ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ʻಮಾರ್ಕ್‌ʼ ಸಿನಿಮಾ ತೆರೆಕಂಡ ಬಳಿಕ ಸುದೀಪ್ ಮೊದಲ ಪ್ರತಿಕ್ರಿಯೆ; ʻನಿಮ್ಮ ಪ್ರೀತಿಯೇ ನಮಗೆ ಅತಿದೊಡ್ಡ ಪ್ರಶಸ್ತಿʼ ಎಂದ ಕಿಚ್ಚ

Kiccha Sudeep: 'ಮಾರ್ಕ್' ಸಿನಿಮಾ ಡಿಸೆಂಬರ್ 25ರಂದು ತೆರೆಕಂಡು ಭರ್ಜರಿ ಓಪನಿಂಗ್ ಪಡೆದಿದೆ. ಚಿತ್ರಕ್ಕೆ ಸಿಗುತ್ತಿರುವ ಪ್ರೀತಿ ಮತ್ತು ಚಿತ್ರಮಂದಿರಗಳಲ್ಲಿ ಅಭಿಮಾನಿಗಳ ಸಂಭ್ರಮ ಕಂಡು ಸುದೀಪ್ ಟ್ವೀಟ್‌ ಮಾಡಿದ್ದಾರೆ. ಈ ಸಿನಿಮಾವನ್ನು ಗೆಲ್ಲಿಸಿದ ಪ್ರೇಕ್ಷಕರಿಗೆ ಧನ್ಯವಾದ ಅರ್ಪಿಸಿದ್ದಾರೆ.

'ಮಾರ್ಕ್' ರಿಲೀಸ್: 'ನಿಮ್ಮ ಪ್ರೀತಿಯೇ ನಮಗೆ ಅತಿದೊಡ್ಡ ಪ್ರಶಸ್ತಿ'‌- ಸುದೀಪ್

-

Avinash GR
Avinash GR Dec 26, 2025 12:51 PM

ಕಿಚ್ಚ ಸುದೀಪ್‌ ಅವರ ಬಹುನಿರೀಕ್ಷಿತ ʻಮಾರ್ಕ್ʼ‌ ಸಿನಿಮಾವು ಗುರುವಾರ (ಡಿ.25) ತೆರೆಕಂಡಿದೆ. ಕ್ರಿಸ್‌ಮಸ್‌ ವೀಕೆಂಡ್‌ಗೆ ಸರಿಯಾಗಿ ಈ ಚಿತ್ರವನ್ನು ರಿಲೀಸ್‌ ಮಾಡಿ, ಮಿಶ್ರ ಪ್ರತಿಕ್ರಿಯೆ ಸಿಕ್ಕರೂ, ಉತ್ತಮ ಓಪನಿಂಗ್‌ ಪಡೆದುಕೊಂಡಿದೆ. ಎಲ್ಲದಕ್ಕಿಂತ ಹೆಚ್ಚಾಗಿ ಪ್ರೇಕ್ಷಕರ ರೆಸ್ಪಾನ್ಸ್‌ ಕಂಡು ಸುದೀಪ್‌ ಅವರು ಖುಷಿಯಾಗಿದ್ದಾರೆ. ಈ ಕುರಿತು ಟ್ವೀಟ್‌ ಮಾಡಿರುವ ಅವರು, "ನಿಮ್ಮ ಬೆಂಬಲವನ್ನು ಕಂಡು ನನಗೆ ಮಾತನಾಡಲು ಪದಗಳೇ ಸಿಗುತ್ತಿಲ್ಲ" ಎಂದಿದ್ದಾರೆ.

ಮೆಚ್ಚುಗೆ ಕಂಡು ನಾನು ಧನ್ಯನಾಗಿದ್ದೇನೆ

"ಮಾರ್ಕ್‌ ಚಿತ್ರಕ್ಕೆ ಎಲ್ಲೆಡೆಯಿಂದ ಸಿಗುತ್ತಿರುವ ಪ್ರೀತಿ ಮತ್ತು ಮೆಚ್ಚುಗೆ ಕಂಡು ನಾನು ಧನ್ಯನಾಗಿದ್ದೇನೆ. ಇದು ನಿಜಕ್ಕೂ ಅದ್ಭುತ. ಅಭಿಮಾನಿಗಳು ಚಿತ್ರವನ್ನು ಮೆಚ್ಚಿಕೊಳ್ಳುತ್ತಿರುವುದು, ಚಿತ್ರಮಂದಿರಗಳಲ್ಲಿ ಕುಣಿಯುತ್ತಾ, ಸಂಭ್ರಮಿಸುತ್ತಾ, ಕಿರುಚುತ್ತಾ ಚಿಯರ್ ಮಾಡುತ್ತಿರುವ ಅನೇಕ ಪೋಸ್ಟ್‌ಗಳನ್ನು ನಾನು ನೋಡಿದೆ. ಸಿನಿಮಾ ಮೇಲೆ ನೀವು ತೋರಿಸುತ್ತಿರುವ ಈ ಮಟ್ಟದ ಕ್ರೇಜ್ ಮತ್ತು ಬೆಂಬಲವನ್ನು ಕಂಡು ನನಗೆ ಮಾತನಾಡಲು ಪದಗಳೇ ಸಿಗುತ್ತಿಲ್ಲ" ಎಂದು ಕಿಚ್ಚ ಸುದೀಪ್‌ ಹೇಳಿಕೊಂಡಿದ್ದಾರೆ.

