ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Kichcha Sudeep: ಫ್ಯಾನ್ಸ್‌ ವಾರ್ ಬಿಸಿಯ ನಡುವೆ ದರ್ಶನ್‌ ಬಗ್ಗೆ ಕಿಚ್ಚನ ಮಾತು; ʻಯಾವಾಗಲೂ ಅವರಿಗೆ ಶುಭ ಹಾರೈಸುತ್ತೇನೆʼ ಎಂದ ಸುದೀಪ್!‌

Darshan Sudeep: ಈಗಾಗಲೇ ಸುದೀಪ್‌ ಹಾಗೂ ದರ್ಶನ್‌ ಫ್ಯಾನ್ಸ್‌ ನಡುವೆ ವಾರ್‌ ತಾರಕಕ್ಕೇರಿದೆ. ಇತ್ತೀಚೆಗೆ ಮಾರ್ಕ್ ಸಿನಿಮಾ ಪ್ರಚಾರದ ವೇಳೆ ಹುಬ್ಬಳ್ಳಿಯಲ್ಲಿ ಕಿಚ್ಚ ಸುದೀಪ್ ಹೊರಗಡೆ ಒಂದು ಪಡೆಯಿದೆ. ಅದರ ವಿರುದ್ಧ ಯುದ್ಧಕ್ಕೆ ಸಿದ್ಧ ಎಂಬ ಮಾತನ್ನು ಹೇಳಿದ್ದರು. ಇದರ ಬೆನ್ನಲ್ಲಿಯೇ ನಟ ದರ್ಶನ್ಅ ವರ ಪತ್ನಿ ವಿಜಯಲಕ್ಷ್ಮಿ ಅವರು ಡೆವಿಲ್ ಸಿನಿಮಾದ ಪ್ರಚಾರ ಕಾರ್ಯಕ್ರಮಕ್ಕೆ ಹೋದಾಗ, ದರ್ಶನ್ ಬೆಂಗಳೂರಲ್ಲಿದ್ದಾಗ ಒಂದೂ ಮಾತನಾಡದವರು ಈಗ ಮಾತನಾಡುತ್ತಾರೆ.

ಕಿಚ್ಚ ಸುದೀಪ್‌ ಪೋಸ್ಟ್‌

ಈಗಾಗಲೇ ಸುದೀಪ್‌ (Sudeep) ಹಾಗೂ ದರ್ಶನ್‌ (Darshan Fans) ಫ್ಯಾನ್ಸ್‌ ನಡುವೆ ವಾರ್‌ ತಾರಕಕ್ಕೇರಿದೆ. ಇತ್ತೀಚೆಗೆ ಮಾರ್ಕ್ ಸಿನಿಮಾ (Mark Cinema Promotion) ಪ್ರಚಾರದ ವೇಳೆ ಹುಬ್ಬಳ್ಳಿಯಲ್ಲಿ ಕಿಚ್ಚ ಸುದೀಪ್ ಹೊರಗಡೆ ಒಂದು ಪಡೆಯಿದೆ. ಅದರ ವಿರುದ್ಧ ಯುದ್ಧಕ್ಕೆ ಸಿದ್ಧ ಎಂಬ ಮಾತನ್ನು ಹೇಳಿದ್ದರು. ಇದರ ಬೆನ್ನಲ್ಲಿಯೇ ನಟ ದರ್ಶನ್ (Actor Darshan) ಅವರ ಪತ್ನಿ ವಿಜಯಲಕ್ಷ್ಮಿ ಅವರು ಡೆವಿಲ್ ಸಿನಿಮಾದ ಪ್ರಚಾರ ಕಾರ್ಯಕ್ರಮಕ್ಕೆ ಹೋದಾಗ, ದರ್ಶನ್ ಬೆಂಗಳೂರಲ್ಲಿದ್ದಾಗ ಒಂದೂ ಮಾತನಾಡದವರು ಈಗ ಮಾತನಾಡುತ್ತಾರೆ. ಯಾರ ಮಾತಿಗೂ ತಲೆ ಕೆಡಿಸಿಕೊಳ್ಳಬೇಡಿ ಎಂದು ಹೇಳಿಕೆ ಕೊಟ್ಟಿದ್ದರು. ಇದೆಲ್ಲ ಗಲಾಟೆ ಮಧ್ಯೆ ಕಿಚ್ಚ ಸುದೀಪ್‌ (Sudeep) ಈಗ ದರ್ಶನ್‌ ಕುರಿತಾಗಿ ಟ್ವೀಟ್‌ ಮಾಡಿದ್ದಾರೆ.

