Akhila Pajimannu: ಅಖಿಲಾ ಪಜಿಮಣ್ಣು ಡಿವೋರ್ಸ್‌ಗೆ ಕಾರಣ ಏನು? ಸತ್ಯ ಬಿಚ್ಚಿಟ್ಟ ಗಾಯಕಿ
Akhila Pajimannu divorce: ಅಖಿಲಾ ಪಜಿಮಣ್ಣು 2022ರಲ್ಲಿ ಧನಂಜಯ್ ಶರ್ಮಾ ಜೊತೆ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದರು. ವೃತ್ತಿಯಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಆಗಿ ಅಮೆರಿಕದಲ್ಲಿ ವಾಸವಿದ್ದ ಧನಂಜಯ್ ಶರ್ಮ ಅವರನ್ನು ಮೂರು ವರ್ಷಗಳ ಹಿಂದೆ ಮದುವೆಯಾಗಿದ್ದರು. ಈ ಸಂಬಂಧ ಮೂರೇ ವರ್ಷಕ್ಕೆ ಮುರಿದುಬಿದ್ದಿತ್ತು. ಕಳೆದ ವರ್ಷ ಪುತ್ತೂರು ನ್ಯಾಯಾಲಯದಲ್ಲಿ ಅಖಿಲಾ ಮತ್ತು ಧನಂಜಯ್ ಶರ್ಮಾ ಡಿವೋರ್ಸ್‌ಗೆ ಅರ್ಜಿ ಸಲ್ಲಿಸಿದರು. ವಿಚ್ಚೇದನ ಪಡೆದರು.
ಅಖಿಲಾ ಪಜಿಮಣ್ಣು -
ಕನ್ನಡ ಕೋಗಿಲೆ ಸಿಂಗಿಂಗ್ ರಿಯಾಲಿಟಿ ಶೋ ಮೂಲಕ ಜನಪ್ರಿಯತೆ ಪಡೆದ ಗಾಯಕಿ ಅಖಿಲಾ ಪಜಿಮಣ್ಣು (akhila pajimannu) 2022ರಲ್ಲಿ ಧನಂಜಯ್ ಶರ್ಮಾ ಜೊತೆ ದಾಂಪತ್ಯ ಜೀವನಕ್ಕೆ (Marriage) ಕಾಲಿರಿಸಿದ್ದರು. ವೃತ್ತಿಯಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಆಗಿ ಅಮೆರಿಕದಲ್ಲಿ ವಾಸವಿದ್ದ ಧನಂಜಯ್ ಶರ್ಮ ಅವರನ್ನು ಮೂರು ವರ್ಷಗಳ ಹಿಂದೆ ಮದುವೆಯಾಗಿದ್ದರು. ಈ ಸಂಬಂಧ ಮೂರೇ ವರ್ಷಕ್ಕೆ ಮುರಿದುಬಿದ್ದಿತ್ತು. ಕಳೆದ ವರ್ಷ ಪುತ್ತೂರು (Putturu) ನ್ಯಾಯಾಲಯದಲ್ಲಿ ಅಖಿಲಾ ಮತ್ತು ಧನಂಜಯ್ ಶರ್ಮಾ ಡಿವೋರ್ಸ್‌ಗೆ ಅರ್ಜಿ ಸಲ್ಲಿಸಿದರು. ವಿಚ್ಚೇದನ ಪಡೆದರು.
ಅಖಿಲಾ ಪಜಿಮಣ್ಣು ಉತ್ತರ
ಅಖಿಲಾ ವಿಚ್ಛೇದನದ ವಿಚಾರ ಜಗಜ್ಜಾಹೀರಾಗುತ್ತಿದ್ದಂತೆಯೇ ಹಲವರು ಹಲವು ರೀತಿಯಲ್ಲಿ ಮಾತನಾಡಲು ಶುರು ಮಾಡಿದ್ದರು. ಈ ಎಲ್ಲ ಅಂತೆ-ಕಂತೆಗಳಿಗೆ ಖುದ್ದು ಅಖಿಲಾ ಪಜಿಮಣ್ಣು ಉತ್ತರ ನೀಡಿದ್ದಾರೆ.
ಇದನ್ನೂ ಓದಿ: Rashmika-Vijay Wedding: ಇಂದು ರಶ್ಮಿಕಾ-ವಿಜಯ್ ಅದ್ಧೂರಿ ವಿವಾಹ : ಬೆಳಗ್ಗೆ 8ಕ್ಕೆ ಮುಹೂರ್ತ
ಸಂದರ್ಶನವೊಂದರಲ್ಲಿ ಮಾತನಾಡಿ, ʻಡಿವೋರ್ಸ್‌ವನ್ನು ಸಡನ್ ಆಗಿ ತೆಗೆದುಕೊಂಡ ನಿರ್ಧಾರ ಅಲ್ಲ. ವಿಚ್ಚೇದನದ ವಿಚಾರ ತಿಳಿಯಬಾರದೆಂದು ನಮಗೂ ಇತ್ತು. ಆದರೆ ಅದೇಗೋ ಸುದ್ದಿ ವೈರಲ್ ಆಯ್ತು. ನನ್ನ ಗಂಡ ಬಿಡಲಿಲ್ಲ, ನಿರೂಪಣೆ ಮಾಡಲು ಅವಕಾಶ ಕೊಡಲಿಲ್ಲ, ಈ ಕಾರಣಕ್ಕೆ ನಾನು ಡಿವೋರ್ಸ್ ಪಡೆದೆ ಎಂದೆಲ್ಲಾ ಸುದ್ದಿಯಾಯ್ತು. ಅದೆಲ್ಲ ಸುಳ್ಳು. ನಾವಿಬ್ಬರು ಒಂದೂವರೆ ವರ್ಷದಿಂದ ಹೊಂದಾಣಿಕೆ ಮಾಡಿಕೊಂಡು ಬದುಕುವ ಪ್ರಯತ್ನ ಮಾಡಿದೆವು. ಆದರೆ ಅದು ಸಾಧ್ಯವಾಗಿಲ್ಲ.
