಆ ಕಾರ್ಯಕ್ರಮದಿಂದ ಹೊರಗೆ ಕಳುಹಿಸಲಾಗಿದೆ ಎನ್ನಲಾಗಿದೆ.
ವಾಷಿಂಗ್ಟನ್ : ಅಮೆರಿಕಾದ ಲಾಸ್ ಏಂಜಲೀಸ್‍ನಲ್ಲಿ ನಡೆದ ಗ್ರ್ಯಾಮಿ ಪ್ರಶಸ್ತಿ 2025 ರ ರೆಡ್ ಕಾರ್ಪೆಟ್‍ನಲ್ಲಿ ರಾಪರ್ ಕಾನ್ಯೆ ವೆಸ್ಟ್ ಮತ್ತು ಆತನ ಪತ್ನಿ ಮಾಡೆಲ್ ಬಿಯಾಂಕಾ ಸೆನ್ಸೋರಿ ಮತ್ತೊಮ್ಮೆ ಗಮನ ಸೆಳೆದಿದ್ದಾರೆ. ಆದರೆ ಈ ಬಾರಿ, ಅವರು ಫ್ಯಾಷನ್ ಆಯ್ಕೆಗಳಿಗಾಗಿ ಮಾತ್ರವಲ್ಲ ಈ ಕಾರ್ಯಕ್ರಮದಲ್ಲಿ ಕಾಣಿಸಿಕೊಳ್ಳಬಾರದ ರೀತಿಯಲ್ಲಿ ಕಾಣಿಸಿಕೊಂಡಿದ್ದಾರೆ. ಈ ವಿಡಿಯೊ ಸೋಶಿಯಲ್ ಮೀಡಿಯಾಗಳಲ್ಲಿ ಹರಿದಾಡಿದ್ದು, ಸಿಕ್ಕಾಪಟ್ಟೆ ವೈರಲ್(Viral Video) ಆಗಿದೆ.
ಕಾನ್ಯೆ ವೆಸ್ಟ್ ಎಂದು ಕರೆಯಲ್ಪಡುತ್ತಿದ್ದ ರಾಪರ್ ಯೆ, ಗ್ರ್ಯಾಮಿ ಪ್ರಶಸ್ತಿಗಳಲ್ಲಿ ಸುದ್ದಿಯಾಗುವುದು ಹೊಸತೇನಲ್ಲ. ಆದರೆ ಈ ಬಾರಿ ಆತನ ಪತ್ನಿ ಬಿಯಾಂಕಾ ಎಲ್ಲರ ಗಮನ ಸೆಳೆದಿದ್ದಾರೆ. ತನ್ನ ಅದ್ಭುತ ಶೈಲಿಯ ಉಡುಪುಗಳಿಗೆ ಹೆಸರುವಾಸಿಯಾದ ಬಿಯಾಂಕಾ, ಈ ಬಾರಿ ಪಾರದರ್ಶಕ ಉಡುಪು ಧರಿಸಿ ಈ ಕಾರ್ಯಕ್ರಮಕ್ಕೆ ಬಂದಿದ್ದಾಳೆ. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿ ಎಲ್ಲರ ಗಮನ ಸೆಳೆದಿದೆ. ಅನೇಕರು ಇದಕ್ಕೆ ಆಕ್ರೋಶದ ಪ್ರತಿಕ್ರಿಯೆಗಳನ್ನು ವ್ಯಕ್ತಪಡಿಸಿದ್ದಾರೆ.
Kanye West has his wife Bianca Censori looking almost completely nude at the Grammy’s 👀 pic.twitter.com/1bGhFTgEFo
— Rain Drops Media (@Raindropsmedia1) February 2, 2025
ಬಿಯಾಂಕಾ ಆರಂಭದಲ್ಲಿ ಉದ್ದನೆಯ ಕಪ್ಪು ತುಪ್ಪಳದ ಕೋಟ್‌ನಿಂದ ಮುಚ್ಚಲ್ಪಟ್ಟ ಉಡುಪು ಧರಿಸಿದ್ದಳು. ಆದರೆ ನಂತರ ಅವರ ಬೋಲ್ಡ್ ಲುಕ್‍ನ ಉಡುಪನ್ನು ಪ್ರದರ್ಶಿಸಲು ಕೋಟ್ ತೆಗೆದಾಗ ಅಲ್ಲಿದ್ದವರೆಲ್ಲರೂ ಸಿಕ್ಕಾಪಟ್ಟೆ ಶಾಕ್ ಆಗಿದ್ದಾರೆ.
