ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಬಾಕ್ಸ್‌ ಆಫೀಸ್‌ನಲ್ಲಿ 400+ ಕೋಟಿ ಕೊಳ್ಳೆಹೊಡೆದ 2 ಕೋಟಿ ಬಜೆಟ್‌ನ ʻಹನುಮಾನ್‌ ಅಂಶ್‌ʼ; ಹಲವು ಸಿನಿಮಾಗಳ ದಾಖಲೆಗಳು ಉಡೀಸ್‌

Hanuman Ansh Movie: ʻಹನುಮಾನ್‌ ಅಂಶ್‌ʼ ಸಿನಿಮಾವು ಗಲ್ಲಾಪೆಟ್ಟಿಗೆಯಲ್ಲಿ ಹೊಸ ಇತಿಹಾಸ ನಿರ್ಮಿಸಿದೆ. ಕೇವಲ 2 ಕೋಟಿ ರೂಪಾಯಿ ವೆಚ್ಚದಲ್ಲಿ ಸಿದ್ಧಗೊಂಡ ನೀಮ್ ಕರೋಲಿ ಬಾಬಾ ಅವರ ಈ ಜೀವನವನ್ನು ಆಧರಿಸಿದ ಈ ಸಿನಿಮಾ, ಜಗತ್ತಿನಾದ್ಯಂತ ಬರೋಬ್ಬರಿ 411 ಕೋಟಿಗೂ ಅಧಿಕ ಮೊತ್ತವನ್ನು ಬಾಚಿಕೊಂಡಿದೆ.

ಬಾಕ್ಸ್‌ ಆಫೀಸ್‌ನಲ್ಲಿ 411 ಕೋಟಿ ಲೂಟಿ ಮಾಡಿದ ʻಹನುಮಾನ್‌ ಅಂಶ್‌’ ಸಿನಿಮಾ

-

Avinash GR
Avinash GR Sep 29, 2026 4:50 PM

ಅತೀ ಕಡಿಮೆ ಬಜೆಟ್‌ನಲ್ಲಿ ನಿರ್ಮಾಣಗೊಂಡು ಚಿತ್ರರಂಗವೇ ಅಚ್ಚರಿ ಪಡುವಂತೆ ದಾಖಲೆ ಬರೆದಿರುವ ಭಕ್ತಿಪ್ರಧಾನ ಸಿನಿಮಾ ‘ಹನುಮಾನ್‌ ಅಂಶ್‌’, ಗಲ್ಲಾಪೆಟ್ಟಿಗೆಯಲ್ಲಿ ಹೊಸ ಇತಿಹಾಸ ಸೃಷ್ಟಿಸಿದೆ. ಕೇವಲ 2 ಕೋಟಿ ಬಜೆಟ್‌ನಲ್ಲಿ ಸಿದ್ಧವಾದ ಈ ಸಿನಿಮಾ, ವಿಶ್ವದಾದ್ಯಂತ ಈಗಾಗಲೇ 411 ಕೋಟಿ ರೂ.ಗಳಿಗೂ ಅಧಿಕ ಕಲೆಕ್ಷನ್‌ ಮಾಡಿದೆ. ಈ ಚಿತ್ರ ತೆರೆಕಂಡು 50 ದಿನಗಳು ಪೂರೈಸಿದ್ದು, ಈಗಲೂ ಯಶಸ್ವಿ ಪ್ರದರ್ಶನ ಕಾಣುತ್ತಿದೆ.

ವಿಶ್ವಾದ್ಯಂತ 400 ಕೋಟಿ ರೂ. ದಾಟಿದ ಗಳಿಕೆ

ನೀಮ್ ಕರೋಲಿ ಬಾಬಾ ಅವರ ಜೀವನ ಮತ್ತು ಬೋಧನೆಗಳನ್ನು ಆಧರಿಸಿ ಮೂಡಿಬಂದಿರುವ ಈ ಚಿತ್ರ, ಪ್ರಮುಖ ಹಿಟ್ ಸಿನಿಮಾಗಳ ಸರ್ವಕಾಲಿಕ ದಾಖಲೆಗಳನ್ನು ಉಡೀಸ್‌ ಮಾಡಿದೆ. ಬಾಕ್ಸ್ ಆಫೀಸ್ ಮೂಲಗಳ ಪ್ರಕಾರ, ‘ಹನುಮಾನ್ ಅಂಶ’ 53ನೇ ದಿನದಂದು ಭಾರತದಲ್ಲಿ ಅಂದಾಜು 2.25 ಕೋಟಿ ರೂ. ಗಳಿಸಿದ್ದು, ಈ ಮೂಲಕ ಚಿತ್ರದ ಭಾರತದಲ್ಲಿನ ಚಿತ್ರದ ಒಟ್ಟು ಗ್ರಾಸ್ ಕಲೆಕ್ಷನ್‌ ಸುಮಾರು 365 ಕೋಟಿ ರೂ. ದಾಟಿದೆ. ವಿಶ್ವಾದ್ಯಂತ ಒಟ್ಟು ಕಲೆಕ್ಷನ್ 411 ಕೋಟಿ ಗಡಿ ಮುಟ್ಟಿದೆ. ವಾರಾಂತ್ಯಗಳಲ್ಲಿ ಪ್ರೇಕ್ಷಕರ ದಟ್ಟಣೆ ಗಮನಾರ್ಹವಾಗಿ ಹೆಚ್ಚುತ್ತಿದೆ.

