Amruthadhaare Serial: ಗೌತಮ್ ದಿವಾನ್ ಮೇಲೆ ಬಿದ್ದೇ ಬಿಡ್ತು ಕೆಡಿ ಜೈದೇವ್ ವಕ್ರದೃಷ್ಟಿ!
Amruthadhaare Serial: ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಕಾಣುತ್ತಿರುವ ಅಮೃತಧಾರೆಯಲ್ಲಿ ಗೌತಮ್ ದಿವಾನ್ ಭಾವುಕ ಕ್ಷಣಕ್ಕೆ ಸಾಕ್ಷಿಯಾಗಿದೆ. ತನ್ನ ಬಳಿ ಇದ್ದ ಒಂದು ಎಸ್ಟೇಟ್‌ವನ್ನು ತಂಗಿ ಸುಧಾ ಹೆಸರಿಗೆ ಬರೆದು ಕೊಟ್ಟಿದ್ದಾನೆ. ತನ್ನ ಔದಾರ್ಯ ಮರೆದಿದ್ದಾನೆ. ಇನ್ನೊಂದು ಕಡೆ ಜೈದೇವ್ ವಕ್ರ ದೃಷ್ಟಿ ಗೌತಮ್ ಹೊಸ ಬಿಸಿನೆಸ್ ಮೇಲೆ ಬಿದ್ದಿದೆ. ಗೌತಮ್ ಸೆಲೆಕ್ಟ್ ಮಾಡಿದ್ದ ಲೋಗೋವನ್ನು ತನ್ನ ಕಂಪನಿಯದ್ದು ಎಂದು ಜೈದೇವ್ ಮಾಧ್ಯಮಗಳ ಮುಂದೆ ಹೇಳಿಕೆಯನ್ನೂ ಕೊಟ್ಟಿದ್ದಾನೆ.
ಅಮೃತಧಾರೆ ಧಾರಾವಾಹಿ -
ಜೀ ಕನ್ನಡ ವಾಹಿನಿಯಲ್ಲಿ (Zee Kannada) ಪ್ರಸಾರ ಕಾಣುತ್ತಿರುವ ಅಮೃತಧಾರೆಯಲ್ಲಿ (amruthadhaare serial) ಗೌತಮ್ ದಿವಾನ್ ಭಾವುಕ ಕ್ಷಣಕ್ಕೆ ಸಾಕ್ಷಿಯಾಗಿದೆ. ತನ್ನ ಬಳಿ ಇದ್ದ ಒಂದು ಎಸ್ಟೇಟ್‌ವನ್ನು ತಂಗಿ ಸುಧಾ ಹೆಸರಿಗೆ ಬರೆದು ಕೊಟ್ಟಿದ್ದಾನೆ. ತನ್ನ ಔದಾರ್ಯ ಮರೆದಿದ್ದಾನೆ. ಇನ್ನೊಂದು ಕಡೆ ಜೈದೇವ್ (Jaidev) ವಕ್ರ ದೃಷ್ಟಿ ಗೌತಮ್ ಹೊಸ ಬಿಸಿನೆಸ್ ಮೇಲೆ ಬಿದ್ದಿದೆ. ಗೌತಮ್ ಸೆಲೆಕ್ಟ್ ಮಾಡಿದ್ದ ಲೋಗೋವನ್ನು (Logo) ತನ್ನ ಕಂಪನಿಯದ್ದು ಎಂದು ಜೈದೇವ್ ಮಾಧ್ಯಮಗಳ ಮುಂದೆ ಹೇಳಿಕೆಯನ್ನೂ ಕೊಟ್ಟಿದ್ದಾನೆ.
ಇದನ್ನೂ ಓದಿ: Ranveer Singh: RSS ಸ್ಥಾಪಕ ಹೆಡ್ಗೇವಾರ್ ಸ್ಮೃತಿ ಮಂದಿರಕ್ಕೆ ರಣವೀರ್ ಸಿಂಗ್ ಭೇಟಿ!
