ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಹೊರಬಿತ್ತು ಅಕ್ಷಯ್‌ ಕುಮಾರ್‌ ನಟನೆಯ ʼಕೇಸರಿ ಚಾಪ್ಟರ್​​ 2ʼ ಚಿತ್ರದ ರಿವ್ಯೂ; ನ್ಯಾಶನಲ್ ಅವಾರ್ಡ್ ಪಕ್ಕ ಎಂದ ಕೇಂದ್ರ ಸಚಿವ

Kesari Chapter 2: ಜಲಿಯನ್‌ ವಾಲಾಭಾಗ್‌ ಹತ್ಯಾಕಾಂಡವನ್ನು ಆಧರಿಸಿ ತಯಾರಾದ ಬಾಲಿವುಡಟ್‌ ಚಿತ್ರ ʼಕೇಸರಿ ಚಾಪ್ಟರ್‌ 2ʼ ಬಿಡುಗಡೆಗೆ ಸಜ್ಜಾಗಿದೆ. ಈ ಹಿನ್ನೆಲೆಯಲ್ಲಿ ಚಿತ್ರತಂಡ ದೆಹಲಿಯಲ್ಲಿ ಮಂಗಳವಾರ ಸ್ಪೆಶಲ್ ಪ್ರೀಮಿಯರ್‌ ಶೋ ಆಯೋಜಿಸಿತ್ತು. ಚಿತ್ರ ವೀಕ್ಷಿಸಿದ ರಾಜಕೀಯ ನಾಯಕರು ಮೆಚ್ಚುಗೆ ಸೂಚಿಸಿದ್ದಾರೆ.

ಅಕ್ಷಯ್‌ ಕುಮಾರ್‌ ನಟನೆಯ ʼಕೇಸರಿ ಚಾಪ್ಟರ್​​ 2ʼ ಚಿತ್ರದ ಮೊದಲ ರಿವ್ಯೂ ಔಟ್‌

ʼಕೇಸರಿ ಚಾಪ್ಟರ್​​ 2ʼ ಚಿತ್ರದ ಪೋಸ್ಟರ್‌.

Profile Sushmitha Jain Apr 16, 2025 1:52 PM

ಹೊಸದಿಲ್ಲಿ: ಬಾಲಿವುಡ್ (Bollywood)ನ ಬಹುನಿರೀಕ್ಷಿತ ಚಿತ್ರ 'ಕೇಸರಿ ಚಾಪ್ಟರ್​​ 2' (Kesari Chapter 2) ರಿಲೀಸ್‌ಗೆ ರೆಡಿಯಾಗಿದ್ದು, ಮಂಗಳವಾರ ದೆಹಲಿಯಲ್ಲಿ ಚಿತ್ರತಂಡ ಸ್ಪೆಶಲ್ ಪ್ರೀಮಿಯರ್‌ ಶೋ ಏರ್ಪಡಿಸಿತ್ತು. ಸಿನಿಮಾ ನೋಡಿದ ರಾಜಕೀಯ ನಾಯಕರು ಬಹುಪರಾಕ್ ಎಂದಿದ್ದಾರೆ. ಸಿನಿಮಾದಲ್ಲಿ ಅಕ್ಷಯ್ ಕುಮಾರ್ ಹಾಗೂ ಆರ್.ಮಾಧವನ್ ನಟನೆ ಅದ್ಭುತವಾಗಿ ಮೂಡಿ ಬಂದಿದ್ದು, ಈ ಚಿತ್ರ ನ್ಯಾಶನಲ್ ಅವಾರ್ಡ್ (National Award)ಗೆ ಅರ್ಹವಾಗಿದೆ ಎಂದು ಬಹುತೇಕರು ಅಭಿಪ್ರಾಯ ಪಟ್ಟಿದ್ದಾರೆ.

