ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

'ಕರಾವಳಿ' ಚಿತ್ರದ ಪವರ್‌ಫುಲ್ ಕವರ್ ಸಾಂಗ್ ಬಿಡುಗಡೆ; ʻಸು ಫ್ರಮ್ ಸೋʼ ಮಾದರಿಯಲ್ಲೇ ರಾಜ್ಯಾದ್ಯಂತ ಭರ್ಜರಿ ಪ್ರೀಮಿಯರ್‌ ಶೋಗಳಿಗೆ ಪ್ಲ್ಯಾನ್!‌

ಪ್ರಜ್ವಲ್ ದೇವರಾಜ್ - ರಾಜ್ ಬಿ. ಶೆಟ್ಟಿ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ, ಗುರುದತ್ ಗಾಣಿಗ ನಿರ್ದೇಶನದ 'ಕರಾವಳಿ' ಚಿತ್ರದ ಬಿಡುಗಡೆಗೆ ದಿನಗಣನೆ ಆರಂಭವಾಗಿದ್ದು, ಜುಲೈ 24ರ ರಿಲೀಸ್‌ಗೂ ಮುನ್ನ 'ಸು ಫ್ರಮ್ ಸೋ' ಮಾದರಿಯಲ್ಲೇ ರಾಜ್ಯಾದ್ಯಂತ ಪೇಯ್ಡ್ ಪ್ರೀಮಿಯರ್ ಶೋಗಳನ್ನು ಆಯೋಜಿಸಲಾಗಿದೆ.

ʻಸು ಫ್ರಂ ಸೋʼ ಮಾದರಿಯಲ್ಲೇ 'ಕರಾವಳಿ' ಚಿತ್ರಕ್ಕೆ ಪೇಯ್ಡ್ ಪ್ರೀಮಿಯರ್‌ ಶೋ

-

Avinash GR
Avinash GR Jul 17, 2026 5:48 PM

ಕನ್ನಡ ಸಿನಿಮಾ ಪ್ರೇಕ್ಷಕರು ಸದ್ಯ ಭಾರಿ ಕುತೂಹಲ ಹಾಗೂ ನಿರೀಕ್ಷೆಯಿಂದ ಕಾಯುತ್ತಿರುವ ಬಹುನಿರೀಕ್ಷಿತ 'ಕರಾವಳಿ' ಸಿನಿಮಾದ ಬಿಡುಗಡೆಗೆ ದಿನಗಣನೆ ಆರಂಭವಾಗಿದೆ. ಈಗಾಗಲೇ ಟ್ರೇಲರ್‌ ಮೂಲಕ ಸಿನಿರಸಿಕರಲ್ಲಿ ಕುತೂಹಲ ಮೂಡಿಸಿರುವ ಚಿತ್ರತಂಡ, ಇದೀಗ ಜುಲೈ 24ರ ರಿಲೀಸ್‌ಗೂ ಮುನ್ನ ಮತ್ತೊಂದು ಪವರ್‌ಫುಲ್ ಅಪ್ಡೇಟ್ ನೀಡಿದೆ. ಚಿತ್ರದ ಜೋಶ್ ಹೆಚ್ಚಿಸುವ ಕವರ್ ಸಾಂಗ್‌ ಒಂದನ್ನು ಚಿತ್ರತಂಡ ಬಿಡುಗಡೆ ಮಾಡಿದೆ.

