Actor Vinayakan: ಜೈಲರ್’ ಖ್ಯಾತಿಯ ವಿನಾಯಕನ್ ಮತ್ತೆ ಬಂಧನ; ಕಾರಣವೇನು?
Actor Vinayakan Arrest: ಮಲಯಾಳಂ ನಟ ವಿನಾಯಕನ್ ಸಿನಿಮಾ ಅಲ್ಲದೆ ಇತರ ವೈಯಕ್ತಿಕ ವಿಚಾರದಲ್ಲೂ ಸುದ್ದಿ ಯಲ್ಲಿರುತ್ತಾರೆ. ಇದೀಗ ನಟ ಕುಡಿದು ಮತ್ತೆ ಕಿರಿಕ್ ಮಾಡಿಕೊಂಡಿದ್ದು ಕುಡಿದ ನಶೆಯಲ್ಲಿ ಪುಂಡಾಟಿಕೆ ಮಾಡಿದ್ದ ಅವರನ್ನು ಗುರುವಾರ ಮೇ 9 ರಂದು ಬಂಧಿಸಲಾಗಿದೆ.ವಿನಾಯಕನ್ ಅಂಚಲುಮ್ಮೂಡು ಭಾಗದ ಹೋಟೆಲ್ವೊಂದರಲ್ಲಿ ಸಿನಿಮಾ ಶೂಟ್ ಹಿನ್ನೆಲೆಯಲ್ಲಿ ತಂಗಿದ್ದರು. ಈ ಸಂದರ್ಭದಲ್ಲಿ ಹೋಟೆಲ್ನಿಂದ ಚೆಕ್ಔಟ್ ಆಗುವಾಗ ಸಿಬ್ಬಂದಿ ಜೊತೆ ಕಿರಿಕ್ ಮಾಡಿಕೊಂಡಿದ್ದು ಕುಡಿದ ಮತ್ತಿನಲ್ಲಿ ಜಗಳ ಮಾಡಿದ್ದಾರೆ..


ನವ ದೆಹಲಿ: ಮಲಯಾಳಂ ನಟ ವಿನಾಯಕನ್ (Malayalam Actor Vinayakan) ಸಿನಿಮಾ ಅಲ್ಲದೆ ಇತರ ವೈಯಕ್ತಿಕ ವಿಚಾರದಲ್ಲೂ ಸುದ್ದಿಯಲ್ಲಿರುತ್ತಾರೆ. ಇದೀಗ ನಟ ಕುಡಿದು ಮತ್ತೆ ಕಿರಿಕ್ ಮಾಡಿಕೊಂಡಿದ್ದು, ಕುಡಿದ ನಶೆಯಲ್ಲಿ ಪುಂಡಾಟಿಕೆ ಮಾಡಿದ್ದ ಅವರನ್ನು ಗುರುವಾರ ಮೇ 9 ರಂದು ಬಂಧಿಸಲಾಗಿದೆ. ಈ ಹಿಂದೆ ಹೈದರಾಬಾದ್‌ನ ರಾಜೀವ್ ಗಾಂಧಿ ಅಂತ ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಂಠಪೂರ್ತಿ ಕುಡಿದು ಅಸಭ್ಯವಾಗಿ ವರ್ತಿಸಿದ ಕಾರಣ ಕೇಸ್ ದಾಖಲಾಗಿತ್ತು. ಇದೀಗ ಮತ್ತೆ ಕುಡಿದು ರಂಪಾಟ ಮಾಡಿದ 'ಜೈಲರ್' ವಿಲನ್ ವಿನಾಯಕನ್ ಅವರನ್ನು ಪೊಲೀಸರು ಬಂಧಿಸಿದ್ದಾರೆ.
ವಿನಾಯಕನ್ ಅಂಚಲುಮ್ಮೂಡು ಭಾಗದ ಹೋಟೆಲ್ ವೊಂದರಲ್ಲಿ ಸಿನಿಮಾ ಶೂಟ್ ಹಿನ್ನೆಲೆಯಲ್ಲಿ ತಂಗಿದ್ದರು. ಈ ಸಂದರ್ಭ ದಲ್ಲಿ ಹೋಟೆಲ್ನಿಂದ ಚೆಕ್ಔಟ್ ಆಗುವಾಗ ಸಿಬ್ಬಂದಿ ಜೊತೆ ಕಿರಿಕ್ ಮಾಡಿಕೊಂಡಿದ್ದು, ಕುಡಿದ ಮತ್ತಿ ನಲ್ಲಿ ಜಗಳ ಮಾಡಿದ್ದಾರೆ. ವಿನಾಯಕನ್ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದ್ದು ಈ ವೇಳೆ ಅವರು ಮಿತಿ ಮೀರಿ ಮದ್ಯ ಸೇವನೆ ಮಾಡಿದ್ದು ಸ್ಪಷ್ಟವಾಗಿದೆ. ಸೆಕ್ಷನ್ 118 (ಎ) ಅಡಿಯಲ್ಲಿ ನಟನ ವಿರುದ್ದ ಪ್ರಕರಣ ದಾಖಲಾಗಿದೆ. ಕೇರಳ ಪೊಲೀಸರು ನಟನನ್ನು ಬಂಧಿ ಸಿದ ಬಳಿಕವೂ ಕೂಗಾಡಿ ಪೊಲೀಸರಿಗೆ ಅವಾಜ್ ಹಾಕಿದ್ದು ಕಂಡು ಬಂದಿದೆ. ಆ ಬಳಿಕ ನಟನನ್ನು ಜಾಮೀನಿನ ಮೇರೆಗೆ ಬಿಡುಗಡೆ ಮಾಡಲಾಗಿದೆ.
