ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Kavya Gowda: ಕಾವ್ಯ ಮೇಲೆ ಕುಟುಂಬದವರಿಂದಲೇ ಹಲ್ಲೆ; ಇಲ್ಲಿದೆ ನಟಿಯ ಫಸ್ಟ್‌ ರಿಯಾಕ್ಷನ್‌!

Kavya Gowda: 'ರಾಧಾ ರಮಣ' ಧಾರಾವಾಹಿ ಖ್ಯಾತಿಯ ನಟಿ ಕಾವ್ಯ ಗೌಡ ಮತ್ತು ಅವರ ಪತಿ ಸೋಮಶೇಖರ್ ಮೇಲೆ ಕುಟುಂಬದವರಿಂದಲೇ ಹಲ್ಲೆ ನಡೆದಿರುವ ಘಟನೆ ಇತ್ತೀಚೆಗೆ (ಜ. 26 ರಂದು) ನಡೆದಿದೆ. ಕಾವ್ಯ ಗೌಡ ಪತಿ ಸೋಮಶೇಖರ್ಅ ವರ ಸಹೋದರ ನಂದೀಶ್, ಅವರ ಪತ್ನಿ ಪ್ರೇಮಾ, ಪ್ರೇಮಾ ಅವರ ತಂದೆ ರವಿಕುಮಾರ್ ಅವರುಗಳು ಈ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ನಟಿ ಕಾವ್ಯಾಗೆ ಅತ್ಯಾಚಾರ ಬೆದರಿಕೆ ಹಾಕಲಾಗಿದೆ. ಈ ಬಗ್ಗೆ ಮಾಧ್ಯಮದ ಮುಂದೆ ಮಾತನಾಡಿದ್ದಾರೆ ನಟಿ ಕಾವ್ಯ.

ಕಾವ್ಯ ಮೇಲೆ ಕುಟುಂಬದವರಿಂದಲೇ ಹಲ್ಲೆ; ಇಲ್ಲಿದೆ ನಟಿಯ ಫಸ್ಟ್‌ ರಿಯಾಕ್ಷನ್‌!

ಕಾವ್ಯ ಗೌಡ -

Yashaswi Devadiga
Yashaswi Devadiga Jan 27, 2026 6:24 PM

'ರಾಧಾ ರಮಣ' (Radha Ramana) ಧಾರಾವಾಹಿ ಖ್ಯಾತಿಯ ನಟಿ ಕಾವ್ಯ ಗೌಡ (Kavya Gowda) ಮತ್ತು ಅವರ ಪತಿ ಸೋಮಶೇಖರ್ ಮೇಲೆ ಕುಟುಂಬದವರಿಂದಲೇ ಹಲ್ಲೆ ನಡೆದಿರುವ ಘಟನೆ ಇತ್ತೀಚೆಗೆ (ಜ. 26 ರಂದು) ನಡೆದಿದೆ. ಕಾವ್ಯ ಗೌಡ ಪತಿ ಸೋಮಶೇಖರ್ (Somashekhar) ಅವರ ಸಹೋದರ ನಂದೀಶ್, ಅವರ ಪತ್ನಿ ಪ್ರೇಮಾ, ಪ್ರೇಮಾ ಅವರ ತಂದೆ ರವಿಕುಮಾರ್ (ravikumar) ಅವರುಗಳು ಈ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ನಟಿ ಕಾವ್ಯಾಗೆ ಅತ್ಯಾಚಾರ ಬೆದರಿಕೆ ಹಾಕಲಾಗಿದೆ. ಈ ಬಗ್ಗೆ ಮಾಧ್ಯಮದ (Media) ಮುಂದೆ ಮಾತನಾಡಿದ್ದಾರೆ ನಟಿ ಕಾವ್ಯ.

ಇದನ್ನೂ ಓದಿ: Bigg Boss Kannada 12: ʻನಿನ್ನಮ್ಮಂಗೆʼ ಹೇಳು ಅನ್ನೋ ರೇಂಜಿಗೆ ಗಲಾಟೆ! ಅಶ್ವಿನಿ ಗೌಡ-ಕಾವ್ಯ ನಡುವೆ ವಾರ್‌

ಪಬ್ಲಿಕ್‌ಗೆ ಈ ಕಾರಣಕ್ಕೆ ಬಂದಿಲ್ಲ

ನನಗೆ ಒಂದು ಆಗಲೇ ಹೊಡೆದಿದ್ದರು. ನನ್ನ ಮಾವನ ಹೆಸರು ಹಾಳು ಮಾಡಬಾರದೆಂದು ನಾನು ಪಬ್ಲಿಕ್‌ಗೆ ಬಂದಿಲ್ಲ. ನನ್ನ ಗಂಡನಿಗೆ ಹಿಂದೆಯಿಂದ ಚಾಕು ಚುಚ್ಚಿದಾಗ ಭಯ ಆಗತ್ತೆ. ನನಗೆ ಅತ್ಯಾಚಾರ ಮಾಡುವುದಾಗಿ ನೇರವಾಗಿ ಬೆದರಿಕೆ ಹಾಕಲಾಗಿದೆ. ಹೀಗಿರುವಾಗ ನಾನು ಕಾನೂನಿನ ಮೊರೆ ಹೋಗಲೇ ಬೇಕಾಯ್ತು. ನನ್ನ ಮೇಲೆ ಹಲ್ಲೆ ಮಾಡಿದ್ದಾರೆ, ಯಾರು ಮಾಡಿದ್ದಾರೋ ಅವರು ಅನುಭವಿಸುತ್ತಾರೆ. ನನಗೆ ಎಲ್ಲರೂ ಅಟ್ಯಾಕ್‌ ಮಾಡಿದರು. ನನ್ನ ಪತಿ ICU ನಲ್ಲಿ ಇದ್ದಾರೆ.

