Oscar 2025: `ಅನೋರಾ'ಗೆ ಆಸ್ಕರ್ ಅವಾರ್ಡ್; ಪ್ರಿಯಾಂಕಾ ಚೋಪ್ರಾ ನಿರ್ಮಾಣದ ಅನುಜಾಗೆ ಕೈ ತಪ್ಪಿದ ಪ್ರಶಸ್ತಿ
97ನೇ ಸಾಲಿನ ಆಸ್ಕರ್ ಅವಾರ್ಡ್ ಕಾರ್ಯಕ್ರಮ ಅಮೆರಿಕದ ಲಾಸ್ ಏಂಜಲೀಸ್ನ ಡಾಲ್ಬಿ ಥಿಯೇಟರ್ನಲ್ಲಿ ನಡೆದಿದೆ. ಭಾರತೀಯ ಕಾಲಮಾನ ಮುಂಜಾನೆ 5.30ಕ್ಕೆ ಅವಾರ್ಡ್ ಕಾರ್ಯಕ್ರಮ ಆರಂಭ ಆಯಿತು. ಅನೋರಾ ಚಿತ್ರ ಅತ್ಯುತ್ತಮ ಸಿನಿಮಾ ಎನಿಸಿಕೊಂಡಿದ್ದು, ಇದು ಅತ್ಯುತ್ತಮ ಚಿತ್ರ, ಅತ್ಯುತ್ತಮ ನಿರ್ದೇಶಕ, ಅತ್ಯುತ್ತಮ ನಟಿ ಮತ್ತು ಅತ್ಯುತ್ತಮ ಮೂಲ ಚಿತ್ರಕಥೆ ಸೇರಿದಂತೆ ಆರು ಆಸ್ಕರ್ ಪ್ರಶಸ್ತಿಗಳಿಗೆ ನಾಮನಿರ್ದೇಶನಗೊಂಡಿತ್ತು.

ಆಸ್ಕರ್ ಪ್ರಶಸ್ತಿ ಸಮಾರಂಭ

ವಾಷಿಂಗ್ಟನ್: 97ನೇ ಸಾಲಿನ ಆಸ್ಕರ್ ಅವಾರ್ಡ್ (Oscar 2025) ಕಾರ್ಯಕ್ರಮ ಅಮೆರಿಕದ ಲಾಸ್ ಏಂಜಲೀಸ್ನ ಡಾಲ್ಬಿ ಥಿಯೇಟರ್ನಲ್ಲಿ ನಡೆದಿದೆ. ಹಾಲಿವುಡ್ ಸೇರಿದಂತೆ ಅನೇಕ ತಾರೆಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ನಿರೂಪಕ ಕಾನನ್ ಒ'ಬ್ರೇನ್ ಕಾರ್ಯಕ್ರಮದ ನಿರೂಪಣೆ ಮಾಡಿ ಎಲ್ಲರ ಗಮನ ಸೆಳೆದಿದ್ದಾರೆ. ಸದ್ಯ ಪ್ರಶಸ್ತಿ ಪ್ರದಾನ ಸಮಾರಂಭ ಕಾರ್ಯಕ್ರಮ ನಡೆದಿದ್ದು, ಹಲವರು ಪ್ರಶಸ್ತಿಗಳನ್ನು ಬಾಚಿಕೊಂಡಿದ್ದಾರೆ. ಭಾರತೀಯ ಕಾಲಮಾನ ಮುಂಜಾನೆ 5.30ಕ್ಕೆ ಅವಾರ್ಡ್ ಕಾರ್ಯಕ್ರಮ ಆರಂಭ ಆಯಿತು. ಅನೋರಾ ಚಿತ್ರ ಅತ್ಯುತ್ತಮ ಸಿನಿಮಾ ಎನಿಸಿಕೊಂಡಿದ್ದು, ಇದು ಅತ್ಯುತ್ತಮ ಚಿತ್ರ, ಅತ್ಯುತ್ತಮ ನಿರ್ದೇಶಕ, ಅತ್ಯುತ್ತಮ ನಟಿ ಮತ್ತು ಅತ್ಯುತ್ತಮ ಮೂಲ ಚಿತ್ರಕಥೆ ಸೇರಿದಂತೆ ಆರು ಆಸ್ಕರ್ ಪ್ರಶಸ್ತಿಗಳಿಗೆ ನಾಮನಿರ್ದೇಶನಗೊಂಡಿತ್ತು.
ಇದೀಗ ಐದು ಪ್ರಶಸ್ತಿಗಳನ್ನು ತನ್ನತ್ತ ಬಾಚಿಕೊಂಡಿದೆ. ದಿ ಬ್ರೂಟಲಿಸ್ಟ್ ಮೂರು ಪ್ರಶಸ್ತಿಗಳನ್ನು ಗೆದ್ದರೆ, ವಿಕೆಡ್ ಮತ್ತು ಡ್ಯೂನ್: ಪಾರ್ಟ್ ಟು ತಲಾ ಎರಡು ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡವು. ಅತ್ಯುತ್ತಮ ನಟಿ: ಮೈಕಿ ಮ್ಯಾಡಿಸನ್ (ಅನೋರಾ), ಅತ್ಯುತ್ತಮ ನಿರ್ದೇಶನ: ಸೀನ್ ಬೇಕರ್ (ಅನೋರಾ).
