Chandan Shetty : ವಯಸ್ಸಾದ ಮೇಲೆ ಒಂಟಿತನ ಕಾಡುತ್ತೆ; ಎರಡನೇ ಮದುವೆ ಬಗ್ಗೆ ಚಂದನ್ ಶೆಟ್ಟಿ ಮಾತು
Chandan Shetty : ಗಾಯಕ, ನಟ ಚಂದನ್ ಶೆಟ್ಟಿ ಬಿಗ್‌ಬಾಸ್ ವೇದಿಕೆಯಲ್ಲಿ ಉತ್ತಮವಾಗಿ ಆಟವಾಡಿ ಅಲ್ಲಿಯೇ ಪ್ರತಿಸ್ಫರ್ಧಿಯಾಗಿದ್ದ ನಿವೇದಿತಾ ಗೌಡ ಅವರನ್ನು ಪ್ರೀತಿಸಿ ಮದುವೆ ಆಗಿದ್ದರು. ಆದರೆ ಅವರದೇ ವೈಯಕ್ತಿಕ ಕಾರಣಗಳಿಂದ ಇಬ್ಬರು ಪರಸ್ಪರ ಒಪ್ಪಿಗೆ ಮೆರೆಗೆ ಡಿವೋರ್ಸ್ ಪಡೆದು ಬೇರ್ಪಟ್ಟಿದ್ದಾರೆ. ಚಂದನ್ ಶೆಟ್ಟಿ ಈ ಎಲ್ಲಾ ನೋವುಗಳಿಂದ ಹೊರಬಂದಿರೋದಾಗಿ ಸಂದರ್ಶನವೊಂದರಲ್ಲಿ ಮನಬಿಚ್ಚಿ ಮಾತನಾಡಿದ್ದು, ಈಗ ಸಿನಿಮಾಗಳ ತಮ್ಮನ್ನ ತೊಡಗಿಸಿಕೊಂಡಿರೊದಾಗಿ ಹೇಳಿದ್ದಾರೆ. ನಿವೇದಿತಾ ಗೌಡ ಅವರಿಂದ ಡಿವೋರ್ಸ್ ಪಡೆದ ನಂತರ, ಅವರ ಎರಡನೇ ಮದುವೆಯ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಚರ್ಚೆಗಳು ನಡೆಯುತ್ತಿದ್ದವು. ಈ ಎಲ್ಲಾ ಪ್ರಶ್ನೆಗಳಿಗೂ ಚಂದನ್ ಶೆಟ್ಟಿ ಮತ್ತೆ ಮುಕ್ತವಾಗಿ ಮಾತನಾಡಿದ್ದಾರೆ.
ಚಂದನ್ ಶೆಟ್ಟಿ -
ಗಾಯಕ, ನಟ ಚಂದನ್ ಶೆಟ್ಟಿ (Chandan Shetty) ಬಿಗ್‌ಬಾಸ್ ವೇದಿಕೆಯಲ್ಲಿ ಉತ್ತಮವಾಗಿ ಆಟವಾಡಿ ಅಲ್ಲಿಯೇ ಪ್ರತಿಸ್ಫರ್ಧಿಯಾಗಿದ್ದ ನಿವೇದಿತಾ ಗೌಡ (Noveditha Gowda) ಅವರನ್ನು ಪ್ರೀತಿಸಿ ಮದುವೆ ಆಗಿದ್ದರು. ಆದರೆ ಅವರದೇ ವೈಯಕ್ತಿಕ ಕಾರಣಗಳಿಂದ ಇಬ್ಬರು ಪರಸ್ಪರ ಒಪ್ಪಿಗೆ ಮೆರೆಗೆ ಡಿವೋರ್ಸ್ ಪಡೆದು ಬೇರ್ಪಟ್ಟಿದ್ದಾರೆ. ಚಂದನ್ ಶೆಟ್ಟಿ ಈ ಎಲ್ಲಾ ನೋವುಗಳಿಂದ ಹೊರಬಂದಿರೋದಾಗಿ ಸಂದರ್ಶನವೊಂದರಲ್ಲಿ ಮನಬಿಚ್ಚಿ ಮಾತನಾಡಿದ್ದು, ಈಗ ಸಿನಿಮಾಗಳ (Cinema) ತಮ್ಮನ್ನ ತೊಡಗಿಸಿಕೊಂಡಿರೊದಾಗಿ ಹೇಳಿದ್ದಾರೆ. ನಿವೇದಿತಾ ಗೌಡ ಅವರಿಂದ ಡಿವೋರ್ಸ್ ಪಡೆದ ನಂತರ, ಅವರ ಎರಡನೇ ಮದುವೆಯ (Marriage) ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಚರ್ಚೆಗಳು ನಡೆಯುತ್ತಿದ್ದವು. ಈ ಎಲ್ಲಾ ಪ್ರಶ್ನೆಗಳಿಗೂ ಚಂದನ್ ಶೆಟ್ಟಿ ಮತ್ತೆ ಮುಕ್ತವಾಗಿ ಮಾತನಾಡಿದ್ದಾರೆ.
