71st National Film Awards 2023: ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ವಿಜೇತರ ಘೋಷಣೆ; ಅತ್ಯುತ್ತಮ ನಟ ಅವಾರ್ಡ್ ಪಡೆದ ಶಾರುಖ್ ಖಾನ್, ವಿಕ್ರಾಂತ್ ಮಾಸ್ಸಿ
ಭಾರತೀಯ ಸಿನಿಮಾದಲ್ಲಿನ ಶ್ರೇಷ್ಠತೆಯನ್ನು ಗೌರವಿಸುವ ಮತ್ತು ಆಚರಿಸುವ 71 ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭವು ಇಂದು ನವದೆಹಲಿಯಲ್ಲಿ ನಡೆಯುತ್ತಿದೆ. '12 ನೇ ಫೇಲ್' ಚಿತ್ರಕ್ಕಾಗಿ ಬಾಲಿವುಡ್ ನಟ ವಿಕ್ರಾಂತ್ ಮ್ಯಾಸ್ಸೆ ಹಾಗೂ ಜವಾನ್' ಚಿತ್ರಕ್ಕಾಗಿ ಶಾರುಖ್ ಖಾನ್ ಅತ್ಯುತ್ತಮ ನಾಯಕ ನಟ ಪ್ರಶಸ್ತಿಯನ್ನು ಗೆದ್ದರು.


ನವದೆಹಲಿ: ಭಾರತೀಯ ಸಿನಿಮಾದಲ್ಲಿನ ಶ್ರೇಷ್ಠತೆಯನ್ನು ಗೌರವಿಸುವ ಮತ್ತು ಆಚರಿಸುವ 71 ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭವು ಇಂದು ನವದೆಹಲಿಯಲ್ಲಿ ನಡೆಯುತ್ತಿದೆ. ರಾಷ್ಟ್ರೀಯ ಪ್ರಶಸ್ತಿಗಳು ಭಾರತೀಯ ಸಿನಿಮಾದಲ್ಲಿ ಅತ್ಯಂತ ಗೌರವಾನ್ವಿತ ಪ್ರಶಸ್ತಿಗಳಲ್ಲಿ ಒಂದಾಗಿದ್ದು, ವಿವಿಧ ವಿಭಾಗಗಳಲ್ಲಿ ಅತ್ಯುತ್ತಮ ಕಲಾತ್ಮಕ ಕೊಡುಗೆಗಳನ್ನು ನೀಡಿದವರಿಗೆ ಈ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುತ್ತದೆ.
ಪ್ರಶಸ್ತಿ ಗೆದ್ದ ಕಲಾವಿದರ ಪಟ್ಟಿ ಇಲ್ಲಿದೆ
ಅತ್ಯುತ್ತಮ ಹಿಂದಿ ಚಲನಚಿತ್ರ:
ಕಥಲ್: ಎ ಜ್ಯಾಕ್‌ಫ್ರೂಟ್ ಮಿಸ್ಟರಿ ಚಿತ್ರವು ಅತ್ಯುತ್ತಮ ಹಿಂದಿ ಚಲನಚಿತ್ರಕ್ಕಾಗಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನು ಗೆದ್ದಿದೆ. ಈ ಚಿತ್ರವನ್ನು ನೆಟ್‌ಫ್ಲಿಕ್ಸ್ ಎಂಟರ್‌ಟೈನ್‌ಮೆಂಟ್ ಸರ್ವೀಸಸ್ ಪ್ರೈವೇಟ್ ಲಿಮಿಟೆಡ್, ಬಾಲಾಜಿ ಟೆಲಿಫಿಲ್ಮ್ಸ್ ಲಿಮಿಟೆಡ್ ಮತ್ತು ಸಿಖ್ಯಾ ಎಂಟರ್‌ಟೈನ್‌ಮೆಂಟ್ ಪ್ರೈವೇಟ್ ಲಿಮಿಟೆಡ್ ನಿರ್ಮಿಸಿವೆ. ಈ ಚಿತ್ರವನ್ನು ಯಶೋವರ್ಧನ್ ಮಿಶ್ರಾ ನಿರ್ದೇಶಿಸಿದ್ದಾರೆ.
