Oscar 2025 : ಆಸ್ಕರ್ ವೇದಿಕೆಯಲ್ಲಿ ಮೊಳಗಿತು ಭಾರತೀಯ ಭಾಷೆ; ಹಿಂದಿಯಲ್ಲಿ ಮಾತನಾಡಿದ ನಿರೂಪಕ!
97ನೇ ಸಾಲಿನ ಆಸ್ಕರ್ ಅವಾರ್ಡ್ ಕಾರ್ಯಕ್ರಮ ಅಮೆರಿಕದ ಲಾಸ್ ಏಂಜಲೀಸ್ನ ಡಾಲ್ಬಿ ಥಿಯೇಟರ್ನಲ್ಲಿ ನಡೆದಿದೆ. ಕಾರ್ಯಕ್ರಮದ ನಿರೂಪಕ ಕಾನನ್ ಒ'ಬ್ರೇನ್ ಕಾರ್ಯಕ್ರಮದಲ್ಲಿ ಹಿಂದಿ ಮಾತನಾಡಿ, ಎಲ್ಲರಿಗೂ ಅಚ್ಚರಿ ಮೂಡಿಸಿದರು. ನಮಶ್ಕಾರ್ ನಾಷ್ಟೇ ಕೆ ಸಾಥ್ ಆಸ್ಕರ್ ದೇಖ್ನಾ" ಎಂದು ಅವರು ಹೇಳಿದ್ದಾರೆ.

ಕಾನನ್ ಒ'ಬ್ರೇನ್

ವಾಷಿಂಗ್ಟನ್: 97ನೇ ಸಾಲಿನ ಆಸ್ಕರ್ ಅವಾರ್ಡ್ (Oscar 2025) ಕಾರ್ಯಕ್ರಮ ಅಮೆರಿಕದ ಲಾಸ್ ಏಂಜಲೀಸ್ನ ಡಾಲ್ಬಿ ಥಿಯೇಟರ್ನಲ್ಲಿ ನಡೆದಿದೆ. ಅಮೆರಿಕದಲ್ಲಿ ಉಂಟಾದ ಕಾಡ್ಗಿಚ್ಚಿನ ಕಾರಣಕ್ಕೆ ಆಸ್ಕರ್ ಅವಾರ್ಡ್ ನಡೆಯುವುದಿಲ್ಲ ಎಂದು ಹೇಳಲಾಗಿತ್ತು. ಆದರೆ, ಅದ್ದೂರಿಯಾಗಿಯೇ ಕಾರ್ಯಕ್ರಮ ನಡೆದಿದೆ. ವಿವಿಧ ವಿಭಾಗಗಳಲ್ಲಿ ಅವಾರ್ಡ್ ನೀಡಲಾಗಿದೆ. ಹಾಲಿವುಡ್ ಸೇರಿದಂತೆ ಅನೇಕ ತಾರೆಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ನಿರೂಪಕ ಕಾನನ್ ಒ'ಬ್ರೇನ್ ಕಾರ್ಯಕ್ರಮದ ನಿರೂಪಣೆ ಮಾಡಿ ಎಲ್ಲರ ಗಮನ ಸೆಳೆದಿದ್ದಾರೆ.
ಹಾಸ್ಯ ಚಟಾಕಿಯೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು. ಕಾನನ್ ಒ'ಬ್ರೇನ್ ಕಾರ್ಯಕ್ರಮದಲ್ಲಿ ಹಿಂದಿ ಮಾತನಾಡಿ, ಎಲ್ಲರಿಗೂ ಅಚ್ಚರಿ ಮೂಡಿಸಿದರು. ನಮಶ್ಕಾರ್ ನಾಷ್ಟೇ ಕೆ ಸಾಥ್ ಆಸ್ಕರ್ ದೇಖ್ನಾ" ಎಂದು ಹೇಳುವ ಮೂಲಕ ಎಲ್ಲರನ್ನೂ ಅಚ್ಚರಿಗೊಳಿಸಿದರು. ಭಾರತೀಯರಿಗೆ ಬೆಳಗಿನ ಶುಭಾಶಯಗಳನ್ನು ಹೇಳಿದ ಅವರು ಬೆಳಿಗ್ಗೆ ಉಪಹಾರ ಮಾಡುತ್ತಾ ಆಸ್ಕರ್ ಕಾರ್ಯಕ್ರಮ ನೋಡಿ ಎಂದು ಹೇಳಿದ್ದಾರೆ.
