ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

‌Mohanlal: ಏಳೇ ದಿನಕ್ಕೆ 200 ಕೋಟಿ ರೂ. ಬಾಚಿಕೊಂಡ ʻದೃಶ್ಯಂ 3ʼ ಸಿನಿಮಾ; ನಿರ್ಮಾಪಕರಿಗೆ ಲಾಭವೋ ಲಾಭ!

ಮೋಹನ್‌ಲಾಲ್ ನಟನೆಯ ಮತ್ತು ಜೀತು ಜೋಸೆಫ್ ನಿರ್ದೇಶನದ 'ದೃಶ್ಯಂ 3' ಸಿನಿಮಾ ಬಿಡುಗಡೆಯಾದ ಕೇವಲ ಏಳೇ ದಿನಗಳಲ್ಲಿ ವಿಶ್ವಾದ್ಯಂತ ಬರೋಬ್ಬರಿ 200 ಕೋಟಿ ರೂಪಾಯಿ ಗಳಿಸಿ ಇತಿಹಾಸ ನಿರ್ಮಿಸಿದೆ. ಕರ್ನಾಟಕದಲ್ಲೂ 11 ಕೋಟಿ ರೂ. ಬಾಚಿರುವ ಈ ಕ್ರೈಮ್ ಥ್ರಿಲ್ಲರ್, 100 ಕೋಟಿ ಬಜೆಟ್‌ನಲ್ಲಿ ನಿರ್ಮಾಣವಾಗಿತ್ತು.

Drishyam 3: ಏಳೇ ದಿನಕ್ಕೆ 200 ಕೋಟಿ ರೂ. ಲೂಟಿ ಮಾಡಿದ ಜಾರ್ಜ್‌ಕುಟ್ಟಿ

-

Avinash GR
Avinash GR May 28, 2026 12:59 PM

ಮೋಹನ್‌ಲಾಲ್ ನಟನೆಯ ‘ದೃಶ್ಯಂ 3’ ಸಿನಿಮಾ ಬಿಡುಗಡೆಯಾದ ಕೇವಲ ಏಳೇ ದಿನಕ್ಕೆ ವಿಶ್ವಾದ್ಯಂತ ಬಾಕ್ಸ್ ಆಫೀಸ್‌ನಲ್ಲಿ ಬರೋಬ್ಬರಿ 200 ಕೋಟಿ ರೂಪಾಯಿಗಳಿಗೂ ಹೆಚ್ಚು ಕಲೆಕ್ಷನ್ ಮಾಡುವ ಮೂಲಕ ಹೊಸ ದಾಖಲೆ ಬರೆದಿದೆ. ಈ ಬ್ಲಾಕ್‌ಬಸ್ಟರ್ ಗೆಲುವನ್ನು ನಟ ಮೋಹನ್‌ಲಾಲ್ ಅವರು ಸಾಮಾಜಿಕ ಜಾದತಾಣದಲ್ಲಿ ವಿಶೇಷ ಪೋಸ್ಟರ್ ಹಂಚಿಕೊಳ್ಳುವ ಮೂಲಕ ಸಂಭ್ರಮಿಸಿದ್ದಾರೆ.