ಶುರುವಾಯ್ತು 'ಮಾರ್ಕ್‌' - '45' ಸಿನಿಮಾಗಳ ಅಡ್ವಾನ್ಸ್‌ ‌ಟಿಕೆಟ್‌ ಬುಕಿಂಗ್;‌ ಇಲ್ಲೊಂದು ಸಣ್ಣ ಟ್ವಿಸ್ಟ್‌ ಇದೆ, ನೀವು ಅದನ್ನು ಗಮನಿಸಿದ್ರಾ?

ಈ ಪ್ರೀತಿಯೇ ನಮ್ಮ ತಂಡಕ್ಕೆ ಸಿಕ್ಕ ಅತಿದೊಡ್ಡ ಪ್ರಶಸ್ತಿ

"ನಮ್ಮ ಸಿನಿಮಾ ಮೇಲೆ ಇಷ್ಟೊಂದು ಪ್ರೀತಿ ತೋರಿದ ಪ್ರತಿಯೊಬ್ಬರಿಗೂ ಮತ್ತು ಮಾಧ್ಯಮ ಮಿತ್ರರಿಗೆ ನನ್ನದೊಂದು ದೊಡ್ಡ ಅಪ್ಪುಗೆ. ಮಾರ್ಕ್ ಚಿತ್ರವನ್ನು ಅತ್ಯಂತ ಕಡಿಮೆ ಅವಧಿಯಲ್ಲಿ ಯೋಜಿಸಿ, ಕಾರ್ಯರೂಪಕ್ಕೆ ತರಲಾಗಿತ್ತು. ನಮ್ಮ ಇಡೀ ತಂಡ ಹಗಲಿರುಳು ಶ್ರಮವಹಿಸಿ ಕೆಲಸ ಮಾಡಿದೆ. ನಿಮ್ಮ ಈ ಪ್ರೀತಿಯೇ ನಮ್ಮ ತಂಡಕ್ಕೆ ಸಿಕ್ಕ ಅತಿದೊಡ್ಡ ಪ್ರಶಸ್ತಿ ಮತ್ತು ಪ್ರತಿಫಲ. ಇದು ನಮಗೆ ಇನ್ನೂ ಹೆಚ್ಚಿನ ಮತ್ತು ಉತ್ತಮವಾದ ಸಿನಿಮಾಗಳನ್ನು ನೀಡಲು ಸ್ಫೂರ್ತಿ ನೀಡುತ್ತದೆ"‌ ಎಂದು ಸುದೀಪ್‌ ಟ್ವೀಟ್‌ ಮಾಡಿದ್ದಾರೆ.

ಕಿಚ್ಚ ಸುದೀಪ್‌ ಅವರ ಟ್ವೀಟ್



Mark Teaser: 'ಮಾರ್ಕ್‌'ಗೆ ಉಘೇ ಉಘೇ ಅಂದ್ರು ಫ್ಯಾನ್ಸ್‌! ಟೀಸರ್‌ನಲ್ಲಿ ಕಿಚ್ಚನ ರೌದ್ರಾವತಾರ

ಸದ್ಯ ಕನ್ನಡ ಮತ್ತು ತಮಿಳಿನಲ್ಲಿ ತೆರೆಕಂಡಿರುವ ಈ ಸಿನಿಮಾವು ಮೊದಲ ದಿನವೇ ಸುಮಾರು 15+ ಕೋಟಿ ರೂ. ಅಧಿಕ ಹಣವನ್ನು ಬಾಚಿಕೊಂಡಿರುವ ಬಗ್ಗೆ ಮಾಹಿತಿ ಸಿಕ್ಕಿದೆ. ತಮಿಳಿನ ಸತ್ಯಜ್ಯೋತಿ ಫಿಲ್ಮ್ಸ್‌ ಮತ್ತು ಕಿಚ್ಚ‌ ಕ್ರಿಯೇಷನ್ಸ್‌ ಜಂಟಿಯಾಗಿ ನಿರ್ಮಾಣ ಮಾಡಿರುವ ಈ ಸಿನಿಮಾವನ್ನು ವಿಜಯ್‌ ಕಾರ್ತಿಕೇಯ ಅವರು ನಿರ್ದೇಶನ ಮಾಡಿದ್ದಾರೆ. ಹಾಡುಗಳಿಗೆ ಅಜನೀಶ್‌ ಲೋಕನಾಥ್‌ ಅವರು ಸಂಗೀತ ಸಂಯೋಜಿಸಿದ್ದು, ನವೀನ್‌ ಚಂದ್ರ, ಯೋಗಿ ಬಾಬು, ಗುರು ಸೋಮಸುಂದರಂ, ದೀಪ್ಶಿಕಾ, ರೋಶಿಣಿ ಪ್ರಕಾಶ್‌, ಅರ್ಚನಾ ಕೊಟ್ಟಿಗೆ, ಅಶ್ವಿನ್‌ ಹಾಸನ್‌ ಮುಂತಾದವರು ನಟಿಸಿದ್ದಾರೆ.