ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಟೀಸರ್‌ನಿಂದಲೇ ಸದ್ದು ಮಾಡಿದ್ದ ʻಕರಿಕಾಡʼ ಚಿತ್ರದ ರಿಲೀಸ್‌ ಡೇಟ್‌ ಘೋಷಣೆ; ಹಿಂದಿಯಲ್ಲೂ ಬಿಡುಗಡೆ!

Karikaada Release Date: ಗಿಲ್ಲಿ ವೆಂಕಟೇಶ್ ನಿರ್ದೇಶನದ 'ಕರಿಕಾಡ' ಚಿತ್ರವು ಫೆಬ್ರವರಿ 6ರಂದು ವಿಶ್ವಾದ್ಯಂತ ಬಿಡುಗಡೆಯಾಗಲಿದೆ. ಕಾಡ ನಟರಾಜ್ ನಾಯಕನಾಗಿ ಮತ್ತು ಕಥೆಗಾರನಾಗಿ ಗುರುತಿಸಿಕೊಂಡಿರುವ ಈ ಚಿತ್ರವು ಮ್ಯೂಸಿಕಲ್ ಜರ್ನಿ, ಅಡ್ವೆಂಚರ್ ಮತ್ತು ಪ್ರೇಮಕಥೆಯ ಹದವಾದ ಮಿಶ್ರಣವಾಗಿದೆ ಎಂದು ಚಿತ್ರತಂಡ ಹೇಳಿಕೊಂಡಿದೆ.

ಪತಿಯ ಕನಸಿಗೆ ಬೆಂಬಲವಾಗಿ ನಿಂತ ಪತ್ನಿ; 'ಕರಿಕಾಡ' ರಿಲೀಸ್‌ ಡೇಟ್‌ ಘೋಷಣೆ

-

Avinash GR
Avinash GR Jan 5, 2026 7:34 PM

ಸ್ಯಾಂಡಲ್ ವುಡ್‌ನಲ್ಲಿ ಮತ್ತೊಂದು ವಿಭಿನ್ನ ಪ್ರಯತ್ನದ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ, ಅದೇ ʻಕರಿಕಾಡʼ! ಹೌದು, ಕನ್ನಡದಲ್ಲಿ ತಯಾರಾಗಿಯಾಗಿರುವ ಕರಿಕಾಡ ಸಿನಿಮಾವು ವಿವಿಧ ಭಾಷೆಗಳಲ್ಲಿ ರಿಲೀಸ್‌ ಮಾಡಲು ಪ್ಲ್ಯಾನ್‌ ಮಾಡಲಾಗಿದೆ. ಇದೊಂದು ಮ್ಯೂಸಿಕಲ್ ಜರ್ನಿ ಮತ್ತು ಅಡ್ವೆಂಚರಸ್ ಎಲಿಮೆಂಟ್ಸ್ ಹೊಂದಿರುವ ಸಿನಿಮಾ ಎಂದು ಚಿತ್ರತಂಡ ಹೇಳಿಕೊಂಡಿದ್ದು, 3 ತಿಂಗಳ ಹಿಂದೆ ಟೈಟಲ್ ಟೀಸರ್ ರಿಲೀಸ್ ಮಾಡಲಾಗಿತ್ತು. ಆಗಿನಿಂದಲೇ ಕರಿಕಾಡ ಬಗ್ಗೆ ನಿರೀಕ್ಷೆ ಮೂಡಿತ್ತು. ಇದೀಗ ಚಿತ್ರದ ಹೊಸ ಟೀಸರ್ ರಿಲೀಸ್ ಆಗಿದೆ.

ಫೆಬ್ರವರಿ 6ರಂದು ಕರಿಕಾಡ ರಿಲೀಸ್‌

ಮಣ್ಣಿನ ಸೊಗಡಿನ ಕಥೆಯುಳ್ಳ,ಸಾಹಸಮಯ ದೃಶ್ಯಕಾವ್ಯವಾಗಿ, ಪ್ರೇಮಕಥೆಯ ರೂಪಕವಾಗಿ ಈ ಸಿನಿಮಾ ಮೂಡಿಬಂದಿದೆ. ಜೊತೆಗೆ ಸೇಡಿನ ಕಥೆಯು ಇದರಲ್ಲಿ ತಾರಾಗಣ ಮತ್ತು ತಾಂತ್ರಿಕತೆ ಗಮನ ಸೆಳೆಯುತ್ತಿದೆ ಎಂಬುದು ಚಿತ್ರತಂಡದ ಮಾತು. ಈ ಚಿತ್ರದಲ್ಲಿ ಹೀರೋ ಆಗಿ ಕಾಡ ನಟರಾಜ್ ಅವರು ಕಾಣಿಸಿಕೊಂಡಿದ್ದಾರೆ. ʻಕರಿಕಾಡʼ ಚಿತ್ರವನ್ನು ಫೆಬ್ರವರಿ 6ರಂದು ವಿಶ್ವಾದ್ಯಂತ ಬಿಡುಗಡೆ ಮಾಡಲಾಗುತ್ತಿದೆ. ಉತ್ತರ ಭಾರತದಲ್ಲಿ ದೊಡ್ಡದಾಗಿ ರಿಲೀಸ್‌ ಮಾಡಲು ಸಿದ್ಧತೆ ಮಾಡಿಕೊಳ್ಳಲಾಗಿದೆಯಂತೆ.