ಇಬ್ಬರ ನಡುವೆ ಬಿರುಕು ಮೂಡಿದ ನಂತರ ನಾನು ಅಮೆರಿಕಾದಿಂದ ಮತ್ತೆ ಊರಿಗೆ ಬಂದೆ ಎಂದು ಹೇಳಿರುವ ಅಖಿಲಾ ಪಜಿಮಣ್ಣು ಮೂರು ತಿಂಗಳು ಮತ್ತೆ ಒಂದಾಗುವ ಪ್ರಯತ್ನ ಮಾಡಿದೆವು, ಅದಕ್ಕಾಗಿ ಶ್ರಮ ಕೂಡ ಹಾಕಿದೆವು ಆದರೆ ಅದು ಕೂಡ ಸಾಧ್ಯವಾಗಲಿಲ್ಲ, ಹೀಗಾಗಿ ದೂರವಾಗುವ ನಿರ್ಧಾರವನ್ನು ಮಾಡಿ ಕೊನೆಗೆ ಡಿವೋರ್ಸ್‌ಗೆ ಅರ್ಜಿ ಸಲ್ಲಿಸಿದೆವು ಎಂದು ಹೇಳಿದ್ದಾರೆ. ನಾವು ಪಟ್ಟಿರುವ ಕಷ್ಟ ದೊಡ್ಡದು ನಾವು ಅನುಭವಿಸಿದ ನೋವು ನಮಗೆ ಮಾತ್ರ ತಿಳಿದಿದೆ ಎಂದು ಹೇಳಿದ್ದಾರೆ.
ಇಬ್ಬರದ್ದೂ ಅರೇಂಜ್ಡ್ ಮ್ಯಾರೇಜ್
ಅಖಿಲಾ ಪಜಿಮಣ್ಣು ಹಾಗೂ ಧನಂಜಯ್ ಶರ್ಮಾ ಇಬ್ಬರದ್ದೂ ಅರೇಂಜ್ಡ್ ಮ್ಯಾರೇಜ್. ಎರಡು ಕುಟುಂಬಗಳ ಸಮ್ಮುಖದಲ್ಲಿ ಜೋಡಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿತ್ತು. ಎಲ್ಲವೂ ಖುಷಿ ಖುಷಿಯಾಗಿಯೇ ಇದ್ದ ಇಬ್ಬರ ದಾಂಪತ್ಯದಲ್ಲಿ ಅಂತಹದ್ದೇನಾಯ್ತೋ ಗೊತ್ತಿಲ್ಲ. ಬೇರೆಯಾಗುವುದಕ್ಕೆ ಇಬ್ಬರೂ ನಿರ್ಧರಿಸಿತು.
ಸಾಫ್ಟ್‌ವೇರ್ ಎಂಜಿನಿಯರ್ ಧನಂಜಯ್ ಶರ್ಮಾ ವಿದೇಶದಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಹೀಗಾಗಿ ಮದುವೆಯಾದ್ಮೇಲೆ ಈ ದಂಪತಿ ಅಮೆರಿಕಕ್ಕೆ ಶಿಫ್ಟ್ ಆಗಿದ್ದರು. ಕ್ಯಾಲಿಫೋರ್ನಿಯಾದಲ್ಲಿ ದಂಪತಿ ವಾಸವಾಗಿದ್ದರು. ಆದರೆ, ಮದುವೆಯಾದ ಮೂರೇ ವರ್ಷಕ್ಕೆ ಅಖಿಲಾ ಪಜಿಮಣ್ಣು - ಧನಂಜಯ್ ಶರ್ಮಾ ದಾಂಪತ್ಯ ಮುರಿದುಬಿತ್ತು.
ಇದನ್ನೂ ಓದಿ: Rashmika Mandanna: ರಶ್ಮಿಕಾ-ವಿಜಯ್ ದೇವರಕೊಂಡ ಅರಿಶಿಣ ಶಾಸ್ತ್ರದ ಫೋಟೋಗಳಿವು!
ಪುತ್ತೂರಿನವರಾದ ಅಖಿಲಾ, 2011 ರಲ್ಲಿ ಸರಿಗಮಪ ಲಿಟಲ್ ಲಿಲ್ ಚಾಂಪ್ಸ್‌ನಲ್ಲಿ ಕಾಣಿಸಿಕೊಂಡ ನಂತರ ಖ್ಯಾತಿಗೆ ಏರಿದ್ದರು. ಇದರ ವಿಜೇತರಾಗಿದ್ದ ಆಕೆ, 2019 ರಲ್ಲಿ, ಅವರು ಕನ್ನಡ ಕೋಗಿಲೆ ಸೀಸನ್ 1 ರಲ್ಲಿ ಭಾಗವಹಿಸಿದರು ಮತ್ತು ಅಲ್ಲಿ 1 ನೇ ರನ್ನರ್ ಅಪ್ ಆಗಿದ್ದರು.