Conan O'Brien deserves an Oscar for best attempt at a foreign language! 😂
— Teri Maa Ki Jack 🇺🇸🇮🇳 (@TERIMAAKIJACK) March 3, 2025
Good job, though the Hindi was definitely Hinding! 👏 #Oscars2025 pic.twitter.com/AG0h2BOmFT
2023 ರಲ್ಲಿ ನಾಟು ನಾಟುವಿನ ದೊಡ್ಡ ಗೆಲುವಿನಿಂದ ಹಿಡಿದು ಭಾರತೀಯ ಚಲನಚಿತ್ರಗಳು ಮತ್ತು ಕಲಾವಿದರು ಜಾಗತಿಕ ಮನ್ನಣೆ ಪಡೆಯುವವರೆಗೆ ಆಸ್ಕರ್ ಪ್ರಶಸ್ತಿಗಳಲ್ಲಿ ಭಾರತ ಯಾವಾಗಲೂ ಪ್ರಬಲ ಉಪಸ್ಥಿತಿಯನ್ನು ಹೊಂದಿದೆ. ಭಾರತೀಯ ಪ್ರೇಕ್ಷಕರನ್ನು ಅವರ ಭಾಷೆಯಲ್ಲಿ ಸ್ವಾಗತಿಸುವ ಮೂಲಕ, ಕಾನನ್ ಒ'ಬ್ರೇನ್ ಭಾರತದ ಸಾಂಸ್ಕೃತಿಕ ಪ್ರಭಾವವನ್ನು ಗೌರವಿಸಿದ್ದಲ್ಲದೆ, ಹಾಲಿವುಡ್ ಮತ್ತು ಭಾರತೀಯ ಸಿನಿಮಾ ಪ್ರೇಮಿಗಳ ನಡುವಿನ ಜಾಗತಿಕ ಸಂಪರ್ಕವನ್ನು ಬಲಪಡಿಸಿದರು.
ಕಾನನ್ ಒ'ಬ್ರೇನ್ ಅವರು ಹಿಂದಿಯಲ್ಲಿ ಮಾತನಾಡುತ್ತಿದ್ದಂತೆ ಭಾರತೀಯ ಅಭಿಮಾನಿಗಳು ಸಂಸತ ವ್ಯಕ್ತಪಡಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಈ ಕ್ಲಿಪ್ ವೈರಲ್ ಆಗಿದೆ. ಇನ್‌ಸ್ಟಾಗ್ರಾಮ್‌ನಲ್ಲಿ ತಮ್ಮ ದೇಶದ ಭಾಷೆಯನ್ನು ಗುರುತಿಸಿದ್ದಕ್ಕಾಗಿ ಹಲವರು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ. ಅಕಾಡೆಮಿ ಪ್ರಶಸ್ತಿಗಳಲ್ಲಿ ಹಿಂದಿಯನ್ನು ಕೇಳುತ್ತೇನೆಂದು ಎಂದಿಗೂ ನಿರೀಕ್ಷಿಸಿರಲಿಲ್ಲ ಎಂದು ಮತ್ತೊಬ್ಬರು ಹೇಳಿದ್ದಾರೆ.
ಈ ಸುದ್ದಿಯನ್ನೂ ಓದಿ: Oscars 2025: ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭ ; ಯಾರಿಗೆಲ್ಲ ಒಲಿದಿದೆ ಅವಾರ್ಡ್?
ಈ ಬಾರಿ ಪ್ರಿಯಾಂಕಾ ಚೋಪ್ರಾ ನಿರ್ಮಾಣದ ‘ಅನುಜಾ’ ಶಾರ್ಟ್ ಫಿಲ್ಮ್ ‘ಬೆಸ್ಟ್ ಲೈವ್ ಆ್ಯಕ್ಷನ್ ಶಾರ್ಟ್ ಫಿಲ್ಮ್’ ವಿಭಾಗದಲ್ಲಿ ಇತ್ತು. ಆದರೆ, ಇದಕ್ಕೆ ಅವಾರ್ಡ್ ಸಿಕ್ಕಿಲ್ಲ ಅನ್ನೋದು ಬೇಸರದ ವಿಚಾರ. ನಟಿ ಪ್ರಿಯಾಂಕಾ ಚೋಪ್ರಾ, ಆಸ್ಕರ್ ಗೆದ್ದಿರೋ ‘ದಿ ಎಲಿಫೆಂಟ್ ವಿಸ್ಪರ್ಸ್’ನ ನಿರ್ಮಾಪಕಿ ಗುನೀತ್ ಮೊಂಗಾ ಹಾಗೂ ಇನ್ನಿತರರು ನಿರ್ಮಿಸಿದ ‘ಅನುಜಾ’ ಲೈವ್ ಆಕ್ಷನ್ ಶಾರ್ಟ್ ಫಿಲ್ಮ್ ವಿಭಾಗದಲ್ಲಿ ನಾಮಿನೇಟ್ ಆಗಿತ್ತು. ಇದನ್ನು ಆ್ಯಡಮ್ ಜೆ ಗ್ರಾವೆಸ್ ನಿರ್ದೇಶನ ಮಾಡಿದ್ದರು, ದೆಹಲಿಯ ಸ್ಲಂನ ಇಬ್ಬರು ಬಾಲಕಿಯರ ಕತೆಯನ್ನು ಈ ಕಿರುಚಿತ್ರ ಒಳಗೊಂಡಿದೆ.