ಬಿಗ್ ಬಾಸ್ ಸೀಸನ್ 12ರಲ್ಲಿ (Bigg Boss Kannada 12) ಗಿಲ್ಲಿ, ರಘು ಹಾಗೂ ರಕ್ಷಿತಾ ಪ್ರಮುಖ ಹೈಲೈಟ್ ಆಗಿದ್ದರು. ರಘು ಅವರು ಬಿಗ್ ಬಾಸ್ ಬರೋ ಮುಂಚೆಯೇ ಸಖತ್ ಫೇಮ್ ಅಲ್ಲಿ ಇದ್ದವರು. ಪವರ್ ಲಿಫ್ಟಿಂಗ್ (Power Lifting) ಕ್ರೀಡೆಯಲ್ಲಿ ಕರ್ನಾಟಕ ಹಾಗೂ ಭಾರತದ ಹೆಸರನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಳಗಿಸಿದ ಇವರಿಗೆ ಕರ್ನಾಟಕ ಸರ್ಕಾರ 2022 ರಲ್ಲಿ, ಕರ್ನಾಟಕ ಕ್ರೀಡಾ ರತ್ನ ಪ್ರಶಸ್ತಿಯನ್ನು ನೀಡಿ ಗೌರವವಿಸಿದೆ.ಪವರ್ ಲಿಫ್ಟಿಂಗ್ ಕ್ರೀಡೆಯಲ್ಲಿ ಈ ಮಹತ್ವದ ಪ್ರಶಸ್ತಿ ಸ್ವೀಕರಿಸಿದ ರಾಜ್ಯದ ಮೊಟ್ಟ ಮೊದಲ ಪವರ್ ಲಿಫ್ಟರ್ ಎಂಬ ಕೀರ್ತಿಗೆ ಕೂಡ ರಾಘವೇಂದ್ರ (Raghu) ಹೊಂಡದಕೇರಿ ಭಾಜನರಾಗಿದ್ದರು.
ವಿಲನ್ ಆಗಿ ನಟನೆ
5X ಪವರ್ ಲಿಫ್ಟಿಂಗ್‌ನಲ್ಲಿ ರಾಘವೇಂದ್ರ ವರ್ಲ್ಡ್ ಚಾಂಪಿಯನ್ ಕೂಡ ಆಗಿದ್ದಾರೆ. ರಾಘವೇಂದ್ರ ಸೆಲೆಬ್ರಿಟಿ ಕೋಚ್ ಕಮ್ ನಟ ಸಹ ರಘು ಅವರು ಸೆಲೆಬ್ರಿಟಿಗಳಿಗೆ ಜಿಮ್ ಕೋಚ್ ಮಾಡುತ್ತಾರೆ. ಕಾಟೇರ ಹಾಗೂ ಕ್ರಾಂತಿ ಚಿತ್ರಗಳಲ್ಲಿ ವಿಲನ್ ಪಾತ್ರ ಮಾಡಿದ್ದಾರೆ. ಇದಲ್ಲದೆ, ಕಾಂತಾರ: ಚಾಪ್ಟರ್ 1 ಚಿತ್ರದಲ್ಲಿಯೂ ಅವರುBigg Boss Kannada 12: PR ಇಲ್ಲದೇ ಇಲ್ಲಿ ತನಕ ಬಂದೆ! ಗಿಲ್ಲಿ ಬಗ್ಗೆ ಧ್ರುವಂತ್ ಹೇಳಿದ್ದೇನು? ವಿಲನ್ ಆಗಿ ನಟಿಸಿದ್ದಾರೆ.
ಇದನ್ನೂ ಓದಿ:
ಬಿಕಾಂ ಮುಗಿಸಿದ ಬಳಿಕ 19 ವರ್ಷ ವಯಸ್ಸಿನಲ್ಲೇ ಪ್ರತಿಷ್ಠಿತ ಟೆಕ್ನಿಕಲರ್ ಇಂಡಿಯಾ ಸಂಸ್ಥೆಯಲ್ಲಿ ಉದ್ಯೋಗ ಹಿಡಿದು, 12 ವರ್ಷಗಳ ಕಾಲ ಐಟಿ ಕ್ಷೇತ್ರದಲ್ಲಿ ಆನಿಮೇಷನ್ ವಿಭಾಗದಲ್ಲಿ ಇವರು ಕೆಲಸ ಮಾಡಿದ್ದಾರೆ. ಮಾಸಿಕ 1.25 ಲಕ್ಷ ರೂ. ಸಂಭಾವನೆ ಇತ್ತಂತೆ.