ವರದಿ ಪ್ರಕಾರ ಈ ದಂಪತಿಯನ್ನು ಕಾರ್ಯಕ್ರಮಕ್ಕೆ ಆಹ್ವಾನಿಸದಿದ್ದರೂ ಅವರು ತಾವಾಗಿಯೇ ಬಂದು ಇಂತಹ ಅಶ್ಲೀಲತೆ ವ್ಯಕ್ತಪಡಿಸಿದ ಕಾರಣ, ಅವರನ್ನು ತಕ್ಷಣವೇ ಆ ಕಾರ್ಯಕ್ರಮದಿಂದ ಹೊರಗೆ ಕಳುಹಿಸಲಾಗಿದೆ ಎನ್ನಲಾಗಿದೆ. ಹಾಗೇ ಇದರ ವಿಡಿಯೊವನ್ನು ಅನ್ನು ಸೋಶಿಯಲ್ ಮೀಡಿಯಾಗಳಲ್ಲಿ ಡಿಲೀಟ್ ಮಾಡಲಾಗಿದೆ.
ಆದರೆ ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದಾಗಿನಿಂದ ಇದಕ್ಕೆ ಸಿಕ್ಕಾಪಟ್ಟೆ ಮಿಶ್ರ ಪ್ರತಿಕ್ರಿಯೆಗಳು ಬಂದಿದ್ದವಂತೆ.- ಕೆಲವರು ಬಿಯಾಂಕಾ ಅವರ ನಿರ್ಭೀತವಾದ ಫ್ಯಾಷನ್ ಆಯ್ಕೆಗಳನ್ನು ಶ್ಲಾಘಿಸಿದರೆ, ಇತರರು ದಂಪತಿಯ ಅನಿರೀಕ್ಷಿತ ಪ್ರವೇಶವನ್ನು ಟೀಕಿಸಿದ್ದಾರೆ.
ಈ ಸುದ್ದಿಯನ್ನೂ ಓದಿ:ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ: ರಣಬೀರ್ ಸಿಂಗ್- ಅತ್ಯುತ್ತಮ ನಟ, ಪುಷ್ಪ-ಅತ್ಯುತ್ತಮ ಸಿನಿಮಾ
ಈ ಸಮಾರಂಭದಲ್ಲಿ ಕಾನ್ಯೆ ಅವರನ್ನು ಎರಡು ಪ್ರಶಸ್ತಿಗಳಿಗೆ ನಾಮನಿರ್ದೇಶನ ಮಾಡಲಾಗಿದೆ ಎಂದು ಉಲ್ಲೇಖಿಸಲಾಗಿದೆ. ವಲ್ಚರ್ಸ್ ರಾಪರ್ ಕಾರ್ನಿವಲ್‍ನಲ್ಲಿ ಟೈ ಡೊಲ್ಲಾ $ign ಅವರೊಂದಿಗಿನ ಸಹಯೋಗಕ್ಕಾಗಿ ತನ್ನ 25 ನೇ ಗ್ರ್ಯಾಮಿ ಪ್ರಶಸ್ತಿಯನ್ನು ಪಡೆಯುವತ್ತ ಗಮನ ಹರಿಸಿದ್ದರು. ಆದರೆ ಗೆದ್ದರೆ, ಅವರು ಪ್ರಶಸ್ತಿಯನ್ನು ವೈಯಕ್ತಿಕವಾಗಿ ಸ್ವೀಕರಿಸಲು ಕಾರ್ಯಕ್ರಮಕ್ಕೆ ಹಾಜರಾಗುವುದಿಲ್ಲ ಎನ್ನಲಾಗಿದೆ.