ಅತ್ಯುತ್ತಮ ನಟ ಪ್ರಶಸ್ತಿ:
'12 ನೇ ಫೇಲ್' ಚಿತ್ರಕ್ಕಾಗಿ ಬಾಲಿವುಡ್ ನಟ ವಿಕ್ರಾಂತ್ ಮ್ಯಾಸ್ಸೆ ಹಾಗೂ ಜವಾನ್' ಚಿತ್ರಕ್ಕಾಗಿ ಶಾರುಖ್ ಖಾನ್ ಅತ್ಯುತ್ತಮ ನಾಯಕ ನಟ ಪ್ರಶಸ್ತಿಯನ್ನು ಗೆದ್ದರು.
ಅತ್ಯುತ್ತಮ ನಿರ್ದೇಶನ
ದಿ ಕೇರಳ ಸ್ಟೋರಿ' (ಹಿಂದಿ) ಗಾಗಿ ಸುದೀಪ್ತೋ ಸೇನ್ ಅತ್ಯುತ್ತಮ ನಿರ್ದೇಶನ ಪ್ರಶಸ್ತಿ ಪಡೆದಿದ್ದಾರೆ.
ಅತ್ಯುತ್ತಮ ನಟಿ ಪ್ರಶಸ್ತಿ
ಬಾಲಿವುಡ್ ನಟಿ ರಾಣಿ ಮುಖರ್ಜಿ 'ಶ್ರೀಮತಿ ಚಟರ್ಜಿ vs ನಾರ್ವೆ' ಚಿತ್ರಕ್ಕಾಗಿ ಅತ್ಯುತ್ತಮ ಪ್ರಮುಖ ನಟಿ ಪ್ರಶಸ್ತಿಯನ್ನು ಗೆದ್ದರು.
ರಾಷ್ಟ್ರೀಯ, ಸಾಮಾಜಿಕ ಮತ್ತು ಪರಿಸರ ಮೌಲ್ಯಗಳನ್ನು ಉತ್ತೇಜಿಸುವ ಅತ್ಯುತ್ತಮ ಚಲನಚಿತ್ರ:
ರಾಷ್ಟ್ರೀಯ, ಸಾಮಾಜಿಕ ಮತ್ತು ಪರಿಸರ ಮೌಲ್ಯಗಳನ್ನು ಉತ್ತೇಜಿಸುವ ಅತ್ಯುತ್ತಮ ಚಲನಚಿತ್ರ ಪ್ರಶಸ್ತಿ ಮೇಘನಾ ಗುಲ್ಜಾರ್ ನಿರ್ದೇಶನದ 'ಸ್ಯಾಮ್ ಬಹದ್ದೂರ್' (ಹಿಂದಿ) ಚಿತ್ರಕ್ಕೆ ಸಂದಿದೆ.
ಮನರಂಜನೆಗಾಗಿ ಅತ್ಯುತ್ತಮ ಜನಪ್ರಿಯ ಚಿತ್ರರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ ಮನರಂಜನೆಗಾಗಿ ಅತ್ಯುತ್ತಮ ಜನಪ್ರಿಯ ಚಲನಚಿತ್ರ ಪ್ರಶಸ್ತಿಯನ್ನು ಗೆದ್ದಿದೆ.
ಅತ್ಯುತ್ತಮ ಮಕ್ಕಳ ಚಿತ್ರ
ನಾಲ್ 2 (ಮರಾಠಿ) ಅತ್ಯುತ್ತಮ ಮಕ್ಕಳ ಚಿತ್ರಕ್ಕಾಗಿ ರಾಷ್ಟ್ರೀಯ ಪ್ರಶಸ್ತಿಯನ್ನು ಗೆದ್ದಿದೆ.