ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

BBK 12: ಇಷ್ಟು ದಿನ ಬಿಗ್‌ ಬಾಸ್‌ ಮನೆಯಲ್ಲಿ ಕಾಣೆಯಾಗಿದ್ದ ಈ ಮೂವರು ಸ್ಪರ್ಧಿಗಳಿಗೆ ಕಿಚ್ಚನ ಎಚ್ಚರಿಕೆ!

ಇಷ್ಟು ದಿನ ಬಿಗ್‌ ಬಾಸ್‌ ಮನೆಯಲ್ಲಿ ಇದ್ದು ಕಾಣದೇ ಇರೋ ರೀತಿ ಇದ್ದ ಸ್ಪರ್ಧಿಗಳಿಗೆ ಸುದೀಪ್‌ ಕಿವಿ ಮಾತನ್ನ ಹೇಳಿದ್ದಾರೆ. ಹಿಂದಿನ ವಾರದಿಂದ ಮೂವರು ಆಟ ಆರಂಭಿಸಿದ್ದು, ಎಲ್ಲರ ಕಣ್ಣಿಗೂ ಕಾಣಿಸುತ್ತಿದ್ದಾರೆ. ನೀವು ಕಾಣಿಸುತ್ತಿದ್ದೀರಿ ಎಂದು ಸುದೀಪ್ ಹೇಳಿದರು. ಅಷ್ಟೇ ಅಲ್ಲ ಮೂವರಿಗೂ ಎಚ್ಚರಿಕೆಯಿಂದ ಆಟ ಮುಂದುವರಿಸುವಂತೆ ಸಲಹೆ ನೀಡಿದರು. ಇನ್ನೊಂದು ಕಡೆ ಅಶ್ವಿನಿ ಗೌಡ ಮೂವರ ಸ್ಪರ್ಧಿಗಳನ್ನು ಸ್ವಾಗತಿಸಿದರು.

bigg boss kannada

ಬಿಗ್‌ ಬಾಸ್‌ ಸೀಸನ್‌ 12ರ (Bigg Boss Kannada 12) ಈ ವಾರ ಮಲ್ಲಮ್ಮ ಬಿಗ್​​ಬಾಸ್ ಮನೆಯಿಂದ ಹೊರಗೆ ಬಂದಿದ್ದಾರೆ. ಮಲ್ಲಮ್ಮ (Mallamma) ಮನೆಯ ಹಿರಿಯ ಸದಸ್ಯೆ ಆಗಿದ್ದರು. ಇನ್ನು ಭಾನುವಾರದ ಕಿಚ್ಚನ ಪಂಚಾಯ್ತಿಯಲ್ಲಿ ಒಂದಷ್ಟು ನಗುವಿನ ಮಾತು ಕತೆ ಜೊತೆ ಕೆಲವರಿಗೆ ಎಚ್ಚರಿಕೆಯ ಗಂಟೆಯನ್ನ ನೀಡಿದರು ಕಿಚ್ಚ ಸುದೀಪ್‌ (Sudeep). ಈ ಮೂವರು ಸ್ಪರ್ಧಿಗಳಿಗೆ ಸ್ವಾಗತ ಮಾಡಿದರು.

ಇಷ್ಟು ದಿನ ಬಿಗ್‌ ಬಾಸ್‌ ಮನೆಯಲ್ಲಿ ಇದ್ದು ಕಾಣದೇ ಇರೋ ರೀತಿ ಇದ್ದ ಸ್ಪರ್ಧಿಗಳಿಗೆ ಸುದೀಪ್‌ ಕಿವಿ ಮಾತನ್ನ ಹೇಳಿದ್ದಾರೆ. ಹಿಂದಿನ ವಾರದಿಂದ ಮೂವರು ಆಟ ಆರಂಭಿಸಿದ್ದು, ಎಲ್ಲರ ಕಣ್ಣಿಗೂ ಕಾಣಿಸುತ್ತಿದ್ದಾರೆ. ನೀವು ಕಾಣಿಸುತ್ತಿದ್ದೀರಿ ಎಂದು ಸುದೀಪ್ ಹೇಳಿದರು. ಅಷ್ಟೇ ಅಲ್ಲ ಮೂವರಿಗೂ ಎಚ್ಚರಿಕೆಯಿಂದ ಆಟ ಮುಂದುವರಿಸುವಂತೆ ಸಲಹೆ ನೀಡಿದರು.

ಇದನ್ನೂ ಓದಿ: BBK 12: ಕಾವುಗೆ ಗಿಲ್ಲಿನೇ ಟಾರ್ಗೆಟ್ ಅಂತೆ! ಊಸರವಳ್ಳಿ ಅಂತಿದ್ದಾರೆ ಪ್ರೇಕ್ಷಕರು

ನೀವು ಹುಷಾರಾಗಿರಿ

ಆ ಮೂವರು ಬೇರೆ ಯಾರೂ ಅಲ್ಲ, ಧನುಷ್, ಅಭಿಷೇಕ್ ಮತ್ತು ಸ್ಪಂದನಾ ಸೋಮಣ್ಣ . ತಡವಾಗಿ ಆಟವನ್ನು ಶುರು ಮಾಡಿದ್ದಾರೆ. ಇನ್ನೊಂದು ಕಡೆ ಅಶ್ವಿನಿ ಗೌಡ ಮೂವರ ಸ್ಪರ್ಧಿಗಳನ್ನು ಸ್ವಾಗತಿಸಿದರು. ಇದಕ್ಕೆ ತಕ್ಷಣವೇ ಉತ್ತರಿಸಿದ ಸುದೀಪ್, ನೋಡಿ ಈ ವಾರ ನಿಮಗೆ ಅಶ್ವಿನಿ ಗೌಡ ನಿಮಗೆ ಆಲ್ ದಿ ಬೆಸ್ಟ್ ಅಂತ ಹೇಳಿದ್ದಾರೆ. ಹಾಗಾಗಿ ಮುಂದಿನ ವಾರ ನೀವು ಹುಷಾರಾಗಿರಿ ಎಂದು ಎಚ್ಚರಿಕೆ ನೀಡಿದರು.



