Bigg Boss Hanumantha: ಕಿತ್ತೂರು ಉತ್ಸವದಲ್ಲಿ ಬಿಗ್ ಬಾಸ್ ವಿನ್ನರ್ ಹನುಮಂತ್‌ಗೆ ಅವಮಾನ ಮಾಡಿದ್ರಾ ಆಯೋಜಕರು?
Bigg Boss Hanumantha: ವಿವಿಧ ಕಾರ್ಯಕ್ರಮಗಳಲ್ಲಿ ಹಾಡನ್ನು ಹೇಳಿ ಮನರಂಜಿಸುವ ಹನುಮಂತ ಅವರನ್ನು ಈ ಬಾರಿ ಕಿತ್ತೂರು ಉತ್ಸವದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ನೀಡಲು ಆಹ್ವಾನಿಸಲಾಗಿತ್ತು. ಆದರೆ ಇದೇ ವೇದಿಕೆಯಲ್ಲಿ ಹನುಮಂತ ಅವರನ್ನು ಬರಮಾಡಿಕೊಂಡು ಅವಮಾನ ಮಾಡಲಾಗಿದೆ ಎನ್ನುವ ವಿಚಾರ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಕಾರ್ಯಕ್ರಮದ ಆಯೋಜಕರ ವಿರುದ್ದ ಹನುಮಂತ ಫ್ಯಾನ್ಸ್ ಗರಂ ಆಗಿದ್ದಾರೆ.
Hanumantha -
ಬೆಂಗಳೂರು: 'ಸರಿಗಮಪ' ಖ್ಯಾತಿಯ ಗ್ರಾಮೀಣ ಪ್ರತಿಭೆ ಹನುಮಂತ ಕಳೆದ ಸೀಸನ್‌ನ 'ಬಿಗ್ ಬಾಸ್' ಕನ್ನಡ ರಿಯಾಲಿಟಿ ಶೋ ಗೆಲ್ಲುವ ಮೂಲಕ ಇತಿಹಾಸ ಬರೆದಿದ್ದಾರೆ. ತಮ್ಮ ಗಾಯನದಿಂದ ಎಲ್ಲರನ್ನೂ ಮೋಡಿ ಮಾಡಿರುವ ಹನುಮಂತನಿಗೆ (Hanumantha) ಸಾಕಷ್ಟು ಫ್ಯಾನ್ಸ್ ಕೂಡ ಇದ್ದಾರೆ. ವಿವಿಧ ಕಾರ್ಯಕ್ರಮಗಳಲ್ಲಿ ಹಾಡನ್ನು ಹೇಳಿ ಮನರಂಜಿಸುವ ಹನುಮಂತ ಅವರನ್ನು ಈ ಬಾರಿ ಕಿತ್ತೂರು ಉತ್ಸವದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ನೀಡಲು ಆಹ್ವಾನಿಸಲಾಗಿತ್ತು. ಆದರೆ ಇದೇ ವೇದಿಕೆಯಲ್ಲಿ ಹನುಮಂತ ಅವರನ್ನು ಬರಮಾಡಿಕೊಂಡು ಅವಮಾನ ಮಾಡಲಾಗಿದೆ ಎನ್ನುವ ವಿಚಾರ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಕಾರ್ಯಕ್ರಮದ ಆಯೋಜಕರ ವಿರುದ್ದ ಇದೀಗ ಹನುಮಂತು ಫ್ಯಾನ್ಸ್ ಗರಂ ಆಗಿದ್ದಾರೆ.
