ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Karavali: ಮಲಯಾಳಂ - ತಮಿಳಿನಲ್ಲಿ ಮಿಂಚಿದ ಮೇಲೆ ಕನ್ನಡಕ್ಕೆ ಮರಳಿದ ಸುಶ್ಮಿತಾ ಭಟ್; ಇದಕ್ಕೆ ರಾಜ್‌ ಬಿ ಶೆಟ್ಟಿಯೇ ಕಾರಣ!

Sushmita Bhat In Karavali: ಪರಭಾಷೆಯಲ್ಲಿ ಬ್ಲಾಕ್‌ಬಸ್ಟರ್ ಹಿಟ್‌ಗಳನ್ನು ಕೊಟ್ಟಿರುವ ನಟಿ ಸುಶ್ಮಿತಾ ಭಟ್‌, ಇದೀಗ ರಾಜ್ ಬಿ ಶೆಟ್ಟಿ ನಟಿಸಿ, ಗುರುದತ್ ಗಾಣಿಗ ನಿರ್ದೇಶನ ಮಾಡುತ್ತಿರುವ 'ಕರಾವಳಿ' ಸಿನಿಮಾವನ್ನು ಸೇರಿಕೊಂಡಿದ್ದಾರೆ. ರಾಜ್ ಬಿ ಶೆಟ್ಟಿ ಅವರೊಂದಿಗೆ ಕೆಲಸ ಮಾಡುವ ಅವಕಾಶ ಸಿಕ್ಕಿದ್ದಕ್ಕೆ ಸುಶ್ಮಿತಾ ಖುಷಿಯಾಗಿದ್ದಾರೆ.

ಸೋಶಿಯಲ್‌ ಮೀಡಿಯಾದಲ್ಲಿ ಮಿಂಚಿದ್ದ ಸುಶ್ಮಿತಾ ಭಟ್‌ಗೆ ಬಿಗ್‌ ಚಾನ್ಸ್‌

-

Avinash GR
Avinash GR Nov 25, 2025 3:58 PM

ಕನ್ನಡ ನಟಿ ಸುಶ್ಮಿತಾ ಭಟ್‌ ಅವರು ಈಗಾಗಲೇ ಪರಭಾಷೆಯಲ್ಲಿ ಮಿಂಚುತ್ತಿರುವುದು ಸಾಕಷ್ಟು ಹವಾ ಮಾಡುತ್ತಿದ್ದಾರೆ. ಬ್ಲಾಕ್‌ ಬಸ್ಟರ್‌ ಸಿನಿಮಾಗಳಲ್ಲಿ ಬಣ್ಣ ಹಚ್ಚಿದ್ದಾರೆ. ಕನ್ನಡದಲ್ಲಿ ʻಚೌಚೌಬಾತ್‌ʼ ಸಿನಿಮಾದಲ್ಲಿ ನಟಿಸಿದ್ದ ಸುಶ್ಮಿತಾ ಭಟ್‌ ಅವರು ಆನಂತರ ಪರಭಾಷೆಯಲ್ಲಿ ಬ್ಯುಸಿಯಾದರು. ಆದರೆ ಇದೀಗ ಪುನಃ ಕನ್ನಡದಕ್ಕೆ ಮರಳಿದ್ದಾರೆ. ಅದಕ್ಕೆ ಕಾರಣವಾದವರು ನಟ ಮತ್ತು ನಿರ್ದೇಶಕ ರಾಜ್‌ ಬಿ ಶೆಟ್ಟಿ.