Karikaada Movie: ಐಟಿ ಜಗತ್ತಿನಿಂದ ಕನ್ನಡ ಚಿತ್ರರಂಗಕ್ಕೆ ಕಾಡ ನಟರಾಜ್‌- ಕನ್ನಡಿಗರ ಮನಗೆಲ್ಲಲು ಸಜ್ಜಾಗಿದೆ ‘ಕರಿಕಾಡ’ ಸಿನಿಮಾ

ಕಾಮಿಡಿ ಕಿಲಾಡಿ ರಾಕೇಶ್‌ ಪೂಜಾರಿ ನಟಿಸಿರುವ ಸಿನಿಮಾ

ಉಳಿದಂತೆ ಬಲರಾಜವಾಡಿ , ಯಶ್ ಶೆಟ್ಟಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದು, ತುಳು ಚಿತ್ರರಂಗದಲ್ಲಿ ಫೇಮಸ್‌ ಆಗಿರುವ ನಿರೀಕ್ಷಾ ಶೆಟ್ಟಿ ಕರಿಕಾಡದಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಉಳಿದಂತೆ ಈ ಚಿತ್ರದಲ್ಲಿ ಮಂಜು ಸ್ವಾಮಿ , ಗೋವಿಂದ ಗೌಡ , ದೀವಾಕರ್ , ಕಾಮಿಡಿ ಕಿಲಾಡಿ ಸೂರ್ಯ , ʻಕಾಮಿಡಿ ಕಿಲಾಡಿಗಳುʼ ವಿನ್ನರ್ ರಾಕೇಶ್ ಪೂಜಾರಿ , ವಿಜಯ್ ಚಂಡೂರು , ಚಂದ್ರಪ್ರಭ , ಕರಿಸುಬ್ಬು , ಗಿರಿ , ಮಾಸ್ಟರ್ ಆರ್ಯನ್ , ಬಾಲ‌ ನಟಿ ರಿದ್ಧಿ ಮುಂತಾದವರು ಬಣ್ಣ ಹಚ್ಚಿದ್ದಾರೆ.

ಪತಿಗೆ ಬೆಂಬಲವಾಗಿ ನಿಂತ ಪತ್ನಿ

ಇನ್ನು ರಿದ್ಧಿ ಎಂಟರ್ಟೈನ್ಮೆಂಟ್ಸ್ ಬ್ಯಾನರ್‌ ಅಡಿಯಲ್ಲಿ ಕಾಡ ನಟರಾಜ್ ಅವರ ಧರ್ಮಪತ್ನಿ ದೀಪ್ತಿ ದಾಮೋದರ್ ಅವರು ಸಿನಿಮಾವನ್ನು ನಿರ್ಮಾಣ ಮಾಡುವ ಮೂಲಕ ತಮ್ಮ ಪತಿಯ ಕನಸಿಗೆ ಬೆಂಬಲವಾಗಿ ನಿಂತಿದ್ದಾರೆ. ನಟರಾಜ್‌ ಅವರ ಸ್ನೇಹಿತರಾದ ರವಿಕುಮಾರ್ ಎಸ್ ಆರ್ ಕೂಡ ಸಹ ನಿರ್ಮಾಪಕರಾಗಿ ಸಾಥ್ ನೀಡಿದ್ದಾರೆ. ʻಕರಿಕಾಡʼ ಚಿತ್ರವನ್ನ ಗಿಲ್ಲಿ ವೆಂಕಟೇಶ್ ನಿರ್ದೇಶಿಸಿದ್ದು, ಕಾಡ ನಟರಾಜ ಅವರೇ ಕಥೆ ಬರೆದಿದ್ದಾರೆ. ಅತೀಶಯ್ ಜೈನ್ ಹಾಗೂ ಶಶಾಂಕ್ ಶೇಷಗಿರಿ ಅವರ ಸಂಗೀತ ಈ ಚಿತ್ರಕ್ಕಿದೆ. ಶಶಾಂಕ್ ಶೇಷಾಗರಿ ಅವರು ರಾಗ ಸಂಯೋಜನೆ ಜೊತೆಗೆ ಹಿನ್ನಲೆ ಸಂಗೀತ ಕೂಡ ನೀಡಿದ್ದಾರೆ. ಜೀವನ್ ಗೌಡ ಅವರು ಛಾಯಾಗ್ರಹಣ ಮಾಡಿದ್ದು, ದೀಪಕ್ ಸಿ.ಎಸ್ ಸಂಕಲನವಿದೆ. ಈ ಚಿತ್ರವನ್ನ ನೋಡಿದ ಬಾಲಿವುಡ್‌ನ ವಿತರಕರು ಇದನ್ನು ಹಿಂದಿಯಲ್ಲಿಯೂ ಬಿಡುಗಡೆ ಮಾಡಲು ಮುಂದಾಗಿದ್ದಾರಂತೆ.