ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Kirtan Nadagouda Son: ಲಿಫ್ಟ್‌ನಲ್ಲಿ ಸಿಲುಕಿ KGF ಸಹ - ನಿರ್ದೇಶಕ ಕೀರ್ತನ್ ನಾಡಗೌಡ ಮಗ ಸಾವು ; ಪವನ್‌ ಕಲ್ಯಾಣ್‌ ಟ್ವೀಟ್‌

Pawan Kalyan: ಕೀರ್ತನ್‌ ನಾಡಗೌಡ ಮತ್ತು ಅವರ ಪತ್ನಿ ಸಮೃದ್ದಿ ಪಟೇಲ್‌ ಅವರ ಏಕೈಕ ಪುತ್ರ ನಾಲ್ಕೂವರೆ ವರ್ಷದ ಚಿರಂಜೀವಿ ಸೋನಾರ್ಷ್ ಕೆ. ನಾಡಗೌಡ ಕಳೆದುಕೊಂಡು ಕುಟುಂಬ ತೀವ್ರ ದುಃಖದಲ್ಲಿದೆ. ಈ ದುರಂತಕ್ಕೆ ಚಿತ್ರರಂಗದ ಹಲವು ಪ್ರಮುಖರು ಮತ್ತು ರಾಜಕೀಯ ವ್ಯಕ್ತಿಗಳು ಸಂತಾಪ ಸೂಚಿಸಿದ್ದಾರೆ. ಆಂಧ್ರಪ್ರದೇಶ ಉಪಮುಖ್ಯಮಂತ್ರಿ ಪವನ್‌ ಕಲ್ಯಾಣ್‌ ಅವರು ಸೋಶಿಯಲ್‌ ಮೀಡಿಯಾದಲ್ಲಿ ಸಂತಾಪ ಸೂಚಿಸಿದ್ದಾರೆ.

ಲಿಫ್ಟ್‌ನಲ್ಲಿ ಸಿಲುಕಿ KGF ಸಹ - ನಿರ್ದೇಶಕ ಕೀರ್ತನ್ ನಾಡಗೌಡ ಮಗ ಸಾವು

ಕೀರ್ತನ್ ನಾಡ ಗೌಡ ಮಗ -

Yashaswi Devadiga
Yashaswi Devadiga Dec 16, 2025 8:07 PM

ಕೆಜಿಎಫ್​ ಚಾಪ್ಟರ್​ 2 (KGF Chapter) ಸಹ-ನಿರ್ದೇಶಕರಾದ ಕೀರ್ತನ್ ನಾಡ ಗೌಡ (Kirtan Nadagouda ) ಅವರ ನಾಲ್ಕು ವರ್ಷದ ಪುತ್ರ ಆಕಸ್ಮಿಕವಾಗಿ ಲಿಫ್ಟ್‌ನಲ್ಲಿ ಸಿಲುಕಿ ಮತಪಟ್ಟಿದ್ದಾನೆ. ಕೀರ್ತನ್‌ ನಾಡಗೌಡ ಮತ್ತು ಅವರ ಪತ್ನಿ ಸಮೃದ್ದಿ ಪಟೇಲ್‌ (samriddhi patel) ಅವರ ಏಕೈಕ ಪುತ್ರ ನಾಲ್ಕೂವರೆ ವರ್ಷದ ಚಿರಂಜೀವಿ ಸೋನಾರ್ಷ್ ಕೆ. ನಾಡಗೌಡ ಕಳೆದುಕೊಂಡು ಕುಟುಂಬ ತೀವ್ರ ದುಃಖದಲ್ಲಿದೆ. ಈ ದುರಂತಕ್ಕೆ ಚಿತ್ರರಂಗದ (Cinema) ಹಲವು ಪ್ರಮುಖರು ಮತ್ತು ರಾಜಕೀಯ ವ್ಯಕ್ತಿಗಳು ಸಂತಾಪ ಸೂಚಿಸಿದ್ದಾರೆ. ಆಂಧ್ರಪ್ರದೇಶ ಉಪಮುಖ್ಯಮಂತ್ರಿ ಪವನ್‌ ಕಲ್ಯಾಣ್‌ (Pawan Kalyan) ಅವರು ಸೋಶಿಯಲ್‌ ಮೀಡಿಯಾದಲ್ಲಿ ಸಂತಾಪ ಸೂಚಿಸಿದ್ದಾರೆ.