ʻಕರಾವಳಿʼ ಸಿನಿಮಾದಲ್ಲಿ ಸುಷ್ಮಿತಾ ಭಟ್

ಸದಾ ಒಂದಲ್ಲ ಒಂದು ವಿಚಾರದಿಂದ ಸುದ್ದಿಯಾಗುತ್ತಿರುವ ʻಕರಾವಳಿʼ ತಂಡಕ್ಕೆ ಈಗ ಸುಶ್ಮಿತಾ ಭಟ್‌ ಸೇರ್ಪಡೆ ಆಗಿದೆ . ಈ ಸಿನಿಮಾದಲ್ಲಿ ಮಹಾವೀರನಾಗಿ ರಾಜ್ ಬಿ. ಶೆಟ್ಟಿ ನಟಿಸುತ್ತಿದ್ದು, ಅವರಿಗೆ ಜೋಡಿಯಾಗಿ ಸುಷ್ಮಿತಾ ಭಟ್ ಕಾಣಿಸಿಕೊಳ್ಳಲಿದ್ದಾರೆ. ಸೋಷಿಯಲ್ ಮಿಡಿಯಾದಲ್ಲಿ ಫೋಟೋಶೂಟ್‌ಗಳ ಮೂಲಕವೇ ಸದ್ದು ಮಾಡಿರುವ ಸುಷ್ಮಿತಾ ಭಟ್, ಈಗ ಬಹುನಿರೀಕ್ಷಿತ ಕರಾವಳಿಗೆ ಸಾಥ್ ನೀಡಿದ್ದಾರೆ‌. ಚಿತ್ರತಂಡ ಈಗ ಸುಶ್ಮಿತಾ ಅವರ ಪಾತ್ರದ ಪೋಸ್ಟರ್‌ ರಿಲೀಸ್ ಮಾಡಿದೆ. ಕರಾವಳಿ ಸಿನಿಮಾದಲ್ಲಿ ಪಕ್ಕ ಮಂಗಳೂರಿನ ಹುಡುಗಿ ಪಾತ್ರದಲ್ಲಿ ಸುಶ್ಮಿತಾ ನಟಿಸುತ್ತಿದ್ದಾರೆ.

Kantara: Chapter -1: ರಾಜ್‌ ಬಿ ಶೆಟ್ಟಿ ಹಾಗೂ ರಕ್ಷಿತ್ ಶೆಟ್ಟಿ'ಕಾಂತಾರ: ಚಾಪ್ಟರ್ 1’ ಸಿನಿಮಾ ನೋಡಿಲ್ವಾ? ರಿಷಬ್‌ ಪತ್ನಿ ಪ್ರಗತಿ ಹೇಳಿದ್ದೇನು?

ಸುಶ್ಮಿತಾ ಭಟ್‌ ಹೇಳಿದ್ದೇನು?

ʻಕರಾವಳಿʼ ಚಿತ್ರತಂಡವು ಸುಷ್ಮಿತಾ ಭಟ್ ಅವ್ರನ್ನ ಈ ಪಾತ್ರಕ್ಕಾಗಿ ಅಪ್ರೋಚ್ ಮಾಡಿದಾಗ, ಅವರು ಖುಷಿಯಿಂದ ಒಪ್ಪಿಕೊಂಡರಂತೆ! "ಕರಾವಳಿ ಸಿನಿಮಾದ ಈ ಪಾತ್ರವನ್ನು ಒಪ್ಪಿಕೊಳ್ಳಲು ಮೊದಲ ಕಾರಣ ರಾಜ್ ಬಿ ಶೆಟ್ಟಿ. ನಾನು ಅವರಿಂದ ತುಂಬಾ ಕಲಿಯಬಹುದು ಅನ್ನೋ ಉದ್ದೇಶದಿಂದಲೇ ಈ ಸಿನಿಮಾವನ್ನು ಒಪ್ಪಿಕೊಂಡೆ. ಚಿತ್ರೀಕರಣ ಮಾಡಿದ್ದು ಕಡಿಮೆ ದಿನಗಳಾದರೂ ಕೂಡ ಸಾಕಷ್ಟು ಕಲಿತಿದ್ದೇನೆ. ರಾಜ್ ಬಿ. ಶೆಟ್ಟಿ ಪವರ್ ಹೌಸ್ ಇದ್ದಂತೆ. ಅವರಿಗೆ ಸಖತ್ ಎನರ್ಜಿ ಇದೆ. ಸೆಟ್‌ನಲ್ಲಿ ಯಾವಾಗಲೂ ಆಕ್ಟಿವ್ ಆಗಿರುತ್ತಾರೆ. ಅವರ ಜೊತೆ ಕೆಲಸ ಮಾಡಿದ್ದು ತುಂಬಾ ಖುಷಿ ಇದೆ" ಎನ್ನುತ್ತಾರೆ ಸುಶ್ಮಿತಾ ಭಟ್.