ಇಷ್ಟೂ ದಿನ ಜೈದೇವ್, ಮಲ್ಲಿ ಹಾಗೂ ಗೌತಮ್ ಬದುಕಿನಲ್ಲಿ ವೈಯಕ್ತಿಕವಾಗಿ ಆಟ ಆಡುತ್ತಿದ್ದ. ಆದರೀಗ ಒಂದು ಹೆಜ್ಜೆ ಮುಂದೆ ಹೋಗಿದ್ದಾನೆ. ತಮ್ಮ ಪಾರ್ಥನ ಸಿಗ್ನೇಚರನ್‌ನ್ನು forgery ಮಾಡಿ, ಅಕ್ರಮವಾಗಿ ತನ್ನ ಕೆಲಸಕ್ಕೆ ಬಳಸಿಕೊಂಡಿದ್ದಾನೆ. ಅಷ್ಟೇ ಅಲ್ಲ ಪ್ರೆಸ್ ಮೀಟ್ ಕರೆದಿದ್ದಾನೆ.
ಗೌತಮ್ ಶುರು ಮಾಡುತ್ತಿರುವ ಬ್ಯುಸೆನೆಸ್ ಲೋಗೋ ನಮ್ಮದು. ಈ ಲೋಗೋವನ್ನು ಯಾರೂ ಲಘುವಾಗಿ ತೆಗೆದುಕೊಳ್ಳೋಕೆ ಆಗಲ್ಲ. ಇದು ನನ್ನ ಸ್ವಂತದ್ದು. ದಿವಾನ್ ಫ್ಯಾಮಿಲಿ ಅಲ್ಲಿ ಗೌತಮ್ ಮಾತ್ರನಾ ಇರೋದು? ಗೌತಮ್ ದಿವಾನ್‌ಗೆ ದಿವಾನ್ ಅಂತ ಸರ್‌ನೇಮ್ ಸಿಕ್ಕಿದ್ದು ಈ ಫ್ಯಾಮಿಲಿ ಇಂದ. ಅವನಿಂದ ದಿವಾನ್ ಆಗಿಲ್ಲ. ಈ ಒಂದು ಫ್ಯಾಮಿಲಿ ಅಲ್ಲಿ ಅವರು ಒಂದು ಭಾಗ ಎಂದಿದ್ದಾನೆ.
ಕಿಡಿಕಾರಿದ ಮಹಿಮಾ
ಶಕುಂತಲಾ ಬಳಿ ಮಹಿಮಾ ನೇರವಾಗಿ ಬಂದು ಕೂಗಾಡಿದ್ದಾಳೆ. ಪಾರ್ಥನ ಸಹಿಯನ್ನು forgery ಮಾಡಿ, ಅಕ್ರಮವಾಗಿ ತನ್ನ ಕೆಲಸಕ್ಕೆ ಬಳಸಿಕೊಂಡಿದ್ದಾನೆ ಎಂದಿದ್ದಾಳೆ. ಶಕುಂತಲಾಳಿಗೂ ಈ ಸುದ್ದಿ ಕೇಳಿ ಶಾಕ್ ಆಗಿದೆ. ತನಗೆ ಈ ವಿಚಾರ ಗೊತ್ತೇ ಇಲ್ಲ ಎಂದು ಅಚ್ಚರಿ ವ್ಯಕ್ತಪಡಿಸಿದ್ದಾಳೆ.
ಗಂಡನ ಪ್ರತಿ ಹೆಜ್ಜೆಗೂ ಜೊತೆಯಾಗಿ ನಿಲ್ತಾಳೆ ಭೂಮಿಕಾ!
ಮತ್ತೊಂದು ಕಡೆ ಗೌತಮ್ ಹಾಗೂ ಕುಟುಂಬ ಒಂದು ಕಡೆ ಸೇರಿದೆ. ತನ್ನ ಬಳಿ ಇದ್ದ ಒಂದು ಎಸ್ಟೇಟ್ ಜಾಗವನ್ನೂ ಸುಧಾ ಹೆಸರಿಗೆ ಬರೆದುಕೊಟ್ಟಿದ್ದಾನೆ ಗೌತಮ್. ಅಜ್ಜಿ ಹೆಸರಿನಲ್ಲಿ ಇರೋ ಎಸ್ಟೇಟ್ ಅನ್ನು ಸುಧಾ ಹೆಸರಿಗೆ ಬರೆದು ಕೊಟ್ಟಿದ್ದಾನೆ ಗೌತಮ್. ಇಲ್ಲಿಯೂ ಅಣ್ಣನಾಗಿ ತನ್ನ ಕರ್ತವ್ಯ ನಿಭಾಯಿಸಿದ್ದಾನೆ.
