ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ʻಶೇರ್‌ʼ ಆಗಿ ಗರ್ಜಿಸಲಿದ್ದಾರೆ ನಟ ಕಿರಣ್‌ ರಾಜ್;‌ ಪೊಲೀಸ್‌ ಆಫೀಸರ್‌ ರೋಲ್‌ನಲ್ಲಿ ಮಿಂಚಲಿದ್ದಾರೆ ತನಿಷಾ ಕುಪ್ಪಂಡ

'ಕನ್ನಡತಿ' ಧಾರಾವಾಹಿ ಖ್ಯಾತಿಯ ಕಿರಣ್‌ ರಾಜ್‌ ನಟನೆಯ ʻಶೇರ್‌ʼ ಚಿತ್ರವು ಮೇ 15ರಂದು ರಾಜ್ಯಾದ್ಯಂತ ತೆರೆಗೆ ಬರಲು ಸಜ್ಜಾಗಿದೆ. ಈ ಆಕ್ಷನ್ ಥ್ರಿಲ್ಲರ್ ಚಿತ್ರದಲ್ಲಿ ಅನಾಥ ಹುಡುಗನಾಗಿ ಕಿರಣ್ ರಾಜ್ ಕಾಣಿಸಿಕೊಂಡಿದ್ದು, ಬಿಗ್ ಬಾಸ್ ಖ್ಯಾತಿಯ ತನಿಷಾ ಕುಪ್ಪಂಡ ಖಡಕ್ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ಬಣ್ಣ ಹಚ್ಚಿದ್ದಾರೆ.

ಕಿರಣ್ ರಾಜ್ ನಟನೆಯ 'ಶೇರ್' ಸಿನಿಮಾದ ರಿಲೀಸ್‌ ಡೇಟ್‌ ಘೋಷಣೆ

-

Avinash GR
Avinash GR Apr 21, 2026 12:04 PM

ʻಕನ್ನಡತಿʼ ಸೀರಿಯಲ್‌ ಖ್ಯಾತಿಯ ನಟ ಕಿರಣ್‌ ರಾಜ್‌ ಇದೀಗ ಬೆಳ್ಳಿತೆರೆ ಮೇಲೆ ಮತ್ತೊಮ್ಮೆ ಮಿಂಚಲು ರೆಡಿಯಾಗಿದ್ದಾರೆ. ಪ್ರಸಿದ್ಧ್‌ ನಿರ್ದೇಶನದ ʻಶೇರ್ʼ‌ ಸಿನಿಮಾದಲ್ಲಿ ಕಿರಣ್ ರಾಜ್‌ ನಟಿಸಿದ್ದು, ಇದೊಂದು ಆಕ್ಷನ್‌ ಥ್ರಿಲ್ಲರ್‌ ಸಿನಿಮಾವಾಗಿದ್ದು, ಈಚೆಗೆ ಇದರ ರಿಲೀಸ್‌ ಡೇಟ್‌ ಘೋಷಣೆ ಆಗಿದೆ. ಮೇ 15ರಂದು ಶೇರ್‌ ಸಿನಿಮಾವನ್ನು ರಾಜ್ಯಾದ್ಯಂತ ರಿಲೀಸ್‌ ಮಾಡಲು ಚಿತ್ರತಂಡ ಸಜ್ಜಾಗಿದೆ. ಸದ್ಯ ಟ್ರೇಲರ್‌ ರಿಲೀಸ್ ಮಾಡಿ, ಸಿನಿಮಾದ ಬಗೆಗಿನ ಕುತೂಹಲವನ್ನು ಚಿತ್ರತಂಡ ಹಚ್ಚಿಸಿದೆ.

ಗ್ರೇಸ್ ರಾಜ್ ಪ್ರೊಡಕ್ಷನ್ ಲಾಂಛನದಲ್ಲಿ ಡಾ. ಸುದರ್ಶನ್ ಸುಂದರರಾಜ್ ಈ ಚಿತ್ರವನ್ನು ನಿರ್ಮಾಣ‌ ಮಾಡಿದ್ದು, ಕಾರ್ಯಕಾರಿ ನಿರ್ಮಾಪಕರಾಗಿ ಎಚ್. ಕುಮಾರ್ (ರಾಟೆ) ಕೆಲಸ ಮಾಡಿದ್ದಾರೆ. ಕಿರಣ್ ರಾಜ್‌ಗೆ ನಾಯಕಿಯಾಗಿ ಸುರೇಖಾ ನಟಿಸಿದ್ದಾರೆ. ವಿಲನ್‌ ಪಾತ್ರವನ್ನು ಕ್ರಿಶ್ ಮಾಡಿದ್ದಾರೆ. ಖಡಕ್‌ ಪೊಲೀಸ್‌ ಅಧಿಕಾರಿಯಾಗಿ ಬಿಗ್‌ ಬಾಸ್‌ ಖ್ಯಾತಿಯ ತನಿಷಾ ಕುಪ್ಪಂಡ ನಟಿಸಿದ್ದಾರೆ.

ಕಿರಣ್ ರಾಜ್ ಹೇಳಿದ್ದೇನು?

"ನಿರ್ದೇಶಕ ಪ್ರಸಿದ್ದ್ ಅವರು ನನ್ನನ್ನು ಆಕ್ಷನ್ ಹೀರೋ ಆಗಿ ಪರಿಚಯ ಮಾಡಿಸಿದ್ದರು. ನಾನು ಈ ಚಿತ್ರದಲ್ಲಿ ಅನಾಥ ಹುಡುಗನಾಗಿ ನಟಿಸಿದ್ದೇನೆ. ಇದೊಂದು ಕ್ರೈಮ್ ಆಕ್ಷನ್ ಥ್ರಿಲ್ಲರ್ ಚಿತ್ರ. ಎಲ್ಲರಿಗೂ ಈ ಚಿತ್ರ ಇಷ್ಟವಾಗಲಿದೆ" ಎಂದು ಹೇಳುತ್ತಾರೆ ಕಿರಣ್ ರಾಜ್.

