Niranjan Yashaswini Love Story: ಮದುವೆ ದಿನ ಮೊಬೈಲ್ ಆಫ್ ಮಾಡಿ ಮಲಗಿ ಬಿಟ್ಟಿದ್ರಂತೆ ನಿರಂಜನ್: ಮುಂದೇನಾಯ್ತು..?
ರಿಯಾಲಿಟಿ ಶೊನ ಸೆಟ್‌ನಲ್ಲಿಯೇ ಯಶಸ್ವಿನಿ ಅವರನ್ನು ನಿರಂಜನ್ ಮದುವೆಯಾಗಿದ್ದರು. ಇದು ಸ್ಯಾಂಡಲ್‌ವುಡ್‌ನಲ್ಲೇ ವಿಶೇಷ ಮದುವೆ ಎನ್ನಬಹುದು. ಇದೀಗ ವಿಶ್ವವಾಣಿ ಜೊತೆಗಿನ ಸಂದರ್ಶನದಲ್ಲಿ ಈ ಜೋಡಿ ಮದುವೆಯ ಕುರಿತು ಕೆಲ ಇಂಟ್ರೆಸ್ಟಿಂಗ್ ವಿಚಾರ ಹಂಚಿಕೊಂಡಿದ್ದಾರೆ. ಅಚ್ಚರಿ ಎಂದರೆ ಮದುವೆ ದಿನವೇ ನಿರಂಜನ್ ಅವರು ಮೊಬೈಲ್ ಆಫ್ ಮಾಡಿ ಮಲಗಿ ಬಿಟ್ಟಿದ್ರಂತೆ.
![ಮದುವೆ ದಿನ ಮೊಬೈಲ್ ಆಫ್ ಮಾಡಿ ಮಲಗಿ ಬಿಟ್ಟಿದ್ರಂತೆ ನಿರಂಜನ್](https://cdn-vishwavani-prod.hindverse.com/media/original_images/Niranjan_Yashaswini_Love_Story.jpg)
Niranjan Yashaswini Love Story
![Profile](https://vishwavani.news/static/img/user.png)
ಕಿರುತೆರೆ ಹಾಗೂ ಸಿನಿಮಾಗಳಲ್ಲಿ ಅಭಿನಯಿಸುವ ಮೂಲಕ ನಿರಂಜನ್ ದೇಶಪಾಂಡೆ ಖ್ಯಾತಿ ಪಡೆದಿದ್ದಾರೆ. ಇವರು ಮೇ 12, 2017 ರಂದು ಯಶಸ್ವಿನಿ ಅವರನ್ನು ಲವ್ ಕಮ್ ಅರೆಂಜ್ ಮ್ಯಾರೇಜ್ ಆದರು. ಆದರೆ, ಇವರ ಮದುವೆ ಅಷ್ಟೊಂದು ಸುಲಭವಾಗಿ ನಡೆಯಲಿಲ್ಲ. ಇವರಿಬ್ಬರ ಲವ್ ಸ್ಟೋರಿಯೇ ಒಂದು ರೋಚಕವಾಗಿದೆ. ನಟ ಕಮ್ ಆಂಕರ್ ನಿರಂಜನ್ ದೇಶಪಾಂಡೆ ಹಾಗೂ ಯಶಸ್ವಿನಿ ಮೊದಲು ಫೇಸ್‌ಬುಕ್ ಫ್ರೆಂಡ್ಸ್ ಆಗಿದ್ದರು. ಫೇಸ್‌ಬುಕ್ ಮೂಲಕ ಪರಿಚಯಗೊಂಡ ಬಳಿಕ ಇಬ್ಬರೂ ಮೀಟ್ ಮಾಡಲು ಆರಂಭಿಸಿದರು. ಆನಂತರ ಇಬ್ಬರ ಮಧ್ಯೆ ಸ್ನೇಹ ಚಿಗುರಿತು. ನಂತರ ಇಬ್ಬರ ಮಧ್ಯೆ ಪ್ರೀತಿ ಹುಟ್ಟಿತು.
3-4 ವರ್ಷಗಳ ಕಾಲ ಯಶಸ್ವಿನಿ ಹಾಗೂ ನಿರಂಜನ್ ದೇಶಪಾಂಡೆ ಪರಸ್ಪರ ಪ್ರೀತಿಸಿದರು. ಆನಂತರ ಮದುವೆಯಾಗಲು ನಿರ್ಧರಿಸಿದರು. ನಿರಂಜನ್ ದೇಶಪಾಂಡೆ - ಯಶಸ್ವಿನಿ ಮದುವೆಗೆ ಕುಟುಂಬದ ಸಮ್ಮತಿ ಸಿಗಲಿಲ್ಲ. ಯಶಸ್ವಿನಿ ಮನೆಯಲ್ಲಿ ಒಪ್ಪಲಿಲ್ಲ. ಹೀಗಾಗಿ, ಯಶಸ್ವಿನಿ ಅವರನ್ನ ಅಬ್‌ಸ್ಕಾಂಡ್ ಮಾಡಿದ್ರಂತೆ. ಇನ್ನು ಈ ಜೋಡಿಯ ಮದುವೆಯ ವಿಷಯವೂ ಸಕತ್ ಇಂಟರೆಸ್ಟಿಂಗ್ ಆಗಿಯೇ ಇದೆ. ಮದುವೆಯ ಬಗ್ಗೆ ಮೊದಲೇ ಡಿಸೈಡ್ ಆಗಿತ್ತು. ಆದರೆ ಮದುವೆ ಫಿಕ್ಸ್ ಆಗುತ್ತಲೇ ಬಿಗ್ಬಾಸ್ನಿಂದ ಆಫರ್ ಬಂದಿತ್ತು. ಆದ್ದರಿಂದ ಮದುವೆ ಡೇಟ್ ಮುಂದಕ್ಕೆ ಹಾಕಿದ್ದರು.