ಹನುಮಂತ ಅವರನ್ನು ಕಿತ್ತೂರು ಉತ್ಸವದ ವೇದಿಕೆ ಮೇಲೆ ಕರೆದು ಅವಮಾನ ಮಾಡಲಾಗಿದೆ ಎನ್ನುವ ಮಾತು ಬೆಳಗಾವಿ ಸುತ್ತ ಮುತ್ತ ಕೇಳುಬರುತ್ತಿದೆ. ಕಿತ್ತೂರು ಉತ್ಸವದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮದ ವೇದಿಕೆ ಮೇಲೆ ಹನುಮಂತ ಹಾಡು ಹೇಳುತ್ತಿದ್ದಂತೆ ಆಯೋಜಕರು ಇದು ಕೊನೆಯ ಹಾಡು ಎಂದು ರಿಕ್ವೆಸ್ಟ್ ಮಾಡಿ ಕೊಳ್ಳುತ್ತಿರುವ ವಿಡಿಯೊ ವೈರಲ್ ಆಗಿದೆ. ಇದೇ ಸಂದರ್ಭದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಉಪ ನಿರ್ದೇಶಕಿ ವಿದ್ಯಾವತಿ ಭಜಂತ್ರಿ ಮತ್ತು ಎಸ್‌ಪಿ ಭೀಮಾಶಂಕರ್ ಗುಳೇದ್ ನಡುವೆ ಜಗಳ ಆಗಿದ್ದು ಮಾತಿನ ಚಕಮಕಿ ಆಗಿರುವ ವಿಡಿಯೊ ಕೂಡ ವೈರಲ್ ಆಗಿದೆ.
ಹಾಡನ್ನು ಹಾಡಲು ಸಮಯ ಅವಕಾಶ ಮೀರಿದರೂ ಕೂಡ ಎರಡನೇ ಬಾರಿ ಹನುಮಂತಗೆ ಹಾಡಲು ಅವಕಾಶ ನೀಡಿದ್ದಕ್ಕೆ ಭೀಮಾಶಂಕರ್ ಗುಳೇದ್, ವಿದ್ಯಾವತಿ ಭಜಂತ್ರಿ ಜತೆ ಕಿರಿಕ್ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. ಇದೇ ಸಂದರ್ಭ ಹನುಮಂತ ಅರ್ಧಕ್ಕೆ ತನ್ನ ಹಾಡು ನಿಲ್ಲಿಸಿ ವೇದಿಕೆಯಿಂದ ನಿರ್ಗಮಿಸಿದ್ದಾರೆ. ಸದ್ಯ ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ಹಲವರು ತಮ್ಮ ಅಸಮಾಧಾನವನ್ನು ಹೊರ ಹಾಕುತ್ತಿದ್ದಾರೆ
ಇದನ್ನು ಓದಿ:Varna Movie: ಟೀಸರ್‌ನಲ್ಲೇ ಕುತೂಹಲ ಮೂಡಿಸಿದೆ ಅರ್ಜುನ್ ಯೋಗಿ ನಟನೆಯ ʼವರ್ಣʼ
ಬಿಗ್ ಬಾಸ್ ಕನ್ನಡ ಸೀಸನ್ 11ರಲ್ಲಿ ಹನುಮಂತ ಹೆಚ್ಚು ಮತಗಳನ್ನು ಪಡೆಯುವ ಮೂಲಕ ಕಪ್ ಗೆದ್ದಿದ್ದರು. ವೈಲ್ಡ್ ಕಾರ್ಡ್ ಎಂಟ್ರಿಯಾಗಿ ಗೆದ್ದ ಮೊದಲ ಸ್ಪರ್ಧಿ ಎಂಬ ದಾಖಲೆಯನ್ನು ಅವರು ಮಾಡಿದ್ದಾರೆ. ಹನುಮಂತನ ಮುಗ್ದತೆ ಹಾಗೂ ಬುದ್ಧಿವಂತಿಕೆ ಎರಡೂ ಪ್ರೇಕ್ಷಕರಿಗೆ ಇಷ್ಟವಾಗಿದ್ದು ಜನರು ಇಂದಿಗೂ ಹೆಚ್ಚಿನ ಬೆಂಬಲವನ್ನು ನೀಡುತ್ತಿದ್ದಾರೆ.