ಪವನ್‌ ಕಲ್ಯಾಣ್‌ ಟ್ವೀಟ್‌

ನಿರ್ದೇಶಕ ಕೀರ್ತನ್ ನಾಡಗೌಡರ ಮಗನ ದುರಂತ ಸಾವು ಹೃದಯವಿದ್ರಾವಕ. ತೆಲುಗು ಮತ್ತು ಕನ್ನಡದಲ್ಲಿ ನಿರ್ದೇಶಕರಾಗಿ ಪದಾರ್ಪಣೆ ಮಾಡಿರುವ ಕೀರ್ತನ್ ನಾಡಗೌಡರ ಕುಟುಂಬಕ್ಕೆ ಸಂಭವಿಸಿದ ದುರಂತವು ಅವರನ್ನು ತೀವ್ರ ದುಃಖಿತರನ್ನಾಗಿ ಮಾಡಿದೆ. ಕೀರ್ತನ್ ಮತ್ತು ಶ್ರೀಮತಿ ಸಮೃದ್ಧಿ ಪಟೇಲ್ ಅವರ ಪುತ್ರ ಚಿರಂಜೀವಿ ಸೋನಾರ್ಶ್ ಕೆ.ನಾಡಗೌಡ ನಿಧನರಾದರು.

ಲಿಫ್ಟ್‌ನಲ್ಲಿ ಸಿಲುಕಿಕೊಂಡಿದ್ದ ನಾಲ್ಕೂವರೆ ವರ್ಷದ ಸೋನಾರ್ಶ್‌ನ ನಷ್ಟದ ಬಗ್ಗೆ ತಿಳಿದು ನನಗೆ ತುಂಬಾ ದುಃಖವಾಯಿತು. ಕೀರ್ತನ್ ಮತ್ತು ಶ್ರೀಮತಿ ಸಮೃದ್ಧಿ ಅವರಿಗೆ ನನ್ನ ಆಳವಾದ ಸಂತಾಪವನ್ನು ವ್ಯಕ್ತಪಡಿಸುತ್ತೇನೆ. ಮಗನನ್ನು ಕಳೆದುಕೊಂಡ ದುಃಖವನ್ನು ಹೋಗಲಾಡಿಸುವ ಧೈರ್ಯವನ್ನು ಆ ದಂಪತಿ ನೀಡಲಿ ಎಂದು ನಾನು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: Robin Kaye: ಅಮೆರಿಕನ್‌ ಐಡಲ್ ರಿಯಾಲಿಟ್‌ ಶೋ ಖ್ಯಾತಿಯ ರಾಬಿನ್ ಕೇಯ್ ದಂಪತಿ ನಿಗೂಢ ಸಾವು-ಕೊಲೆ ಶಂಕೆ!



ಇದನ್ನೂ ಓದಿ: Drone Attack: ಸುಡಾನ್‌ನ ಡಾರ್‌ಫರ್‌ ಆಸ್ಪತ್ರೆ ಮೇಲೆ ಡ್ರೋನ್‌ ದಾಳಿ;30 ಸಾವು-ಹಲವರಿಗೆ ಗಂಭೀರ ಗಾಯ!

ಕೀರ್ತನ್ ನಾಡಗೌಡ ಕನ್ನಡ ಚಿತ್ರರಂಗದಲ್ಲಿ ಹಲವು ಚಿತ್ರಗಳಿಗೆ ನಿರ್ದೇಶನ ವಿಭಾಗದಲ್ಲಿ ಕೆಲಸ ಮಾಡಿದ್ದಾರೆ. ಪ್ಯಾನ್ ಇಂಡಿಯಾ ದಾಖಲೆ ಬರೆದ ಕೆಜಿಎಫ್ ಚಿತ್ರಕ್ಕೆ ಎರಡನೇ ಸಹ-ನಿರ್ದೇಶಕರಾಗಿಯೂ ಕೆಲಸ ಮಾಡಿದ್ದಾರೆ., ಮೈತ್ರಿ ಮೂವಿ ಮೇಕರ್ಸ್‌ ಬ್ಯಾನರ್‌ನಲ್ಲಿ ಪ್ರಶಾಂತ್‌ ನೀಲ್‌ ಅವರೊಂದಿಗೆ ಹಾರರ್‌ ಚಿತ್ರವೊಂದನ್ನ ನಿರ್ದೇಶಿಸುತ್ತಿದ್ದಾರೆ. ಈ ಸಿನಿಮಾದ ಶೂಟಿಂಗ್‌ ತೆಲುಗು ಮತ್ತು ಕನ್ನಡ ಭಾಷೆಗಳಲ್ಲಿ ನಡೆಯುತ್ತಿದೆ.