ಕಿಚ್ಚನ ಪೋಸ್ಟ್‌ ಏನು?

ಆಸ್ಕ್ ಕಿಚ್ಚ ಸಮಯದಲ್ಲಿ ಕಿರಾತಕ ಎನ್ನುವ ಖಾತೆಯಿಂದ ಒಬ್ಬರು ದರ್ಶನ್ ಮತ್ತು ಸುದೀಪ್ ಜೊತೆಗಿರುವ ಫೋಟೋವನ್ನು ಹಂಚಿಕೊಂಡು, 'ದರ್ಶನ್ ಬಗ್ಗೆ ಒಂದು ಮಾತು ಹೇಳಿ' ಎಂದು ಕೇಳುತ್ತಾರೆ. ಕಿಚ್ಚ ಸುದೀಪ್ ಅವರು ಅವರಿಗೆ ಯಾವಾಗಲೂ ಶುಭ ಹಾರೈಸುತ್ತೇನೆ ಎಂದು ಹೇಳಿದರು. ಈ ಮೂಲಕ ದರ್ಶನ್ ಜೊತೆಗೆ ತಾವಿರುವ ಫೋಟೋಗೆ ರಿಪ್ಲೈ ಮಾಡಿದ್ದರಿಂದ, ಅದು ಸಾಮಾಜಿಕ ಜಾಲತಾಣದಲ್ಲಿ ಪುನಃ ಶೇರ್ ಆಗಿದೆ.

sudeep post about darshan

ಇದನ್ನೂ ಓದಿ: BBK 12: 'ಕಿಚ್ಚ' ಸುದೀಪ್‌ ಹೇಳಿದ್ದನ್ನು ಒಪ್ಪದ ಧ್ರುವಂತ್‌; ʻಬಿಗ್‌ ಬಾಸ್‌ʼ ಶೋನಿಂದ ಹೊರಗೆ ಹೋಗುವ ಮಾತನಾಡಿದ್ದೇಕೆ ಈ ಸ್ಪರ್ಧಿ?

ಸುದೀಪ್‌, ದರ್ಶನ್‌ ಒಂದಾಗದಂತೆ ಕಾಣದ ಕೈಗಳಿಂದ ಪಿತೂರಿ?

ಕಿಚ್ಚ ಸುದೀಪ್ ನಟನೆಯ ‘ಮಾರ್ಕ್’ ಸಿನಿಮಾ ಡಿಸೆಂಬರ್ 25ಕ್ಕೆ ಬಿಡುಗಡೆ ಆಗಲಿದೆ. ಪ್ರಚಾರ ಕಾರ್ಯ ಶುರುವಾಗಿದೆ. ಈ ವೇಳೆ ಸುದೀಪ್‌ ದರ್ಶನ್‌ ಕುರಿತಾಗಿಯೂ ಮಾತನಾಡಿದ್ದರು. ಕಿಚ್ಚ ಮಾತನಾಡಿ, ನಾನು ಏನು ರಿಯಾಕ್ಷನ್‌ ಕೊಡಬೇಕಿತ್ತು ಕೊಟ್ಟೆ. ಯಾರಾದರೂ ರಿಯಾಕ್ಷನ್‌ ಮಾಡಿದ್ರೆ ಅವರನ್ನ ನೀವು ಹೋಗಿ ಕೇಳಬೇಕು. ನನ್ನ ಉತ್ತರ ನಾನು ಕೊಟ್ಟಿದ್ದೇನೆ. ವೇದಿಕೆ ಮೇಲೆ ಏನೇನೂ ಮಾತನಾಡೋಕೆ ನಾನು ದಡ್ಡ ಅಲ್ಲ. ದರ್ಶನ್‌ ಅವರ ಮೇಲೆ ನನಗೆ ಗೌರವ ಇದೆ. ಕೆಲವು ಆಗು ಹೋಗುಗಳ ಬಗ್ಗೆ ನನಗೆ ನೋವಿದೆ. ಅವರ ಅಭಿಮಾನಿಗಳ ನೋವು ನನಗೆ ಅರ್ಥ ಆಗತ್ತೆ.



