ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಭೀಮ ಜ್ಯುವೆಲ್ಲರ್ಸ್'ಗೆ ಜಾಹ್ನವಿ ಕಪೂರ್ ಬ್ರ್ಯಾಂಡ್ ರಾಯಭಾರಿ

ಭೀಮ ಜ್ಯುವೆಲ್ಲರ್ಸ್ ಜಾಹ್ನವಿ ಕಪೂರ್ ಅವರನ್ನು ಬ್ರ್ಯಾಂಡ್ ರಾಯಭಾರಿಯನ್ನಾಗಿ ಆಗಿ ನೇಮಿಸಿ ಕೊಂಡಿದ್ದು, ಭಾರತದಾದ್ಯಂತ ಗ್ರಾಹಕರೊಂದಿಗೆ ತನ್ನ ಬಾಂಧವ್ಯವನ್ನು ಇನ್ನಷ್ಟು ಬಲಪಡಿಸಿದೆ. ಈ ಸಹಭಾಗಿತ್ವವು ಶತಮಾನದಷ್ಟು ಹಳೆಯದಾದ ಆಭರಣ ಸಂಸ್ಥೆಯು ಪರಂಪರೆ, ಸಂಸ್ಕೃತಿ ಹಾಗೂ ಸಮಕಾಲೀನ ಆಶಯಗಳ ಸಮ್ಮಿಲನದೊಂದಿಗೆ ಹೊಸ ಯುಗದ ರಾಷ್ಟ್ರೀಯ ಬ್ರ್ಯಾಂಡ್ ಆಗಿ ರೂಪಾಂತರಗೊಳ್ಳುತ್ತಿರುವುದನ್ನು ಸೂಚಿಸುತ್ತದೆ.

ಭೀಮ ಜ್ಯುವೆಲ್ಲರ್ಸ್'ಗೆ ಜಾಹ್ನವಿ ಕಪೂರ್ ಬ್ರ್ಯಾಂಡ್ ರಾಯಭಾರಿ

-

Profile
Ashok Nayak Jul 6, 2026 4:55 PM

ಬೆಂಗಳೂರು: ಭೀಮ ಜ್ಯುವೆಲ್ಲರ್ಸ್, ತನ್ನ ಸುದೀರ್ಘ ಪರಂಪರೆಯ ಆಧಾರವಾಗಿರುವ ಅತ್ಯುತ್ತಮ ಕರಕುಶಲತೆ, ಗ್ರಾಹಕರ ವಿಶ್ವಾಸ ಮತ್ತು ಸಾಂಸ್ಕೃತಿಕ ಮೌಲ್ಯಗಳನ್ನು ಗೌರವಿಸುತ್ತ ಅದನ್ನು ಉಳಿಸಿಕೊಳ್ಳುವ ಅಚಲವಾದ ಬದ್ಧತೆಯನ್ನು ಮುಂದುವರಿಸುತಿದೆ.

ಈ ದೃಷ್ಟಿಕೋನದ ಅನುಗುಣವಾಗಿ, ಭೀಮ ಜ್ಯುವೆಲ್ಲರ್ಸ್, ನಟಿ ಜಾಹ್ನವಿ ಕಪೂರ್ ಅವರನ್ನು ತನ್ನ ಬ್ರ್ಯಾಂಡ್ ರಾಯಭಾರಿಯನ್ನಾಗಿ ಆಗಿ ಆಯ್ಕೆ ಮಾಡಿದ್ದು, ದೇಶದ ವಿವಿಧ ಭಾಗಗಳ ಗ್ರಾಹಕ ರೊಂದಿಗೆ ತನ್ನ ಬಾಂಧವ್ಯವನ್ನು ಇನ್ನಷ್ಟು ಭದ್ರಗೊಳಿಸುವುದರ ಜೊತೆಗೆ, ತನ್ನ ಬೆಳವಣಿಗೆಯನ್ನು ರೂಪಿಸಿದ ಮೌಲ್ಯಗಳಿಗೆ ಬದ್ಧವಾಗಿರುವ ಭೀಮ ಸಂಸ್ಥೆಗೆ ಈ ಸಹಭಾಗಿತ್ವವು ಒಂದು ಮಹತ್ವದ ಮೈಲಿಗಲ್ಲಾಗಲಿದೆ.

