ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಗುಟ್ಕಾ ಜಗಿಯುತ್ತಲೇ ಯೋಗ ಮಾಡಿದ್ರಾ ನಟ, ಸಂಸದ ರವಿ ಕಿಶನ್? ʻಪೆದ್ದಿʼ ಕಲಾವಿದನ 'ಗುಟ್ಖಾಸನ' ವಿಡಿಯೋ ಸಖತ್‌ ವೈರಲ್!

ಜನಪ್ರಿಯ ಬಹುಭಾಷಾ ನಟ ಮತ್ತು ಗೋರಖ್‌ಪುರ ಸಂಸದ ರವಿ ಕಿಶನ್ ಅವರು ಅಂತರರಾಷ್ಟ್ರೀಯ ಯೋಗ ದಿನಾಚರಣೆಗೂ ಮುನ್ನ ಯೋಗ ಮಾಡುವಾಗ ಏನನ್ನೋ ಅಗಿಯುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಟ್ರೋಲ್ ಆಗಿದೆ. ಅವರು ಜಗಿಯುತ್ತಿರುವುದು ಗುಟ್ಕಾ ಅಥವಾ ಖೈನಿ ಇರಬಹುದು ಎಂದು ನೆಟ್ಟಿಗರು ಕಾಮೆಂಟ್‌ ಮಾಡಿದ್ದಾರೆ.

ಗುಟ್ಕಾ ಜಗಿಯುತ್ತಲೇ ಯೋಗ ಮಾಡಿದ್ರಾ ರವಿ ಕಿಶನ್? ಪೆದ್ದಿ ನಟ ಸಖತ್‌ ಟ್ರೋಲ್‌

-

Avinash GR
Avinash GR Jun 18, 2026 7:32 PM

ಜನಪ್ರಿಯ ಬಹುಭಾಷಾ ನಟ ಹಾಗೂ ಗೋರಖ್‌ಪುರ ಸಂಸದ ರವಿ ಕಿಶನ್ ಅವರು ಅಂತರರಾಷ್ಟ್ರೀಯ ಯೋಗ ದಿನಾಚರಣೆಗೂ ಮುನ್ನ ಯೋಗ ಮಾಡುತ್ತಿರುವ ವಿಡಿಯೋ ವೈರಲ್ ಆಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ಟ್ರೋಲ್‌ ಆಗಿದೆ. ಗೋರಖ್‌ಪುರದಲ್ಲಿ ನಡೆದ ಯೋಗ ಕಾರ್ಯಕ್ರಮವೊಂದರಲ್ಲಿ ಈ ವಿಡಿಯೋ ಚಿತ್ರೀಕರಿಸಲಾಗಿದೆ. ಯೋಗಾಸನಗಳನ್ನು ಮಾಡುವಾಗ ನಟ ರವಿ ಕಿಶನ್‌ ಅವರು ಏನನ್ನೋ ಅಗಿಯುತ್ತಿರುವಂತೆ ಕಂಡುಬಂದಿದ್ದರಿಂದ, ಅದು ಗುಟ್ಕಾ ಇರಬಹುದು ಎಂದು ನೆಟ್ಟಿಗರು ಊಹಿಸಿದ್ದಾರೆ. ಅದನ್ನೇ ಈಗ ಸಾಮಾಜಿಕ ಜಾಲತಾಣ ಬಳಕೆದಾರರು 'ಗುಟ್ಖಾಸನ' ಎಂದು ಕರೆದು ತಮಾಷೆ ಮಾಡುತ್ತಿದ್ದಾರೆ.‌

ಸೋಶಿಯಲ್‌ ಮೀಡಿಯಾದಲ್ಲಿ ಸಖತ್‌ ಟ್ರೋಲ್

ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಸದ್ದು ಮಾಡುತ್ತಿದ್ದಂತೆಯೇ, ಬಳಕೆದಾರರು ಯೋಗಾಸನ ಮಾಡುವಾಗ ರವಿ ಕಿಶನ್‌ ಅವರು ನೀಡಿದ ಹಾವಭಾವಗಳ ಕುರಿತು ತಮ್ಮದೇ ಆದ ಹಾಸ್ಯಭರಿತ ಪ್ರತಿಕ್ರಿಯೆಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಕೆಲವರು ಈ ಕಾರ್ಯಕ್ರಮದ ಗಂಭೀರತೆಯನ್ನು ಪ್ರಶ್ನಿಸಿದರೆ, ಇನ್ನು ಕೆಲವರು ತಮಾಷೆಯ ಕಾಮೆಂಟ್‌ಗಳ ಮೂಲಕ ಸಖತ್‌ ಆಗಿಯೇ ಕಾಲೆಳೆಯುತ್ತಿದ್ದಾರೆ.