Kiran Raj: ಮೈಕ್ರೋ ಸೀರೀಸ್‌ನಲ್ಲಿ ಕೈ ತುಂಬಾ ಸಂಪಾದನೆ ಮಾಡ್ಬೋದು?: ಕಿರಣ್ ರಾಜ್ ಹೇಳಿದ್ದೇನು?

ಇದು ಅನಾಥ ಮಕ್ಕಳ ಕಥೆ

"ಶೇರ್ ನನ್ನ ನಿರ್ದೇಶನದ 3ನೇ ಸಿನಿಮಾ. ಕಿರಣ್ ರಾಜ್ ಅವರು ಈವರೆಗೂ ಮಾಡಿರದ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇದೊಂದು ನಾರ್ಮಲ್ ಕಥೆಯಾದರು, ಸಾಕಷ್ಟು ಕುತೂಹಲಕರ ಅಂಶಗಳು ಚಿತ್ರದಲ್ಲಿದೆ. ಅನಾಥ ಮಕ್ಕಳ ಜೀವನದಲ್ಲಿ ಏನೇನೆಲ್ಲಾ ಆಗುತ್ತದೆ ಎಂಬುದನ್ನು ಚಿತ್ರದಲ್ಲಿ ಹೇಳಲಾಗಿದೆ.‌ ಈ ಚಿತ್ರದಲ್ಲಿ ನಿರ್ಮಾಪಕರ ಪುತ್ರ ಕ್ರಿಶ್ ರಾಡ್ರಿಗ್ ವಿಲನ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರಕ್ಕೆ ಅವರ ಡೆಡಿಕೇಶನ್ ತುಂಬಾ ಇದೆ. ತನಿಷಾ ಕುಪ್ಪಂಡ ಅವರು ಪೊಲೀಸ್ ಪಾತ್ರ ಮಾಡಿದ್ದಾರೆ. ಪ್ರಾದೇಶಿಕ ಸೆನ್ಸಾರ್ ಮಂಡಳಿ ನಮಗೆ ಎ ಪ್ರಮಾಣಪತ್ರ ನೀಡಿದೆ" ಎನ್ನುತ್ತಾರೆ ನಿರ್ದೇಶಕ ಪ್ರಸಿದ್ದ್.

Kiran Raj: ಸೀರಿಯಲ್ ಜೊತೆಗೆ ಸಿನಿಮಾದಲ್ಲೂ ಕಿರಣ್ ರಾಜ್ ಬ್ಯುಸಿ: ಫೋಟೋ ಹಂಚಿಕೊಂಡ ಕರ್ಣ

ʻದುನಿಯಾʼ ಚಿತ್ರದಲ್ಲಿ ಲೂಸ್‌ ಮಾದ ಯೋಗಿ ಮಾಡಿದಂತಹ ಪಾತ್ರವನ್ನು ಶೇರ್‌ ಸಿನಿಮಾದಲ್ಲಿ ನಟ ಕ್ರಿಶ್ ನಿಭಾಯಿಸಿದ್ದಾರಂತೆ. ನಾಯಕಿ ಸುರೇಖಾಗೆ ಇದು ಎರಡನೇ ಸಿನಿಮಾ. ಈ ಮೊದಲು ಅವರು ʻಭರ್ಜರಿ ಗಂಡುʼ ಸಿನಿಮಾದಲ್ಲಿ ಅಭಿನಯಿಸಿದ್ದರು. ಇನ್ನು, ಬಿಗ್‌ ಬಾಸ್‌ ಖ್ಯಾತಿಯ ತನಿಷಾ ಕುಪ್ಪಂಡ ಮೊದಲ ಬಾರಿಗೆ ಪೊಲೀಸ್ ಅಧಿಕಾರಿಯಾಗಿ ಬಣ್ಣ ಹಚ್ಚಿದ್ದರು ಶೇರ್‌ ಚಿತ್ರಕ್ಕಾಗಿ. ಇದರ ಶೂಟಿಂಗ್‌ ಮುಗಿದ ಮೇಲೆ ಅವರು ʻಪೆನ್ ಡ್ರೈವ್ʼ ಚಿತ್ರದಲ್ಲಿಯೂ ಪೊಲೀಸ್‌ ಅಧಿಕಾರಿ ಪಾತ್ರ ಮಾಡಿದ್ದರು.

ಕಿರಣ್‌ ರಾಜ್‌ ಸಂದರ್ಶನ



ವೃತ್ತಿಯಲ್ಲಿ ವಕೀಲರಾದ ಡಾ. ಸುದರ್ಶನ್ ಸುಂದರ ರಾಜ್ ತಮ್ಮ ಮಗನಿಗಾಗಿ ಈ ಸಿನಿಮಾ ಮಾಡಿದ್ದಾರಂತೆ. ಕೆಆರ್‌ಜಿ ಮೂಲಕ ಶೇರ್‌ ಸಿನಿಮಾವು ಮೇ 15ರಂದು ರಿಲೀಸ್‌ ಆಗುತ್ತಿದೆ. ಛಾಯಾಗ್ರಹಣವನ್ನು ಕಿಟ್ಟಿ ಕೌಶಿಕ್ ಮಾಡುತ್ತಿದ್ದು, ವಿಜಯ್ ಗುಮ್ಮಿನೇನಿ ಸಂಗೀತ ಸಂಯೋಜಿಸಿದ್ಧಾರೆ.