ಎಲ್ಲರಿಗೂ ಧನ್ಯವಾದಗಳು ಎಂದ ಮೋಹನ್‌ಲಾಲ್‌

ಈ ಥ್ರಿಲ್ಲರ್ ಫ್ರಾಂಚೈಸಿಯಲ್ಲಿ ಜಾರ್ಜ್‌ಕುಟ್ಟಿ ಮತ್ತು ಆತನ ಕುಟುಂಬದ ಭಾವನಾತ್ಮಕ ಪ್ರಯಾಣವನ್ನು ಸ್ಮರಿಸಿರುವ ಅವರು, ನಿರಂತರ ಬೆಂಬಲ ನೀಡಿದ ಪ್ರೇಕ್ಷಕರಿಗೆ ಧನ್ಯವಾದ ತಿಳಿಸಿದ್ದಾರೆ. "ಮೂರು ಸಿನಿಮಾಗಳು. ಮೂರು ಅಧ್ಯಾಯಗಳು. ಒಂದು ಮುರಿಯದ ಬಾಂಧವ್ಯ. ಜಾರ್ಜ್‌ಕುಟ್ಟಿ ಮತ್ತು ಕುಟುಂಬದೊಂದಿಗೆ ಸಾಗಿದ್ದಕ್ಕಾಗಿ ಧನ್ಯವಾದಗಳು" ಎಂದು ಮೋಹನ್‌ಲಾಲ್ ಬರೆದುಕೊಂಡಿದ್ದಾರೆ. ಇನ್ನು, ಈ ಸಿನಿಮಾವು ಕರ್ನಾಟಕದಲ್ಲಿ ಸುಮಾರು 11 ಕೋಟಿ ರೂ. ಕಮಾಯಿ ಮಾಡಿದೆ. ಇದು ಕೂಡ ಹೊಸ ದಾಖಲೆ ಅಗಿದೆ.

Drishyam 3: ಅಭಿಮಾನಿಗಳಿಗಾಗಿ ಭಾವನಾತ್ಮಕ ಪೋಸ್ಟ್‌ ಹಂಚಿಕೊಂಡ ಮೋಹನ್‌ ಲಾಲ್‌! ಥಿಯೇಟರ್‌ನಲ್ಲೇ ಕಣ್ಣೀರು

ಜೀತು ಜೋಸೆಫ್ ನಿರ್ದೇಶನದ ಈ ಸಿನಿಮಾವು ಮೋಹನ್‌ಲಾಲ್ ಅವರ ಜನ್ಮದಿನದ ಅಂಗವಾಗಿ ಮೇ 21 ರಂದು ವಿಶ್ವಾದ್ಯಂತ ಬಿಡುಗಡೆಯಾಗಿತ್ತು. ಈ ಕ್ರೈಮ್ ಡ್ರಾಮಾ ಥ್ರಿಲ್ಲರ್ ಸಿನಿಮಾವು ಮೊದಲ ದಿನದಿಂದಲೇ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಮತ್ತು ಭರ್ಜರಿ ಕಲೆಕ್ಷನ್ ಗಳಿಸುತ್ತಿದೆ. ಚಿತ್ರದಲ್ಲಿ ಮೋಹನ್‌ಲಾಲ್ ಅವರೊಂದಿಗೆ ಮೀನಾ, ಅನ್ಸಿಬಾ ಹಸನ್, ಎಸ್ತರ್ ಅನಿಲ್, ಸಿದ್ದಿಕ್ ಮತ್ತು ಆಶಾ ಶರತ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರವನ್ನು ಆಶೀರ್ವಾದ್ ಸಿನಿಮಾಸ್ ಬ್ಯಾನರ್ ಅಡಿ ಆಂಟೋನಿ ಪೆರುಂಬಾವೂರ್ ನಿರ್ಮಿಸಿದ್ದು, ಪೆನ್ ಸ್ಟುಡಿಯೋಸ್ ಮತ್ತು ಪ್ಯಾನ್ ರೆಮಾ ಸ್ಟುಡಿಯೋಸ್ ಜಂಟಿಯಾಗಿ ಪ್ರೆಸೆಂಟ್ ಮಾಡಿವೆ.

