ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಶಾಸಕರಿಗೆ ʼವಿಆರ್‌ಎಸ್ʼ ದಾರಿ ತೋರಿದ ಕಾಂಗ್ರೆಸ್

ಎರಡು ತಿಂಗಳ ವಿಳಂಬದ ನಂತರ ರಾಜ್ಯ ಸಚಿವ ಸಂಪುಟ ವಿಸ್ತರಣೆಯಾಗಿದ್ದು, ನಿರೀಕ್ಷೆಯಂತೆ ಅನೇಕ ಸಂಪುಟದಿಂದ ಕೊಕ್ ನೀಡಲಾಗಿದ್ದು, ಇದು ಅನಿರೀಕ್ಷಿತವೇ ಆಗಿದೆ. ಆದರೆ ಮತ್ತೊಂದು ದಿಢೀರ್ ಬೆಳವಣಿಗೆ ಎಂದರೆ, ಶಾಸಕರ ರಾಜ ಕೀಯ ಸ್ವಯಂ ನಿವೃತ್ತಿ, ಅಂದರೆ ಸಂಪುಟ ವಿಸ್ತರಣೆ ಯ ಪರಿಣಾಮ ಸುಮಾರು 15ಕ್ಕೂ ಹೆಚ್ಚು ಶಾಸಕರು ಇದೀಗ ಸ್ವಯಂ ನಿವೃತ್ತಿ ಹಾದಿಯಲಿದ್ದಾರೆ.

ಶಾಸಕರಿಗೆ ʼವಿಆರ್‌ಎಸ್ʼ ದಾರಿ ತೋರಿದ ಕಾಂಗ್ರೆಸ್

-

Profile
Ashok Nayak Aug 4, 2026 2:30 PM

ಶಿವಕುಮಾರ್ ಬೆಳ್ಳಿತಟ್ಟೆ ಬೆಂಗಳೂರು

ಮುಂದಿನ ಚುನಾವಣೆಯಲ್ಲಿ ಪುತ್ರ, ಪುತ್ರಿ, ಸಂಬಂಧಿಕರಿಗೆ ಟಿಕೆಟ್ ಕೇಳಲು ಹಲವು ನಾಯಕರು ಸಜ್ಜು

ಅಸಹಾಯಕರಾದ ಹಲವು ಧುರೀಣರು

ಎರಡು ತಿಂಗಳ ವಿಳಂಬದ ನಂತರ ರಾಜ್ಯ ಸಚಿವ ಸಂಪುಟ ವಿಸ್ತರಣೆಯಾಗಿದ್ದು, ನಿರೀಕ್ಷೆಯಂತೆ ಅನೇಕ ಸಂಪುಟದಿಂದ ಕೊಕ್ ನೀಡಲಾಗಿದ್ದು, ಇದು ಅನಿರೀಕ್ಷಿತವೇ ಆಗಿದೆ. ಆದರೆ ಮತ್ತೊಂದು ದಿಢೀರ್ ಬೆಳವಣಿಗೆ ಎಂದರೆ, ಶಾಸಕರ ರಾಜಕೀಯ ಸ್ವಯಂ ನಿವೃತ್ತಿ, ಅಂದರೆ ಸಂಪುಟ ವಿಸ್ತರಣೆ ಯ ಪರಿಣಾಮ ಸುಮಾರು 15ಕ್ಕೂ ಹೆಚ್ಚು ಶಾಸಕರು ಇದೀಗ ಸ್ವಯಂ ನಿವೃತ್ತಿ ಹಾದಿಯಲಿದ್ದಾರೆ.