ಕೊಟ್ಟ ಬಳಿಕ ಮಾವ , ಭೂಮಿಕಾ ಬಳಿ ಈ ವಿಚಾರವಾಗಿ ಪ್ರಸ್ತಾವನೆ ಇಟ್ಟಿದ್ದಾರೆ. ಗೌತಮ್ ತನ್ನ ಬಗ್ಗೆ ಯೋಚನೆ ಮಾಡದೇ ಇರೋದೆಲ್ಲ ಕೊಟ್ಟರೆ ಹೇಗೆ? ನೀನು ಕೂಡ ಪ್ರಶ್ನೆ ಇಡು ಅಂತ ಹೇಳಿದ್ದಾರೆ.
ಇಷ್ಟೂ ಹೇಳಿದರೂ ಭೂಮಿಕಾ ತನ್ನ ಗಂಡನ ಪರವಾಗಿ ಮಾತನಾಡಿದ್ದಾಳೆ. ಅವರು ಏನೇ ಮಾಡಿದರೂ ಸರಿ ಇರುತ್ತೆ. ಇನ್ನೊಬ್ಬರಿಗೆ ಕೊಡೋದು ಅವರ ಅಭ್ಯಾಸ ಅಲ್ಲ. ಅವರ ಸ್ವಭಾವ, ನಾವು ಅದನ್ನ ತಡೆದರೆ ಅವರ ವ್ಯಕ್ತಿತ್ವಕ್ಕೆ ಬೆಲೆ ಇರಲ್ಲ. ಅವರು ಬೇರೆಯವರಿಗೆ ಕೊಟ್ಟಾಗ ನಮ್ಮದೇನು ಕಳೆದುಕೊಳ್ಳಲ್ಲ. ಅವರು ಬೇರೆ ಅವರಿಗೆ ಕೊಟ್ಟಾಗ, ಅದನ್ನು ನೋಡುವ ಅದೃಷ್ಟ ನನ್ನದು ಎಂದಿದ್ದಾಳೆ ಭೂಮಿ.
ಮುಂದೆ ಜೈದೇವ್‌ಗೆ ಇರೋ ಅಹಂಕಾರವೇ ಶಕುಂತಲಾಗೆ ಮುಳುವಾಗುತ್ತಾ? ಪಾರ್ಥ ಹಾಗೂ ತಂಗಿ ಗೌತಮ್ ಕಡೆ ಸೇರುತ್ತಾರಾ? ಶಕುಂತಲಾಗೂ ಜೈದೇವ್ ಕೆಟ್ಟ ದಿನಗಳನ್ನು ತರ್ತಾನಾ? ದಿಯಾ ಇಂದಿಗಾಗಿ ಜೈದೇವ್ ಆಸ್ತಿ ಕಳೆದುಕೊಳ್ತಾನಾ? ಜೈದೇವ್ ಮತ್ತೆ ಎಲ್ಲವನ್ನೂ ಕಳೆದುಕೊಂಡು ಬೀದಿಗೆ ಬೀಳ್ತಾನಾ? ಲೋಗೋ ವಿಚಾರವಾಗಿ ಗೌತಮ್ ಮುಂದಿನ ನಡೆಯೇನು? ಅನ್ನೋದು ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ.
ಇದನ್ನೂ ಓದಿ: Amruthadhaare Serial: ಶಕುಂತಲಾಳಿಗೆ ತಲೆ ನೋವಾದ ಕೆಡಿ ಜೈದೇವ್; ಕಿಡಿ ಕಾರಿದ ಪಾರ್ಥ
ʻಅಮೃತಧಾರೆ’ ಧಾರಾವಾಹಿ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಕಾಣುತ್ತಿದೆ. ಛಾಯಾ ಸಿಂಗ್ ಭೂಮಿಕಾ ಎನ್ನುವ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಧಾರಾವಾಹಿ ಜೀ ಕನ್ನಡ ವಾಹಿನಿಯಲ್ಲಿ ಸೋಮವಾರದಿಂದ ಶುಕ್ರವಾರ ಸಂಜೆ 7 ಗಂಟೆಗೆ ಪ್ರಸಾರ ಕಾಣುತ್ತಿದೆ.