ದೆಹಲಿಯಲ್ಲಿ ಚಿತ್ರತಂಡ ಆಯೋಜಿಸಿದ್ದ ಪ್ರೀಮಿಯರ್‌ ಶೋದಲ್ಲಿ ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ (Union Minister Hardeep Singh Puri), ದಿಲ್ಲಿ ಮುಖ್ಯಮಂತ್ರಿ ರೇಖಾ ಗುಪ್ತ (Rekha Gupta) ಸೇರಿದಂತೆ ಹಲವು ಮುಖಂಡರು ಭಾಗಿಯಾಗಿದ್ದರು. ಹರ್ದೀಪ್ ಸಿಂಗ್ ಪುರಿ ತಮ್ಮ ಎಕ್ಸ್‌ ಖಾತೆಯಲ್ಲಿ ಸಿನಿಮಾವನ್ನು ಹಾಡಿ ಹೊಗಳಿದ್ದಾರೆ. 'ʼಕೇಸರಿ ಚಾಪ್ಟರ್ 2' ಭಾರತದ ಸ್ವಾತಂತ್ರ್ಯ ಚಳುವಳಿ ಮತ್ತು ಜಲಿಯನ್ ವಾಲಾಭಾಗ್‌ ಹುತಾತ್ಮರಿಗೆ ಸಮರ್ಪಿತವಾಗಿದ್ದು, ನಮ್ಮನ್ನು ಆಗಲಿದ ಯೋಧರ ತ್ಯಾಗಕ್ಕೆ ಈ ಚಿತ್ರದ ಮೂಲಕ ಗೌರವ ನಮನ ಸಲ್ಲಿಸಲಾಗಿದೆ" ಎಂದು ಬರೆದುಕೊಂಡಿದ್ದಾರೆ.



ದಿಲ್ಲಿ ಸಿಎಂ ರೇಖಾ ಗುಪ್ತಾ ಅವರು ಕೂಡ ಸಿನಿಮಾದ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದು, ಪ್ರಮುಖ ಪಾತ್ರಗಳಲ್ಲಿ ನಟಿಸಿದ ಅಕ್ಷಯ್ ಕುಮಾರ್, ಆರ್.ಮಾಧವನ್ ಅವರೊಂದಿಗೆ ಪೋಸ್‌ ನೀಡುವ ಫೋಟೊಗಳನ್ನು ಹಂಚಿಕೊಂಡಿದ್ದಾರೆ. ʼʼಕೇಸರಿ ಚಾಪ್ಟರ್ 2ʼ ಚಿತ್ರದಲ್ಲಿ ದೇಶಭಕ್ತಿ, ಧೈರ್ಯ ಮತ್ತು ತ್ಯಾಗದ ಮನೋಭಾವವನ್ನು ಬಹಳ ಅಚ್ಚುಕಟ್ಟಾಗಿ ಪರದ ಮೇಲೆ ಪ್ರಸ್ತುತ ಪಡಿಸಿದ್ದಾರೆ. ಪ್ರತಿಯೊಂದು ದೃಶ್ಯವನ್ನು ಭಾವನಾತ್ಮಕ ರೀತಿಯಲ್ಲಿ ತೋರಿಸಲಾಗಿದ್ದು, ಹೆಮ್ಮೆ ಮತ್ತು ಸ್ಫೂರ್ತಿಯಿಂದ ಕೂಡಿದೆʼʼ ಎಂದಿದ್ದಾರೆ.

ಈ ಸುದ್ದಿಯನ್ನು ಓದಿ: Kesari Chapter 2: ʼಕೇಸರಿ 2ʼ ಚಿತ್ರತಂಡದಿಂದ ಜಲಿಯನ್‌ವಾಲಾ ಭಾಗ್ ಸಂತ್ರಸ್ತರಿಗೆ ಗೌರವಪೂರ್ಣ ನಮನ