ಇದರೊಂದಿಗೆ ಕಾಂಗ್ರೆಸ್ ಈಗ ಇವರಿಗೆ ಸಂಪುಟದಲ್ಲಿ ಅವಕಾಶ ಕಲ್ಪಿಸದೆ ಸ್ವಯಂ ರಾಜಕೀಯ ನಿವೃತ್ತಿಯ ದಾರಿ ತೋರಿಸಿದಂತಾಗಿದೆ. ಹೌದು, ಅಳಂದ ಶಾಸಕ ಬಿ.ಆರ್. ಪಾಟೀಲ್ ಸೇರಿದಂತೆ ಅನೇಕ ಹಿರಿಯ ಶಾಸಕರು, ಕಾಂಗ್ರೆಸ್ ನ ಹಿರಿಯರು ಈ ಬಾರಿ ಮಂತ್ರಿಯಾಗಿಯೇ ತೀರುತ್ತೇನೆ ಎನ್ನುವ ಅಚಲ ನಂಬಿಕೆ ಹೊಂದಿದ್ದರು. ಆದರೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದ ಸಂಪುಟದಲ್ಲಿ ಅವಕಾಶ ಸಿಗದ ಕಾರಣ ಅವರಿಗ ಸ್ವಯಂ ರಾಜಕೀಯ ನಿವೃತ್ತಿ ಅಂಚಿಗೆ ಬಂದು ನಿಂತಿದ್ದಾರೆ.

ಅಂದ ಹಾಗೆ ಈ ಹಿರಿಯ ನಾಯಕರನ್ನು ಸಮಾಧಾನ ಮಾಡಲು ಕಾಂಗ್ರೆಸ್ ಇದೀಗ ಅವರಿಗೆ ನಿಗಮ, ಮಂಡಳಿಗಳನ್ನಾಗಲಿ, ಪಕ್ಷದಲ್ಲಿ ಉನ್ನತ ಹುದ್ದೆಗಳನ್ನಾಗಲಿ ನೀಡಲು ಸಾಧ್ಯವಾಗುತ್ತಿಲ್ಲ, ಅದಕ್ಕೆ ಅವಕಾಶವೂ ಇಲ್ಲ. ಒಂದೊಮ್ಮೆ ನೀಡಿದರೂ ಅವರು ಒಪ್ಪುವ ಮತ್ತು ನಿರ್ವಹಿಸುವ ಸ್ಥಿತಿಯ ಲ್ಲೂ ಇಲ್ಲ. ಹೀಗಾಗಿ ಪಕ್ಷದ ಹೈಕಮಾಂಡ್ ನ ಹೊಸ ಸೂತ್ರದಂತೆ ಹೊಸ ಮುಖಗಳಿಗ ಹಾಗೂ ಯುವಕರಿಗೆ ಅವಕಾಶ ಕಲ್ಪಿಸಿದ್ದರಿಂದ ಹಳೆಯ ಬೇರಿನಂತಿದ್ದ ಸುಮಾರು 15ಕ್ಕೂ ಹೆಚ್ಚು ಕಾಂಗ್ರೆಸ್ ನಾಯಕರು ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸದೆ ರಾಜಕೀಯ ನಿವೃತ್ತಿ ಪಡೆಯುವ ಲೆಕ್ಕಾಚಾರ ದಲ್ಲಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: DCM DKS: ರಾಜ್ಯಕ್ಕೆ ಡಿಕೆಶಿ ಸೇವೆ ಸಿಗಲಿ; ಪರೋಕ್ಷವಾಗಿ ಸಿಎಂ ಆಗಲಿ ಎಂದು ಹರಸಿದ ಪುತ್ತಿಗೆ ಶ್ರೀ

ಹೀಗೆ ಸಂಪುಟದಲ್ಲಿ ಅವಕಾಶ ಕೈತಪ್ಪಿ ನಿವೃತ್ತಿ ಚಿಂತನೆಯಲ್ಲಿರುವ ಈ ನಾಯಕರಲ್ಲಿ ಕೆಲವರು ಬೇಸರಗೊಂಡಿದ್ದರೆ, ಕೆಲವರು ತಮ್ಮಷ್ಟಕ್ಕೇ ಸಮಾಧಾನ ಮಾಡಿಕೊಂಡು ಮುಂದಿನ ಚುನಾವಣೆ ಯಲ್ಲಿ ತಮ್ಮ ಪುತ್ರ, ಪುತ್ರಿ ಅಥವಾ ಅಳಿಯ ಸೇರಿದಂತೆ ಸಂಬಂಧಿಕರಿಗೆ ಪಕ್ಷದ ಟೆಕೆಟ್ ಬೇಡಿಕೆ ಸಲ್ಲಿಸುವ ಲಕ್ಕಾಚಾರದಲ್ಲಿದ್ದಾರೆ ಎನ್ನಲಾಗಿದೆ.

