Kangana Ranaut: ಕಂಗನಾ ಮಂಗಳಸೂತ್ರ ಧರಿಸಿದ್ದಕ್ಕೆ? ಕೊಟ್ಟ ಕಾರಣ ಇದು
Kangana Ranaut: ಇತ್ತೀಚೆಗೆ ಕಂಗನಾ ಅವರ ವಿಡಿಯೋವೊಂದು ಇಂಟರ್ನೆಟ್‌ನಲ್ಲಿ ಹರಿದಾಡುತ್ತಿದ್ದು, ಅದರಲ್ಲಿ ಅವರು ಕುತ್ತಿಗೆಗೆ ಮಂಗಲಸೂತ್ರ ಮತ್ತು ಕೈಗಳಲ್ಲಿ ಹಸಿರು ಬಳೆಗಳನ್ನು ಧರಿಸಿ ಕಾಣಿಸಿಕೊಂಡಿದ್ದಾರೆ. ರಹಸ್ಯವಾಗಿ ಮದುವೆಯಾಗಿದ್ದಾರೆಯೇ? ಆ 'ಅದೃಷ್ಟವಂತ ವ್ಯಕ್ತಿ' ಯಾರು ಎಂಬ ಊಹಾಪೋಹಗಳು ಶುರುವಾಗಿದ್ದವು. ಈ ಎಲ್ಲ ಅಂತ ಕಂತೆಗಳಿಗೆ ಕಂಗನಾ ಈಗ ಫುಲ್ ಸ್ಟಾಪ್ ಇಟ್ಟಿದ್ದಾರೆ.
ಕಂಗನಾ ರಣಾವತ್ -
ಬಾಲಿವುಡ್ ನಟಿ ಮತ್ತು ರಾಜಕಾರಣಿ ಕಂಗನಾ ರಣಾವತ್ (Kangana Ranaut) ಹಸಿರು ಬಳೆಗಳು ಮತ್ತು ಮಂಗಳಸೂತ್ರ (mangalsutra) ಧರಿಸಿ ಕಾಣಿಸಿಕೊಂಡಿದ್ದು ವಿಡಿಯೋ ಭಾರಿ ವೈರಲ್ ಆಗಿತ್ತು. ರಹಸ್ಯವಾಗಿ ಮದುವೆಯಾಗಿದ್ದಾರೆಯೇ? (Marriage) ಆ 'ಅದೃಷ್ಟವಂತ ವ್ಯಕ್ತಿ' ಯಾರು ಎಂಬ ಊಹಾಪೋಹಗಳು ಶುರುವಾಗಿದ್ದವು. ಈ ಎಲ್ಲ ಅಂತ ಕಂತೆಗಳಿಗೆ ಕಂಗನಾ ಈಗ ಫುಲ್ ಸ್ಟಾಪ್ ಇಟ್ಟಿದ್ದಾರೆ.
ಕಂಗನಾ ಕೊಟ್ಟ ಸ್ಪಷ್ಟತೆ ಏನು?
ಕಂಗನಾ ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಗಳಲ್ಲಿ ವೀಡಿಯೊವನ್ನು ಪೋಸ್ಟ್ ಮಾಡಿದ್ದಾರೆ. ಪೋಸ್ಟ್‌ನಲ್ಲಿ "ನಾನು ಪ್ರತಿದಿನ ನಗರದಲ್ಲಿ ಮತ್ತು ಸುತ್ತಮುತ್ತ ಚಿತ್ರೀಕರಣ ಮಾಡುತ್ತಿದ್ದೇನೆ, ಯಾರೋ ಒಬ್ಬರು ಈ ಚಿತ್ರವನ್ನು ಕ್ಯಾರೆಕ್ಟರ್ ಮೇಕಪ್‌ನೊಂದಿಗೆ ಕ್ಲಿಕ್ ಮಾಡಿದ್ದಾರೆ ಮತ್ತು ಈಗ ನನಗೆ ತುಂಬಾ ಫೋನ್ ಕರೆಗಳು ಬರುತ್ತಿವೆ, ವಿವಾಹಿತ ಮಹಿಳೆಯ ಲುಕ್‌ನಲ್ಲಿ ಇದ್ದರೆ ದೊಡ್ಡ ವಿಷಯವೇನು? ನಟರು ಎಲ್ಲಾ ರೀತಿಯ ಪಾತ್ರಗಳನ್ನು ನಿರ್ವಹಿಸುತ್ತಾರೆ, ನಾನು ರಹಸ್ಯವಾಗಿ ಮದುವೆಯಾಗುವುದಿಲ್ಲ ಎಂದು ಭರವಸೆ ಅಂತೂ ನೀಡುತ್ತೇನೆ" ಎಂದು ಅವರು ಬರೆದಿದ್ದಾರೆ.
ಇದನ್ನೂ ಓದಿ: Land Lord Movie: ಕಿರುತೆರೆಗೆ ಬಂತು 'ಲ್ಯಾಂಡ್‌ಲಾರ್ಡ್; ದುನಿಯಾ ವಿಜಯ್, ರಚಿತಾ ರಾಮ್ ಸಿನಿಮಾ ಪ್ರಸಾರ ಯಾವಾಗಿನಿಂದ?