ಕನ್ನಡ ಚಿತ್ರರಂಗಕ್ಕೆ ಮಲಯಾಳಂ ಗಾಯಕ ಆನಂದ್‌ ಶ್ರೀರಾಜ್ ಎಂಟ್ರಿ

ಸದ್ಯ ಬಿಡುಗಡೆಯಾಗಿ ಧೂಳೆಬ್ಬಿಸುತ್ತಿರುವ 'ಓಡಾ...' ಎಂಬ ವಿಭಿನ್ನ ಶೀರ್ಷಿಕೆಯ ಈ ಹಾಡಿಗೆ ಖ್ಯಾತ ಗಾಯಕ ಆನಂದ್ ಶ್ರೀರಾಜ್ ತಮ್ಮ ಪವರ್‌ಫುಲ್ ಧ್ವನಿ ನೀಡಿದ್ದಾರೆ. ಮಲಯಾಳಂ ಚಿತ್ರರಂಗದ ಬ್ಲಾಕ್‌ಬಸ್ಟರ್ ಸಿನಿಮಾಗಳಾದ 'ಕಿಂಗ್ ಆಫ್ ಕೋಥ', 'ಎಂಪರಾನ್' ಹಾಗೂ 'ಕರುಪು' ಸೇರಿದಂತೆ ಅನೇಕ ಸೂಪರ್ ಹಿಟ್ ಚಿತ್ರಗಳ ಹಾಡುಗಳಿಗೆ ಧ್ವನಿಯಾಗಿದ್ದ ಆನಂದ್ ಶ್ರೀರಾಜ್, ಈ ಹಾಡಿನ ಮೂಲಕ ಕನ್ನಡ ಸಿನಿರಂಗಕ್ಕೆ ಅಧಿಕೃತವಾಗಿ ಪಾದಾರ್ಪಣೆ ಮಾಡಿದ್ದಾರೆ. ಈ ಜೋಶ್‌ ತುಂಬಿದ ಗೀತೆಗೆ ಪ್ರಮೋದ್ ಮರವಂತೆ ಸಾಹಿತ್ಯ ಬರೆದಿದ್ದು, ಸಚಿನ್ ಬಸ್ರೂರು ಅವರ ಸಂಯೋಜನೆಯಲ್ಲಿ ಮೂಡಿಬಂದಿದೆ.

ವಿಶೇಷವೆಂದರೆ, 'ಕರಾವಳಿ' ಸಿನಿಮಾದಲ್ಲಿ ಖ್ಯಾತ ಗಾಯಕರ ದಂಡೇ ಇದೆ. ಸಿದ್ ಶ್ರೀರಾಮ್, ಸಾಯಿ ವಿಘ್ನೇಶ್, ಆಬಿ, ಬಿ. ಜಯಶ್ರೀ ಹಾಗೂ ಆನಂದ್ ಶ್ರೀರಾಜ್ ಅವರಂತಹ ಧ್ವನಿಗಳು ಚಿತ್ರದ ಹಾಡುಗಳಿಗೆ ಮತ್ತಷ್ಟು ತೂಕ ತಂದಿದ್ದಾರೆ. ಈಗಾಗಲೇ ಬಿಡುಗಡೆಯಾಗಿರುವ ರೊಮ್ಯಾಂಟಿಕ್ ಮೆಲೋಡಿ ಸಾಂಗ್ 'ಮುದ್ದು ಗುಮ್ಮ..' ಹಾಗೂ 'ಸೋಲ್ ಆಫ್ ಕರಾವಳಿ' ಹಾಡುಗಳು ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದ್ದು, ಸದ್ಯ ರಿಲೀಸ್ ಆಗಿರುವ 'ಓಡಾ..' ಹಾಡು ಸಿನಿಮಾದ ಮೇಲಿನ ಪ್ರೇಕ್ಷಕರ ಕುತೂಹಲವನ್ನ ಡಬಲ್ ಮಾಡಿದೆ.

'ಕರಾವಳಿ' ವಿವಾದದ ನಡುವೆಯೂ ಚಿತ್ರ ವೀಕ್ಷಿಸುವಂತೆ ಅಭಿಮಾನಿಗಳಲ್ಲಿ ಪ್ರಜ್ವಲ್‌ ದೇವರಾಜ್‌ ಮನವಿ: ಇನ್‌ಸ್ಟಾಗ್ರಾಂ ಪೋಸ್ಟ್‌ನಲ್ಲಿ ಹೇಳಿದ್ದೇನು?