ಪತ್ನಿ ಮನೆಯಲ್ಲಿ ಮದುವೆ ಶಾಸ್ತ್ರ ನಡೆದಿತ್ತು. ಬಳಿಕ ಇವರು ಇಬ್ಬರ ಪ್ರೀತಿಗೆ ಕಾರಣವಾದ ಮಜಾ ಭಾರತ ಶೂಟಿಂಗ್ ಸೆಟ್ ನಲ್ಲೇ ಮದ್ವೆಯಾಗಿದ್ದರು. ರಿಯಾಲಿಟಿ ಶೊನ ಸೆಟ್‌ನಲ್ಲಿಯೇ ಯಶಸ್ವಿನಿ ಅವರನ್ನು ನಿರಂಜನ್ ಮದುವೆಯಾಗಿದ್ದರು. ಇದು ಸ್ಯಾಂಡಲ್‌ವುಡ್‌ನಲ್ಲೇ ವಿಶೇಷ ಮದುವೆ ಎನ್ನಬಹುದು. ಇದೀಗ ವಿಶ್ವವಾಣಿ ಜೊತೆಗಿನ ಸಂದರ್ಶನದಲ್ಲಿ ಈ ಜೋಡಿ ಮದುವೆಯ ಕುರಿತು ಕೆಲ ಇಂಟ್ರೆಸ್ಟಿಂಗ್ ವಿಚಾರ ಹಂಚಿಕೊಂಡಿದ್ದಾರೆ. ಅಚ್ಚರಿ ಎಂದರೆ ಮದುವೆ ದಿನವೇ ನಿರಂಜನ್ ಅವರು ಮೊಬೈಲ್ ಆಫ್ ಮಾಡಿ ಮಲಗಿ ಬಿಟ್ಟಿದ್ರಂತೆ.
ನಮ್ಮ ಮದುವೆ ಹಿಂದಿನ ದಿನ ನಾವು ಬ್ಯಾಚುಲರ್ಸ್ ಪಾರ್ಟಿ ಮಾಡಿದ್ವಿ. ನನ್ನ ಅಪ್ಪನೂ ಬಂದಿದ್ರು. ಇವಳ ಫ್ರೆಂಡ್ಸೂ ಬಂದಿದ್ರು. ಅಲ್ಲಿ ನನ್ನ ಮೊಬೈಲ್ ಬ್ಯಾಟರಿ ಲೋ ಆಗಿ ಸ್ವಿಚ್ ಆಫ್ ಆಗಿ ಹೋಯಿತು. ಅದೇ ಗಮ್ಮತ್ತಲ್ಲಿ ಮಲಗಿ ಬಿಟ್ಟಿದ್ವಿ ಎಲ್ರೂ. ಮರುದಿನ ಯಾರಿಗೂ ಎಚ್ಚರನೇ ಇಲ್ಲ ಎಂದು ನಿರಂಜನ್ ಹೇಳಿದ್ದಾರೆ. ನಾವೆಲ್ಲಾ ಟೆನ್ಷನ್ ಆಗಿಬಿಟ್ವಿ. ಇವರ ಫೋನೂ ಸ್ವಿಚ್ ಆಫ್, ಅವರ ಅಪ್ಪನೂ ಫೋನ್ ರಿಸೀವ್ ಮಾಡ್ತಿಲ್ಲ. ಕೊನೆಗೆ ಒಂದಿಷ್ಟು ಮಂದಿ ಹೋಗಿ ಅವರ ಮನೆ ಬಾಗಿಲು ಬಡಿದರು. ಕೊನೆಗೆ ಇವರಿಗೆ ಎಚ್ಚರ ಆಗಿದೆ. ನಿನ್ನದೇ ಮದ್ವೆ ಕಣಪ್ಪಾ ಎಂದು ಹೇಳಿ ಅವರನ್ನು ಕರೆದುಕೊಂಡು ಬರುವಷ್ಟರಲ್ಲಿ ಸುಸ್ತಾಗಿ ಹೋಯ್ತು ಎಂದು ಯಶಸ್ವಿನಿ ಹಳೆಯ ನೆನಪನ್ನು ಮೆಲುಕು ಹಾಕಿದರು.
Ugramm Manju: ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿದ ಉಗ್ರಂ ಮಂಜು: ಮುಗಿಬಿದ್ದ ಫ್ಯಾನ್ಸ್