ಇನ್ನು ಸ್ಪಂದನ ಅವರು ಇನ್ನೇನು ನಾಮಿನೇಟ್‌ ಆಗಬೇಕು ಅನ್ನೋ ಹಂತದಲ್ಲಿ ಇದ್ದರು. ಧನುಷ್‌ ಈ ವಾರ ಕ್ಯಾಪ್ಟನ್‌ ಆಗಿದ್ದಾರೆ. ಅಭಿಷೇಕ್‌ ಅವರು ಈಗ ಆಟ ಶುರು ಮಾಡಿದ್ದಾರೆ ಎಂದರು.

ನಿಮ್ಮಿಬ್ಬರ ವಿಡಿಯೊ ಹಾಕ್ಲಾ?

ಇದಾದ ಬಳಿಕ ಕಿಚ್ಚ ಸುದೀಪ್‌ ಅವರು ಸೂರಜ್‌ ಹಾಗೂ ರಾಶಿಕಾ ಅವರಿಗೆ ವಿಡಿಯೋ ಹಾಕಲೇ ಅಂತ ಕಾಲೆಳೆದರು. ಬಿಗ್ ಬಾಸ್ ಮನೆಯಗೆ ಸೂರಜ್ ಸಿಂಗ್ ಅವರು ವೈಲ್ಡ್ ಕಾರ್ಡ್ ಎಂಟ್ರಿ ನೀಡಿದಾಗಿನಿಂದಲೂ ರಾಶಿಕಾ ಶೆಟ್ಟಿ ಜೊತೆ ಒಂದೊಳ್ಳೆ ಬಾಂಡಿಂಗ್ ಬೆಳೆಸಿಕೊಂಡಿದ್ದಾರೆ. ಇಬ್ಬರು ಒಬ್ಬರಿಗೊಬ್ಬರು ಬಿಟ್ಟಿರಲಾರದಷ್ಟು ಆತ್ಮೀಯತೆ ತೋರುತ್ತಾರೆ.

ಸದ್ಯ ಇವರಿಬ್ಬರ ಪರಸ್ಪರ ಐ ಲವ್ ಯೂ ಹೇಳಿಕೊಂಡಿದ್ದರ ಬಗ್ಗೆ ಸುದೀಪ್ ಮಾತನಾಡಿದ್ದಾರೆ.ಕಿಚ್ಚ ಸುದೀಪ್‌ ಮಾತನಾಡಿ, ದೊಡ್ಡ ಜಗಳವಾಗತ್ತೆ, ಆಗ್ತಾನೆ ಇರತ್ತೆ. ಇವರಿಬ್ಬರು ಮಾತ್ರ ಏನು ಗೊತ್ತಿಲ್ಲದ ಹಾಗೇ ಇರ್ತಾರೆ. ಆಗಲಿ ಬಿಡಿ, ನಮ್ಮ ಕೆಲಸ ನಾವು ನೊಡೋಣ ಅನ್ನೋ ಥರ ಇರ್ತಾರೆ ಎಂದಿದ್ದಾರೆ.

ಇದನ್ನೂ ಓದಿ: BBK 12: ನಿಮ್ಮಿಬ್ಬರ ವಿಡಿಯೊ ಹಾಕ್ಲಾ? ರಾಶಿಕಾ - ಸೂರಜ್‌ಗೆ ಕಿಚ್ಚನ ನೇರ ಪ್ರಶ್ನೆ!

ಆಗ ಸುಧಿ ಅವರು ಸೂರಜ್‌ ರಾಶಿಕಾ ಹೆಸರು ತೆಗೆದುಕೊಂಡರು. ಒಂದು ಕಡೆ ಅಶ್ವಿನಿ ಅವರು ಯಾರೂ ನನ್ನ ಪರ ಮಾತಾಡ್ತಾ ಇಲ್ಲ ಅಂತ ಇರುವಾಗ, ಈ ಕಡೆ ಈ ಲವ್‌ ಯೂ ಯು ಲವ್‌ ಮಿ ಅಂತ ಅವರ ಸ್ನೇಹಿತೆ ಎಂದಿದ್ದಾರೆ. ಅದಕ್ಕೆ ಸೂರಜ್‌ ಅವರು ಹಾಗೇನೂ ಇಲ್ಲ ಎಂದಿದ್ದಾರೆ. ಅದಕ್ಕೆ ಕಿಚ್ಚ ಅವರು ವಿಡಿಯೋ ಪ್ಲೇ ಮಾಡಿಸಲಾ ಎಂದು ಕಾಲೆಳೆದರು.

Yashaswi Devadiga

View all posts by this author