'ಸು ಫ್ರಮ್ ಸೋ' ಮಾದರಿಯಲ್ಲೇ ಪ್ರೀಮಿಯರ್ ಶೋ

ಕಳೆದ ವರ್ಷ ಸಂಚಲನ ಸೃಷ್ಟಿಸಿದ್ದ 'ಸು ಫ್ರಮ್ ಸೋ' ಚಿತ್ರದ ಮಾದರಿಯಲ್ಲೇ, ಬಿಡುಗಡೆಗೆ ಮುನ್ನವೇ 'ಕರಾವಳಿ' ಚಿತ್ರತಂಡ ರಾಜ್ಯದ ಪ್ರಮುಖ ಜಿಲ್ಲೆಗಳಲ್ಲಿ ಪೇಯ್ಡ್‌ ಪ್ರೀಮಿಯರ್ ಶೋಗಳನ್ನು ಆಯೋಜಿಸಲು ಸಿದ್ಧತೆ ಮಾಡಿಕೊಂಡಿದೆ. ಇನ್‌ಸ್ಟಾಗ್ರಾಮ್ ಲೈವ್‌ನಲ್ಲಿ ನಟ ರಾಜ್ ಬಿ. ಶೆಟ್ಟಿ ಅವರು ಈ ಪ್ರೀಮಿಯರ್ ಶೋಗಳ ಅಧಿಕೃತ ವೇಳಾಪಟ್ಟಿಯನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ.

ಪ್ರೀಮಿಯರ್ ಶೋಗಳ ಕಂಪ್ಲೀಟ್ ಮಾಹಿತಿ

ಜುಲೈ 19: ಮಂಗಳೂರು

ಜುಲೈ 20: ಶಿವಮೊಗ್ಗ

ಜುಲೈ 21: ದಾವಣಗೆರೆ

ಜುಲೈ 22: ಮೈಸೂರು

ಜುಲೈ 23: ಬೆಂಗಳೂರು

ಜುಲೈ 24: ರಾಜ್ಯಾದ್ಯಂತ ಬಿಡುಗಡೆ

ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಮತ್ತು ಸ್ಯಾಂಡಲ್‌ವುಡ್‌ನ ಪ್ರತಿಭಾವಂತ ನಟ-ನಿರ್ದೇಶಕ ರಾಜ್ ಬಿ. ಶೆಟ್ಟಿ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ಈ ಚಿತ್ರಕ್ಕೆ ಗುರುದತ್ ಗಾಣಿಗ ಅವರು ಆ್ಯಕ್ಷನ್ ಕಟ್ ಹೇಳಿದ್ದಾರೆ. ಗುರುದತ್ ಗಾಣಿಗ ನಿರ್ದೇಶನದ ಜೊತೆಗೆ 'ವಿಕೆ ಫಿಲ್ಮ್ಸ್' ಅಸೋಸಿಯೇಷನ್ ಅಡಿಯಲ್ಲಿ 'ಗಾಣಿಗ ಫಿಲ್ಮ್ಸ್' ಬ್ಯಾನರ್ ಮೂಲಕ ನಿರ್ಮಾಣದ ಜವಾಬ್ದಾರಿಯನ್ನೂ ಹೊತ್ತಿದ್ದಾರೆ.

ಚಿತ್ರದಲ್ಲಿ ನಾಯಕಿಯರಾಗಿ ಸಂಪದಾ ಮತ್ತು ಸುಷ್ಮಿತಾ ಭಟ್‌ ಬಣ್ಣ ಹಚ್ಚಿದ್ದು, ಉಳಿದಂತೆ ಚಿತ್ರದ ಪ್ರಮುಖ ಪಾತ್ರಗಳಲ್ಲಿ ಮಿತ್ರ, ರಮೇಶ್ ಇಂದಿರಾ, ಶ್ರೀಧರ್ ಸೇರಿದಂತೆ ದಕ್ಷಿಣ ಭಾರತದ ಹಲವು ರಂಗಭೂಮಿ ಪ್ರತಿಭೆಗಳು ಕಾಣಿಸಿಕೊಂಡಿದ್ದಾರೆ.