Kannada New Movie: ಕಮಲಶಿಲೆಯಲ್ಲಿ ಸೆಟ್ಟೇರಿತು ನಾಗರಾಜ್ ಸೋಮಯಾಜಿ ನಿರ್ದೇಶನದ 'ದೇವಿ ಮಹಾತ್ಮೆ'
Kannada New Movie: ಮರ್ಯಾದೆ ಪ್ರಶ್ನೆ ಸಿನಿಮಾ ಸಾರಥಿ ನಾಗರಾಜ್ ಸೋಮಯಾಜಿ ಹೊಸ ಪ್ರಯತ್ನ ದೇವಿ ಮಹಾತ್ಮೆ. ಫಸ್ಟ್ ಲುಕ್ ಮೂಲಕ ಕುತೂಹಲ ಹೆಚ್ಚಿಸಿರುವ ಈ ಚಿತ್ರ ಇಂದು ಸೆಟ್ಟೇರಿದೆ. ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನಲ್ಲಿನ ಕಮಲಶಿಲೆಯ ಶ್ರೀ ಬ್ರಾಹ್ಮಿ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಸಿನಿಮಾದ ಮುಹೂರ್ತ ನೆರವೇರಿದೆ.
ದೇವಿ ಮಹಾತ್ಮೆ ಸಿನಿಮಾ -
ಮರ್ಯಾದೆ ಪ್ರಶ್ನೆ (Maryade Prashne) ಸಿನಿಮಾ ಸಾರಥಿ ನಾಗರಾಜ್ ಸೋಮಯಾಜಿ (nagaraj somayaji) ಹೊಸ ಪ್ರಯತ್ನ ದೇವಿ ಮಹಾತ್ಮೆ. ಫಸ್ಟ್ ಲುಕ್ ಮೂಲಕ ಕುತೂಹಲ ಹೆಚ್ಚಿಸಿರುವ ಈ ಚಿತ್ರ ಇಂದು ಸೆಟ್ಟೇರಿದೆ. ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನಲ್ಲಿನ ಕಮಲಶಿಲೆಯ (Kamalashile) ಶ್ರೀ ಬ್ರಾಹ್ಮಿ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಸಿನಿಮಾದ ಮುಹೂರ್ತ ನೆರವೇರಿದೆ.
ಸಿನಿಮಾ ಶೂಟಿಂಗ್ ಇಂದಿನಿಂದ ಶುರು
ಈ ಸಂದರ್ಭದಲ್ಲಿ ದೇವಿ ಮಹಾತ್ಮೆ ಚಿತ್ರದ ನಿರ್ಮಾಪಕ ಗಾಂಧಿರಾಜನ್, ಅನುವಂಶಿಕ ಧರ್ಮದರ್ಶಿಗಳಾದ ಶ್ರೀಯುತ ಸಚ್ಚಿದಾನಂದ ಚಾತ್ರರು, ನಿರ್ದೇಶಕ ನಾಗರಾಜ್ ಸೋಮಯಾಜಿ, ಚಿತ್ರದ ಛಾಯಾಗ್ರಾಹಕರಾದ ಎಸ್ ಕೆ ರಾವ್ ಭಾಗಿಯಾಗಿದ್ದರು.
ಇದನ್ನೂ ಓದಿ: Amruthadhaare Serial: ಮಲ್ಲಿ ಬದುಕಲ್ಲಿ ಮತ್ತೆ ಅರಳುತಿದೆ ಅನುರಾಗ; ಸುನಿಲ್ ಮುಖವಾಡ ಕಳಚಿಬಿದ್ರೆ?
ದೇವಿ ಮಹಾತ್ಮೆ ಚಿತ್ರಕ್ಕೆ ಒಂದೊಳ್ಳೆ ತಂಡ ರೆಡಿಯಾಗಿದೆ. ನಾಗರಾಜ ಸೋಮಯಾಜಿ ಈ ಚಿತ್ರಕ್ಕೆ ಕಥೆ ಬರೆದಿದ್ದಾರೆ. ಬರವಣಿಗೆಯಲ್ಲಿ ಅರವಿಂದ್ ಕುಪ್ಳೀಕರ್, ಭಾಸ್ಕರ್ ಬಂಗೇರ ಹಾಗೂ ಗುರು ಆರ್ಯ ಹಾಗೂ ವಾದಿರಾಜ ಶೆಟ್ಟಿ ಸಾಥ್ ಕೊಟ್ಟಿದ್ದಾರೆ. ಚಿತ್ರಕ್ಕೆ ಎಸ್.ಕೆ ರಾವ್ ಕ್ಯಾಮರಾವರ್ಕ್ ಮಾಡುತ್ತಿದ್ದಾರೆ. ಪ್ರಸಾದ್ ಕೆ ಶೆಟ್ಟಿ ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ.

ಕಾಮಿಡಿ ಥ್ರಿಲ್ಲರ್ ಕಂಟೆಂಟ್ ಹೊಂದಿರುವ ದೇವಿ ಮಹಾತ್ಮೆ ಸಿನಿಮಾ ಶೂಟಿಂಗ್ ಇಂದಿನಿಂದ ಶುರುವಾಗಿದೆ. ಕುಂದಾಪುರದ ಸುತ್ತಮುತ್ತ ಚಿತ್ರೀಕರಣ ಮಾಡಲಾಗುತ್ತಿದ್ದು, ಅತಿ ಹೆಚ್ಚು ತಾರಾಬಳಗ ಚಿತ್ರದಲ್ಲಿ ಕೆಲಸ ಮಾಡಲಿದೆ.
ಇದನ್ನೂ ಓದಿ: Akhila Pajimannu: ಅಖಿಲಾ ಪಜಿಮಣ್ಣು ಡಿವೋರ್ಸ್‌ಗೆ ಕಾರಣ ಏನು? ಸತ್ಯ ಬಿಚ್ಚಿಟ್ಟ ಗಾಯಕಿ
ಚಿತ್ರದ ಪೋಸ್ಟರ್ ಈ ಹಿಂದೆ ಔಟ್ ಆಗಿತ್ತು. ಚಿತ್ರದ ಪೋಸ್ಟರ್ ಸೀದಾ ಇತ್ತು. ಆದರೆ, ಕನ್ನಡ ಟೈಟಲ್ ಉಲ್ಟಾ ಇತ್ತು. ಇದರೊಟ್ಟಿಗೆ ಇದು ಗಮನ ಸೆಳೆದಿತ್ತು.
ಇದರಲ್ಲಿ ಹಾಸ್ಯ ಇದೆ. ಥ್ರಿಲ್ಲರ್ ಇದೆ. ಇನ್ನುಳಿದಂತೆ ಡೈರೆಕ್ಟರ್ ನಾಗರಾಜ ಸೋಮಯಾಜಿ ಈ ಹಿಂದಿನ ತಮ್ಮ ಮರ್ಯಾದೆ ಪ್ರಶ್ನೆ ಚಿತ್ರದಲ್ಲಿ ಒಳ್ಳೆ ಕಥೆಯನ್ನೆ ಹೇಳಿದ್ದರು. ಹಾಗೇನೆ ಈ ಚಿತ್ರದಲ್ಲಿ ಕಾಮಿಡಿ ಥ್ರಿಲ್ಲರ್ ಕಂಟೆಂಟ್ ಹೇಗೆ ಹೇಳಲಿದ್ದಾರೆ.