ಫ್ಯಾನ್ಸ್‌ ಕೆದಕಲು ಹೋಗಬೇಡಿ ಎಂದು ನಾನು ಸಾಕಷ್ಟು ಬಾರಿ ಹೇಳಿದ್ದೆ. ಆ ಅಭಿಮಾನಿಗಳು ಕೇಳಿಸಿಕೊಂಡು ಹೊಗಳಿದ್ದೂ ಉಂಟು. ಆದರೆ ಇನ್ನೊಂದು ಗುಂಪಿಗೆ ಅದು ಇಷ್ಟ ಆಗದೇ ಇರಬಹುದು. ನಾವು ಒಂದಾಗೋದು ಕೆಲವರಿಗೆ ಇಷ್ಟ ಆಗದೇ ಇರಬಹುದು ಅದು ಗೊತ್ತಿಲ್ಲ ನಂಗೆ. ನಾವು ಕಿತ್ತಾಡೇ ಇಲ್ಲ. ನಿಮಗೆ ಕ್ಲಾರಿಟಿ ಕೊಡ್ತೀನಿ ಅಂತಲ್ಲ. ನಾನು ಮುಂಚೆ ಹೇಳಿದ್ದೆ. ಕೆಲವರಿಗೆ ನಾನು ಕೊಡೋ ಉತ್ತರ ಅಲ್ಲ ಅನ್ನಿಸಿದೆ. ಇಲ್ಲಿ ಈಗ ಚಿಕ್ಕದಾಗೇ ಬಿಗ್‌ ಬಾಸ್‌ ನಡೆಯುತ್ತಾ ಇದೆ ಎಂದರು.

ಇದನ್ನೂ ಓದಿ: Kiccha Sudeep: ʻಯುದ್ಧಕ್ಕೆ ರೆಡಿʼ ಎಂದು ಸುದೀಪ್‌ ಹೇಳಿದ್ದು ಯಾರಿಗೆ? ಚಕ್ರವರ್ತಿ ಚಂದ್ರಚೂಡ್‌ ಬಾಯಿಬಿಟ್ಟ ಸತ್ಯವಿದು!

ಮಾರ್ಕ್’ ಸಿನಿಮಾ ಡಿಸೆಂಬರ್ 25ಕ್ಕೆ (ಗುರುವಾರ) ಬಿಡುಗಡೆ ಆಗಲಿದೆ. ಸತ್ಯಜ್ಯೋತಿ ಫಿಲ್ಮ್ಸ್‌ 39 ವರ್ಷಗಳ ನಂತರ ಕನ್ನಡದಲ್ಲಿ ಮಾರ್ಕ್‌ ಸಿನಿಮಾವನ್ನು ನಿರ್ಮಾಣ ಮಾಡಿದ್ದು, ಸುದೀಪ್‌ ಪೊಲೀಸ್‌ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದಾರೆ. ಮ್ಯಾಕ್ಸ್‌ ಡೈರೆಕ್ಟರ್‌ ವಿಜಯ್‌ ಕಾರ್ತಿಕೇಯ ಅವರು ನಿರ್ದೇಶನ ಮಾಡಿದ್ದಾರೆ.

Yashaswi Devadiga

View all posts by this author