ರೇಪ್ ಬೆದರಿಕೆ

ಕಾವ್ಯಾ ಮೇಲೆ ಸಂಬಂಧಿ ಪ್ರೇಮಾ ಅವರು ಒಂದಷ್ಟು ಆರೋಪಗಳನ್ನು ಮಾಡಿದ್ದಾರೆ. ‘ಕಾವ್ಯಾ ಪತಿ ಸೋಮಶೇಖರ್ ಅವರು ನನ್ನ ತಂಗಿ ಮೇಲೆ ಹಲ್ಲೆ ಮಾಡಿದ್ದಾರೆ. ಕೊಲೆ ಬೆದರಿಕೆ (Death Threat) ಮತ್ತು ರೇಪ್ ಬೆದರಿಕೆ ಹಾಕಿದ್ದಾರೆ. ಈಗ ಅವರು ನಮ್ಮ ಮೇಲೆ ಆರೋಪ ಮಾಡುತ್ತಿದ್ದಾರೆ. ಕಾವ್ಯಾ ಗೌಡ ಅವರು ನಮ್ಮನ್ನು ಮನೆಯಿಂದ ಹೊರಗೆ ಹಾಕಬೇಕು ಎಂಬ ಕಾರಣಕ್ಕೆ ಈ ರೀತಿ ಕಿರಿಕ್ ಮಾಡುತ್ತಿದ್ದಾರೆ’ ಎಂದು ಪ್ರೇಮಾ ಅವರು ಹೇಳಿದ್ದಾರೆ.

ಎಫ್‌ಐಆರ್‌ನಲ್ಲಿ ಏನಿದೆ?

ಪಿರ್ಯಾದುದಾರರಾದ ಶ್ರೀಮತಿ ಭವ್ಯಾ ರಾಣಿ ಬಿನ್ ವೆಂಕಟೇಶ 36 ವರ್ಷ ಕೆ ಆರ್ ರಸ್ತೆ ಶಾಸ್ತ್ರೀ ನಗರ ಬೆಂಗಳೂರು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ನನ್ನ ತಂಗಿ ಕಾವ್ಯ ಗೌಡ. ಈಕೆಯನ್ನು ಎನ್ ಆರ್ ಐ ಲೇಔಟ್ ನಿವಾಸಿ ಸೋಮಶೇಖರ ಎಂಬುವರಿಗೆ ಕೊಟ್ಟು ಮದುವೆ ಮಾಡಿದ್ದು.‌

ಇದನ್ನೂ ಓದಿ: ʻದಿ ಡೆವಿಲ್‌ʼ ಚಿತ್ರದಲ್ಲಿ ನಟಿಸಿದ್ದರ ಬಗ್ಗೆ ಖುಷಿಯಾಗಿರುವ ಗಿಲ್ಲಿ ನಟ; ʻಬಿಗ್‌ ಬಾಸ್‌ʼ ಮನೆಯ ಸ್ಪರ್ಧಿಗಳ ಜೊತೆ ಸಂತಸ ಹಂಚಿಕೊಂಡಿದ್ದ ʻಮಾತಿನ ಮಲ್ಲʼ

ಈ ದಿನ ಸಂಜೆ ಸುಮಾರು 6.30 ಗಂಟೆಯಲ್ಲಿ ನನ್ನ ತಂಗಿ ಕರೆ ಮಾಡಿ, ಶ್ರೀಮತಿ ಪ್ರೇಮಾ, ನಂದೀಶ, ಪ್ರೇಮಾರವರ ತಂದೆ ನನ್ನ ಮೇಲೆ ಗಲಾಟೆಯನ್ನು ಮಾಡಿ, ಕೆಟ್ಟ ಪದಗಳಿಂದ ಬೈಯು ಬೆದರಿಕೆ ಹಾಕುತ್ತಿದ್ದಾರೆ ಎಂದು ತಿಳಿಸಿದ್ದು, ಕೂಡಲೇ ಮನೆಯಿಂದ ಹೊರಟಿದ್ದು, ಮಾರ್ಗ ಮಧ್ಯೆ ನನ್ನ ತಂಗಿ ಹಲವಾರು ಬಾರಿ ಕರೆ ಮಾಡಿ ಮೇಲ್ಕಂಡವರು ತನಗೆ ಮತ್ತು ತನ್ನ ಗಂಡ ಸೋಮಶೇಖರವರಿಗೆ ಹೊಡೆಯುತ್ತಿದ್ದಾರೆ ಎಂದು ಮತ್ತು ಚಾಕುವಿನಿಂದ ತಿವಿಯಲು ಬಂದಿರುತ್ತಾರೆಂದು ತಿಳಿಸುತ್ತಿದ್ದರು.