ಇದನ್ನೂ ಓದಿ: Dacoit Opening Day: ಅಡಿವಿ ಶೇಷ್ 'ಡಕಾಯಿತ್' ಸಿನಿಮಾ; ಮೊದಲ ದಿನವೇ ಹೀನಾಯ ಕಲೆಕ್ಷನ್!
ಮದುವೆ ಅನ್ನೋದು ತುಂಬಾ ಮುಖ್ಯ
ಚಂದನ್ ಶೆಟ್ಟಿ ಮಾತನಾಡಿ, ʻಜೀವನದಲ್ಲಿ ಮದುವೆ ಅನ್ನೋದು ತುಂಬಾ ಮುಖ್ಯ. ಪ್ರತಿಯೊಬ್ಬರ ಜೀವನದಲ್ಲಿ ಪಾರ್ಟನರ್ ಅನ್ನೋದು ಮುಖ್ಯ. ನನಗೂ ಈವಾಗಲೂ ಅನುಭವ ಆಗ್ತಾಲೇ ಇದೆ. ಈಗ ಓಕೆ. ಆದರೆ ವಯಸ್ಸಾದ ಮೇಲೆ ಒಂಟಿತನ ಕಾಡೋಕೆ ಶುರು ಆಗುತ್ತೆ. ತಪ್ಪು ಮಾಡಿದೆ ಅಂತ. ಬಾಳ ಸಂಗಾತಿ ಹುಡುಕಬೇಕು. ನಿರೀಕ್ಷೆ ಇಲ್ಲ.
ಅದೆಲ್ಲ ಹೇಳಬಾರದು. ಅದೆಲ್ಲ ಪರೀಕ್ಷೆ. ಪ್ರತಿಯೊಂದು ರಿಲೇಶನ್‌ಶಿಪ್‌ನಲ್ಲೂ. ಆ ಪರೀಕ್ಷೆಯಲ್ಲಿ ನೀವು ಯಾವ ರೀತಿ ಒಬ್ಬರಿಗೊಬ್ಬರು ಅರ್ಥ ಮಾಡಿಕೊಳ್ಳುತ್ತೀರಾ ಎನ್ನುವುದರ ಮೇಲೆ ಮುಂದಿನ ಜೀವನ ನಡೆದುಕೊಂಡು ಹೋಗುತ್ತೆ ಎಂದು ಹೇಳಿದ್ದಾರೆ. ಈ ಕಾರಣಕ್ಕೆ ಈ ಬಾರಿ ಸ್ವಲ್ಪ ಟೈಮ್ ತಗೊಂಡು, ಯೋಚನೆ ಮಾಡಿ, ನೋಡಿ ಆಮೇಲೆ ನಿರ್ಧಾರ ಮಾಡುವುದಾಗಿʼ ಹೇಳಿದ್ದಾರೆ.