ʻಕಾಂತಾರʼ ಚಿತ್ರವನ್ನು ಹಿಂದಿಕ್ಕಿದ ‘ಹನುಮಾನ್‌ ಅಂಶ್‌’

ವಿಶೇಷವೆಂದರೆ, ಮೊದಲ ದಿನ ಕೇವಲ 10 ಲಕ್ಷ ರೂ. ಅಲ್ಪ ಕಲೆಕ್ಷನ್‌ ಗಳಿಸಿದ್ದ ಈ ಸಿನಿಮಾಕ್ಕೆ ಆರಂಭದಲ್ಲಿ ದೊಡ್ಡ ಮಟ್ಟದ ಓಪನಿಂಗ್ ಸಿಕ್ಕಿರಲಿಲ್ಲ. ಆದರೆ ಪ್ರೇಕ್ಷಕರಿಂದ ವ್ಯಕ್ತವಾದ ಬಾಯಿಮಾತಿನ ಪ್ರಚಾರದಿಂದ ಸಿನಿಮಾದ ಅದೃಷ್ಟವನ್ನೇ ಬದಲಿಸಿತು. ನೀಮ್ ಕರೋಲಿ ಬಾಬಾ ಅವರ ಮೇಲಿನ ಅಪಾರ ಭಕ್ತಿ ಹಾಗೂ ಚಿತ್ರದ ಪ್ರಭಾವಿ ಕಥಾವಸ್ತುವು ಸಾಮಾನ್ಯವಾಗಿ ಸಿನಿಮಾಗಳನ್ನೇ ನೋಡದ ಪ್ರೇಕ್ಷಕರನ್ನು ಕೂಡ ಚಿತ್ರಮಂದಿರಗಳತ್ತ ಹೆಜ್ಜೆಹಾಕುವಂತೆ ಮಾಡಿದೆ. ಇದರ ಪರಿಣಾಮವಾಗಿ, ಭಾರತೀಯ ಚಿತ್ರರಂಗದ ಬ್ಲಾಕ್‌ಬಸ್ಟರ್‌ಗಳಾದ ‘ಕ್ರಿಶ್ 3’, ‘ಚೆನ್ನೈ ಎಕ್ಸ್‌ಪ್ರೆಸ್‌’, ‘3 ಈಡಿಯಟ್ಸ್‌’ ಹಾಗೂ ಕನ್ನಡದ ‘ಕಾಂತಾರ’ ಸಿನಿಮಾಗಳ ಜಾಗತಿಕ ಕಲೆಕ್ಷನ್ ದಾಖಲೆಯನ್ನು ‘ಹನುಮಾನ್‌ ಅಂಶ್‌’ ಸಿನಿಮಾ ಹಿಂದಿಕ್ಕಿದೆ.

Hanuman Ansh : 100 ಕೋಟಿ ರೂ‌ OTT ಒಪ್ಪಂದ ಬಗ್ಗೆ ʻಹನುಮಾನ್ ಅಂಶ್’ ತಂಡ ಹೇಳಿದ್ದೇನು?

ಶೀಘ್ರದಲ್ಲೇ 450 ಕೋಟಿ ಕ್ಲಬ್‌ಗೆ ‘ಹನುಮಾನ್‌ ಅಂಶ್‌’ ಎಂಟ್ರಿ

ವಿದೇಶಗಳಲ್ಲಿ ಭಾರತಕ್ಕಿಂತ 6 ವಾರ ತಡವಾಗಿ ಬಿಡುಗಡೆಯಾದರೂ ಸಹ, ಅತ್ಯಲ್ಪ ಅವಧಿಯಲ್ಲಿ ವಿದೇಶಿ ಬಾಕ್ಸ್ ಆಫೀಸ್‌ನಲ್ಲೂ ಈ ಸಿನಿಮಾ ಭಾರಿ ಸದ್ದು ಮಾಡಿದೆ. ಸದ್ಯ ಚಿತ್ರಮಂದಿರಗಳಲ್ಲಿ ವ್ಯಕ್ತವಾಗುತ್ತಿರುವ ಕ್ರೇಜ್ ಗಮನಿಸಿದರೆ, ಈ ಸಿನಿಮಾ ಶೀಘ್ರದಲ್ಲೇ 450 ಕೋಟಿ ರೂ. ಗಡಿಯನ್ನು ಸುಲಭವಾಗಿ ದಾಟುವ ಎಲ್ಲಾ ಮುನ್ಸೂಚನೆಗಳನ್ನು ನೀಡಿದೆ.

ಡಾ. ವಿಶಾಲ್ ಚತುರ್ವೇದಿ ಅವರ ‘ಡಿವೈನ್ ಡಿಟೂರ್: ದಟ್ ಚೇಂಜ್ಡ್ ಮೈ ಲೈಫ್’ ಕೃತಿಯನ್ನು ಆಧರಿಸಿ, ಅವರೇ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ಚಿತ್ರದಲ್ಲಿ ಶೋಭಿನವ್ ಸತ್ಯಾ ಮತ್ತು ಚಂದನ್ ಆನಂದ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಬಾಬಾ ಅವರ ಮೇಲಿನ ನಂಬಿಕೆಯಿಂದಾಗಿ 21 ವರ್ಷದ ಯುವತಿ ಅನುಪ್ರಿಯಾ ನಗರ್ ಕೂಡ ಈ ಸಿನಿಮಾಕ್ಕೆ ಮೂರನೇ ಒಂದು ಭಾಗ ಹೂಡಿಕೆ ಮಾಡಿದ್ದರು. ಅವರೀಗ ದೊಡ್ಡಮಟ್ಟದ ಲಾಭವನ್ನು ಕಂಡಿದ್ದಾರೆ.