BJP MP Ravi Kishan: ಬಿಹಾರ ಚುನಾವಣಾ ಪ್ರಚಾರ- ಬಿಜೆಪಿ ಸಂಸದ ರವಿ ಕಿಶನ್‌ಗೆ ಕೊಲೆ ಬೆದರಿಕೆ

ಕೇಳಿಬಂದ ಚಿತ್ರ-ವಿಚಿತ್ರ ಕಾಮೆಂಟ್‌ಗಳು

"ಇದು ಯಾರಿಗಾಗಿ ಮಾಡುತ್ತಿರುವ ಯೋಗ? ಹೇಗಿದ್ದರೂ ಅವರು ನಟರು, ಇಲ್ಲೂ ಸಹ ಕೇವಲ ನಟನೆ ಮಾಡುತ್ತಿದ್ದಾರೆ. ರೀಲ್ಸ್ ಮತ್ತು ಫೋಟೋಶೂಟ್ ಮಾಡಿಸಿಕೊಳ್ಳುತ್ತಿದ್ದಾರೆ. ಅದರ ನಂತರ ಅವರು ಯೋಗ ಮಾಡಿದರೋ ಇಲ್ಲವೋ ಯಾರಿಗೆ ಗೊತ್ತು?" ಎಂದು ನೆಟ್ಟಿಗರೊಬ್ಬರು ಕಾಮೆಂಟ್‌ ಮಾಡಿದ್ದಾರೆ. ಮತ್ತೊಬ್ಬರು, "ಇದು ಫೇಸ್ ಯೋಗ (ಮುಖದ ಯೋಗ).. ತಮ್ಮ ವಸಡುಗಳನ್ನು ಹಿಗ್ಗಿಸಲು ಮತ್ತು ವಿಶ್ರಾಂತಿ ನೀಡಲು ಗುಟ್ಖಾ ಅಗಿಯುತ್ತಿದ್ದಾರೆ" ಎಂದು ಕಾಲೆಳೆದಿದ್ದಾರೆ.

ಇನ್ನು, ರವಿ ಕಿಶನ್ ಅವರನ್ನು ತಮಾಷೆಯಾಗಿ ಸಮರ್ಥಿಸಿಕೊಳ್ಳುವ ಧಾಟಿಯಲ್ಲಿ, "ರವಿ ಕಿಶನ್‌ ಅವರು 'ಗುಟ್ಖಾಸನ' ಮಾಡುತ್ತಿರಬಹುದು" ಎಂದು ಹಾಸ್ಯ ಮಾಡಿದ್ದಾರೆ. ಇನ್ನೊಬ್ಬ ನೆಟ್ಟಿಗರು, "ಅದು ಗುಟ್ಖಾ ಅಲ್ಲ, ಖೈನಿ (ತಂಬಾಕು)" ಎಂದು ಬರೆದಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ವೈರಲ್‌ ಆಗುತ್ತಲೇ ಇದ್ದು, ಯೋಗದ ಅವಧಿಯಲ್ಲಿ ರವಿ ಅವರು ನಿಜಕ್ಕೂ ಏನನ್ನು ಅಗಿಯುತ್ತಿದ್ದರು ಎಂಬ ಚರ್ಚೆ ಜೋರಾಗಿದೆ.‌

Ravi Kishan: ರಾತ್ರಿ ಮಲಗುವ ಮುನ್ನ ಪತ್ನಿ ಪಾದ ಮುಟ್ಟುವೆ ಎಂದ ನಟ ರವಿ ಕಿಶನ್: ಕಾರಣ ಏನು?

ಯಾರು ಈ ರವಿ ಕಿಶನ್?

ಭೋಜಪುರಿ ಚಿತ್ರರಂಗ ಸಂಕಷ್ಟದಲ್ಲಿದ್ದ ಸಮಯದಲ್ಲಿ ಹೊಸ ಚೈತನ್ಯ ಮೂಡಿಸಲು ನಟ ರವಿ ಕಿಶನ್ ಮುಖ್ಯ ಕಾರಣರಾದರು. ಬಾಲಿವುಡ್‌ನಲ್ಲಿ ಪೋಷಕ ಪಾತ್ರಗಳ ಮೂಲಕ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದ ರವಿ, ಭೋಜಪುರಿ ಚಿತ್ರಗಳಲ್ಲಿ ಭಾರಿ ಯಶಸ್ಸನ್ನು ಕಂಡು ಅಲ್ಲಿನ ದೊಡ್ಡ ಸ್ಟಾರ್‌ ಕಲಾವಿದರಲ್ಲಿ ಒಬ್ಬರಾದರು.

ರವಿ ಕಿಶನ್‌ ಅವರ ವೈರಲ್ ವಿಡಿಯೋ



ನಟ ಮತ್ತು ನಿರ್ಮಾಪಕರಾಗಿ ಹಲವಾರು ಯಶಸ್ವಿ ಚಿತ್ರಗಳ ಮೂಲಕ ಅವರು ಭೋಜಪುರಿ ಚಿತ್ರರಂಗದ ವ್ಯಾಪ್ತಿ ಮತ್ತು ಜನಪ್ರಿಯತೆಯನ್ನು ವಿಸ್ತರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಆನಂತರ ರಾಜಕೀಯಕ್ಕೂ ಎಂಟ್ರಿ ಕೊಟ್ಟು ಸಂಸದರಾದರು. ಇತ್ತೀಚೆಗೆ ಅವರು ನಟಿಸಿದ್ದ 'ಲಾಪತಾ ಲೇಡೀಸ್', 'ಪೆದ್ದಿ' ಹಾಗೂ 'ಮಾ ಬಹೆನ್' ಸಿನಿಮಾಗಳು ದೊಡ್ಡ ಯಶಸ್ಸು ಕಂಡಿವೆ. ರವಿ ನಟನೆಯ 'ಧಮಾಲ್ 4' ಚಿತ್ರವು ಜುಲೈ 10 ರಂದು ಬಿಡುಗಡೆಯಾಗಲಿದೆ.