ಡಿಪ್ರೆಸ್ಡ್ ಆಗಿಲ್ಲ
ʻನಾನು ಖಂಡಿತವಾಗಿಯೂ ಡಿಪ್ರೆಶನ್‌ನಲ್ಲಿ ಇಲ್ಲ. ಹಿಂದೆ ಡಿಪ್ರೆಸ್ಡ್ ಆಗಿಲ್ಲ ಎಂದಿದ್ದಾರೆ. ಕೆಳಗೆ ಬಿದ್ದ ತಕ್ಷಣ, ಏಟಾಗುತ್ತೆ, ಏಟಾದಾಗ ಗಾಯ ಆಗುತ್ತೆ, ಗಾಯ ಆದ ತಕ್ಷಣ ನೋವಾಗುತ್ತೆ. ನೋವು ವಾಸಿಯಾಗೋದಕ್ಕೆ ಕೆಲವು ದಿನ ಬೇಕಾಗುತ್ತೆ. ಕೆಲವೊಂದು ಬೇಗ ವಾಸಿಯಾಗಬಹುದು. ಈಗ ಕಂಪ್ಲೀಟ್ ಆಗಿ ವಾಸಿಯಾಗಿದೆ. ಆರಾಮಾಗಿದ್ದೇನೆ, ಚೆನ್ನಾಗಿದ್ದೇನೆ ಎಂದು ಹೇಳಿದ್ದಾರೆ. ಈಗ ನನ್ನ ಎಲ್ಲಾ ಏಕಾಗ್ರತೆ ನನ್ನ ಕೆಲಸದ ಮೇಲಿದೆʼ ಎಂದಿದ್ದಾರೆ.
ಕೆಲಸದ ವಿಚಾರಕ್ಕೆ ಬರೋದಾದರೆ, ಕನ್ನಡದ ಖ್ಯಾತ ರ್ಯಾಪರ್ ಚಂದನ್ ಶೆಟ್ಟಿ ನಾಯಕನಾಗಿ ಒಪ್ಪಿಕೊಂಡಿದ್ದ ಮೊದಲ ಸಿನಿಮಾ 'ಎಲ್ರ ಕಾಲೆಳಿಯತ್ತೆ ಕಾಲ' ಚಿತ್ರದ ಟ್ರೇಲರ್ ಬಿಡುಗಡೆಯಾಗಿ ಗಮನ ಸೆಳೆಯುತ್ತಿದೆ. ಸುಜಯ್ ಶಾಸ್ತ್ರಿ ನಿರ್ದೇಶನದ ಈ ಚಿತ್ರವು 90ರ ದಶಕದ ರೆಟ್ರೋ ಹಿನ್ನೆಲೆಯ ಕಥೆಯನ್ನು ಹೊಂದಿದ್ದು, ಏಪ್ರಿಲ್ 17ರಂದು ತೆರೆಗೆ ಬರಲಿದೆ.
ಇದನ್ನೂ ಓದಿ: Amruthadhaare Serial: ಗೌತಮ್ ದಿವಾನ್ ಮೇಲೆ ಬಿದ್ದೇ ಬಿಡ್ತು ಕೆಡಿ ಜೈದೇವ್ ವಕ್ರದೃಷ್ಟಿ!
ಈ ಸಿನಿಮಾಕ್ಕೆ ಪ್ರವೀಣ್ - ಪ್ರದೀಪ್ ಸಂಗೀತವನ್ನು ನೀಡಿದ್ದಾರೆ. ಕೆವಿಎನ್ ಪ್ರೊಡಕ್ಷನ್ಸ್ ಸಂಸ್ಥೆ ಈ ಚಿತ್ರವನ್ನು ವಿತರಣೆ ಮಾಡುತ್ತಿದೆ. ಚಂದನ್ ಶೆಟ್ಟಿ, ಅರ್ಚನಾ ಕೊಟ್ಟಿಗೆ ಜೊತೆಗೆ ಸುಜಯ್ ಶಾಸ್ತ್ರಿ ಕೂಡ ಒಂದು ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಉಳಿದಂತೆ. ಮಂಜು ಪಾವಗಡ, ಮಾಹಂತೇಶ್, ಅನಂತ ಪದ್ಮನಾಭ, ತಾರಾ, ರಾಕೇಶ್ ಪೂಜಾರಿ ಮುಂತಾದವರು ಬಣ್ಣ ಹಚ್ಚಿದ್ದಾರೆ.