ಆದರೂ ಸಂಪುಟ ವಿಸ್ತರಣೆಯಿಂದ ಅವಕಾಶ ವಂಚಿತರಾದ ಸುಮಾರು 15 ಮಂದಿ ಶಾಸಕರು ಅಸಮಾಧಾನಗೊಂಡು ರಾಜೀನಾಮೆ ಮಾತುಗಳ ನ್ನಾಡಿದ್ದು, ಇವರ ಜತೆಗೆ ಹಿರಿಯ ನಾಯಕರ ಅತೃಪ್ತಿಯ ಬೇಗುದಿ ಪಕ್ಷದವನ್ನು ಇನ್ನಷ್ಟು ಇಕ್ಕಿಟ್ಟಿಗೆ ಸಿಲುಕಿಸುವ ಸಾಧ್ಯತೆ ಇದೆ. ಇವರಲ್ಲಿ ಕೆಲವರು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮೊರೆ ಹೋಗಿ ತಮ್ಮ ಅಳಲು ತೋಡಿ ಕೊಳ್ಳುವ ಸಾಧ್ಯತೆ ಕಾಣುತ್ತಿದ್ದು, ಇದರೊಂದಿಗೆ ಭಿನ್ನಮತ ರಾಜಕಾರಣಕ್ಕೆ ನಿಧಾನವಾಗಿ ಟಿಸಿಲೊಡೆಯುವ ಸೂಚನೆ ಕಾಣುತ್ತಿದೆ ಎಂದು ಪಕ್ಷದ ಹಿರಿಯ ಶಾಸಕರು ಹೇಳಿದ್ದಾರೆ.

ನಿವೃತ್ತಿ ಅಂಚಿನಲ್ಲಿರುವ ಅತೃಪ್ತರು

ಮಂತ್ರಿಸ್ಥಾನ ವಂಚಿತರಲ್ಲಿ ಕೆಲವರು ಕ್ಷೇತ್ರ ಪುನರ್ ವಿಂಗಡಣೆಯಾದರೆ ಸ್ಪರ್ಧಿಸುವುದು ಕಷ್ಟ ಎನ್ನುತ್ತಿದ್ದಾರೆ. ಇನ್ನುಳಿದ ಶಾಸಕರು ಮುಂದಿನ ರಾಜಕಾರಣ ಕಷ್ಟ ಎನ್ನುತ್ತಿದ್ದಾರೆ. ಅಳಂದ ಕ್ಷೇತ್ರದ ಬಿ.ಆರ್.ಪಾಟೀಲ್, ಹೊಸದುರ್ಗ ಕ್ಷೇತ್ರದ ಬಿ.ಜಿ.ಗೋವಿಂದಪ್ಪ, ಶಿರಾ ಕ್ಷೇತ್ರದ ಶಾಸಕ ಟಿ.ಬಿ.ಜಯಚಂದ್ರ, ಹಾವೇರಿ ಜಿಲ್ಲೆಯ ಬ್ಯಾಡಗಿ ಕ್ಷೇತ್ರದ ಬಸವರಾಜ ನೀಲಪ್ಪ ಶಿವಣ್ಣನವರ್, ಇಡೀ ವಿಧಾನಸಭೆಯಲ್ಲಿ ಅಂತ್ಯ ಹಿರಿಯ ಹಾಗೂ ಹೆಚ್ಚು ಬಾರಿ ಆಯ್ಕೆಯಾದವರೆನಿಸಿಕೊಂಡ ಹಳಿಯಾಳ ಕ್ಷೇತ್ರದ ಆರ್.ವಿ.ದೇಶಪಾಂಡೆ, ಪಿರಿಯಾಪಟ್ಟಣದ ಕೆ.ವೆಂಕಟೇಶ್, ತಿಪಟೂರು ಕ್ಷೇತ್ರದ ಕೆ.ಷಡಕ್ಷರಿ, ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ಕ್ಷೇತ್ರದ ಎನ್.ವೈ.ಗೋಪಾಲಕೃಷ್ಣ ಹಾಗೂ ಶಿವಮೊಗ್ಗ ಜಿಲ್ಲೆಯ ಬಿ.ಕೆ.ಸಂಗೇಮೇಶ್ ಹಾಗೂ ರಾಯಚೂರಿನ ಹಂಪನಗೌಡ ಬಾದರ್ಲಿ, ವಿಧಾನ ಪರಿಷತ್ತಿನ ಬೆಳಗಾವಿಯ ಪ್ರಕಾಶ್ ಹುಕ್ಕೇರಿ, ಬೋಸರಾಜ್ ಸೇರಿದಂತೆ ಸುಮಾರು 15ಕ್ಕೂ ಹೆಚ್ಚು ಶಾಸಕರು ಮುಂದಿನ ಚುನಾವಣೆಯಲ್ಲಿ ತಮ್ಮ ಬದಲು ಪುತ್ರ ಹಾಗೂ ಕುಟುಂಬದವರನ್ನು ಕಣಕ್ಕಿಳಿಸುವ ಚಿಂತನೆಯಲ್ಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಉ.ಕ.ದ 14 ಜಿಲ್ಲೆಗಳ ಮುಸ್ಲಿಂ ಸಮುದಾಯಕ್ಕೆ ಪ್ರಾತಿನಿಧ್ಯವಿಲ್ಲ