ಇದನ್ನೂ ಓದಿ: Jewel Fashion: ಜೆನ್‌ ಜಿ ಫ್ಯಾಷನ್‌ಗೆ ದಾಳಿ ಇಟ್ಟ ಕಾಕ್‌ಟೈಲ್‌ ಫಿಂಗರ್ ರಿಂಗ್ಸ್‌

ಜಾಹ್ನವಿ ಕಪೂರ್ ಅವರು ದಕ್ಷಿಣ ಭಾರತೀಯ ಪರಂಪರೆ ಮತ್ತು ಪಾನ್-ಇಂಡಿಯಾ ಆಕರ್ಷಣೆಯ ಅಪರೂಪದ ಸಂಯೋಜನೆಯನ್ನು ಹೊಂದಿದ್ದು, ಇದರಿಂದ ಅವರು ಬ್ರ್ಯಾಂಡ್‌ಗೆ ಸಹಜವಾಗಿ ಹೊಂದಿಕೊಳ್ಳುವ ಸೂಕ್ತ ಆಯ್ಕೆಯಾಗುತ್ತಾರೆ. ವಿವಿಧ ಪೀಳಿಗೆ ಮತ್ತು ಭೌಗೋಳಿಕ ಪ್ರದೇಶಗಳ ಗ್ರಾಹಕರ ಮನಸ್ಸನ್ನು ಗೆಲ್ಲುವ ಅವರ ಸಾಮರ್ಥ್ಯವು, ಸಾಂಸ್ಕೃತಿಕ ನೈಜತೆ ಹಾಗೂ ಸಮಕಾಲೀನ ಅಭಿವ್ಯಕ್ತಿಗೆ ಮೌಲ್ಯ ನೀಡುವ ಇಂದಿನ ಗ್ರಾಹಕರ ಬದಲಾಗುತ್ತಿರುವ ಅಭಿರುಚಿಯನ್ನು ಪ್ರತಿಬಿಂಬಿ ಸುತ್ತದೆ.

ತಲತಲಾಂತರಗಳಿಂದಲೂ, ಭೀಮ ಜ್ಯುವೆಲ್ಲರ್ಸ್ ಜೀವನದ ಸಂತೋಷ ಮತ್ತು ಸಂಭ್ರಮಗಳ ಭಾಗವಾಗಿ, ಕರಕುಶಲತೆಯ ಆಭರಣಗಳ ನಿರ್ಮಾಣದೊಂದಿಗೆ , ಬದಲಾಗುತ್ತಿರುವ ಗ್ರಾಹಕರ ಆಸಕ್ತಿಗಳಿಗನುಗುಣವಾಗಿ ತನ್ನನ್ನು ತಾನು ನಿರಂತರವಾಗಿ ನವೀಕರಿಸಿಕೊಳ್ಳುತ್ತ ಬಂದಿದೆ . ಈ ಸಹಭಾಗಿತ್ವದ ಮೂಲಕ, ಭೀಮ ಸಂಸ್ಥೆಯು ಹೊಸ ತಲೆಮಾರಿನ ಗ್ರಾಹಕರೊಂದಿಗೆ ತನ್ನ ಸಂಬಂಧವನ್ನು ಮತ್ತಷ್ಟು ಬಲಪಡಿಸುವುದರ ಜೊತೆಗೆ, ದೀರ್ಘಕಾಲದದಿಂದ ತನ್ನ ಹೆಗ್ಗುರು ತಾಗಿರುವ ವಿಶ್ವಾಸಾರ್ಹತೆ ಮತ್ತು ಶ್ರೇಷ್ಠತೆಯ ಪರಂಪರೆಯನ್ನು ಮುಂದುವರಿಸಿಕೊಂಡು ಹೋಗಲು ಉದ್ದೇಶಿಸಿದೆ.

