#ದೆಹಲಿರಿಸಲ್ಟ್​ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಫ್ಯಾಷನ್‌ ಲೋಕ ಉದ್ಯೋಗ

Ugramm Manju: ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿದ ಉಗ್ರಂ ಮಂಜು: ಮುಗಿಬಿದ್ದ ಫ್ಯಾನ್ಸ್

ಬಿಗ್ ಬಾಸ್ನಿಂದಲೇ ಅತಿ ಹೆಚ್ಚು ಖ್ಯಾತಿ ಪಡೆದುಕೊಂಡಿರೋ ಉಗ್ರಂ ಮಂಜು ಮೈಸೂರಿಗೆ ಭೇಟಿ ಕೊಟ್ಟಿದ್ದಾರೆ. ಬಿಗ್ ಬಾಸ್ನಿಂದ ಹೊರ ಬಂದ ಬಳಿಕ ಇದೇ ಮೊದಲ ಬಾರಿಗೆ ಉಗ್ರಂ ಮಂಜು ತಮ್ಮ ಸ್ನೇಹಿತರ ಜೊತೆಗೆ ಚಾಮುಂಡೇಶ್ವರಿಯ ದರ್ಶನ ಪಡೆದುಕೊಂಡಿದ್ದಾರೆ. ಮಂಜು ಅವರನ್ನು ನೋಡುತ್ತಿದ್ದಂತೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ನಾ ಮುಂದು ತಾ ಮುಂದು ಅಂತ ಫ್ಯಾನ್ಸ್ ಮುಗಿ ಬಿದ್ದಿದ್ದರು.

ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿದ ಉಗ್ರಂ ಮಂಜು: ಮುಗಿಬಿದ್ದ ಫ್ಯಾನ್ಸ್

Ugramm Manju

Profile Vinay Bhat Feb 12, 2025 4:09 PM

ಬಿಗ್ ಬಾಸ್ ಕನ್ನಡ ಸೀಸನ್ 11 ಮುಕ್ತಾಯಗೊಂಡಿದ್ದು, ಸ್ಪರ್ಧಿಗಳು ಸಖತ್ ಬ್ಯುಸಿಯಾಗಿದ್ದಾರೆ. ವಿನ್ನರ್ ಹನುಮಂತ ಬಾಯ್ಸ್ vs ಗರ್ಲ್ಸ್ ರಿಯಾಲಿಟಿ ಶೋನಲ್ಲಿ ಕಾಣಿಸಿಕೊಳ್ಳುವುದರ ಜೊತೆಗೆ ಅನೇಕ ಪ್ರೊಗ್ರಾಂಗೆ ಅತಿಥಿಯಾಗಿ ತೆರಳುತ್ತಿದ್ದಾರೆ. ರನ್ನರ್-ಅಪ್ ತ್ರಿವಿಕ್ರಮ್ ಕೂಡ ಮೊನ್ನೆಯಷ್ಟೆ ಭುವನಂ ಗಗನಂ ಸಿನಿಮಾದ ಸುದ್ದಿಗೋಷ್ಠಿಯಲ್ಲಿ ಭಾಗವಹಿಸಿ ಸಿನಿಮಾ ತಂಡಕ್ಕೆ ಶುಭಕೋರಿದ್ದರು. ಆದರೆ, ಉಗ್ರಂ ಮಂಜು ಯಾವುದೇ ಪ್ರೊಗ್ರಾಂನಲ್ಲಿ ಕಾಣಿಸಿಕೊಂಡಿಲ್ಲ. ಅವರು ಎಲ್ಲಿದ್ದಾರೆ ಎಂಬ ಕುತೂಹಲ ಅನೇಕರಲ್ಲಿತ್ತು. ಆದರೀಗ ಇವರು ಚಾಮುಂಡಿ ಬೆಟ್ಟದಲ್ಲಿ ಪ್ರತ್ಯಕ್ಷರಾಗಿದ್ದಾರೆ.