ಅತ್ಯುತ್ತಮ ನಟ: ಏಡ್ರಿಯನ್ ಬ್ರೋಡಿ (ದಿ ಬ್ರೂಟಲಿಸ್ಟ್) ಬೆಸ್ಟ್ ಒರಿಜಿನಲ್ ಸ್ಕೋರ್: ಡ್ಯಾನಿಯಲ್ ಬ್ಲೂಮ್ಬರ್ಗ್ (ದಿ ಬ್ರೂಟಲಿಸ್ಟ್), ಅತ್ಯುತ್ತಮ ಅಂತಾರಾಷ್ಟ್ರೀಯ ಸಿನಿಮಾ: ಐ ಆ್ಯಮ್ ಸ್ಟಿಲ್ ಹಿಯರ್ (ಬ್ರೇಜಿಲ್), ಅತ್ಯುತ್ತಮ ಛಾಯಾಗ್ರಹಣ: ಲೋಲ್ ಗ್ರಾವ್ಲೇ (ದಿ ಬ್ರೂಟಲಿಸ್ಟ್), ಬೆಸ್ಟ್ ಸೌಂಡ್ ಆ್ಯಂಡ್ ಬೆಸ್ಟ್ ವಿಶ್ಯುವಲ್ ಎಫೆಕ್ಟ್: ಡ್ಯೂನ್ 2, ಬೆಸ್ಟ್ ಡಾಕ್ಯುಮೆಂಟರಿ ಫ್ಯೂಚರ್ ಫಿಲ್ಮ್: ನೋ ಒದರ್ ಲ್ಯಾಂಡ್ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿವೆ.
ಈ ಸುದ್ದಿಯನ್ನೂ ಓದಿ: Oscar 2025 : ಆಸ್ಕರ್ ವೇದಿಕೆಯಲ್ಲಿ ಮೊಳಗಿತು ಭಾರತೀಯ ಭಾಷೆ; ಹಿಂದಿಯಲ್ಲಿ ಮಾತನಾಡಿದ ನಿರೂಪಕ!
ಆಸ್ಕರ್ ಗೆಲ್ಲೋ ಭಾರತದ ಕನಸು ಭಗ್ನ
2023 ರಲ್ಲಿ RRR ಚಿತ್ರ ಸದ್ದು ಮಾಡಿತ್ತು. ಈ ಬಾರಿ ಪ್ರಿಯಾಂಕಾ ಚೋಪ್ರಾ ನಿರ್ಮಾಣದ ‘ಅನುಜಾ’ ಶಾರ್ಟ್ ಫಿಲ್ಮ್ ‘ಬೆಸ್ಟ್ ಲೈವ್ ಆ್ಯಕ್ಷನ್ ಶಾರ್ಟ್ ಫಿಲ್ಮ್’ ವಿಭಾಗದಲ್ಲಿ ಇತ್ತು. ಆದರೆ ಚಿತ್ರ ಆಸ್ಕರ್ ರೇಸ್‌ನಿಂದ ಹೊರಬಿದ್ದಿದೆ. ಅನುಜಾ ಶಾರ್ಟ್ ಫಿಲ್ಮ್ ಐ ಆಮ್ ನಾಟ್ ಅ ರೋಬೋಟ್ ಚಿತ್ರದ ವಿರುದ್ಧ ಸೋಲನ್ನು ಕಂಡಿದೆ. ಆಡಮ್ ಜೆ. ಗ್ರೇವ್ಸ್ ನಿರ್ದೇಶನದ ಈ ಚಿತ್ರವು ಅನುಜಾ ಎಂಬ ಯುವತಿಯ ಕಥೆಯನ್ನು ಹೇಳುತ್ತದೆ. ಅನುಜಾ ಪಾತ್ರವನ್ನು ಸಜ್ದಾ ಪಠಾಣ್ ನಿರ್ವಹಿಸಿದ್ದಾರೆ. ಈಕೆ ದೆಹಲಿಯ ಗಾರ್ಮೆಂಟ್ ಕಾರ್ಖಾನೆಯಲ್ಲಿ ಕೆಲಸ ಮಾಡುವ ಪಾತ್ರವನ್ನು ನಿರ್ವಹಿಸಿದ್ದಾರೆ. ಅನುಜಾ ತನ್ನ ಕುಟುಂಬವನ್ನು ಪೋಷಿಸುವ ಜವಾಬ್ದಾರಿಯನ್ನು ಹೇಗೆ ನಿಭಾಯಿಸುತ್ತಾಳೆ ಎಂಬುದೇ ಕಥೆಯ ಹಂದರ.