ಈ ಕುರಿತು ಅವರು ಸಂದರ್ಶನವೊಂದರಲ್ಲಿ ಮಾತನಾಡಿದ್ದರು. ಆದರೆ, ಕ್ರೀಡಾ ವಿಭಾಗದಲ್ಲಿ ದೇಶಕ್ಕೆ ಕೀರ್ತಿ ತರುವ ತುಡಿತ ಸಲುವಾಗಿ ಐಟಿ ಉದ್ಯೋಗವನ್ನು ತ್ಯಾಗ ಮಾಡಿ 2013ರಲ್ಲಿ ಪವರ್‌ಲಿಫ್ಟಿಂಗ್ ಆರಂಭಿಸಿದರು. ರಾ ಪವರ್‌ಲಿಫ್ಟಿಂಗ್‌ನಲ್ಲಿ ದೇಶದ ಅಗ್ರಮಾನ್ಯ ಲಿಫ್ಟರ್ ಆಗಿ ರಘು ಹೊರಹೊಮ್ಮಿದರು.
4ನೇ ರನ್ನರ್ ಅಪ್
ಬಿಗ್‌ಬಾಸ್ ಮನೆಗೆ ವೈಲ್ಡ್ ಕಾರ್ಡ್ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟಿದ್ದ ಮ್ಯೂಟಂಟ್ ರಘು ಅವರು 4ನೇ ರನ್ನರ್ ಅಪ್ ಆಗಿ ಹೊರ ಹೊಮ್ಮಿದ್ದರು. ಬಿಗ್‌ಬಾಸ್‌ನಿಂದ ಆಚೆ ಬರುತ್ತಿದ್ದಂತೆ ತಮ್ಮ ತೂಕವನ್ನು ಪರೀಕ್ಷಿಸಿದ್ದಾರೆ.
'ಬಿಗ್‌ಬಾಸ್ 12ರ 100 ದಿನಗಳ ಅದ್ಭುತ ಪ್ರಯಾಣ. ನಾನು 25 ಕೆ.ಜಿ ತೂಕ ಇಳಿಸಿಕೊಂಡೆ. ಆದರೆ ಸಾಕಷ್ಟು ಜನರ ಬೆಂಬಲ ಸಿಕ್ಕಿತು. ಪ್ರತಿದಿನ ನನ್ನನ್ನು ನಾನು ತಡೆದುಕೊಳ್ಳುವುದು ಅತ್ಯಂತ ಕಠಿಣದ ಕೆಲಸವಾಗಿತ್ತು. ನಾನು ಶೀಘ್ರದಲ್ಲೇ ಹಿಂತಿರುಗುತ್ತೇನೆ. ಮತ್ತು ನನ್ನ ಪ್ರಯಾಣವನ್ನು ಖಂಡಿತವಾಗಿಯೂ ನಿಮ್ಮೊಂದಿಗೆ ಹಂಚಿಕೊಳ್ಳುತ್ತೇನೆ. ಎಲ್ಲಾ ಬೆಂಬಲಕ್ಕೆ ಧನ್ಯವಾದಗಳು' ಎಂದು ಬರೆದುಕೊಂಡಿದ್ದಾರೆ.
ನಳಮಹಾರಾಜ
ರಘು ಅಂದರೆ ಮೊದಲಿಗೆ ಇಡೀ ಮನೆಗೆ ಅನ್ನ ನೀಡೋ ನಳಮಹಾರಾಜ ಆಗಿದ್ದರು. ಎಷ್ಟೇ ಕೋಪ, ತಾಪ ಇದ್ರೂ ಅಡುಗೆ ಮನೆಯಲ್ಲಿ ರಘು ವೆರೈಟಿ ತಿಂಡಿ, ತಿನಿಸುಗಳನ್ನ ಮಾಡೋದನ್ನ ಮರೆಯುತ್ತಿರಲಿಲ್ಲ. ಆ ವಿಚಾರಕ್ಕೆ ಸಾಕಷ್ಟು ಬಾರಿ ಗಿಲ್ಲಿ ಜೊತೆ ಜಗಳ ಆಗಿದ್ದೂ ಇದೆ.
ಇದನ್ನೂ ಓದಿ: Bigg Boss Kannada 12: ಗಿಲ್ಲಿ ನಿಜವಾದ ಬಡವ ಅಲ್ಲ ಎಂದಿದ್ದ ಅಶ್ವಿನಿ; ಧನುಷ್ ತಿರುಗೇಟು!
ಇನ್ನು ರಘು ಕೂಡ ಬಿಗ್ ಬಾಸ್ ಮನೆಯಲ್ಲಿ ಸ್ವಲ್ಪ ಸೈಲೆಂಟ್ ಇದ್ದರೂ ಗಿಲ್ಲಿ ಜೊತೆ ಒಳ್ಳೆಯ ಬಾಡಿಂಗ್ ಇತ್ತು. ಇವರಿಬ್ಬರ ಜೋಡಿ ಟ್ರೋಲ್ ಕೂಡ ಆಗಿತ್ತು. ಬಿಗ್ ಬಾಸ್ ಕನ್ನಡ 12’ ಕಾರ್ಯಕ್ರಮಕ್ಕೆ ವೈಲ್ಡ್ ಕಾರ್ಡ್ ಸ್ಪರ್ಧಿಯಾಗಿ ಬಂದವರು ರಘು.