ವೈರಲ್ ಆಗಿರುವ ಅವರ ಈ ಸಾಂಪ್ರದಾಯಿಕ ಲುಕ್ ನಿಜ ಜೀವನದ್ದಲ್ಲ, ಬದಲಿಗೆ ಅವರ ಮುಂಬರುವ ಬಹುನಿರೀಕ್ಷಿತ ಚಿತ್ರ ‘ಕ್ವೀನ್ 2’ ಚಿತ್ರೀಕರಣದ ಸಂದರ್ಭದ್ದಾಗಿದೆ. ಈ ಚಿತ್ರಕ್ಕೆ ತಾತ್ಕಾಲಿಕವಾಗಿ ‘ಕ್ವೀನ್ ಫಾರೆವರ್’ ಎಂದು ಹೆಸರಿಡಲಾಗಿದ್ದು, ಕಂಗನಾ ಈಗಾಗಲೇ ಮುಂಬೈನಲ್ಲಿ ಇದರ ಶೂಟಿಂಗ್ ಆರಂಭಿಸಿದ್ದಾರೆ.
ಮೈಲಿಗಲ್ಲು ಸೃಷ್ಟಿಸಿದ್ದ ‘ಕ್ವೀನ್’:ಕಳೆದ 2013ರಲ್ಲಿ ವಿಕಾಸ್ ಬಹ್ಲ್ ನಿರ್ದೇಶನದಲ್ಲಿ ಮೂಡಿಬಂದಿದ್ದ ‘ಕ್ವೀನ್’ ಚಿತ್ರ ಬಾಲಿವುಡ್‌ನಲ್ಲಿ ದೊಡ್ಡ ಇತಿಹಾಸ ಸೃಷ್ಟಿಸಿತ್ತು.

ಕಂಗನಾ ಇತ್ತೀಚೆಗೆ ಚಲನಚಿತ್ರೋದ್ಯಮದಲ್ಲಿ 20 ವರ್ಷಗಳನ್ನು ಪೂರೈಸಿದರು, 18 ನೇ ವಯಸ್ಸಿನಲ್ಲಿ ಗ್ಯಾಂಗ್‌ಸ್ಟರ್ (2006) ಮೂಲಕ ಪಾದಾರ್ಪಣೆ ಮಾಡಿದರು. ಅವರು ಕೊನೆಯ ಬಾರಿಗೆ ಎಮರ್ಜೆನ್ಸಿ (2025) ನಲ್ಲಿ ಕಾಣಿಸಿಕೊಂಡರು, ಇದು ಮಣಿಕರ್ಣಿಕಾ (2019) ನಂತರ ಅವರ ಏಕವ್ಯಕ್ತಿ ನಿರ್ದೇಶನದ ಚೊಚ್ಚಲ ಚಿತ್ರವಾಗಿದೆ, ಇದಕ್ಕಾಗಿ ಅವರು ಕ್ರಿಶ್ ಜಾಗರ್ಲಮುಡಿ ಅವರೊಂದಿಗೆ ಕ್ರೆಡಿಟ್ ಹಂಚಿಕೊಂಡರು.
ಜೂನ್‌ನಲ್ಲಿ ‘ಭಾರತ್ ಭಾಗ್ಯ ವಿಧಾತಾ’ ಬಿಡುಗಡೆ:’ಕ್ವೀನ್ ೨’ ಮಾತ್ರವಲ್ಲದೆ ಕಂಗನಾ ಅವರ ಮತ್ತೊಂದು ಪ್ರಮುಖ ಚಿತ್ರ ‘ಭಾರತ್ ಭಾಗ್ಯ ವಿಧಾತಾ’ಬಿಡುಗಡೆಗೆ ಸಜ್ಜಾಗಿದೆ.
ಇದನ್ನೂ ಓದಿ: Drishyam 3: ಅಭಿಮಾನಿಗಳಿಗಾಗಿ ಭಾವನಾತ್ಮಕ ಪೋಸ್ಟ್ ಹಂಚಿಕೊಂಡ ಮೋಹನ್ ಲಾಲ್! ಥಿಯೇಟರ್‌ನಲ್ಲೇ ಕಣ್ಣೀರು
ಜೂನ್ 12 ರಂದು ಬಿಡುಗಡೆಯಾಗಲಿರುವ ಈ ಚಿತ್ರದಲ್ಲಿ ಗಿರಿಜಾ ಓಕ್, ಸ್ಮಿತಾ ತಾಂಬೆ, ಅಮೃತಾ ನಾಮದೇವ್, ಇಶಾ ಡೇ, ಪ್ರಿಯಾ ಬೆರ್ಡೆ, ಆಶಾ ಶೆಲಾರ್, ಸುಹಿತಾ ಥಟ್ಟೆ, ರಸಿಕಾ ಅಘಾಸೆ, ಆದಿತ್ಯ ಮಿಶ್ರಾ ಮತ್ತು ಜಾಹಿದ್ ಖಾನ್ ಕೂಡ ನಟಿಸಿದ್ದಾರೆ.