ʼಖಿಲಾಡಿ 786ʼ ಮತ್ತು ʼಹೌಸ್‌ಫುಲ್ 2ʼ ಚಿತ್ರದಲ್ಲಿ ಅಕ್ಷಯ್ ಕುಮಾರ್ ಅವರೊಂದಿಗೆ ತೆರೆಹಂಚಿಕೊಂಡಿದ್ದ ನಟಿ ಆಸಿನ್ ತೊಟ್ಟುಂಕಲ್ ಅವರ ಪತಿ ಉದ್ಯಮಿ ರಾಹುಲ್ ಶರ್ಮಾ ಕೂಡ ಈ ಪ್ರೀಮಿಯರ್‌ ಶೋದಲ್ಲಿ ಭಾಗಿಯಾಗಿದ್ದರು. ಸಿನಿಮಾ ಬಗ್ಗೆ ಅಭಿಪ್ರಾಯ ಹಂಚಿಕೊಂಡ ಅವರು, “ನಾವೆಲ್ಲರೂ ಇತಿಹಾಸದ ಪುಸ್ತಕಗಳಲ್ಲಿ ಜಲಿಯನ್ ವಾಲಾಭಾಗ್ ಬಗ್ಗೆ ಓದಿದ್ದೇವೆ. ಆದರೆ ಈ ಚಿತ್ರದ ಮೂಲಕ ಕಣ್ಣಾರೆ ನೋಡುವ ಅವಕಾಶ ಸಿಕ್ಕಿತು. ಈ ಸಿನಿಮಾ ನೋಡಿ ನನ್ನ ಮನಸ್ಸು ತುಂಬಿ ಬಂದಿದ್ದು, ನನ್ನೊಳಗೆ ಆಗುತ್ತಿರುವ ಭಾವೋದ್ರೆಕವನ್ನು ಹೇಳಲು ಪದಗಳೇ ಸಿಗುತ್ತಿಲ್ಲ. ಈ ಚಿತ್ರ ಅದ್ಭುತವಾಗಿದ್ದು, ರಾಷ್ಟ್ರ ಪ್ರಶಸ್ತಿಗೆ ಅರ್ಹವಾಗಿದೆʼʼ ಎಂದಿದ್ದಾರೆ.



ಈ ಚಿತ್ರ ಜಲಿಯನ್ ವಾಲಾಭಾಗ್ ಹತ್ಯಾಕಾಂಡದ ನಂತರದ ಘಟನೆಗಳನ್ನಾಧರಿಸಿದ ಹಿಸ್ಟಾರಿಕಲ್​ ಡ್ರಾಮಾದ ಆಗಿದ್ದು​, ನ್ಯಾಯಾಲಯದಲ್ಲಿ ಅಕ್ಷಯ್ ಕುಮಾರ್ ಮತ್ತು ಆರ್.ಮಾಧವನ್ ನಡುವಿನ ರೋಮಾಂಚಕಾರಿ ವಾದ-ಪ್ರತಿವಾದ ದೃಶ್ಯಗಳನ್ನು ಒಳಗೊಂಡಿದೆ. ಇದು ಬ್ರಿಟಿಷ್ ಸಾಮ್ರಾಜ್ಯದ ವಿರುದ್ಧ ನ್ಯಾಯಕ್ಕಾಗಿ ನಡೆದ ಹೋರಾಟವನ್ನು ಎತ್ತಿ ತೋರಿಸಿದೆ. ಕರಣ್ ಜೋಹರ್ ಸೇರಿದಂತೆ ಚಿತ್ರದ ನಿರ್ಮಾಪಕರು ಮತ್ತು ಕಲಾವಿದರು ತಮ್ಮ ವಿವಿಧ ಸೋಶಿಯಲ್​ ಮೀಡಿಯಾ ಪ್ಲ್ಯಾಟ್​​​ಫಾರ್ಮ್​​​ಗಳಲ್ಲಿ ಚಿತ್ರದ ರಿವ್ಯೂ ಹಂಚಿಕೊಂಡಿದ್ದಾರೆ. ಏ. 18ರಂದು ಇದರು ತೆರೆ ಕಾಣಲಿದೆ.