ಮಾಲಿವುಡ್‌ನಲ್ಲಿ ದಾಖಲೆ ಬರೆದ ʻದೃಶ್ಯಂ 3ʼ

ಮಲಯಾಳಂ ಚಿತ್ರರಂಗದ ಇತಿಹಾಸದಲ್ಲೇ ‘ಎರಡನೇ ಅತಿ ದೊಡ್ಡ ಓಪನಿಂಗ್’ ಪಡೆದ ಚಿತ್ರ ಎಂಬ ಹೆಗ್ಗಳಿಕೆಗೆ ‘ದೃಶ್ಯಂ 3’ ಪಾತ್ರವಾಗಿತ್ತು. ಮೊದಲ ಸ್ಥಾನದಲ್ಲಿ ಮೋಹನ್‌ಲಾಲ್ ಅವರದ್ದೇ ‘L2: ಎಂಪುರಾನ್’ ಸಿನಿಮಾ ಇದೆ. ಇದೀಗ ಕೇವಲ ಒಂದು ವಾರದಲ್ಲಿ 200 ಕೋಟಿ ಕ್ಲಬ್ ಸೇರುವ ಮೂಲಕ ‘2018’, ‘ಮಂಜುಮ್ಮೇಲ್ ಬಾಯ್ಸ್’, ‘L2: ಎಂಪುರಾನ್’, ‘ಲೋಕ ಚಾಪ್ಟರ್ 1: ಚಂದ್ರ’, ‘ತುಡರುಮ್’ ಮತ್ತು ‘ವಾಳಾ 2’ ಸಿನಿಮಾಗಳ ಸಾಲಿಗೆ ‘ದೃಶ್ಯಂ 3’ ಕೂಡ ಸೇರಿಕೊಂಡಿದೆ.

ಫ್ಯಾನ್ಸ್‌ಗೆ ಧನ್ಯವಾದ ಹೇಳಿದ ಮೋಹನ್‌ಲಾಲ್



ಮಲಯಾಳಂ ಚಿತ್ರರಂಗದಲ್ಲಿ 300 ಕೋಟಿ ರೂಪಾಯಿ ಗಳಿಸಿದ ಏಕೈಕ ಚಿತ್ರ ಎಂಬ ದಾಖಲೆ ‘ಲೋಕ ಚಾಪ್ಟರ್ 1: ಚಂದ್ರ’ ಹೆಸರಿನಲ್ಲಿದ್ದು, ಮುಂಬರುವ ದಿನಗಳಲ್ಲಿ ‘ದೃಶ್ಯಂ 3’ ಸಿನಿಮಾ ಕೂಡ ಈ ದಾಖಲೆಯನ್ನು ಮುರಿಯುವ ಸಾಧ್ಯತೆ ಇದೆ ಎನ್ನಲಾಗಿದೆ.

ನಿರ್ಮಾಪಕರಿಗೆ ಲಾಭವೋ ಲಾಭ

2013ರಲ್ಲಿ ಬಂದ ʻದೃಶ್ಯಂʼ ಸಿನಿಮಾವು 4 ಕೋಟಿ ರೂ. ಬಜೆಟ್‌ನಲ್ಲಿ ನಿರ್ಮಾಣವಾಗಿತ್ತು. ಬಾಕ್ಸ್‌ ಆಫೀಸ್‌ನಲ್ಲಿ 65+ ಕೋಟಿ ರೂ. ಗಳಿಕೆ ಮಾಡಿತ್ತು. ಆನಂತರ ʻದೃಶ್ಯಂ 2ʼ ಸಿನಿಮಾವು ಒಟಿಟಿಯಲ್ಲಿ ರಿಲೀಸ್‌ ಆಗಿ, ಉತ್ತಮ ರೆಸ್ಪಾನ್ಸ್‌ ಪಡೆದುಕೊಂಡಿತ್ತು. ಇನ್ನು, ಈಗ ತೆರೆಕಂಡಿರುವ ʻದೃಶ್ಯಂ 3ʼ ಸಿನಿಮಾವನ್ನು ಅಂದಾಜು 100 ಕೋಟಿ ರೂ. ಬಜೆಟ್‌ನಲ್ಲಿ ನಿರ್ಮಾಣವಾಗಿತ್ತು. ಸದ್ಯ ಈ ಸಿನಿಮಾವು 200 ಕೋಟಿ ರೂ. ಗಳಿಕೆ ಮಾಡಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಗಳಿಕೆ ಆಗುವ ಸಾಧ್ಯತೆ ಇದೆ. ಅಲ್ಲದೆ, ಓಟಿಟಿ ಹಕ್ಕುಗಳು ಕೂಡ ದುಬಾರಿ ಮೊತ್ತಕ್ಕೆ ಸೇಲ್‌ ಆಗಿದೆ. ಹಾಗಾಗಿ, ನಿರ್ಮಾಪಕರಿಗೆ ದೊಡ್ಡಮಟ್ಟದ ಲಾಭ ತಂದುಕೊಡಲಿದೆ.