ಈ ಸಹಯೋಗವು ಬಲವಾದ ಸಾಂಸ್ಕೃತಿಕ ಮಹತ್ವವನ್ನು ಹೊಂದಿದ್ದು. ಜಾಹ್ನವಿ ಕಪೂರ್ ಅವರ ದಕ್ಷಿಣ ಭಾರತದೊಂದಿಗಿನ ಆಳವಾದ ನಂಟು ಹಾಗೂ ದೇಶವ್ಯಾಪಿ ಅವರಿಗಿರುವ ವ್ಯಾಪಕ ಜನಪ್ರಿಯತೆಯ ಜೊತೆಗೆ, ಭೀಮ ಜ್ಯುವೆಲ್ಲರ್ಸ್ ಸಂಸ್ಥೆಯು ತನ್ನ ಸಮೃದ್ಧ ದಕ್ಷಿಣ ಭಾರತೀಯ ಪರಂಪರೆಯನ್ನು ಈ ದೇಶದ ಗ್ರಾಹಕರಿಗೆ ಪರಿಚಯಿಸಿದ ತನ್ನ ಹೆಜ್ಜೆಯನ್ನು ಪ್ರತಿಬಿಂಬಿಸುತ್ತದೆ. ಒಟ್ಟಾಗಿ, ಈ ಸಹಭಾಗಿತ್ವವು ಸಂಸ್ಕೃತಿ, ಪರಂಪರೆ, ಮತ್ತು ಆಧುನಿಕತೆಯ ಮೇಲಿಟ್ಟಿರುವ ಗೌರವವನ್ನು ತೋರಿಸುತ್ತದೆ.

ತಮ್ಮ ಉತ್ಸಾಹವನ್ನು ವ್ಯಕ್ತಪಡಿಸುತ್ತಾ ಜಾಹ್ನವಿ ಕಪೂರ್ ಅವರು: ನಮ್ಮ ಕುಟುಂಬದ ಸಂಭ್ರಮಗಳ ಅತ್ಯಂತ ಸ್ಮರಣೀಯ ಕ್ಷಣಗಳ ಭಾಗವಾಗಿರುವ ಆಭರಣಗಳು ತಲೆಮಾರುಗಳಿಂದ ಹೊತ್ತುಕೊಂಡು ಬಂದಿರುವ ಕಥೆಗಳನ್ನು ತಮ್ಮೊಳಗೆ ಇಟ್ಟುಕೊಂಡಿರುತ್ತವೆ ಮತ್ತು ಈ ಕಾರಣ ದಿಂದಾಗಿ ಭೀಮ ಜ್ಯುವೆಲ್ಲರ್ಸ್ ಜೊತೆಗಿನ ನನ್ನ ಸಂಬಂಧವು ಅತ್ಯಂತ ವಿಶೇಷವಾಗಿದ್ದು, ವಿಶ್ವಾಸ, ಸಂಪ್ರದಾಯ ಮತ್ತು ಕರಕುಶಲತೆಯನ್ನು ಸುಂದರವಾಗಿ ಪ್ರತಿಬಿಂಬಿಸುತ್ತ ಶತಮಾನದಷ್ಟು ಹಳೆಯ ಪರಂಪರೆಯನ್ನು ಹೊಂದಿರುವ ಭೀಮ ಜ್ಯುವೆಲ್ಲರ್ಸ್, ಮತ್ತು ಅದರ ಪರಂಪರೆಯ ಭಾಗವಾಗುವುದಕ್ಕೆ ನಾನು ಸಂತೋಷಪಡುತ್ತೇನೆ.” ಎಂದು ಹೇಳಿದರು