ವಿನಾಯಕನ್ ಅವರು ಮಲಯಾಳಂನ ಹಲವು ಹಿಟ್ ಸಿನಿಮಾಗಳಲ್ಲಿ ನಟಿಸಿ ಖ್ಯಾತಿ ಗಳಿಸಿದ್ದಾರೆ. ಮೊದಲಿಗೆ ಮಾಂತ್ರಿಕಮ್ ಎನ್ನುವ ಚಿತ್ರದಲ್ಲಿ ಬಣ್ಣ ಹಚ್ಚಿದ್ದರು. 'ಸ್ಟಾಪ್ ವೈಲೆನ್ಸ್ ವೆಲ್ಲಿತಿರಾ, ಚಾತಿಕಥಾ ಚಂತು, ಛೋಟಾ ಮುಂಬೈ, ಮತ್ತು 'ತೊಟ್ಟ ಪ್ಪನ್' ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿ ಗಮನ ಸೆಳೆದಿದ್ದರು.ಜೈಲರ್' ಸಿನಿಮಾದಲ್ಲಿ ರಜನಿಕಾಂತ್ ಜೊತೆ ಖಳ ನಾಗಿ ನಟಿಸಿದ್ದು ಇವರ ನಟನೆಗೆ ಅಭಿಮಾನಿಗಳು ಫಿದಾ ಆಗಿದ್ದರು. ಇನ್ನು 2016ರಲ್ಲಿ ತೆರೆಕಂಡ ಮಲಯಾಳಂನ 'ಕಮ್ಮಟ್ಟಿ ಪಾಡಂ' ಸಿನಿಮಾದ ನಟನೆಗಾಗಿ ವಿನಾಯಕನ್‌ಗೆ ಭಾರಿ ಮೆಚ್ಚುಗೆ ಹಳಿಸಿದ್ದು ಅದಕ್ಕಾಗಿ ಅವರು ಅತ್ಯುತ್ತಮ ನಟ ಪ್ರಶಸ್ತಿ ಯನ್ನು ಕೂಡ ಗಳಿಸಿದ್ದರು.
ಇದನ್ನು ಓದಿ: Cyanide Movie: 20 ವರ್ಷಗಳ ಬಳಿಕ ಮೇ 23ರಂದು ಮರು ಬಿಡುಗಡೆಯಾಗಲಿದೆ ಎಎಂಆರ್ ರಮೇಶ್ ನಿರ್ದೇಶನದ ʼಸೈನೈಡ್ʼ ಚಿತ್ರ
ಆದರೆ ನಟನ ವೈಯಕ್ತಿಕ ಬದುಕು ಮಾತ್ರ ಸದಾ ವಿವಾದ ಗಳಿಂದಲೇ ಕೂಡಿದೆ. ಈ ಹಿಂದೆ ಗೋವಾದಲ್ಲಿ ಕಂಠಪೂರ್ತಿ ಕುಡಿದು ರಸ್ತೆ ಬದಿ ಟೀ ಮಾರುವ ವ್ಯಾಪಾರಿ ಜೊತೆ ಕಿರಿಕ್ ಮಾಡಿಕೊಂಡಿದ್ದರು.ಕಳೆದ ವರ್ಷ ಅಕ್ಟೋಬರ್‌ನಲ್ಲಿ ಪತ್ನಿ ಯೊಂದಿಗೆ ತಮ್ಮ ಫ್ಲಾಟ್‌ನ್ಲಲಿ ವಿನಾಯಕನ್ ಜಗಳ ಮಾಡಿಕೊಂಡಿದ್ದರು. ಹಲವು ಬಾರಿ ತಮ್ಮ ಹೇಳಿಕೆಗಳಿಂದ ವಿವಾದ ಸೃಷ್ಟಿಸಿಕೊಂಡಿದ್ದು, ಈ ಹಿಂದೆಯು ಈ ರೀತಿಯ ಅನೇಕ ಘಟನೆಗಳಲ್ಲಿ ಭಾಗಿಯಾಗಿದ್ದಾರೆ. ಈ ರೀತಿಯ ಕಿರಿಕ್ಗಳಿಂದ ನಟ ವಿನಾಯಕನ್ ಸದಾ ಸುದ್ದಿಯಲ್ಲಿರುತ್ತಾರೆ.