Prajwal Devaraj: 'ರಾಕ್ಷಸ' ಅವತಾರದಲ್ಲಿ ಪ್ರಜ್ವಲ್‌ ದೇವರಾಜ್‌; ಈ ಬಹು ನಿರೀಕ್ಷಿತ ಚಿತ್ರ ಶಿವರಾತ್ರಿಯಂದು ರಿಲೀಸ್‌

ಕರಾವಳಿ ಸಿನಿಮಾದಲ್ಲಿ ಪ್ರಜ್ವಲ್ ದೇವರಾಜ್ ಹೀರೋ ಆಗಿ ಕಾಣಿಸಿಕೊಂಡಿದ್ದು, ಅವರಿಗೆ ಜೋಡಿಯಾಗಿ ಸಂಪದಾ ಇದ್ದಾರೆ. ರಾಜ್ ಬಿ ಶೆಟ್ಟಿ, ಮಿತ್ರ, ರಮೇಶ್ ಇಂದಿರ, ಶ್ರೀಧರ್ ಮುಂತಾದವರು ನಟಿಸುತ್ತಿರುವ ಈ ಸಿನಿಮಾಗೆ ಈ ಸುಶ್ಮಿತಾ ಭಟ್‌ ಅವರ ಆಗಮನ ಆಗಿದೆ. ಗುರುದತ್ ಗಾಣಿಗ ನಿರ್ದೇಶನದ ಈ ಸಿನಿಮಾವನ್ನು ವಿಕೆ ಫಿಲ್ಮಂ ಅಸೋಸಿಯೇಷನ್ ಮತ್ತು ಗಾಣಿಗ ಫಿಲ್ಮ್ಸ್‌ ನಿರ್ಮಾಣ ಮಾಡುತ್ತಿವೆ. ಈ ಚಿತ್ರಕ್ಕೆ ಸಚಿನ್ ಬಸ್ರೂರು ಸಂಗೀತ ಸಂಯೋಜನೆ ಮಾಡಿದ್ದಾರೆ. ಅಭಿಮನ್ಯು ಸದಾನಂದನ್ ಛಾಯಾಗ್ರಹಣ ಮಾಡುತ್ತಿದ್ದಾರೆ.

ಹಿಟ್‌ ಸಿನಿಮಾ ಕೊಟ್ಟಿರುವ ಸುಶ್ಮಿತಾ

ಈ ವರ್ಷದ ಆರಂಭದಲ್ಲಿ ಮಮ್ಮುಟ್ಟಿ ಜೊತೆಗೆ ಡೊಮಿನಿಕ್ ಅಂಡ್ ದಿ ಲೇಡೀಸ್' ಪರ್ಸ್ ಎಂಬ ಸಿನಿಮಾದಲ್ಲಿ ಸುಶ್ಮಿತಾ ಭಟ್‌ ನಟಿಸಿದ್ದಾರೆ. ಅದಾದ ಮೇಲೆ ವಿಕ್ರಮ್‌ ಪ್ರಭು ಎದುರು ಲವ್‌ ಮ್ಯಾರೇಜ್‌ ಸಿನಿಮಾದಲ್ಲಿ ನಟಿಸುವ ತಮಿಳು ಚಿತ್ರರಂಗಕ್ಕೂ ಕಾಲಿಟ್ಟಿದ್ದಾರೆ. ಈಚೆಗೆ ಮೋಹನ್‌ಲಾಲ್‌ ಮಗ ಪ್ರಣವ್‌ ಜೊತೆಗೆ ಡೈಸ್ ಇರೇ ಎಂಬ ಸಿನಿಮಾದಲ್ಲಿ ಸುಶ್ಮಿತಾ ಭಟ್‌ ನಟಿಸಿದ್ದು, ಈ ಚಿತ್ರವು ಬ್ಲಾಕ್‌ ಬಸ್ಟರ್‌ ಹಿಟ್‌ ಎನಿಸಿಕೊಂಡಿದೆ.