ಸರಕಾರದ ಸಚಿವರೇ ಒಪ್ಪಿಕೊಂಡಿರುವಂತೆ ಸಂಪುಟ ವಿಸ್ತರಣೆಯಲ್ಲಿ ಪ್ರಮುಖವಾಗಿ ಜಾತಿ, ಧರ್ಮ ಆಧಾರಿವಾಗಿಟ್ಟುಕೊಂಡೇ ಸಂಪುಟದಲ್ಲಿ ಪ್ರಾತಿನಿಧ್ಯ ಕಲ್ಪಿಸಲಾಗಿದೆ. ಇಷ್ಟೆಲ್ಲದರ ಮಧ್ಯೆ ಸುಮಾರು 45 ವರ್ಷ ರಾಜಕಾರಣ ಮಾಡಿರುವ, ಪಕ್ಷಕ್ಕಾಗಿ ದುಡಿದಿರುವ ಹಾಗೂ ಐದಾರು ಬಾರಿ ಶಾಸಕರಾಗಿ ರುವ ಹಾಗೂ ಪ್ರಬಲ ಜಾತಿ, ಧರ್ಮಗಳಿಗೇ ಸೇರಿದ ಅನೇಕ ಹಿರಿಯ ನಾಯಕರಿಗೇ ಸಂಪುಟದಲ್ಲಿ ಅವಕಾಶ ಸಿಗದಿರುವುದು ಪಕ್ಷದಲ್ಲಿ ಭಾರೀ ಅಸಮಾಧಾನವನ್ನೇ ಸೃಷ್ಟಿಸಿದೆ. ವಿಶೇಷವಾಗಿ ಅಲ್ಪಸಂಖ್ಯಾತ ಸಮುದಾಯದಲ್ಲಿ ಕೇವಲ ಬೆಂಗಳೂರು ಕೇಂದ್ರೀಕೃತವಾಗಿ ಪ್ರಾತನಿಧ್ಯ ನೀಡಿದ್ದು, ಉತ್ತರ ಕರ್ನಾಟಕದ 14 ಜಿಲ್ಲೆಗ ಳಲ್ಲಿರುವ ಮುಸ್ಲಿಂ ಸಮುದಾಯಕ್ಕೆ ಪ್ರಾತಿನಿಧ್ಯವಿಲ್ಲ ಎನ್ನುವ ಕೂಗು ಎದ್ದಿದೆ. ಇವರೊಂದಿಗೆ ಹಿರಿಯ ಶಾಸಕರೂ ಸೇರಿಕೊಂಡಿರುವುದು ಸರಕಾರಕ್ಕೆ ದೊಡ್ಡ ತಲೆನೋವಾಗಿದೆ ಎಂದು ಶಾಸಕರು ಹೇಳಿದ್ದಾರೆ.