ಸಹಭಾಗಿತ್ವದ ಕುರಿತು ಪ್ರತಿಕ್ರಿಯಿಸುತ್ತಾ ಭೀಮ ಸಂಸ್ಥೆಯ ವಕ್ತಾರರು - ಭೀಮ ಜ್ಯುವೆಲ್ಲರ್ಸ್ʼನಲ್ಲಿ ಆಭರಣವನ್ನು ಕೇವಲ ಅಲಂಕಾರಕಷ್ಟೇ ಸೀಮಿತಗೊಳಿಸದೆ. ಅದು ಜೀವನದ ಅತ್ಯಂತ ಅಮೂಲ್ಯ ಕ್ಷಣಗಳ ಭಾಗ ಎಂದು ನಂಬಿದ್ದೇವೆ , ಹಾಗೂ ಸುಂದರ ನೆನಪು ಮತ್ತು ಭಾವನೆಗಳ ಜೊತೆಗೆ ತಲತಲಾಂತರಗಳಿಂದ ಬಂದಿರುವ ಸಂಪ್ರದಾಯಗಳನ್ನು ತನ್ನ ಒಡಲಿನಲ್ಲಿ ಹೊತ್ತು ತರುತ್ತದೆ ಎಂದು ಹೇಳಿದರು. ಜಾಹ್ನವಿ ಕಪೂರ್ ಅವರ ಸೌಂದರ್ಯ, ಆತ್ಮೀಯತೆ, ಘನತೆ ಮತ್ತು ತಮ್ಮ ಸಾಂಸ್ಕೃತಿಕ ಬೇರುಗಳ ಮೇಲಿರುವ ಅಪಾರವಾದ ಗೌರವವು, ಅವರನ್ನು ಭೀಮ ಸಂಸ್ಥೆಯ ರಾಯಭಾರಿಯನ್ನಾಗಿ ಮಾಡಿರುವುದು ಅತ್ಯಂತ ಸಹಜ ಮತ್ತು ಸೂಕ್ತವಾದ ಆಯ್ಕೆಯ ನ್ನಾಗಿಸುತ್ತದೆ.. ಅವರಲ್ಲಿರುವ ನೈಜತೆಯು ನಾವು ಪಾಲಿಸುವ ಮೌಲ್ಯಗಳೊಂದಿಗೆ ಸಂಪೂರ್ಣವಾಗಿ ಹೊಂದಿಕೆಯಾಗಲು, ಭೀಮ ಗೋಲ್ಡ್ ಕುಟುಂಬಕ್ಕೆ ಸಂತೋಷದಿಂದ ಅವರನ್ನು ಸ್ವಾಗತಿಸುತ್ತೇವೆ. ಹಾಗೂ ಅರ್ಥಪೂರ್ಣವಾಗಿ ಸಂಭಂದಗಳೊಂದಿಗೆ ಜೀವನದ ವಿಶೇಷ ಕ್ಷಣಗಳನ್ನು ಅವರೊಂದಿಗೆ ಸಂಭ್ರಮಿಸಲು ನಾವು ಎದುರು ನೋಡುತ್ತಿದ್ದೇವೆ ಎಂದು ಹೇಳಿದರು.

ಈ ಸಹಭಾಗಿತ್ವದೊಂದಿಗೆ , ಭೀಮ ಜ್ಯುವೆಲ್ಲರ್ಸ್ ಗ್ರಾಹಕರೊಂದಿಗೆ ಅರ್ಥಪೂರ್ಣ ಬಾಂಧವ್ಯ ಬೆಳೆಸುವ ತನ್ನ ಬದ್ಧತೆಯನ್ನು ಮುಂದುವರಿಸುತ್ತಿದ್ದು, ಪ್ರತಿಯೊಂದು ಆಭರಣವನ್ನು ಸಾಂಪ್ರ ದಾಯಿಕ ಹಾಗೂ ಪಾರಂಪರಿಕವಾಗಿ, ಶ್ರೇಷ್ಠ ಕರಕುಶಲತೆ ಮತ್ತು ಆಧುನಿಕತೆಯೊಂದಿಗೆ ಪ್ರಸ್ತುತಪಡಿಸುತ್ತದೆ .