ತನ್ನನ್ನು ಜವಾಬ್ದಾರಿಯುತ ಗಂಡಸನ್ನಾಗಿ ಮಾಡಿದ್ದಕ್ಕೆ ಹಳೆ ಗರ್ಲ್ ಫ್ರೆಂಡ್ಸ್ಗೆ ಥ್ಯಾಂಕ್ಸ್ ಹೇಳಿದ ನಿರಂಜನ್
ನಿಜ ಹೇಳ್ಬೇಕಂದ್ರೆ ನಾನು ಅವರೆಲ್ಲರನ್ನ ಇವತ್ತಿಗೂ ಮಿಸ್ ಮಾಡಿಕೊಳ್ತಾ ಇದ್ದೇನೆ. ನಾನಾಗಿ ಯಾರನ್ನೂ ಬಿಟ್ಟಿಲ್ಲ.. ನನ್ನ ಬಿಟ್ಟಿರೋರು ಎಲ್ಲ ಅವರ ತಂದೆ-ತಾಯಿಯ ಒತ್ತಡದಿಂದ. ಅವರೆಲ್ಲರಿಗೆ ಥ್ಯಾಂಕ್ಸ್ ಹೇಳ್ತೇನೆ. ಯಾಕಂದ್ರೆ ನಾನೊಬ್ಬ ಮನುಷ್ಯನಾಗೋಕೆ.. ನಾನೊಬ್ಬ ಜವಾಬ್ದಾರಿಯುತ ಗಂಡಸು ಆಗೋಕೆ ಅವರೇ ಕಾರಣ.

Niranjan

ಕರ್ನಾಕದ ಕ್ಯೂಟ್ ಕಪಲ್ ಎಂದೇ ಬಿಂಬಿತವಾಗಿರುವ ನಿರಂಜನ್ ದೇಶಪಾಂಡೆ ಹಾಗೂ ಯಶಸ್ವಿನಿ ವ್ಯಾಲಂಟೈನ್ಸ್ ಡೇ ಪ್ರಯುಕ್ತ ವಿಶ್ವವಾಣಿಯ ವಿಶೇಷ ಸಂದರ್ಶನದಲ್ಲಿ ಪಾಲ್ಗೊಂಡಿದ್ದಾರೆ. ಇದರಲ್ಲಿ ಅವರು ತಮ್ಮ ಲವ್ ಸ್ಟೋರಿ ಬಗ್ಗೆ, ಹಳೆ ಗರ್ಲ್ ಫ್ರೆಂಡ್ ಕುರಿತು ಹಾಗೂ ಮದುವೆಗೆ ಆದ ಅಡಚಣೆ-ಮನೆಯವರನ್ನು ಒಪ್ಪಿಸಿದ ಪರಿ ಎಲ್ಲದರ ಕುರಿತೂ ಮನಬಿಚ್ಚಿ ಮಾತನಾಡಿದ್ದಾರೆ. ಮುಖ್ಯವಾಗಿ ನನ್ನನ್ನು ಜವಾಬ್ದಾರಿಯುತ ಗಂಡಸನ್ನಾಗಿ ಮಾಡಿದ್ದಕ್ಕೆ ತನ್ನ ಹಳೆಯ ಗರ್ಲ್ ಫ್ರೆಂಡ್ಗೆ ಥ್ಯಾಂಕ್ಸ್ ಹೇಳಿದ್ದಾರೆ ನಿರಂಜನ್.
ಯಶಸ್ವಿನಿ ಫ್ರೆಂಡ್ ಆಗಿದ್ದಾಗ ನನ್ಗೆ ಬ್ರೇಕ್-ಅಪ್ ಆಗಿತ್ತು. ಆ ಹುಡುಗಿಗೆ ಬೇರೆ ಹುಡುಗನ ಹುಡುಕ್ತಾ ಇದ್ರು.. ಅವ್ರ ಅಮ್ಮ ಬಂದು ನಿಮ್ಮಿಬ್ರದ್ದು ಬೇರೆ ಕಾಸ್ಟ್, ನನ್ಗೆ ಹಾರ್ಟ್ ಅಟ್ಯಾಕ್ ಆಗಿ ಬಿಡುತ್ತೆ ಅಂತೆಲ್ಲ ಹೇಳಿದ್ರು. ನಿಜ ಹೇಳ್ಬೇಕಂದ್ರೆ ನಾನು ಅವರೆಲ್ಲರನ್ನ ಇವತ್ತಿಗೂ ಮಿಸ್ ಮಾಡಿಕೊಳ್ತಾ ಇದ್ದೇನೆ. ನಾನಾಗಿ ಯಾರನ್ನೂ ಬಿಟ್ಟಿಲ್ಲ.. ನನ್ನ ಬಿಟ್ಟಿರೋರು ಎಲ್ಲ ಅವರ ತಂದೆ-ತಾಯಿಯ ಒತ್ತಡದಿಂದ. ಅವರೆಲ್ಲರಿಗೆ ಥ್ಯಾಂಕ್ಸ್ ಹೇಳ್ತೇನೆ. ಯಾಕಂದ್ರೆ ನಾನೊಬ್ಬ ಮನುಷ್ಯನಾಗೋಕೆ.. ನಾನೊಬ್ಬ ಜವಾಬ್ದಾರಿಯುತ ಗಂಡಸು ಆಗೋಕೆ ಅವರೇ ಕಾರಣ.