ಹೌದು, ಬಿಗ್​ ಬಾಸ್​ನಿಂದಲೇ ಅತಿ ಹೆಚ್ಚು ಖ್ಯಾತಿ ಪಡೆದುಕೊಂಡಿರೋ ಉಗ್ರಂ ಮಂಜು ಮೈಸೂರಿಗೆ ಭೇಟಿ ಕೊಟ್ಟಿದ್ದಾರೆ. ಬಿಗ್ ​ಬಾಸ್​ನಿಂದ ಹೊರ ಬಂದ ಬಳಿಕ ಇದೇ ಮೊದಲ ಬಾರಿಗೆ ಉಗ್ರಂ ಮಂಜು ತಮ್ಮ ಸ್ನೇಹಿತರ ಜೊತೆಗೆ ಚಾಮುಂಡೇಶ್ವರಿಯ ದರ್ಶನ ಪಡೆದುಕೊಂಡಿದ್ದಾರೆ. ಮಂಜು ಅವರನ್ನು ನೋಡುತ್ತಿದ್ದಂತೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ನಾ ಮುಂದು ತಾ ಮುಂದು ಅಂತ ಫ್ಯಾನ್ಸ್ ಮುಗಿ ಬಿದ್ದಿದ್ದರು. ಚಾಮುಂಡಿ ಬೆಟ್ಟಕ್ಕೆ ಹೋಗಿದ್ದ ಉಗ್ರಂ ಮಂಜು ಜೊತೆಗೆ ನಟ ಆದಿ ಲೋಕೇಶ್ ಕೂಡ ಭಾಗಿಯಾಗಿದ್ದರು. ಸದ್ಯ ಮಂಜು ಚಾಮುಂಡಿ ಬೆಟ್ಟಕ್ಕೆ ಹೋದ ಫೋಟೋಗಳು ಹಾಗೂ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿವೆ.

ಕಳೆದ ವಾರ ಮಂಜು ಅವರು ಗೌತಮಿ ಜೊತೆಗೆ ಶಕ್ತಿ ದೇವತೆ ವನದುರ್ಗಾ ದೇವಸ್ಥಾನಕ್ಕೆ ಭೇಟಿ ಕೊಟ್ಟಿದ್ದರು. ಅಲ್ಲದೇ ಗೌತಮಿ ಅವರ ಜೊತೆಗೆ ಪತಿಯೂ ದೇವಸ್ಥಾನಕ್ಕೆ ಹೋಗಿದ್ದಾರೆ. ಇದೇ ಫೋಟೋವನ್ನು ಗೌತಮಿ ಅವರು ತಮ್ಮ ಇನ್​ಸ್ಟಾಗ್ರಾಮ್ ಸ್ಟೋರಿಯಲ್ಲಿ ಶೇರ್ ಮಾಡಿಕೊಂಡಿದ್ದಾರೆ.

ಇನ್ನು ಬಿಗ್ ಬಾಸ್ ಕನ್ನಡ ಸೀಸನ್ 11ರ ಸ್ಪರ್ಧಿಗಳು ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡುತ್ತಿರುವುದು ಇದೇ ಮೊದಲಲ್ಲ. ಬಿಗ್ ಬಾಸ್ ಮನೆಯಿಂದ ಹೊರ ಬಂದ್ಮೇಲೆ ಕೊಂಚ ವಿರಾಮ ಪಡೆದು ನಂತರ ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಮೋಕ್ಷಿತಾ ಪೈ ತೆರಳಿದ್ದರು. ಕುಟುಂಬದ ಜೊತೆ ಇವರು ಹೋಗಿದ್ದಾಗ ಚಾಮುಂಡಿ ಬೆಟ್ಟದಲ್ಲಿ ಮೋಕ್ಷಿತಾ ಜೊತೆಗೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಅಭಿಮಾನಿಗಳು ಮುಗಿಬಿದ್ದಿದ್ದರು.

ಅಂತೆಯೆ ಬಿಗ್ ಬಾಸ್ ಮನೆಯಿಂದ ಹೊರಗೆ ಬಂದ್ಮೇಲೆ ರಜತ್‌, ಅನುಷಾ ರೈ, ಭವ್ಯಾ ಗೌಡ ಹಾಗೂ ತ್ರಿವಿಕ್ರಮ್‌ ಒಟ್ಟಿಗೆ ಮೈಸೂರಿಗೆ ತೆರಳಿದ್ದರು. ಚಾಮುಂಡಿ ದೇವಿಯ ದರ್ಶನ ಪಡೆದಿದ್ದರು, ಇಲ್ಲಿ ಮೈಸೂರಿನ ಮಾಲ್‌ಗೂ ಭೇಟಿ ನೀಡಿ ಭರ್ಜರಿ ಶಾಪಿಂಗ್ ಮಾಡಿದ್ದರು. ಇದರ ಫೋಟೋ ಕೂಡ ವೈರಲ್ ಆಗಿತ್ತು.

Rajath Kishan: ರಜತ್ ವರ್ತನೆಯಿಂದ ಕೋಪಗೊಂಡ ಸುದೀಪ್ ಮಗಳು ಸಾನ್ವಿ: ವೈರಲ್ ಆಗ್ತಿದೆ ವಿಡಿಯೋ