ಆ ಹುಡ್ಗಿ ಅಮ್ಮ ಬಂದು ನನ್ನ ಹತ್ರ ಮಾತಾಡಿರೋದು ಅವಳಿಗೆ ಗೊತ್ತಿಲ್ಲ. ಅವ್ರ ಅಮ್ಮ ಬಂದು ನನ್ನ ಹತ್ರ ಪ್ರಾಮಿಸ್ ಎಲ್ಲ ತೆಗೊಂಡಿದ್ರು.. ಎದೆ ಹಿಡ್ಕೊಂಡಗೆ ಆಗ್ತಿದೆ ಅಂತೆಲ್ಲ ಹೇಳಿದ್ರು.. ಕೊನೆಗೆ ಅಡ್ಮಿಟ್ ಕೂಡ ಆಗ್ತಿದ್ರು.. ನನ್ನಿಂದ ಹಿಂಗೆಲ್ಲ ಆಗೋದು ಬೇಡ ಮತ್ತೆ ಜೀವನ ಪೂರ್ತಿ ಕಳಂಕ ಹೊರಬೇಕು.. ಕೆಟ್ಟವನಾದ್ರು ಪರವಾಗಿಲ್ಲ ಅಂತ ಆ ಹುಡುಗಿ ಎದುರು ಯಶಸ್ವಿನಿನ ಕರ್ಕೊಂಡು ಬಂದು ನಾನು ಇವಳನ್ನ ಮದುವೆ ಆಗ್ತಾ ಇದ್ದೀನಿ ಅಂತ ಹೇಳ್ದೆ. ಅದಕ್ಕೆ ಅವ್ಳು ನಿನ್ನಂತ ಹುಡುಗನ ನೋಡೇ ಇಲ್ಲ ಅಂದ್ಳು.. ನೀನು ಬೇರೆ ಹುಡುಗನ ಮದುವೆ ಆಗು.. ನಾನು ಇವಳನ್ನ ಮದುವೆ ಆಗ್ತೇನೆ ಖುಷಿ ಖುಷಿ ಆಗಿ ಇರೋಣ ಅಂತ ಅವಳ ಹತ್ರ ಹೇಳಿದೆ ಎಂದು ನಿರಂಜನ್ ಸಂದರ್ಶನದಲ್ಲಿ ಹೇಳಿದ್ದಾರೆ.
ಕಿರುತೆರೆ ಹಾಗೂ ಸಿನಿಮಾಗಳಲ್ಲಿ ಅಭಿನಯಿಸುವ ಮೂಲಕ ನಿರಂಜನ್ ದೇಶಪಾಂಡೆ ಖ್ಯಾತಿ ಪಡೆದವರು. ಇವರು ಮೇ 12, 2017 ರಂದು ಯಶಸ್ವಿನಿ ಅವರನ್ನು ಲವ್ ಕಮ್ ಅರೆಂಜ್ ಮ್ಯಾರೇಜ್ ಆದರು. ಫೇಸ್‌ಬುಕ್ ಮೂಲಕ ಪರಿಚಯಗೊಂಡ ಬಳಿಕ ಇಬ್ಬರೂ ಮೀಟ್ ಮಾಡಲು ಆರಂಭಿಸಿದರು. ಆನಂತರ ಇಬ್ಬರ ಮಧ್ಯೆ ಸ್ನೇಹ ಚಿಗುರಿತು. ನಂತರ ಇಬ್ಬರ ಮಧ್ಯೆ ಪ್ರೀತಿ ಹುಟ್ಟಿತು. 3-4 ವರ್ಷಗಳ ಕಾಲ ಯಶಸ್ವಿನಿ ಹಾಗೂ ನಿರಂಜನ್ ದೇಶಪಾಂಡೆ ಪರಸ್ಪರ ಪ್ರೀತಿಸಿದರು. ಆನಂತರ ಮದುವೆಯಾಗಲು ನಿರ್ಧರಿಸಿದರು.
Trivikram BBK 11: ಪಕ್ಕಾ ಕ್ರಿಕೆಟ್ ಶಾಟ್: ತ್ರಿವಿಕ್ರಮ್ ಬ್ಯಾಟಿಂಗ್ ಕಂಡು ಶಾಕ್ ಆದ ಫ್ಯಾನ್ಸ್- VIDEO